ಹೊಸ ದಿಕ್ಕಿನತ್ತ ಯೋಗಿ

ದಯಾಳ್‌ ಕಮರ್ಷಿಯಲ್‌ ಸಿನಿಮಾವಿದು...

Team Udayavani, Sep 20, 2019, 5:34 AM IST

T-38

ಸಾಮಾನ್ಯವಾಗಿ ನಾವೆಲ್ಲ ಎಂಟು ದಿಕ್ಕು ಅಂತಾನೋ, ಹತ್ತು ದಿಕ್ಕು ಅಂತಾನೋ ಮಾತಾಡುವುದನ್ನ ಕೇಳಿದ್ದೇವೆ. ಆದರೆ ನಿರ್ದೇಶಕ ದಯಾಳ್‌ ಪದ್ಮನಾಭನ್‌ “ಒಂಬತ್ತನೇ ದಿಕ್ಕು’ ಎನ್ನುವ ಹೊಸ ದಿಕ್ಕನ್ನು ಅನ್ವೇಷಿಸಿ ಅದನ್ನು ತೆರೆಮೇಲೆ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೇ ನಿರ್ದೇಶಕ ದಯಾಳ್‌ “ರಂಗನಾಯಕಿ’ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಇನ್ನೇನು ಆ ಚಿತ್ರ ತೆರೆಗೆ ಬರಲು ರೆಡಿಯಾಗಿ ನಿಂತಿದೆ. ಇದರ ನಡುವೆಯೇ ದಯಾಳ್‌ ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲು ಹೊರಟಿದ್ದಾರೆ. ಆ ಚಿತ್ರದ ಹೆಸರೇ “ಒಂಬತ್ತನೇ ದಿಕ್ಕು’.

ಇನ್ನು ಇಲ್ಲಿಯವರೆಗೆ ಪ್ರಯೋಗಾತ್ಮಕ ಚಿತ್ರಗಳು, ಕಲಾತ್ಮಕ ಚಿತ್ರಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಈ ಬಾರಿ ಪಕ್ಕಾ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಶೈಲಿಯಲ್ಲಿ “ಒಂಬತ್ತನೇ ದಿಕ್ಕು’ ಚಿತ್ರವನ್ನು ತೆರೆಮೇಲೆ ತರುವ ಪ್ಲಾನ್‌ ಮಾಡಿಕೊಂಡಿದ್ದಾರೆ. ಇನ್ನು ದಯಾಳ್‌ ಹೇಳುತ್ತಿರುವ “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಲೂಸ್‌ಮಾದ ಯೋಗಿ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಮೇಶ್‌ ಭಟ್‌, ಪ್ರಶಾಂತ್‌ ಸಿದ್ಧಿ ಮೊದಲಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳಿನಿಂದ “ಒಂಬತ್ತನೇ ದಿಕ್ಕು’ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತವಾಗಿದ್ದ ದಯಾಳ್‌, ಇತ್ತೀಚೆಗೆ ಚಿತ್ರದ ಮುಹೂರ್ತವನ್ನು ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ತಮಿಳು ನಟ ಆರ್ಯ “ಒಂಬತ್ತನೇ ದಿಕ್ಕು’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ನಿರ್ಮಾಪಕ ಸೌಂದರ್ಯ ಜಗದೀಶ್‌ ಕ್ಯಾಮರಾ ಸ್ವಿಚ್‌ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಬಳಿಕ ತಮ್ಮ “ಒಂಬತ್ತನೇ ದಿಕ್ಕು’ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ದಯಾಳ್‌ ಪದ್ಮನಾಭನ್‌, “ಇತ್ತೀಚೆಗೆ ನನ್ನ ಚಿತ್ರಗಳೆಲ್ಲವೂ, ಎಕ್ಸ್‌ಪರಿಮೆಂಟಲ್‌ ಆಗಿದ್ದವು. “ಯಶವಂತ್‌’ ಚಿತ್ರದ ನಂತರ ನಾನು ಮಾಡುತ್ತಿರುವ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಚಿತ್ರ ಇದು. ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಹೊರತಾಗಿರುವ, ಹೊಸಥರದ ಸಬ್ಜೆಕ್ಟ್ ನ ಚಿತ್ರ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದಾಗ ಈ ಚಿತ್ರ ಮಾಡುವ ಐಡಿಯಾ ಬಂತು. ಇದೊಂದು ಇಂದಿನ ಸ್ಟೈಲ್‌ನ ಪಕ್ಕಾ ಕಮರ್ಶಿಯಲ್‌ ಎಲಿಮೆಂಟ್ಸ್‌ ಇರುವ ಆ್ಯಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಸಬ್ಜೆಕ್ಟ್ಈ ಚಿತ್ರದಲ್ಲಿದೆ. ನಮ್ಮ ಕಾನೂನಿನ ಅಡಿಯಲ್ಲಿ ಬರುವ ಸೂಕ್ಷ್ಮವಾದ ವಿಷಯವೊಂದನ್ನು ಹೇಳುತ್ತಿದ್ದೇನೆ. ಅದೇನು ಅಂತ ಈಗಲೇ ಹೇಳಲಾರೆ. ಈ ಚಿತ್ರದಲ್ಲಿ ಹಾಡು, ಕಾಮಿಡಿ, ಆ್ಯಕ್ಷನ್ಸ್‌, ಎಮೋಶನ್ಸ್‌ ಎಲ್ಲವೂ ಇರುತ್ತದೆ. ಒಂದು ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆಯನ್ನ ಸ್ಕ್ರೀನ್‌ ಮೇಲೆ ಹೇಳುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.

ಇನ್ನು ಚಿತ್ರದ ನಾಯಕ ಯೋಗಿ ಈ ಚಿತ್ರದಲ್ಲಿ ಟ್ರಾವೆಲ್‌ ಏಜೆಂಟ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಯೋಗಿ, “ದಯಾಳ್‌ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆ. ಇವತ್ತಿನ ಮಾಮೂಲಿ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾದಲ್ಲಿ ಏನೇನು ಇರುತ್ತವೆಯೋ, ಅದೆಲ್ಲವೂ “ಒಂಬತ್ತನೇ ದಿಕ್ಕು’ ಸಿನಿಮಾದಲ್ಲಿದೆ. ನನ್ನ ಪಾತ್ರ ಸಾಕಷ್ಟು ಕುತೂಹಲಭರಿತವಾಗಿರುವುದರಿಂದ, ಪಾತ್ರದ ಬಗ್ಗೆ ಈಗಲೇ ಹೆಚ್ಚೇನು ಹೇಳಲಾರೆ’ ಎಂದರು. ಚಿತ್ರದ ನಾಯಕಿ ಅದಿತಿ ಪ್ರಭುದೇವ ಅವರದ್ದು ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗಿಯ ಪಾತ್ರವಂತೆ. ಉಳಿದಂತೆ ಚಿತ್ರದ ಮತ್ತೆರಡು ಪ್ರಮುಖ ಪಾತ್ರಗಳಿಗೆ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಮತ್ತು ಟಿ.ಎನ್‌ ಸೀತಾರಾಮ್‌ ಅವರನ್ನೂ ಕರೆತರುವ ಯೋಚನೆಯಲ್ಲಿದೆ ಚಿತ್ರತಂಡ.

“ಒಂಬತ್ತನೇ ದಿಕ್ಕು’ ಚಿತ್ರದ ನಿರ್ಮಾಣಕ್ಕೆ ದಯಾಳ್‌ ಪದ್ಮನಾಭನ್‌ ಅವರೊಂದಿಗೆ ಮತ್ತೂಬ್ಬ ನಿರ್ದೇಶಕ ಕಂ ನಿರ್ಮಾಪಕ ಗುರು ದೇಶಪಾಂಡೆ ಕೂಡ ಸಾಥ್‌ ನೀಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಿದ್ದು, ರಾಕೇಶ್‌ ಛಾಯಾಗ್ರಹಣ, ಪ್ರೀತಿ ಮೋಹನ್‌ ಸಂಕಲನವಿದೆ. .

ಕಾರ್ತಿಕ್‌

ಟಾಪ್ ನ್ಯೂಸ್

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.