ದಿಲ್‌ ದೇ “ದಿಯಾ’

ತೆರೆಮೇಲೆ ಸಸ್ಪೆನ್ಸ್‌ -ಥ್ರಿಲ್ಲರ್‌ ಚಿತ್ರ

Team Udayavani, Feb 7, 2020, 7:02 AM IST

ಕೆಲ ವರ್ಷಗಳ ಹಿಂದೆ ತೆರೆಗೆ ಬಂದಿದ್ದ “6-5=2′ ಎನ್ನುವ ಹೆಸರಿನ ಹಾರರ್‌ ಚಿತ್ರ ನಿಮಗೆ ಗೊತ್ತಿರಬಹುದು. ಸ್ಯಾಂಡಲ್‌ವುಡ್‌ ಸಿನಿಪ್ರಿಯರನ್ನು ಥಿಯೇಟರ್‌ನಲ್ಲಿ ಬೆಚ್ಚಿ ಬೀಳಿಸಿ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದ್ದ ಇದೇ ಚಿತ್ರತಂಡ ಈಗ ಸದ್ದಿಲ್ಲದೆ ಮತ್ತೂಂದು ಚಿತ್ರವನ್ನು ತೆರೆಗೆ ತರುತ್ತಿದೆ. ಅಂದಹಾಗೆ ಆ ಚಿತ್ರದ ಹೆಸರು “ದಿಯಾ’. ಈ ಹಿಂದೆ ಹಾರರ್‌ ಚಿತ್ರವನ್ನು ತೆರೆಗೆ ತಂದು ಸಕ್ಸಸ್‌ ಆಗಿರುವ ನಿರ್ದೇಶಕ ಅಶೋಕ ಕೆ.ಎಸ್‌ ಈ ಬಾರಿ “ದಿಯಾ’ ಎನ್ನುವ ಸಸ್ಪೆನ್ಸ್‌ ಕಂ ಲವ್‌-ಥ್ರಿಲ್ಲರ್‌ ಕಥೆಯನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.

“ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ’ ಬ್ಯಾನರನಲ್ಲಿ ಕೃಷ್ಣ ಚೈತನ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ನವ ಪ್ರತಿಭೆ ದೀಕ್ಷಿತ್‌, ಖುಷಿ, ಪೃಥ್ವಿ ಅಂಬಾರ್‌, ಪವಿತ್ರ ಲೋಕೇಶ್‌ ಮೊದಲಾದವರು “ದಿಯಾ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ “ದಿಯಾ’ ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅಶೋಕ ಕೆ.ಎಸ್‌, “ಇದೊಂದು ಲವ್‌ ಕಂ ಸಸ್ಪೆನ್ಸ್‌ – ಥ್ರಿಲ್ಲರ್‌ ಶೈಲಿಯ ಸಿನಿಮಾ. ಇಡೀ ಸಿನಿಮಾ ಪ್ರಮುಖವಾಗಿ ಮೂರು ಪಾತ್ರಗಳ ಸುತ್ತ ನಡೆಯುತ್ತದೆ. ಸೈಕಾಲಜಿಕಲ್‌ ಎಳೆಯನ್ನ ಇಟ್ಟುಕೊಂಡು, ಒಂದು ಲವ್‌ ಸ್ಟೋರಿಯನ್ನ ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂತೆ ತೆರೆಮೇಲೆ ತರುತ್ತಿದ್ದೇವೆ. ಇಡೀ ಚಿತ್ರದಲ್ಲಿ ಎಲ್ಲೂ ಹಾಡುಗಳಿಲ್ಲ. ಚಿತ್ರಕಥೆ, ನಿರೂಪಣೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಇವುಗಳ ಮೂಲಕವೇ ಸಿನಿಮಾವನ್ನು ಆಕರ್ಷಣೀಯವಾಗಿ ಕಟ್ಟಿಕೊಟ್ಟಿದ್ದೇವೆ.

ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಸಿನಿಮಾವಾಗಿದ್ದು, ಆಡಿಯನ್ಸ್‌ಗೆ ಖಂಡಿತ ಇಷ್ಟವಾಗುತ್ತದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಚಿತ್ರದ ಬಗ್ಗೆ ಮಾತನಾಡಿದ ನಟ ದೀಕ್ಷಿತ್‌, “ಇದು ನಿತ್ಯ ಜೀವನದಲ್ಲಿ ನಮ್ಮ ನಡವೆಯೇ ನಡೆಯುವಂಥ ಕಥೆ. ಇದರಲ್ಲಿ ನಾನು ಎಂ.ಟೆಕ್‌ ಮಾಡುವ ಹುಡುಗನ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಕಥೆಗೆ ತಿರುವು ಕೊಡುವ ಪಾತ್ರ ನನ್ನದು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಚಿತ್ರದ ಬಗ್ಗೆ ಮಾತನಾಡಿದ ನಟಿ ಖುಷಿ, “ಯಾರ ಜೊತೆಗೂ ಹೆಚ್ಚು ಬೆರೆಯದ ತುಂಬಾ ರಿಸರ್ವ್‌ ಆಗಿರುವಂಥ ಹುಡುಗಿಯ ಪಾತ್ರ ನನ್ನದು.

ಇದೊಂದು ಮಹಿಳಾ ಪ್ರಧಾನ ಕಥೆ ಇರುವ ಚಿತ್ರ. ಇಡೀ ಚಿತ್ರ ನನ್ನ ಪಾತ್ರದ ಸುತ್ತ ಸಾಗುತ್ತದೆ’ ಎಂದು ವಿವರಣೆ ಕೊಟ್ಟರು. ಮತ್ತೂಬ್ಬ ನಟ ಪೃಥ್ವಿ “ನನ್ನದು ತುಂಬ ಚೆನ್ನಾಗಿ ಮಾತನಾಡುವಂಥ ಲೈವ್ಲಿಯಾಗಿರುವ ಹುಡುಗನ ಪಾತ್ರ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. “ದಿಯಾ’ ಚಿತ್ರದ ಶೀರ್ಷಿಕೆಗೆ ಲೈಫ್ ಈಸ್‌ ಫ‌ುಲ್‌ ಆಫ್ ಸರ್‌ಪ್ರೈಸ್‌’ ಎಂಬ ಅಡಿ ಬರಹವಿದೆ. “ಚಿತ್ರದಲ್ಲಿ ಅನೇಕ ಸರ್‌ಪ್ರೈಸ್‌ಗಳನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.

ಇಡೀ ಚಿತ್ರತಂಡದ ಪ್ರಯತ್ನದಿಂದ, ಯಾರಿಗೂ ಬೋರಾಗದಂಥ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ’ ಎಂದರು ನಿರ್ಮಾಪಕ ಕೃಷ್ಣ ಚೈತನ್ಯ. “ದಿಯಾ’ ಚಿತ್ರಕ್ಕೆ ವಿಶಾಲ ವಿಟಲ, ಸೌರಭ ವಾಘಮರೆ ಛಾಯಾಗ್ರಹಣವಿದೆ. ನವೀನ ರಾಜ್‌ ಸಂಕಲನವಿದೆ. ಚಿತ್ರಕ್ಕೆ ಅಜನೀಶ ಲೋಕನಾಥ ಹಿನ್ನಲೆ ಸಂಗೀತ ನೀಡಿದ್ದಾರೆ. ಬೆಂಗಳೂರು, ಮುಂಬೈ, ಉಡುಪಿ, ಮಂಗಳೂರು ಸುತ್ತಮುತ್ತ “ದಿಯಾ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. “ದಿಯಾ’ ಇಂದು (ಫೆ. 7ಕ್ಕೆ) ರಾಜ್ಯಾದ್ಯಂತ ಸುಮಾರು 100 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ

  • ಬಿಸಿಲಿನಿಂದ ರಕ್ಷಣೆ ಪಡೆಯಲಷ್ಟೇ ಸನ್‌ಗ್ಲಾಸಸ್‌ ಧರಿಸುವ ಕಾಲ ಇದಲ್ಲ. ನೀವು ಧರಿಸುವ ಕೂಲಿಂಗ್‌ ಗ್ಲಾಸ್‌ ಕಣ್ಣನ್ನಷ್ಟೇ ಅಲ್ಲ, ನಿಮ್ಮ ಸ್ಟೈಲ್‌ ಅನ್ನೂ "ಕೂಲ್‌'...

  • ಮಹಾನಗರ: ರಾಜ್ಯ ಸರಕಾರವು ನೂತನವಾಗಿ ಜಾರಿಗೆ ತಂದ ನಂಬರ್‌ ಪ್ಲೇಟ್‌ ಮಾದರಿ ನಗರದಲ್ಲಿ ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ...

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಆಗೆಲ್ಲಾ ಈಗಿನಂತೆ ನಿಶ್ಚಿತಾರ್ಥಕ್ಕೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು....

  • ಮಂಗಳೂರು: ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ. 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ...