‘ಅದಿತಿ ಸಿನಿಮಾತಿಥ್ಯ’

ದಾವಣಗೆರೆ ಹುಡುಗಿ ಸಿಕ್ಕಾಪಟ್ಟೆ ಬಿಝಿ

Team Udayavani, Jul 12, 2019, 5:35 AM IST

“ನನ್ನ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಎಲ್ಲೆಡೆ ಸ್ಪರ್ಧೆ ಕಾಮನ್‌. ಆದರೆ, ಸಿನಿಮಾರಂಗದಲ್ಲಿ ನನಗೆ ನಾನೇ ಕಾಂಪೀಟ್‌ ಮಾಡ್ತಾ ಇದ್ದೇನೆ ಹೊರತು, ಬೇರೆ ಯಾರ ಜೊತೆಯಲ್ಲೂ ಸ್ಪರ್ಧೆಗಿಳಿಯುತ್ತಿಲ್ಲ…’ -ಇದು ನಟಿ ಅದಿತಿ ಮಾತು. ಸದ್ಯ ಕನ್ನಡ ಚಿತ್ರರಂಗದ ಮಟ್ಟಿಗೆ ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ಅದಿತಿ, ತನಗೆ ತಾನೇ
ಸ್ಪರ್ಧಿಯಾಗಲು ಬಯಸುತ್ತಿದ್ದಾರೆ ಹೊರತು, ಬೇರೆಯವರ ಜೊತೆ ಸ್ಪರ್ಧೆಯಿಂದ ‌ೂರವಂತೆ. ಬೆರಳೆಣಿಕೆ ವರ್ಷದಲ್ಲೇ ಅದಿತಿ ಸಾಲು ಚಿತ್ರಗಳಿಗೆ ನಾಯಕಿಯಾಗಿರುವುದು
ಗೊತ್ತೇ ಇದೆ. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅದಿತಿ, ತಮ್ಮ ಕಲರ್‌ಫ‌ುಲ್‌ ಜರ್ನಿ ಕುರಿತು ಮಾತನಾಡಿದ್ದಾರೆ.

ನೋಡ ನೋಡುತ್ತಿದ್ದಂತೆಯೇ ಬೆಣ್ಣೆದೋಸೆ ಊರಿನ ಹುಡುಗಿ ಅದಿತಿ ಬೇಡಿಕೆ ನಟಿಯಾಗಿದ್ದಂತೂ ಹೌದು. ಅವರ ಕೈಯಲ್ಲೀಗ ಒಂದಲ್ಲ, ಎರಡಲ್ಲ, ಬರೋಬ್ಬರಿ
ಆರು ಚಿತ್ರಗಳಿವೆ. ಆ ಪೈಕಿ ನಾಲ್ಕು ಸಿನಿಮಾಗಳನ್ನು ಮುಗಿಸಿದ್ದು, ಈ ವಾರ “ಆಪರೇಷನ್‌ ನಕ್ಷತ್ರ ‘ ಬಿಡುಗಡೆಯಾದರೆ, ಮುಂದಿನವಾರ “ಚಿತ್ರ ಬಿಡುಗಡೆಯಾಗುತ್ತಿದೆ. ಇದುವರೆಗೆ ಒಪ್ಪಿಕೊಂಡಿರುವ ಚಿತ್ರಗಳಲ್ಲಿನ ಕಥೆ, ಪಾತ್ರ ಎಲ್ಲವೂ ಹೊಸದಾಗಿವೆಯಾ ಅಥವಾ ರೆಗ್ಯುಲರ್‌ ಎನಿಸಿ ದೆಯಾ? ಇದಕ್ಕೆ ಉತ್ತರಿಸುವ ಅದಿತಿ, “ನಾನು ಈವರೆಗೆ ಮಾಡಿದ ಚಿತ್ರಗಳಲ್ಲಿ ಎಲ್ಲವೂ ವಿಭಿನ್ನ. ಕಥೆ, ಪಾತ್ರ ಯಾವುದೂ ರೆಗ್ಯುಲರ್‌ ಆಗಿಲ್ಲ. ಅದು ನನ್ನ ಅದೃಷ್ಟ. ನನ್ನ ಆಯ್ಕೆ ಕೂಡ ವಿಭಿನ್ನವಾಗಿರುತ್ತೆ.

ಕಥೆಯಲ್ಲಿ ಹೊಸತನ ನೋಡ್ತೀನಿ, ಪಾತ್ರದಲ್ಲೂ ವಿಭಿನ್ನತೆಯನ್ನು ಬಯಸುತ್ತೇನೆ. ಸಿಕ್ಕ ಸಿಕ್ಕ ಸಿನಿಮಾ ಒಪ್ಪಲ್ಲ. ಯಾರಿಗೂ ಡೇಟ್‌ ಇಷೂಸ್‌ ಆಗದಂತೆ ಕೇರ್‌ಫ‌ುಲ್‌ ಆಗಿ ಕೆಲಸ ಮಾಡ್ತೀನಿ’ ಎಂಬುದು ಅದಿತಿ ಮಾತು. ನಂಬಿಕೆಯೇ ಕಾರಣ ಸಹಜವಾಗಿಯೇ ಮೊದಲ
ನಂತರ ನಾಯಕಿಯರಿಗೆ ‌ು ಭಯ ಇದ್ದೇ ಇರುತ್ತೆ. ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಬಹುದಾ? ಎಂಬುದೇ ಆ ಭಯದ ಪ್ರಶ್ನೆ. ‌ಕ್ಕೆ ಉತ್ತರ ಕೊಡುವತಿ,”ನನಗೆ “ನಾಗಕನ್ನಿಕೆ’ ೊಡ್ಡ ಅವಕಾಶ ಕಲ್ಪಿಸಿತು. ಬಳಿಕ ಸುನಿ ಸರ್‌, ಮೇಲೆ ನಂಬಿಕೆ ಇಟ್ಟು
ಬಜಾರ್‌’ ಕೊಟ್ಟರು. ಶುರುವಾದ ರ್ನಿಯಲ್ಲಿ ಸಿನಿಮಾ ಬಜಾರ್‌ ಜೋರಾಗಿಯೇ
ನಡೆಯುತ್ತಿದೆ. ಯಾವುದೇ ಸಿನಿಮಾ ಮಾಡಿದರೂ,

ತನ್ನ ಪಾಡಿಗೆ ತಾನು ಕೆಲಸ ಮಾಡಿ ಹೋಗುತ್ತಾಳೆ ಎಂಬ ಮಾತಿಗೆ ಕಾರಣವಾಗಿದ್ದೇನೆ. ಎಲ್ಲರ ನಂಬಿಕೆ ಉಳಿಸಿಕೊಂಡಿದ್ದೇನೆ. ಬಹುಶಃ ಇಲ್ಲಿ ಗಟ್ಟಿ ನೆಲೆ ಕಾಣೋಕೆ ಅದು ಪ್ರಮುಖ ಕಾರಣ ಎನ್ನಬಹುದು. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಯಾವುದೇ ಚಿತ್ರ ಒಪ್ಪಿದರೂ,  ಯಾವಾಗ ಶುರು ಆಗುತ್ತೆ ಅಂತ ಕೇಳಿ ಕೇರ್‌ಫ‌ುಲ್‌ ಆಗಿ
ಕೆಲಸ ಮಾಡ್ತೀನಿ. ಯಾಕೆಂದರೆ, ಬೇರೆಯವರಿಗೆ ತೊಂದರೆ ಕೊಡಲು ಇಷ್ಟವಿಲ್ಲ. ಕೈಲಾದಷ್ಟು ಎಚ್ಚರಿಕೆ ವಹಿಸುತ್ತೇನೆ. ಕೆಲವೊಮ್ಮೆ ಅದು ಮೀರಿದರೆ ಏನೂ ಮಾಡೋಕ್ಕಾಗಲ್ಲ. ಸದ್ಯಕ್ಕೀಗ ನನ್ನ ಕೈಯಲ್ಲಿ “ತೋತಾಪುರಿ’, “ಬ್ರಹ್ಮಚಾರಿ’,
“ರಂಗನಾಯಕಿ’, “ಗಾಳಿಪಟ-2 ‘ ಚಿತ್ರಗಳಿವೆ. ಈ ವಾರ “ಆಪರೇಷನ್‌ ನಕ್ಷತ್ರ’ ರಿಲೀಸ್‌ ಆಗುತ್ತಿದೆ. ಮುಂದಿನವಾರ “ಸಿಂಗ’ ಬಿಡುಗಡೆಯಾಗುತ್ತಿದೆ.

ಕೈಯಲ್ಲಿರುವ ಸಿನಿಮಾಗಳನ್ನು ಮೊದಲು ಕ್ಲೀನ್‌ ಆಗಿ ಮುಗಿಸುವುದರ ಕಡೆ ಗಮನ ಕೊಟ್ಟಿದ್ದೇನೆ. ಈ ಪ್ರಾಜೆಕ್ಟ್ ಬಳಿಕ ಬೇರೆ ಸಿನಿಮಾದತ್ತ ಗಮನಹರಿಸುತ್ತೆನೆ’ ಎನ್ನುತ್ತಾರೆ ಅದಿತಿ. ಭಿನ್ನ-ವಿಭಿನ್ನ ಪಾತ್ರ ಅದಿತಿಗೆ ಎಲ್ಲಾ ಚಿತ್ರಗಳ ಮೇಲೂ ಬಲವಾದ ನಂಬಿಕೆ ಇದೆಯಂತೆ. ಆ ಬಗ್ಗೆ ಹೇಳುವ ಅವರು, “ನನಗೆ ಹೊಸಬರು, ಹಳಬರು ಅಂತೇನೂ ಇಲ್ಲ. “ಆಪರೇಷನ್‌ ನಕ್ಷತ್ರ’ ಹೊಸಬರೇ ಸೇರಿ ಮಾಡಿದ ಚಿತ್ರ. ಆದರೆ, ಅವರು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿ ನೋಡಿದಾಗ ಖುಷಿಯಾಗುತ್ತೆ.

ನಾನು ಆ ಚಿತ್ರದಲ್ಲಿ ಎರಡು ಶೇಡ್‌ ಪಾತ್ರ ನಿರ್ವಹಿಸಿದ್ದೇನೆ. ಇದೇ ಮೊದಲ ಸಲ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿ ದ್ದೇನೆ. ಪೋಸ್ಟರ್‌, ಟ್ರೇಲರ್‌ ನೋಡಿದರೆ, ಕುತೂಹಲ ಕೆರಳಿಸುತ್ತೆ. ಅಲ್ಲಿ ನಾಲ್ಕು ಪಾತ್ರಗಳು ಹೈಲೈಟ್‌. ಅಲ್ಲಿ ಎಲ್ಲರೂ ಕಳ್ಳರೇನಾ? ಅಲ್ಲಿ ವಿಲನ್‌ ಯಾರು? ಎಂಬ ಪ್ರಶ್ನೆ ಕಾಡದೇ ಇರದು. ಅದಕ್ಕೆ ಉತ್ತರ ಸಿನ್ಮಾ ನೋಡಬೇಕು. ಇನ್ನು, “ಸಿಂಗ’ ಚಿತ್ರದಲ್ಲಿ ಮುದ್ದಾಗಿರುವ ಪಾತ್ರ ಸಿಕ್ಕಿದೆ. “ಬ್ರಹ್ಮಚಾರಿ’ಯಲ್ಲಿ ಫ‌ುಲ್‌ಲೆಂಥ್‌ ಕಾಮಿಡಿ ಇದೆ. ಅದರಲ್ಲಿ ನುಲಿಯೋದು, ವೈಯ್ನಾರವಾಗಿರುವ ಪಾತ್ರ. ಹೀಗೆ ಒಂದೊಂದು ಚಿತ್ರದಲ್ಲೂ ಹೊಸತನ ತುಂಬಿರುವ ಪಾತ್ರವಿದೆ. ಎಲ್ಲಾ ರೀತಿಯ ಪಾತ್ರ ನಿಭಾಯಿಸುವ ಕೆಪಾಸಿಟಿ ಅದಿತಿಗೆ ಇದೆ ಅನ್ನೋದು ಗೊತ್ತಾಗಬೇಕಷ್ಟೇ. ನಾನು ನನ್ನ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡ್ತೀನಿ. ಸೆಟ್‌ಗೆ  ಹೋದರೆ, ಸೀನ್‌ ಪೇಪರ್‌ ಜೊತೆ ಮಾತ್ರ ನನ್ನ ಕೆಲಸ.

ಯಾವುದೇ ಕಾರಣಕ್ಕೂ ಪ್ಯಾಕಪ್‌ ಆಗುವವರೆಗೂ ನಾನು ಮೊಬೈಲ್ ಬಳಸಲ್ಲ. ಅದನ್ನು ಎಲ್ಲಾ ಚಿತ್ರಗಳಲ್ಲೂ ಮುಂದುವರೆಸಿಕೊಂಡು ಹೋಗುವ ಆಸೆ ನನ್ನದು’ ಎಂಬುದು ಅದಿತಿ ಮಾತು. ಚಿತ್ರರಂಗದ ಸ್ಪರ್ಧೆಯ ಬಗ್ಗೆ ಮಾತನಾಡುವ ಅದಿತಿ, ‘ಎಲ್ಲೆಡೆ ಇದ್ದಂತೆ, ಸಿನಿಮಾರಂಗದಲ್ಲೂ ಕಾಂಪಿಟೇಷನ್‌ ಇದೆ. ಹಾಗಂತ, ನಾನು ಯಾರ ಜೊತೆಯಲ್ಲೂ ಕಾಂಪಿಟೇಷನ್‌ಗೆ ಇಳಿಯಲ್ಲ. ನನಗೆ ನಾನೇ ಕಾಂಪೀಟ್ ಮಾಡ್ತೀನಿ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಬದಲಾವಣೆ ಬಯಸುತ್ತೇನೆ. ಭಟ್ಟರ ‘ಗಾಳಿಪಟ-2′ ಚಿತ್ರಕ್ಕೆ ಸುಮಾರು 45 ನಿಮಿಷ ಆಡಿಷನ್‌ ಆಯ್ತು. ಒಂದು ಮುಗ್ಧ ಹುಡುಗಿ ಪಾತ್ರ, ಇನ್ನೊಂದು ರಗಡ್‌ ಪಾತ್ರ. ಅದಕ್ಕೆ ಭಟ್ಟರು ಸ್ಪಾಟ್‌ನಲ್ಲೇ ಆಡಿಷನ್‌ ಕೊಟ್ಟು, ಬಾಡಿಲಾಂಗ್ವೇಜ್‌, ಡೈಲಾಗ್‌ ಡಿಲವರಿ, ಭಾಷೆಯ ಹಿಡಿತ ಬಗ್ಗೆ ಗಮನಿಸಿ, ಆಯ್ಕೆ ಮಾಡಿದರು. ಎಲ್ಲಾ ಹೀರೋ, ನಿರ್ದೇಶಕರ ಜೊತೆ ಕೆಲಸ ಮಾಡುವಾಗ, ಒಬ್ಬೊಬ್ಬ ಅದಿತಿ ಕಾಣಿಸಿಕೊಳ್ಳುತ್ತಾಳೆ’ ಎನ್ನುವ ಅದಿತಿ, ಕನ್ನಡದಲ್ಲೇ ಒಳ್ಳೆಯ ವೇದಿಕೆ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಆಸೆ ನನ್ನದು’ ಎಂದು ಮಾತು ಮುಗಿಸುತ್ತಾರೆ.

ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಡಾಕ್ಟರೇಟ್‌ ಸಿಕ್ಕಿದ್ದು ಖುಷಿ ಇದೆ. ಜವಾಬ್ದಾರಿಯೂ ಹೆಚ್ಚಿದೆ. ಗೌರವದಿಂದ ನೀಡಿದ ಆ ಪದವಿಯನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಎಷ್ಟೋ ಜನ ತಡವಾಗಿ...

  • "ಅವರು ಮೊದಲು ಕಥೆ ಪಕ್ಕಾ ಮಾಡಿಕೊಳ್ಳೋರು. ಆ ಮೇಲೆ ಚಿತ್ರಕಥೆಗಾಗಿಯೇ ಹಲವು ದಿನ ಕೆಲಸ ಮಾಡೋರು. ನಂತರ ಎಲ್ಲಾ ತಯಾರಿ ಮಾಡಿಕೊಂಡ ಬಳಿಕ ಚಿತ್ರೀಕರಣಕ್ಕೆ ಹೋಗೋರು....

  • ಜಬರ್‌ದಸ್ತ್ ಶಂಕರ - ಹಲವು ದಿನಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿರುವ ಹೆಸರಿದು. ಆ ಹೆಸರಿನೊಳಗೇನಿದೆ ಎಂದು ನೋಡುವ ಸಮಯ ಈಗ ಬಂದಿದೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು....

  • ಕೆಲವೊಮ್ಮೆ ಸಿನಿಮಾದ ಟ್ರೇಲರ್‌ ಗಮನಸೆಳೆದಷ್ಟು ಇಡೀ ಸಿನಿಮಾ ಗಮನ ಸೆಳೆಯೋದು ಕಷ್ಟ ಎನ್ನುವ ಮಾತಿದೆ. ಟ್ರೇಲರ್‌ ನೋಡಿದವರಿಗೆ ಸಿನಿಮಾನೂ ಹೀಗೇ ಇರುತ್ತೆ ಎಂಬ...

  • "ಇಲ್ಲಿಯವರೆಗೆ ಸತ್ಯ ಅಂಥ ಹೆಸರಿಟ್ಟುಕೊಂಡು ಬಂದ ಯಾವ ಸಿನಿಮಾಗಳೂ ಸೋತಿಲ್ಲ. ತೆಲುಗಿನಲ್ಲಿ ರಾಮ್‌ ಗೋಪಾಲ್‌ ವರ್ಮ ಅವರಿಂದ ಹಿಡಿದು ಕನ್ನಡದಲ್ಲಿ ಉಪೇಂದ್ರ,...

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...