ಮುಗ್ಧ ಮನಸು ನಿರ್ಮಲ ಕನಸು

ಸಿನಿಮಾದ ಹಿಂದೆ-ಮುಂದೆ ಚಿಣ್ಣರು

Team Udayavani, Jul 19, 2019, 5:32 AM IST

ಸ್ವಚ್ಛ ಭಾರತ ಅಭಿಯಾನ ಕುರಿತಂತೆ ಈಗಾಗಲೇ ಹಲವು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮಕ್ಕಳ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಹೌದು, ಮಕ್ಕಳೇ ಸೇರಿ ಸಿದ್ಧಪಡಿಸಿರುವ ಸಿನಿಮಾ ಹೆಸರು “ನಿರ್ಮಲ’. ಈಗಾಗಲೇ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.

ವಿಶೇಷವೆಂದರೆ, ಇಲ್ಲಿ ಛಾಯಾಗ್ರಾಹಕ ಮತ್ತು ನಿರ್ಮಾಪಕರನ್ನು ಹೊರತುಪಡಿಸಿದರೆ ಮಕ್ಕಳೇ ಸೇರಿ ಮಾಡಿರುವ ಚಿತ್ರವಿದು. ಲೋಹಿತ್‌ ಪ್ರಕಾಶ್‌ ಚಿತ್ರದ ನಿರ್ದೇಶನ ಮಾಡಿದ್ದಾರೆ. ಕಥೆ ಬಗ್ಗೆ ಹೇಳುವುದಾದರೆ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನು ಇಲ್ಲಿ ಹೇಳಲಾಗಿದೆ. ಸಾಮಾಜಿಕ ಕಳಕಳಿ ಇರುವ ಅಂಶಗಳೂ ಚಿತ್ರದಲ್ಲಿರಲಿವೆ. ಚಿತ್ರಕ್ಕೆ “ಮುಗ್ಧ ಮನಸುಗಳ ಕನಸು’ ಎಂಬ ಅಡಿಬರಹವಿದ್ದು, ಮಕ್ಕಳ ಮುಂದಾಲೋಚನೆಗಳು ಹೇಗೆಲ್ಲಾ ಇವೆ ಎಂಬುದಕ್ಕೆ “ನಿರ್ಮಲ’ ಸಾಕ್ಷಿಯಾಗಿದೆ.

ಅಂದಹಾಗೆ, ಇಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಮಕ್ಕಳು ಸುಮಾರು 14 ರಿಂದ 15 ವರ್ಷ ವಯಸ್ಸಿನವರು. ಕ್ಯಾಮೆರಾ ಮುಂದೆ ಬರುವ ಮುನ್ನ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಚಿತ್ರಕ್ಕೆ ವರ್ಣಶ್ರೀ ಮುರೂರು ಸಂಗೀತ ನೀಡಿದ್ದಾರೆ. ಎರಡು ಹಾಡುಗಳು ಚಿತ್ರದಲ್ಲಿದ್ದು, ಸರಿಗಮಮ ಖ್ಯಾತಿಯ ಜ್ಯೋತಿಕಾ ಹಾಗೂ ನಿಖೀತಾ ಹಾಡಿದ್ದಾರೆ.

ಚಿತ್ರಕ್ಕೆ ಲೋಹಿತ್‌ ಚಂದನ್‌ ಸಂಕಲನವಿದೆ. ಭಾವನಾನಾಯಕ್‌ ನೃತ್ಯ ನಿರ್ದೇಶನವಿದೆ. ಪವನ್‌ಕುಮಾರ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಬಿ.ಹೆಚ್‌. ಉಲ್ಲಾಸ್‌ಗೌಡ ಹಾಗು ಅವಿನಾಶ್‌ ನಿರ್ಮಾಣ ಮಾಡಿದ್ದಾರೆ.

ಇನ್ನು, ರಾಮನಗರ, ಚನ್ನಪಟ್ಟಣ,ಬಿಡದಿ ಸೇರಿದಂತೆ ಇತರೆ ಕಡೆಗಳಲ್ಲಿ ಒಂದೇ ಹಂತದ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಯಿತು. ಅಂದು ಟ್ರೇಲರ್‌ ಬಿಡುಗಡೆ ಮಾಡಲೆಂದೇ ಅಮೆರಿಕಾದಿಂದ ದೀಪಕ್‌ ಹಾಗು ಸತಾರಾವ್‌ ಆಗಮಿಸಿದ್ದರು. ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.

ಟ್ರೇಲರ್‌ ಬಿಡುಗಡೆ ವೇಳೆ ಮಂಡಳಿ ಅಧ್ಯಕ್ಷ ಜೈರಾಜ್‌, ಎಸ್‌.ಎ.ಚಿನ್ನೆಗೌಡ, ಉಪಾಧ್ಯಕ್ಷ ಉಮೇಶ್‌ಬಣಕಾರ್‌, ಕಾರ್ಯದರ್ಶಿ ಎನ್‌.ಎಂ.ಸುರೇಶ್‌, ಶಿಲ್ಪ ಶ್ರೀನಿವಾಸ್‌, ಪ್ರಿಯಾ, ನಟ ದೀಪಕ್‌, ಬಾ.ಮ.ಹರೀಶ್‌, ಬಾ.ಮಾ.ಗಿರೀಶ್‌ ಇದ್ದರು. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು “ನಿರ್ಮಲ’ ಬಿಡುಗಡೆಯಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ