Udayavni Special

ಗ್ರ್ಯಾಂಡ್‌ ಲಾಂಚ್‌ಗೆ ಧೀರೇನ್‌ ರೆಡಿ : ಡಾ.ರಾಜ್‌ ಮೊಮ್ಮಗ ಹೇಳಿದ ಶಿವ ಕಥೆ

ನಾನು ಮಾತನಾಡೋ ಮುಂಚೆ ಸಿನ್ಮಾ ಮಾತನಾಡಬೇಕು...

Team Udayavani, Oct 30, 2020, 12:57 PM IST

ಗ್ರ್ಯಾಂಡ್‌ ಲಾಂಚ್‌ಗೆ ಧೀರೇನ್‌ ರೆಡಿ : ಡಾ.ರಾಜ್‌ ಮೊಮ್ಮಗ ಹೇಳಿದ ಶಿವ ಕಥೆ

ವರನಟ ಡಾ. ರಾಜಕುಮಾರ್‌ ಮೊಮ್ಮಗ, ನಟ ರಾಮಕುಮಾರ್‌ ಪುತ್ರ ಧೀರೇನ್‌ ರಾಮಕುಮಾರ್‌ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ ಎಂಬ ಸುದ್ದಿಯನ್ನು ನೀವು ವರ್ಷದ ಹಿಂದೆಯೇ ಕೇಳಿರುತ್ತೀರಿ. ಆರಂಭದಲ್ಲಿ ಚಿತ್ರಕ್ಕೆ “ದಾರಿ ತಪ್ಪಿದ ಮಗ’ ಎಂದು ಹೆಸರಿಟ್ಟಿದ್ದ ಚಿತ್ರತಂಡ, ಆ ನಂತರ ಚಿತ್ರದ ಟೈಟಲ್‌ ಅನ್ನು “ಶಿವ 143′ ಅಂಥ ಬದಲಾಯಿಸಿಕೊಂಡಿತ್ತು. ಅದಾಗಿ ವರ್ಷ ಕಳೆದರೂ, ಆ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ಹೆಚ್ಚೇನೂ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಇದೇ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಧೀರೇನ್‌ ರಾಮಕುಮಾರ್‌ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಒಂದಷ್ಟು ಅಪ್ಡೇಟ್  ಮಾಹಿತಿಯನ್ನು ನೀಡಿದ್ದಾರೆ.

“ಆರಂಭದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚೇನು ಮಾತನಾಡುವಂಥದ್ದು ಇಲ್ಲ ಅನಿಸಿತು. ಹಾಗಾಗಿ, ಮೀಡಿಯಾ ಮುಂದೆಯಾಗಲಿ, ಬೇರೆ ಕಡೆಯಾಗಲಿ ಸಿನಿಮಾದ ಬಗ್ಗೆ ಹೆಚ್ಚೇನು ಮಾತನಾಡಿಲ್ಲ. ಸಿನಿಮಾ ಮುಗಿಸಿದ ಮೇಲೆ, ಪ್ರೇಕ್ಷಕರ ಮುಂದೆ ಬಂದ ಮೇಲೆ ಸಾಕಷ್ಟು ಮಾತನಾಡುವುದು ಇದ್ದೇ ಇರುತ್ತದೆ…’ ಇದು ನಟ ಧೀರೇನ್‌ ರಾಮಕುಮಾರ್‌ ಅವರ ಮಾತು. ತಮ್ಮ ಚೊಚ್ಚಲ ಸಿನಿಮಾ ಸೆಟ್ಟೇರಿ ವರ್ಷವಾದರೂ ಆಸಿನಿಮಾದ ಬಗ್ಗೆ ಎಲ್ಲಿಯೂ ಹೆಚ್ಚಾಗಿ ಮಾತನಾಡಿಲ್ಲವಲ್ಲ ಎಂಬ ಪ್ರಶ್ನೆಗೆ ಧೀರೇನ್‌ ಅವರಿಂದ ಬಂದ ಉತ್ತರವಿದು.

“ನನಗೂ ಇದು ಮೊದಲ ಸಿನಿಮಾವಾಗಿದ್ದರಿಂದ, ಎಲ್ಲವೂ ಹೊಸ ಅನುಭವ. ಸಿನಿಮಾ ಚೆನ್ನಾಗಿ ಬರಬೇಕು ಅದಕ್ಕೇನು ತಯಾರಿ ಮಾಡಿಕೊಳ್ಳಬೇಕು ಎನ್ನುವುದರ ಕಡೆಗೆ ನನ್ನ ಗಮನ ಹೆಚ್ಚಾಗಿತ್ತು.ಹೀಗಾಗಿ ಬೇರೆ ಕಡೆಗೆ ಗಮನ ಕೊಡಲಾಗಲಿಲ್ಲ’ ಎನ್ನುವ ಧೀರೇನ್‌, ಸದ್ಯ ಸಿನಿಮಾದ ಪ್ರೊಡಕ್ಷನ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಸಿನಿಮಾ ಪ್ರೇಕ್ಷಕರ ಮುಂದೆ ಬಂದ ನಂತರ ಅದರ ಬಗ್ಗೆ ಮಾತನಾಡುವುದು ಇದ್ದೇ ಇರುತ್ತದೆ. ಅಲ್ಲಿಯವರೆಗೆ ಮಾತಿಗಿಂತ, ಕೃತಿ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಚಿತ್ರದಲ್ಲಿ ಧೀರೇನ್‌ ಗೆಟಪ್‌ ಗಮನ ಸೆಳೆಯುವಂತಿದೆ ಯಂತೆ. ತಮ್ಮ ಗೆಟಪ್‌ ಬಗ್ಗೆ ಮಾತನಾಡುವ ಧೀರೇನ್‌, “ಇದೊಂದು ಪಕ್ಕಾ ರಾ ಲವ್‌ ಸ್ಟೋರಿ ಸಿನಿಮಾ. ಇದರಲ್ಲಿ ಎರಡು ಡಿಫ‌ರೆಂಟ್‌ ಗೆಟಪ್‌ನಲ್ಲಿ ನನ್ನನ್ನು ನೋಡಬಹುದು. ಮೊದಲ ಸಿನಿಮಾದಲ್ಲೇ ರೆಗ್ಯುಲರ್‌ ಅಲ್ಲದಂಥ ಪಾತ್ರ ಮಾಡುತ್ತಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೇನೆ. ಪ್ರೇಕ್ಷಕರಿಗೂ ನನ್ನ ಗೆಟಪ್‌ಇಷ್ಟವಾಗ ಬಹುದು’ಎನ್ನುತ್ತಾರೆ. ಇನ್ನು ಈಗಾಗಲೆ ನಡೆದಿರುವ ಚಿತ್ರೀಕರಣದ ಬಗ್ಗೆ ಒಂದಷ್ಟು ಮಾಹಿತಿ ನೀಡಿರುವ ಧೀರೇನ್‌, “ಈಗಾಗಲೇ 54 ದಿನ ಶೂಟಿಂಗ್‌ ನಡೆಸಲಾಗಿದ್ದು, ಇನ್ನು ಕೇವಲ 4 ದಿನಗಳ ಶೂಟಿಂಗ್‌ ಬಾಕಿಯಿದೆ.

ಮೋಹನ್‌ ಬಿ. ಕೆರೆಸ್ಟುಡಿಯೋದಲ್ಲಿ ಸಿನಿಮಾದ ಬಹುಭಾಗ ಶೂಟಿಂಗ್‌ ಮಾಡಲಾಗಿದೆ ಚಿತ್ರದಲ್ಲಿ ಐದು ಭರ್ಜರಿ ಫೈಟ್ಸ್‌ ಇದ್ದು ರವಿವರ್ಮ ಸಾಹಸ ಸಂಯೋಜಿಸಿದ್ದಾರೆ. ಮಾನ್ವಿತಾ ಹರೀಶ್‌ ನನಗೆ ಹೀರೋಯಿನ್‌ ಆಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅರ್ಜುನ್‌ ಜನ್ಯಾ ಸಂಗೀತವಿದೆ. ಮೊದಲಿದ್ದ ನಮ್ಮ ಪ್ಲಾನ್‌ ಪ್ರಕಾರ ಈ ವರ್ಷವೇ ಸಿನಿಮಾ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಅನಿರೀಕ್ಷಿತವಾಗಿ ಬಂದ ಕೋವಿಡ್ ದಿಂದಾಗಿ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಹೀಗೆ ಎಲ್ಲ ಕೆಲಸಗಳೂ ತಡವಾಯ್ತು. ಮುಂದಿನ ವರ್ಷಖಂಡಿತ ನೋಡಬಹುದು’ ಎನ್ನುತ್ತಾರೆ. “ಜಯಣ್ಣ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಶಿವ 143′ ಚಿತ್ರಕ್ಕೆ ಅನಿಲ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

 

-ಜಿ.ಎಸ್‌.ಕಾರ್ತಿಕ ಸುಧನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ :

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ

ಹೆಲ್ತ್‌ಟಿಪ್ಸ್‌ ಅಡುಗೆ ಮನೆಯಲ್ಲಿ ಇಮ್ಯುನಿಟಿ

ಹೆಲ್ತ್‌ಟಿಪ್ಸ್‌ ಅಡುಗೆ ಮನೆಯಲ್ಲಿ ಇಮ್ಯುನಿಟಿ

ಲಿಪ್‌ಬಾಮ್‌ಗಳು

ಚಳಿಗಾಲದಲ್ಲಿ ತುಟಿಗಳಸೌಂದರ್ಯ ವರ್ಧನೆ… ಲಿಪ್‌ಬಾಮ್‌ಗಳು

bng-tdy-2

ಮನೆ ಮಾರಿಯಾದ್ರೂ ಪಕ್ಷ ಕಟ್ಟುತ್ತೇನೆ:ಎಚ್ ಡಿಕೆ

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’:ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ

‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’: ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ

ಭಾರತಕ್ಕಿಂದು ಗೆಲ್ಲಲೇಬೇಕಾದ ಒತ್ತಡ: ಟಾಸ್ ಗೆದ್ದ ಫಿಂಚ್, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ

ಭಾರತಕ್ಕಿಂದು ಗೆಲ್ಲಲೇಬೇಕಾದ ಒತ್ತಡ: ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್, ತಂಡದಲ್ಲಿ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರೆಯತ್ತ ಹೊಸಬರ ಆರ್‌.ಎಚ್‌. 100

ತೆರೆಯತ್ತ ಹೊಸಬರ ಆರ್‌.ಎಚ್‌. 100

ಅಟ್ಟಯ್ಯ ನಿರ್ದೇಶಕನ ಹಾಫ್ ಸ್ಟೋರಿ

ಅಟ್ಟಯ್ಯ ನಿರ್ದೇಶಕನ ಹಾಫ್ ಸ್ಟೋರಿ

ತಲ್ವಾರ್ ‌ಪೇಟೆಗೆ ಬಂದ ರವಿಶಂಕರ್‌

ತಲ್ವಾರ್ ‌ಪೇಟೆಗೆ ಬಂದ ರವಿಶಂಕರ್‌

ಸ್ಯಾಂಡಲ್‌ವುಡ್‌ಗೆ ಮತ್ತೂಬ್ಬ ರಾಮಾಚಾರಿ

ಸ್ಯಾಂಡಲ್‌ವುಡ್‌ಗೆ ಮತ್ತೂಬ್ಬ ರಾಮಾಚಾರಿ

ಡಿಸೆಂಬರ್‌ ಮೊದಲ ವಾರ ಸಂಜು ಬಾಬಾ ಎಂಟ್ರಿ

ಡಿಸೆಂಬರ್‌ ಮೊದಲ ವಾರ ಸಂಜು ಬಾಬಾ ಎಂಟ್ರಿ

MUST WATCH

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಹೊಸ ಸೇರ್ಪಡೆ

2024ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ

2024ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ

ಶೀತಲ ಸರಪಳಿ ಘಟಕ

ಶೀತಲ ಸರಪಳಿ ಘಟಕ

cinema-tdy-2

ಕೊಲೆಯ ಹಾದಿಯಲ್ಲಿ ಸಿಕ್ಕ ನಿಗೂಢ ಹೆಜ್ಜೆ ಗುರುತು!

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ :

ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ

ಹೆಲ್ತ್‌ಟಿಪ್ಸ್‌ ಅಡುಗೆ ಮನೆಯಲ್ಲಿ ಇಮ್ಯುನಿಟಿ

ಹೆಲ್ತ್‌ಟಿಪ್ಸ್‌ ಅಡುಗೆ ಮನೆಯಲ್ಲಿ ಇಮ್ಯುನಿಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.