ಚಂಬಲ್‌ನಲ್ಲಿ ಡಿ.ಕೆ.ರವಿ ಕಥೆ!

Team Udayavani, Feb 8, 2019, 12:30 AM IST

ನೀನಾಸಂ ಸತೀಶ್‌ ಮುಖದಲ್ಲಿ ಮಂದಹಾಸ ಮೂಡಿದೆ. ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ. ಸತೀಶ್‌ ಅವರ ಈ ಖುಷಿ, ನಿರೀಕ್ಷೆಗೆ ಕಾರಣ “ಚಂಬಲ್‌’. ಸತೀಶ್‌ ನಾಯಕರಾಗಿ ಕಾಣಿಸಿಕೊಂಡಿರುವ “ಚಂಬಲ್‌’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಈ ಟ್ರೇಲರ್‌ ಅನ್ನು ಪುನೀತ್‌ರಾಜಕುಮಾರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. “ನಿರ್ದೇಶಕ ಜೇಕಬ್‌ ವರ್ಗಿಸ್‌ ಜೊತೆ ನಾನು “ಪೃಥ್ವಿ’ ಸಿನಿಮಾದಲ್ಲಿ ನಟಿಸಿದ್ದೆ. ಒಂದೊಳ್ಳೆಯ ಪಾತ್ರ ಕೊಟ್ಟಿದ್ದರು. ಜಿಲ್ಲಾಧಿಕಾರಿ ಪಾತ್ರವನ್ನು ಖುಷಿಯಿಂದ ಮಾಡಿದ್ದೆ. ಈಗ ಸತೀಶ್‌ ಅವರಿಗೆ “ಚಂಬಲ್‌’ನಲ್ಲಿ ಮತ್ತೂಂದು ವಿಭಿನ್ನ ಪಾತ್ರ ಕೊಟ್ಟಿದ್ದಾರೆ. ಚಿತ್ರದ ಟ್ರೇಲರ್‌ ನೋಡಿದಾಗಲೇ ಇದೊಂದು ಹೊಸ ಬಗೆಯ ಸಿನಿಮಾವಾಗುವ ಲಕ್ಷಣ ಕಾಣುತ್ತಿದೆ’ ಎಂದು ಶುಭಕೋರಿದರು. 

ನಾಯಕ ಸತೀಶ್‌ ಕೂಡಾ “ಚಂಬಲ್‌’ ಹಾಗೂ ಅದರ ಪಾತ್ರದ ಬಗ್ಗೆ ಎಕ್ಸೆ„ಟ್‌ ಆಗಿದ್ದಾರೆ. “ನಾನು ಹೆಚ್ಚು ಓದಿಲ್ಲ. ಆದರೆ, ಇಲ್ಲಿ ಐಎಎಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದೇನೆ. ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ಸತೀಶ್‌ ಮಾತು. ಇನ್ನು, ಚಿತ್ರದ ಟ್ರೇಲರ್‌ ನೋಡಿದವರು, ಇದು ಐಎಎಸ್‌ ಅಧಿಕಾರಿ ಡಿ.ಕೆ.ರವಿ ಕುರಿತಾದ ಕಥೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಸತೀಶ್‌, “ನನಗೆ ಆ ಬಗ್ಗೆ ಗೊತ್ತಿಲ್ಲ. ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೇನೆ’ ಎಂದು ಜಾಣ ಉತ್ತರ ಕೊಡುತ್ತಾರೆ. ಈ ಚಿತ್ರವನ್ನು ಜೇಕಬ್‌ ವರ್ಗಿಸ್‌ ನಿರ್ದೇಶಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಜೇಕಬ್‌ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. ಪತ್ರಕರ್ತರಿಂದ ಜೇಕಬ್‌ಗ, “ಇದು ಡಿಕೆ ರವಿ ಕುರಿತಾದ ಸಿನಿಮಾನಾ’ ಎಂಬ ಪ್ರಶ್ನೆ ಎದುರಾಯಿತು. “ಇದು ಯಾರ ಕುರಿತಾದ ಸಿನಿಮಾವೂ ಅಲ್ಲ. ನಮ್ಮ ಸುತ್ತಮುತ್ತ ನಡೆದ ಒಂದಷ್ಟು ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾವಷ್ಟೇ. ಒಂದು ವೇಳೆ ಆ ತರಹ ಕಂಡರೆ ಅದು ಕಾಕತಾಳೀಯವಷ್ಟೇ’ ಎಂದರು. ನಾಯಕಿ ಸೋನು ಗೌಡ ಕೂಡಾ “ಚಂಬಲ್‌’ ಬಗ್ಗೆ ಖುಷಿಯಾಗಿದ್ದಾರೆ. ಹೊಸ ಬಗೆಯ ಪಾತ್ರ ಸಿಕ್ಕ ಖುಷಿ ಹಂಚಿಕೊಂಡರು. ಜೊತೆಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪುನೀತ್‌ ಬಂದಿದ್ದರಿಂದ ಸೋನು ಎಕ್ಸೆ„ಟ್‌ ಆಗಿದ್ದರು. ಶಾಲಾ ದಿನಗಳಲ್ಲಿ ಪುನೀತ್‌ ಸಿನಿಮಾವನ್ನು ಕ್ಲಾಸ್‌ ಬಂಕ್‌ ಮಾಡಿ ನೋಡಿದ್ದನ್ನು ನೆನಪಿಸಿಕೊಂಡರು. ಉಳಿದಂತೆ ಚಿತ್ರದ ತಾಂತ್ರಿಕ ವರ್ಗ ತಮ್ಮ ಅನುಭವ ಹಂಚಿಕೊಂಡಿತು. 

ರವಿಪ್ರಕಾಶ್‌ ರೈ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ