Udayavni Special

ಕಲರ್‌ಫ‌ುಲ್ ಡಿಚ್ಕಿ ಡಿಸೈನ್‌


Team Udayavani, Jul 12, 2019, 5:00 AM IST

u-21

ನಟ ಕಂ ನಿರ್ದೇಶಕ ರಿಯಲ್ ಸ್ಟಾರ್‌ ಉಪೇಂದ್ರ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಬರವಿಲ್ಲ. ಉಪೇಂದ್ರ ಅವರಂಥಾಗಬೇಕು ಎಂದು ಪ್ರತಿದಿನ ಅನೇಕರು ಗಾಂಧಿನಗರದ ಅಡಿಯಿಡುತ್ತಲೇ ಇರುತ್ತಾರೆ. ಅದರಲ್ಲಿ ಯಶಸ್ವಿಯಾಗುವವರು ಎಷ್ಟು ಜನ ಅನ್ನೋದು ಬೇರೆ ಪ್ರಶ್ನೆ. ಆದರೆ ಅಂಥ ಪ್ರಯತ್ನಕ್ಕೆ ಕೈ ಹಾಕುವ ಕೆಲವರು ಆಗಾಗ್ಗೆ ತಮ್ಮ ಚಿತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಈಗ ಅಂಥದ್ದೇ ಉಪೇಂದ್ರ ಅಭಿಮಾನಿ ರಣ ಚಂದು ಎನ್ನುವವರು, ಉಪ್ಪಿ ಸ್ಟೈಲ್ನಲ್ಲಿ ಚಿತ್ರವನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ‘ಡಿಚ್ಕಿ ಡಿಸೈನ್‌’.

ಅರೇ, ಇದೇನಿದು? ಚಿತ್ರದ ಹೆಸರೇ ವಿಚಿತ್ರವಾಗಿದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ರಣ ಚಂದು, ವಿಚಿತ್ರವಾಗಿದೆ ಎನ್ನುವ ಕಾರಣಕ್ಕೇ ಇಂಥದ್ದೊಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ. ಅಂದಹಾಗೆ, ಈ ಚಿತ್ರದಲ್ಲಿ ರಣ ಚಂದು ಅವರೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅಲ್ಲದೆ ಉಪೇಂದ್ರ ಅವರಂತೆಯೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸೇರಿದಂತೆ ಚಿತ್ರದ ಹಲವು ವಿಭಾಗಗಳಲ್ಲಿ ಸ್ವತಃ ತಾವೇ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ರಣ ಚಂದು ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್‌ ಜೋಡಿಯಾಗಿದ್ದಾರೆ. ಉಳಿದಂತೆ ನಟನ ಪ್ರಶಾಂತ್‌, ಸುಕೇಶ್‌, ರವಿ, ಮನೋಹರ್‌ ಗೌಡ ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ

ಇನ್ನು ತಮ್ಮ ‘ಡಿಚ್ಕಿ ಡಿಸೈನ್‌’ ಚಿತ್ರದ ಬಗ್ಗೆ ಮಾತನಾಡುವ ರಣ ಚಂದು, ‘ಒಂದೂವರೆ ಲಕ್ಷದಿಂದ ಶುರುವಾದ ಈ ಚಿತ್ರ ಈಗ ರಿಲೀಸ್‌ ಹಂತಕ್ಕೆ ಬಂದಿದೆ. ಚಿತ್ರದ ಟೈಟಲ್ ಸಾಂಗ್‌ ರಿಲೀಸ್‌ ಆದ ನಂತರ ಚಿತ್ರದ ಬಗ್ಗೆ ವಿಶ್ವಾಸ ಹೆಚ್ಚಿತು. ಇನ್ನು ಈ ಚಿತ್ರದಲ್ಲಿ ಕಥೆಯೇ ಹೈಲೈಟ್. ಬೆಂಗಳೂರು ನೋಡಲು ಬರುವ ಹಳ್ಳಿ ಹುಡುಗನೊಬ್ಬ ಏನೇನು ಪರಿಪಾಟಲು ಅನುಭವಿಸುತ್ತಾನೆ ಅನ್ನೋದೆ ಚಿತ್ರದ ಕಥೆ. ಚಿತ್ರದಲ್ಲಿ ನಾಯಕ ನಗಿಸಿದ್ರೆ, ನಾಯಕಿ ಮನ ಕಲಕುವಂತೆ ಮಾಡುತ್ತಾಳೆ. ಕಾಲೇಜ್‌ನಲ್ಲಿ ‘ಡಿಚ್ಕಿ ಡಿಸೈನ್‌’ ಅಂಥ ಪದ ಬಳಸುತ್ತಾರೆ. ಈ ಪದಕ್ಕೆ ಕಲರ್‌ಫ‌ುಲ್ ಅಂತ ಅರ್ಥ ಬರುತ್ತದೆ. ಇಲ್ಲಿ ಹಿಪ್‌-ಹಾಪ್‌ ಇದೆ, ಕಾಲೇಜ್‌ ಲೈಫ್ ಇದೆ. ಇದೊಂದು ಯೂಥ್ಸ್ ಸಬ್ಜೆಕ್ಟ್ ಚಿತ್ರ’ ಎಂದು ವಿವರಣೆ ಕೊಡುತ್ತಾರೆ.

ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡುವ ನಾಯಕಿ ನಿಮಿಕಾ ರತ್ನಾಕರ್‌, ‘ಮೊದಲ ಬಾರಿಗೆ ನಾನು ಹೀರೋಯಿನ್‌ ಆಗಿ ಮಾಡಿದ ಚಿತ್ರ ಇದು. ಈ ಚಿತ್ರದಲ್ಲಿ ನನಗೆ ಹೋಮ್ಲಿ, ಪೊಲೀಸ್‌ ಮತ್ತು ಗ್ಲಾಮರ್‌ ಹೀಗೆ 3 ವಿಭಿನ್ನ ಶೇಡ್‌ಗಳ ಪಾತ್ರವಿದೆ. ಒಂದೊಳ್ಳೆ ಚಿತ್ರ ಮಾಡಿರುವುದಕ್ಕೆ ಖುಷಿ ಇದೆ’ ಎಂದರು.

ಸುಮಾರು 2 ವರ್ಷದ ಹಿಂದೆ ಶುರುವಾದ ಈ ಚಿತ್ರ ಸದ್ಯ ತನ್ನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗಿದೆ. ಬೆಳಗಾವಿ, ಗೋವಾ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಎಸ್‌. ಸಾಮ್ರಾಟ್ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ ಕಾರ್ಯವಿದೆ. ಚಿತ್ರದ 3 ಹಾಡುಗಳಿಗೆ ಕಾರ್ತಿಕ್‌ ಚೆನ್ನೋಜಿ ರಾವ್‌, ರೋಣದ ಬಕ್ಕೇಶ್‌ ಸಂಗೀತವಿದೆ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

cricket

ಜಯದ ವಿಶ್ವಾಸದಲ್ಲಿ RCB-KKR: ಟಾಸ್ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

4 ಜಿಲ್ಲೆಗಳಿಗೆ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ

ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suchitra-tdy-6

ಚಿರು ಬರ್ತ್‌ಡೇಗೆ ಕ್ಷತ್ರಿಯ ಟೀಸರ್‌

suchitra-tdy-5

ಫ್ಯಾಂಟಸಿ ಲೋಕದಲ್ಲಿ ಪ್ರಿಯಾಂಕಾ

ಲವ್‌ ಮಾಕ್ಟೇಲ್‌-2 ಗೆ ಬಂದ ರಚೆಲ್‌

ಲವ್‌ ಮಾಕ್ಟೇಲ್‌-2 ಗೆ ಬಂದ ರಚೆಲ್‌

ಸೆನ್ಸಾರ್‌ ಬಾಗಿಲಲ್ಲಿ ಅಮೃತಾ ಅಪಾರ್ಟ್‌ಮೆಂಟ್‌

ಸೆನ್ಸಾರ್‌ ಬಾಗಿಲಲ್ಲಿ ಅಮೃತಾ ಅಪಾರ್ಟ್‌ಮೆಂಟ್‌

ಕೆಜಿಎಫ್ ಎಂಟ್ರಿಗೆ ಸಂಜಯ್‌ ದತ್‌ ರೆಡಿ

ಕೆಜಿಎಫ್ ಎಂಟ್ರಿಗೆ ಸಂಜಯ್‌ ದತ್‌ ರೆಡಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

avalu-tdy-1

ಸೋಲಿಲ್ಲದೆ ಬಾಳುಂಟೇ?

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.