ಡೋಂಟ್ ವರಿ ಕಲರ್ ಫುಲ್ ಫೆಬ್ರವರಿ

ಸಿನಿ ಸುಗ್ಗಿ ಶುರು

Team Udayavani, Jan 31, 2020, 5:50 AM IST

youth-27

ಜನವರಿಯಲ್ಲಿ ಬಿಡುಗಡೆಯ ಭರಾಟೆ ಅಷ್ಟಾಗಿ ಇಲ್ಲವೆಂಬ ಬೇಸರವನ್ನು ಫೆಬ್ರವರಿ ಹೋಗಲಾಡಿಸುವುದು
ಪಕ್ಕಾ. ಫೆಬ್ರವರಿಯಲ್ಲಂತೂ ಪ್ರೇಕ್ಷಕರ ಮುಂದೆ ಬರಲು ಹಲವು ಚಿತ್ರಗಳು ರೆಡಿಯಾಗಿವೆ..

ಅಂತೂ ಇಂತೂ ಹೊಸ ವರ್ಷದ ಮೊದಲ ತಿಂಗಳು ಮುಗಿದಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಜನವರಿ ಹರ್ಷದಾಯಕವಾಗಿರಲಿಲ್ಲ. ಸಾಮಾನ್ಯವಾಗಿ ಹೊಸ ವರ್ಷದ ಆರಂಭದಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ ಇದ್ದೇ ಇರುತ್ತೆ. ಅಂಥದ್ದೊಂದು ಅಬ್ಬರವಿಲ್ಲದೆಯೇ ಮೊದಲ ತಿಂಗಳು ನೀರಸವಾಗಿಯೇ ಕಳೆದುಹೋಗಿದೆ. ಹಾಗಂತ, ಮನರಂಜನೆಯೇ ಇಲ್ಲವೆಂದಲ್ಲ. ಅಲ್ಪ-ಸ್ವಲ್ಪ ಮನರಂಜನೆ ಮೂಲಕ ರಂಜಿಸುವ ಪ್ರಯತ್ನ ಆಗಿದೆಯಾದರೂ, ಗಟ್ಟಿಯಾಗಿ ಬೇರೂರುವ ಸಿನಿಮಾಗಳು ಕಾಣಿಸಿಕೊಳ್ಳಲೇ ಇಲ್ಲ ಎಂಬ ಬೇಸರ ಸಿನಿ ಪ್ರೇಕ್ಷಕನನ್ನು ಕಾಡಿದ್ದು ಸುಳ್ಳಲ್ಲ. ಜನವರಿ ಹೇಗೋ ಮುಗೀತು. ಬಟ್‌ ಡೋಂಟ್‌ವರಿ. ಈಗ ಫೆಬ್ರವರಿ ಸರದಿ. ಈ ತಿಂಗಳು ಕೊಂಚಮಟ್ಟಿಗೆ ಆಶಾದಾಯಕ ಅಂದುಕೊಂಡರೆ ತಪ್ಪಿಲ್ಲ. ಹಾಗೆ ನೋಡಿದರೆ, ವರ್ಷದ ಆರಂಭದಲ್ಲಿ ಸ್ಟಾರ್‌ ಸಿನಿಮಾಗಳ ದರ್ಶನ ಆಗುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಸುಳ್ಳಾಯಿತು. ಆಗಷ್ಟೇ ಸಿನಿರಂಗ ಪ್ರವೇಶಿಸಿದ ಹೊಸಬರು, ಬೆರಳೆಣಿಕೆ ಚಿತ್ರ ಮಾಡಿರುವ ನಟರ ಚಿತ್ರಗಳ ಮೂಲಕ ತಮ್ಮ ಖಾತೆಯನ್ನೂ ತೆರೆದರು. ಆದರೆ, ಸ್ಟಾರ್ ಮಾತ್ರ ಹೊಸ ವರ್ಷಕ್ಕೆ ಖಾತೆ ತೆರೆದಿಲ್ಲ ಎಂಬ ಸಣ್ಣ ಬೇಸರ ಆಯಾ ಅಭಿಮಾನಿಗಳಿಗಂತೂ ಇದ್ದೇ ಇದೆ. ಮೊದಲ ತಿಂಗಳು ಹದಿನೆಂಟು ಚಿತ್ರಗಳು ಬಿಡುಗಡೆಯ ಲೆಕ್ಕ ಕೊಟ್ಟಿವೆ. ಈ ವಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೊನೆಯ ಕ್ಷಣದಲ್ಲಿ ಬಿಡುಗಡೆ ಆಗುವ ಸಿನಿಮಾಗಳನ್ನು ಹೊರತುಪಡಿಸಿ, “ಲವ್‌ ಮಾಕ್ಟೇಲ್‌’,”ನಮೋ, “ಆಸಿಂಕೋಜಿಲ್ಲ’,”ಡಿಂಗ’,”ಕಾಣದಂತೆ ಮಾಯವಾದನು’,”ನಿಗರ್ವ’,”ರಾಮನ ಸವಾರಿ’ ಸೇರಿದಂತೆ ಏಳು ಚಿತ್ರಗಳು ಬಿಡುಗಡೆಯ ಲೆಕ್ಕ ಕೊಟ್ಟಿವೆ. ಇದು ಹೇಳಿಕೊಳ್ಳುವಂತಹ ಖಾತೆ ಎನಿಸದಿದ್ದರೂ, ಫೆಬ್ರವರಿಯಲ್ಲಿ ಜೋರು ಬಿಡುಗಡೆಗೆ ಸಿನಿಮಾಗಳು ಸಾಲುಗಟ್ಟಿವೆ ಎಂಬುದಂತೂ ನಿಜ. ಹಾಗಾಗಿ ಫೆಬ್ರವರಿಯಲ್ಲಿ ಸಿನಿಜಾತ್ರೆ ಗ್ಯಾರಂಟಿ.

ಹೌದು, ಜನವರಿಯಲ್ಲಿ ಬಿಡುಗಡೆಯ ಭರಾಟೆ ಅಷ್ಟಾಗಿ ಇಲ್ಲವೆಂಬ ಬೇಸರವನ್ನು ಫೆಬ್ರವರಿ ಹೋಗಲಾಡಿಸುವುದು ಪಕ್ಕಾ. ಫೆಬ್ರವರಿಯಲ್ಲಂತೂ ಪ್ರೇಕ್ಷಕರ ಮುಂದೆ ಬರಲು ಹಲವು ಚಿತ್ರಗಳು ರೆಡಿಯಾಗಿವೆ. ಫೆ.7ರಂದು ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮೆನ್‌’, ವಿಜಯ ರಾಘವೇಂದ್ರ ನಟಿಸಿರುವ “ಮಾಲ್ಗುಡಿ ಡೇಸ್‌’, ಪ್ರಮೋದ್‌ ಅಭಿನಯದ “ಮತ್ತೆ ಉದ್ಭವ’, ರವಿಶಂಕರ್‌ ಗೌಡ ಅಭಿನಯದ “ಪುರುಸೋತ್‌ರಾಮ’, ಹೊಸಬರ “ನವರತ್ನ’ ಚಿತ್ರಗಳು ಮೊದಲ ವಾರದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿವೆ. ಇನ್ನು ಫೆ. 14ರಂದು ಪ್ರೇಮಿಗಳ ದಿನ. ಅಂದು ಲವ್‌ಸ್ಟೋರಿ ಚಿತ್ರಗಳು ಕೂಡ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಅಂದು ಪ್ರೀತಿ ಕಥೆ ಹಿಂದೆ ಇರುವ ಹೊಸಬರ ಚಿತ್ರಗಳೇ ಹೆಚ್ಚು ಬಿಡುಗಡೆಯಾಗುವ ಸಾಧ್ಯತೆ ಇದೆ. ಫೆ.21 ಕೂಡ ಒಂದಷ್ಟು ಚಿತ್ರಗಳು ತೆರೆಗೆ ಬರುತ್ತಿವೆ. ಫೆ.28ರಂದು ಸಹ ಬಿಡುಗಡೆಯ ರೇಸ್‌ನಲ್ಲಿ ಬೆರಳೆಣಿಕೆ ಚಿತ್ರಗಳಿವೆ. ಐತಿಹಾಸಿಕ ಸಿನಿಮಾ “ಬಿಚ್ಚುಗತ್ತಿ’ ಸಿನಿಮಾ ಕೂಡ ಫೆಬ್ರವರಿಯಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಉಳಿದಂತೆ ಬಹುತೇಕ ಹೊಸಬರ ಚಿತ್ರಗಳೇ ಫೆಬ್ರವರಿಗೆ ದರ್ಶನ ಕೊಡುತ್ತಿವೆ.

ಸದ್ಯಕ್ಕೆ ಪ್ರೇಕ್ಷಕ ಈಗ ಹೊಸಬರೇ ಇರಲಿ, ಹಳಬರೇ ಬರಲಿ. ಯಾವ ಸಿನಿಮಾ ಬರುತ್ತದೆ ಎಂಬ ಕಾಯುವಿಕೆಯಲ್ಲಿದ್ದಾನೆ. ಈ ಬಾರಿಯಂತೂ ಸ್ಟಾರ್‌ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚೇ ಇಟ್ಟಿದ್ದಾನೆ. ಆದರೆ, ಸ್ಟಾರ್ ಸಿನಿಮಾಗಳು ಯಾವಾಗ ತೆರೆಕಾಣುತ್ತವೆ ಎಂಬ ಪ್ರಶ್ನೆ ಮಾತ್ರ ಗಿರಕಿಹೊಡೆಯುತ್ತಲೇ ಇದೆ. ಹಾಗೆ ಹೇಳುವುದಾದರೆ, ಜನವರಿಯಲ್ಲಿ ಕನ್ನಡದ ಸ್ಟಾರ್‌ ಸಿನಿಮಾಗಳಿಗಿಂತ ಪರಭಾಷೆಯ ಸ್ಟಾರ್ ಸಿನಿಮಾಗಳ ಹಾವಳಿ ತುಸು ಹೆಚ್ಚೇ ಇತ್ತು. ಹಾಗಾಗಿ, ಕನ್ನಡದಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳು ಯಾವ ಪವಾಡ ಮಾಡಲಿಲ್ಲ. ಫೆಬ್ರವರಿಯಲ್ಲಿ ಸಿನಿಮಾಗಳ ಬಿಡುಗಡೆ ಸಂಖ್ಯೆ ಹೆಚ್ಚುವ ಮೂಲಕ ಸ್ಟಾರ್ ಸಿನಿಮಾಗಳ ಆಗಮನಕ್ಕೂ ತುಸು ಉತ್ಸಾಹ ತುಂಬುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ ಮುಗಿಯುವ ಹೊತ್ತಿಗೆ, ಶಿವರಾಜಕುಮಾರ್‌ ಅವರ “ದ್ರೋಣ’ ಚಿತ್ರ ಕಾಣಿಸಿಕೊಂಡರೆ ಅಚ್ಚರಿ ಇಲ್ಲ. ಇನ್ನುಳಿದಂತೆ ಮೆಲ್ಲನೆ ಸ್ಟಾರ್ ಚಿತ್ರಗಳ ಹಾವಳಿ ಹೆಚ್ಚಾಗುತ್ತದೆ. ಧ್ರುವ ಅಭಿನಯದ “ಪೊಗರು’, ಪುನೀತ್‌ರಾಜಕುಮಾರ್‌ ನಟಿಸಿರುವ “ಯುವರತ್ನ’ ಚಿತ್ರಗಳು ಏಪ್ರಿಲ್‌ನಲ್ಲಿ ಅಪ್ಪಳಿಸಲಿವೆ. ನಂತರದ ದಿನಗಳಲ್ಲಿ, ದರ್ಶನ್‌ ಅಭಿನಯದ ನಿರೀಕ್ಷೆ ಹೆಚ್ಚಿಸಿರುವ “ರಾಬರ್ಟ್‌’ ಮತ್ತು ಈಗಾಗಲೇ ಸುದ್ದಿಯಲ್ಲಿರುವ ಸುದೀಪ್‌ ನಟಿಸಿರುವ “ಕೋಟಿಗೊಬ್ಬ 3′, ಹಾಡು, ಟ್ರೇಲರ್‌ ಮೂಲಕ ಸದ್ದು ಮಾಡಿರುವ “ದುನಿಯಾ’ ವಿಜಯ್‌ ಅಭಿನಯದ “ಸಲಗ’, “ದುನಿಯಾ’ ಸೂರಿ ನಿರ್ದೇಶನದ ಧನಂಜಯ್‌ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ಈ ಮೂಲಕ ಸ್ಟಾರ್ ಸಿನಿಮಾಗಳ ಬಿಡುಗಡೆ ಸುಗ್ಗಿ ಶುರುವಾಗಲಿದ್ದು, ಸಿನಿ ಪ್ರೇಮಿಗಳ ಕುತೂಹಲವನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ. ಫೆಬ್ರವರಿ ಕಳೆಯುತ್ತಿದ್ದಂತೆಯೇ, ಮಾರ್ಚ್‌, ಏಪ್ರಿಲ್‌ನಲ್ಲಿ ಸ್ಟಾರ್ ಕಲರವ ಹೆಚ್ಚಾಗಲಿದ್ದು, ಹೊಸ ವರ್ಷದ ಅಂತ್ಯದವರೆಗೂ ಸ್ಟಾರ್ ಸಿನಿಮಾಗಳ ಜೊತೆ ಜೊತೆಯಲ್ಲೇ ಹೊಸಬರ ಚಿತ್ರಗಳೂ ಬಿಡುಗಡೆಯಾಗುವ ಮೂಲಕ ಚಿತ್ರರಂಗವನ್ನು ಇನ್ನಷ್ಟು ರಂಗೇರಿಸುವುದಂತೂ ದಿಟ.

ಅದೇನೆ ಇರಲಿ, ಆರಂಭದಲ್ಲೇ ನೀರಸ ಎನಿಸಿದ್ದ ಗಾಂಧಿನಗರ, ಫೆಬ್ರವರಿಯಲ್ಲಿ ಒಂದಷ್ಟು ಗಟ್ಟಿ ಮನರಂಜನೆ ಕೊಡಲು ಸಿದ್ಧವಾಗಿದೆ. ನಂತರದ ಮಾರ್ಚ್‌ ಹಾಗು ಏಪ್ರಿಲ್‌ನಲ್ಲಿ ಸಿನಿಜಾತ್ರೆಗೂ ಸಜ್ಜಾಗುತ್ತಿದೆ. ಇದೇ ರೇಂಜ್‌ನಲ್ಲಿ ಬಿಡುಗಡೆಯ ಸುಗ್ಗಿ ಹೆಚ್ಚಾದರೆ, ಈ ವರ್ಷ ಕೂಡ 200 ಪ್ಲಸ್‌ ಚಿತ್ರಗಳು ಬಿಡುಗಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ವರ್ಷ ಕೂಡ ತುಂಬಾ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳೂ ಇವೆ. “ಕೆಜಿಎಫ್ 2′ ಕೂಡ ಈ ವರ್ಷ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕನ್ನಡ ಮಾತ್ರವಲ್ಲ, ಭಾರತ ಚಿತ್ರರಂಗದಲ್ಲೇ ನಿರೀಕ್ಷೆ ಹುಟ್ಟಿಸಿರುವ “ಕೆಜಿಎಫ್ 2′ ಚಿತ್ರದ ಮೇಲೆ ಎಲ್ಲರ ಕಣ್ಣಿರುವುದಂತೂ ಅಕ್ಷರಶಃ ನಿಜ. ಸದ್ಯಕ್ಕೆ ಸಿನಿ ಪ್ರೇಮಿ ಸಿನಿಹಬ್ಬದೂಟ ಮಿಸ್‌ ಆಗಲ್ಲ ಎಂಬ ಖುಷಿಯಲ್ಲಿದ್ದರೆ ಸಾಕು.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.