ಬಿಡುಗಡೆಯಾಗಿದೆ ‘ರಾಜ ರಾಣಿ ರೋರರ್ ರಾಕೆಟ್’
Team Udayavani, Sep 23, 2022, 11:08 AM IST
ಕನ್ನಡ ಚಿತ್ರರಂಗದಲ್ಲಿ ಭೂಷಣ್ ಮಾಸ್ಟರ್ ಎಂದೇ ಪರಿಚಿತರಾಗಿರುವ ಡ್ಯಾನ್ಸ್ ಮಾಸ್ಟರ್ ಭೂಷಣ್ ಉರೂಫ್ ಕುಲಭೂಷಣ್, ಇದೀಗ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಬಿಗ್ ಸ್ಕ್ರೀನ್ಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಭೂಷಣ್ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ “ರಾಜ ರಾಣಿ ರೋರರ್ ರಾಕೆಟ್’ ಇಂದು ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ.
ಇನ್ನು ಸಿನಿಮಾದ ಟೈಟಲ್ಲೇ ಹೇಳುವಂತೆ, “ರಾಜ ರಾಣಿ ರೋರರ್ ರಾಕೆಟ್’ ಅಪ್ಪಟ ಲವ್ ಕಂ ಫ್ರೆಂಡ್ಶಿಪ್ ಕಥಾಹಂದರದ ಸಿನಿಮಾ. ಹಳ್ಳಿಯ ಸೊಗಡಿನ ಕಥೆಯನ್ನು ಹಿನ್ನೆಲೆಯಾಗಿಟ್ಟು ಕೊಂಡು ಮೂಡಿಬಂದಿರುವ “ರಾಜ ರಾಣಿ ರೋರರ್ ರಾಕೆಟ್’ ಚಿತ್ರಕ್ಕೆ ಕೆಂಪೇಗೌಡ ಮಾಗಡಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. “ಲೇಖನ ಕ್ರಿಯೇಷನ್ಸ್’ ಬ್ಯಾನರ್ನಲ್ಲಿ ನಾಗರಾಜ್ ವಿ. ಅಜ್ಜಂಪುರ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಚಿತ್ರಕ್ಕೆ ಪ್ರಖ್ಯಾತ್ ಛಾಯಾಗ್ರಹಣ, ಜ್ಞಾನೇಶ್ ಮರದ್ ಮತ್ತು ಪ್ರಮೋದ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರಭು ಎಸ್. ಆರ್ ಸಂಗೀತ ಸಂಯೋಜಿಸಿದ್ದಾರೆ. “ರಾಜ ರಾಣಿ ರೋರರ್ ರಾಕೆಟ್’ ಸಿನಿಮಾದಲ್ಲಿ ನವ ನಾಯಕ ಭೂಷಣ್ಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ಉಳಿದಂತೆ ರಣಧೀರ್, ಸಂತೋಷ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿ ಸಿದ್ದಾರೆ. ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಕೂಡ ಈ ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಚೊಚ್ಚಲ ಸಿನಿಮಾದ ಬಿಡುಗಡೆಯ ಬಗ್ಗೆ ಮಾತನಾಡುವ ಭೂಷಣ್, “ಇದೊಂದು ಕಂಪ್ಲೀಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಆಡಿಯನ್ಸ್ಗೆ ಇಷ್ಟವಾಗುವ ಎಲ್ಲ ಅಂಶಗಳೂ ಸಿನಿಮಾದಲ್ಲಿದೆ. ಪ್ರಚಾರದ ಸಮಯ ದಲ್ಲಿ ಸಿನಿಪ್ರಿಯರು ಮತ್ತು ಸಿನಿಮಾ ಮಂದಿಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಥಿಯೇಟರ್ನಲ್ಲೂ ಸಿನಿಮಾ ಆಡಿಯನ್ಸ್ಗೆ ಇಷ್ಟವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ