ಕೋವಿಡ್ ಎಫೆಕ್ಟ್ ಬದಲಾಗುತ್ತಿದೆ ಸ್ಕ್ರಿಪ್ಟ್

ಮಾಸ್‌ ಕಥೆಗಳ ಚಿತ್ರೀಕರಣಕ್ಕೆ ಇದು ಕಾಲವಲ್ಲ- ಉಪ್ಪಿ "ಪುಣ್ಯಾತ್ಮ' ಕಥೆ ಬದಿಗಿಟ್ಟ ಶಶಾಂಕ್‌

Team Udayavani, Aug 14, 2020, 3:52 PM IST

ಕೋವಿಡ್ ಎಫೆಕ್ಟ್ ಬದಲಾಗುತ್ತಿದೆ ಸ್ಕ್ರಿಪ್ಟ್

ಸಾಂದರ್ಭಿಕ ಚಿತ್ರ

ಕೋವಿಡ್ ಲಾಕ್‌ಡೌನ್‌ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅನಿವಾರ್ಯವಾಗಿ ಪ್ರತಿ ಕ್ಷೇತ್ರದವರು ಕೂಡಾ ತಮ್ಮ ಕಾರ್ಯ ಶೈಲಿಯನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಿನಿಮಾ ಕ್ಷೇತ್ರವೂ ಹೊರತಾಗಿಲ್ಲ. ಸಿನಿಮಾ ಕ್ಷೇತ್ರದಲ್ಲೂ ಕೋವಿಡ್ ಸಾಕಷ್ಟು  ಬದಲಾವಣೆ ತಂದಿದೆ ಎಂದರೆ ತಪ್ಪಲ್ಲ. ಮುಖ್ಯವಾಗಿ ಚಿತ್ರೀಕರಣ ವಿಷಯದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ಹೆಚ್ಚು ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡೋದು ಸದ್ಯಕ್ಕೆ ಕಷ್ಟವಾದ ಕಾರಣ, ಸಿನಿಮಾ ಮಂದಿ ತಮ್ಮ ಕನಸನ್ನು ಬದಿಗಿಟ್ಟು ಅನಿವಾರ್ಯವಾಗಿ ಕಾನ್ಸೆಪ್ಟ್ ಅನ್ನೇ ಬದಲಿಸುತ್ತಿದ್ದಾರೆ!

ಹೌದು, ಹೀಗೆಂದರೆ ನೀವು ನಂಬಲೇಬೇಕು. ಕೊರೊನಾ ಕಾರಣದಿಂದಾಗಿ ಇನ್ನಷ್ಟೇ ಚಿತ್ರೀಕರಣ ಆರಂಭಿಸಬೇಕಿದ್ದ  ನಿರ್ದೇಶಕರು ತಮ್ಮ ಸ್ಕ್ರಿಪ್ಟ್ ಅನ್ನೇ ಬದಲಿಸುತ್ತಿದ್ದಾರೆ. ಒಂದಷ್ಟು ಮಂದಿ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿಕೊಂಡರೆ, ಇನ್ನೊಂದಿಷ್ಟು ನಿರ್ದೇಶಕರು ಮೊದಲು ಮಾಡಿದ ಕಥೆಯನ್ನು ಬದಿಗಿಟ್ಟು, ಹೊಸ ಕಥೆಯನ್ನೇ ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಸಿನಿಮಾ ಮಂದಿಗೆ ಹೊಸ ಕಥೆ ಮಾಡುವಷ್ಟರ ಮಟ್ಟಿಗೆ ಕೋವಿಡ್ ತಂದ ಸಂಕಟವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಮಾಸ್‌ ಸೇರುವಂತಿಲ್ಲ. ಕೋವಿಡ್ ದಿಂದಾಗಿ ಹೆಚ್ಚು ಜನ ಒಟ್ಟಿಗೆ ಸೇರುವಂತಿಲ್ಲ. ದೊಡ್ಡ ಮಟ್ಟಿನ ಕ್ಯಾನ್ವಾಸ್‌ನಲ್ಲಿ ಚಿತ್ರೀಕರಣ ಮಾಡೋದು ಸದ್ಯಕ್ಕೆ ಕನಸಿನ ಮಾತು. ಸ್ಟಾರ್‌ ನಟರ ಜೊತೆ ಸಿನಿಮಾ ಮಾಡುವವರು, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾದ ಕನಸು ಕಂಡಿರುವವರು, ನೂರಾರು ಜನರನ್ನು ಸೇರಿಸಿ ಸೀನ್‌ ತೆಗೆಯಬೇಕೆಂದು ಕನಸು ಕಂಡಿರುವವರಿಗೆ ಕೋವಿಡ್ ಅಡ್ಡಿಯಾಗಿರೋದು ಸುಳ್ಳಲ್ಲ. ಅದೇ ಕಾರಣದಿಂದ ನಿರ್ದೇಶಕ ಶಶಾಂಕ್‌ ತಮ್ಮ ಕಥೆಯನ್ನು ಬದಿಗಿಟ್ಟು, ಹೊಸ ಕಥೆಯನ್ನು ಮಾಡಿಕೊಂಡಿದ್ದಾರೆ. ಅದು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಮಾಡಬಹುದಾದಂತಹ ಕಥೆ. ಹೌದು, ನಿರ್ದೇಶಕ ಶಶಾಂಕ್‌, ರಿಯಲ್‌ಸ್ಟಾರ್‌ ಉಪೇಂದ್ರ ಅವರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ಆ ಚಿತ್ರಕ್ಕೆ ಮುಹೂರ್ತ ಕೂಡಾ ನಡೆದಿತ್ತು. ಜೊತೆಗೆ “ಪುಣ್ಯಾತ್ಮ’ ಎಂಬ ಟೈಟಲ್‌ ಕೂಡಾ ಬದಲಾಗಿತ್ತು. ಆದರೆ, ಈಗ ಶಶಾಂಕ್‌ ಆ ಪ್ರಾಜೆಕ್ಟ್ ಅನ್ನು ಸದ್ಯದ ಮಟ್ಟಿಗೆ ಬದಿಗಿಟ್ಟಿದ್ದಾರೆ. ಹಾಗಂತ ಉಪ್ಪಿ ಜೊತೆಗಿನ ಸಿನಿಮಾದಿಂದ ಅವರು ಹಿಂದೆ ಸರಿದಿಲ್ಲ. “ಪುಣ್ಯಾತ್ಮ’ ಬದಲಿಗೆ ಹೊಸ ಕಥೆಯನ್ನು ಮಾಡಿದ್ದಾರೆ. ಆ ಕಥೆಯಡಿ ಉಪೇಂದ್ರ ನಟಿಸಲಿದ್ದಾರೆ.

ಈ ಬಗ್ಗೆ ಮಾತನಾಡುವ ಶಶಾಂಕ್‌, “ಆರಂಭದಲ್ಲಿ ನಾವು ಒಂದು ಕಥೆ ಮಾಡಿ, ಮುಹೂರ್ತ ಕೂಡಾ ಮಾಡಿದ್ದೇವು. ಆ ಕಥೆಗೆ ಪುಣ್ಯಾತ್ಮ ಟೈಟಲ್‌ ಹೊಂದಿಕೆಯಾಗುತ್ತಿತ್ತು. ಈ ಚಿತ್ರದ ಕ್ಯಾನ್ವಾಸ್‌ ಹಾಗೂ ನನ್ನ ಕನಸು ಕೂಡಾ ದೊಡ್ಡದಾಗಿತ್ತು. ಒಂದೊಂದು ಸೀನ್‌ಗೂ ಹೆಚ್ಚು ಜನ, ಔಟ್‌ಡೋರ್‌ … ಹೀಗೆ ಕೋವಿಡ್ ಬರುವ ಮುಂಚಿನ ಶೈಲಿಯ ಚಿತ್ರೀಕರಣ ಬೇಕಿತ್ತು. ಆದರೆ, ಈಗ ಸಾಧ್ಯವಿಲ್ಲ. ಅದೇ ಕಥೆಯನ್ನಿಟ್ಟುಕೊಂಡು ಈಗ ಚಿತ್ರೀಕರಣ ಮಾಡಿದರೆ, ನಾನು ಮಾಡಿರುವ ಸ್ಕ್ರಿಪ್ಟ್ಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆ ಕಾರಣದಿಂದ ಸದ್ಯಕ್ಕೆ “ಪುಣ್ಯಾತ್ಮ’ನನ್ನು ಬದಿಗಿಟ್ಟು, ಹೊಸ ಕಥೆಯನ್ನು ಮಾಡಿದ್ದೇನೆ. ಈ ಕಥೆಗೆ ಹೆಚ್ಚು ಜನರನ್ನು ಬಯಸುವುದಿಲ್ಲ. ಕೋವಿಡ್ ಕುರಿತಾದ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಮಾಡಬಹುದಾದ ಕಥೆ. ಹಾಗಂತ ಪುಣ್ಯಾತ್ಮನನ್ನು ಕೈ ಬಿಡುವುದಿಲ್ಲ. ಅದನ್ನೇ ಉಪ್ಪಿಯವರಿಗೆ ಮಾಡುವ ಆಸೆ ಇದೆ.

ಮೊದಲ ಆದ್ಯತೆ ಈಗ ಮಾಡಿ ಕೊಂಡಿರುವ ಹೊಸ ಕಥೆಗೆ’ ಎನ್ನುವುದು ಶಶಾಂಕ್‌ ಮಾತು. ಶಶಾಂಕ್‌ ಹೇಳುವಂತೆ, ಜನರಲ್ಲಿ ಕೋವಿಡ್ ಭಯ ಹೋಗುವವರೆಗೆ ಚಿತ್ರೀಕರಣ ಮಾಡೋದು ಕಷ್ಟ. ಹಾಗಾಗಿ, ನಿರ್ದೇಶಕರು ತಮ್ಮ ಕಥೆಗಳನ್ನು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಿದೆ. ಈಗಾಗಲೇ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಚಿತ್ರೀಕರಣ ಆರಂಭಿಸಿರುವ ಸಿನಿಮಾಗಳು ಅನಿವಾರ್ಯವಾಗಿ ತಮ್ಮ ಚಿತ್ರೀಕರಣ ಮುಂದುವರೆಸಬೇಕಿದೆ.

-ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.