Udayavni Special

ಏಕ್‌ ಖ್ವಾಬ್‌ ನನಸಾಯಿತು


Team Udayavani, Sep 14, 2018, 6:00 AM IST

face-face-kannada-movie.jpg

ನಾನು ಮಾತು ಕಡಿಮೆ. ಕೆಲಸ ಜಾಸ್ತಿ ಮಾಡ್ತೀನಿ …ಮೈಕು ಕೈಗೆ ಸಿಗುತ್ತಿದ್ದಂತೆಯೇ, ಏನು ಮಾತನಾಡಬೇಕೆಂದು ಯೋಚಿಸಿದ ಸಂದೀಪ್‌, ಕೊನೆಗೆ ಮೇಲೆ ಹೇಳಿದ ಸಾಲು ಹೇಳಿದರು. ಸಭಾಂಗಣದಲ್ಲಿದವರೆಲ್ಲಾ ಚಪ್ಪಾಳೆ ಹೊಡೆದರು. ಆ ನಂತರ ಮತ್ತೆ ಮೌನ. ಮಾತುಗಳಿಗೆ ಮತ್ತೆ ತಡಕಾಡಿದ ಸಂದೀಪ್‌, “ನಾನು ಉಪ್ಪಿ ಸಾರ್‌ ಜೊತೆಗೆ ಐದು ವರ್ಷ ಕೆಲಸ ಮಾಡಿದ್ದೆ. ಕಥೆ ಮಾಡಿಕೊಂಡು ನಿರ್ಮಾ­ಪಕರನ್ನು ಹುಡುಕುತ್ತಿದ್ದೆ. ಆದರೆ, ನಾನು ಚಿತ್ರ ಮಾಡಬಹುದು ಎಂದು ಯಾರೂ ನಂಬಲಿಲ್ಲ. ಕೊನೆಗೆ ನಾವೇ ಮಾಡೋಣ ಅಂತ ಒಂದು ಲೋ ಬಜೆಟ್‌ ಚಿತ್ರ ಪ್ಲಾನ್‌ ಮಾಡಿದೆವು. ಕೊನೆಗೆ ಅದು ಡಬ್ಬಲ್‌ ಆಯಿತು’ ಎಂದರು.

ಕಳೆದ ವರ್ಷ “ಫೇಸ್‌ 2 ಫೇಸ್‌’ ಎಂಬ ಚಿತ್ರ ಶುರು ಮಾಡಿದ್ದ ಸಂದೀಪ್‌ ಜನಾರ್ಧನ್‌, ಇದೀಗ ಆ ಚಿತ್ರವನ್ನು ಮುಗಿಸಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಅವರು ತೀರ್ಮಾನಿಸಿದ್ದು, ಅದಕ್ಕೂ ಮುನ್ನ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. “ಏಕ್‌ ಖ್ವಾಬ್‌’ ಎಂಬ ಮುಂಬೈನ ತಂಡವೊಂದು ಹಾಡುಗಳನ್ನು ಸಂಯೋಜಿಸಿದ್ದು, ಕಳೆದ ವಾರ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಹಾಡುಗಳನ್ನು ಬಿಡುಗಡೆ ಮಾಡಿದ್ದು ಹಿರಿಯ ನಟ ಶಿವರಾಮಣ್ಣ.

“ಫೇಸ್‌ 2 ಫೇಸ್‌’ ಚಿತ್ರದಲ್ಲಿ ರೋಹಿತ್‌ ಭಾನುಪ್ರಕಾಶ್‌ ನಾಯಕನಾಗಿ ಕಾಣಿಸಿಕೊಂಡರೆ, ಪೂರ್ವಿ ಜೋಷಿ ಮತ್ತು ದಿವ್ಯ ಉರುಡುಗ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರವಿ ಭಟ್‌, ವೀಣಾ ಸುಂದರ್‌, ಸುಚೀಂದ್ರ ಪ್ರಸಾದ್‌, ಯಮುನಾ ಶ್ರೀನಿಧಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟಕ್ಕೂ ಈ ಚಿತ್ರದ ಕಥೆ ಏನು ಅಥವಾ ಎಳೆ ಏನು ಎಂದು ನಿರ್ದೇಶಕರು ಹೇಳಲಿಲ್ಲ. ತುಂಬಾ ನರ್ವಸ್‌ ಆಗಿರುವುದಾಗಿಯೂ, ಸಿನಿಮಾದಲ್ಲೇ ನೋಡಬೇಕೆಂದು ಅವರು ಹೇಳಿದರು.

ಕೊನೆಗೆ ಚಿತ್ರದ ತಿರುಳೇನಿರಬಹುದು ಎಂದು ಹೇಳಿದ್ದು ಸಂಕಲನಕಾರ ಶ್ರೀ. “ಚಿತ್ರದ ಟೈಟಲ್‌ ನೋಡಿದರೆ ಇದೇನು ಮುಖಾ­ಮುಖೀನಾ? ಮುಖ­ವಾಡನಾ? ಅಥವಾ ಸ್ಪ್ಲಿಟ್‌ ಪರ್ಸ­ನಾಲಿಟಿಯಾ? ಎಂದನಿಸ­ಬಹುದು. ಅದೇ ಚಿತ್ರದ ಸಸ್ಪೆನ್ಸ್‌. ಸಂದೀಪ್‌ ಮಾತು ಕಡಿಮೆ­ಯಾದರೂ, ಅವರಿಗೆ ಕ್ಲಾರಿಟಿ ಇದೆ. ತಮಗೇನು ಬೇಕು ಎನ್ನುವುದು ಗೊತ್ತಿದೆ. ಅವರೊಬ್ಬ ಹಠವಾದಿ. ತಮಗೆ ಬೇಕಾಗಿದ್ದು ಬರುವವರೆಗೂ ಬಿಡುವುದಿಲ್ಲ’ ಎಂದು ಹೇಳಿದರು.

ನಾಯಕ ರೋಹಿತ್‌, ಈ ಚಿತ್ರದಲ್ಲಿ ಉದಯೋನ್ಮುಖ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿಜಜೀವನದ ಪಾತ್ರವನ್ನೇ ಈ ಚಿತ್ರದಲ್ಲೂ ನಿರ್ವಹಿಸುತ್ತಿರುವುದಾಗಿ ಅವರು ಹೇಳಿದರು. ಇನ್ನು ದಿವ್ಯ ಉರುಡುಗ ಮತ್ತು ಪೂರ್ವಿ ಜೋಷಿಗೆ ನಿರ್ದೇಶಕರು ಕಥೆ ಹೇಳಿದಾಗ, ಏನೂ ಅರ್ಥವಾಗಲಿಲ್ಲವಂತೆ. ಮತ್ತೆ ಮತ್ತೆ ಕೇಳಿದಾಗ ಇಷ್ಟವಾಗಿ, ನಟಿಸಲು ಒಪ್ಪಿಕೊಂಡರಂತೆ. ಛಾಯಾಗ್ರಾಹಕ ವಿಶ್ವಜಿತ್‌ ರಾವ್‌, ನಿರ್ಮಾಪಕಿ ಸುಮಿತ್ರ, ಯಮುನಾ ಶ್ರೀನಿಧಿ, ರವಿ ಭಟ್‌ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

ಟಾಪ್ ನ್ಯೂಸ್

FDa

ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಮಹಿಳೆಯರ ಸಾಥ್ : ದೆಹಲಿ ಗಡಿಗೆ ಲಗ್ಗೆಯಿಟ್ಟ ರೈತ ನಾರಿಯರು

ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ

ಖಝಃಝಃಖಝಖಝ

ಮಹಿಳಾ ದಿನಾಚರಣೆ : 23 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಮಹಿಳೆಯರ ನೇಮಕ

Bank of baroda mahila shakti account

ಮಹಿಳೆಯರಿಗೆ ‘ಬ್ಯಾಂಕ್ ಆಫ್ ಬರೋಡಾ’ದಿಂದ ಮಹಿಳಾ ದಿನಾಚರಣೆಯ ವಿಶೇಷ ಆಫರ್..!

ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದ ಒಂದು ದಿನ ಅಧಿಕಾರ ನಿರ್ವಹಣೆ

ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದ ಒಂದು ದಿನ ಅಧಿಕಾರ ನಿರ್ವಹಣೆ

Mahadayi

ರಾಜ್ಯ ಬಜೆಟ್-2021 : ಕಳಸಾ-ಬಂಡೂರಿ ಯೋಜನೆಗೆ ಭರ್ಜರಿ ಅನುದಾನ ಘೋಷಣೆ  

ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ, ಕುರಿ, ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ ಘೋಷಣೆ

ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ, ಕುರಿ, ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ ಘೋಷಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prajwal

ಬಿಝಿ ಫೆಬ್ರವರಿ: ಸ್ಟಾರ್ಸ್ ಮೊದಲು ಹೊಸಬರ ಅಬ್ಬರ

ಕಬ್ಜ ಚಿತ್ರದಲ್ಲಿ ಸುದೀಪ್‌ ಗೆಟಪ್‌ಗೆ ಫ್ಯಾನ್ಸ್‌ ಫಿದಾ

ಕಬ್ಜ ಚಿತ್ರದಲ್ಲಿ ಸುದೀಪ್‌ ಗೆಟಪ್‌ಗೆ ಫ್ಯಾನ್ಸ್‌ ಫಿದಾ

ek love ya

ನಾಲ್ಕು ಭಾಷೆಗಳಲ್ಲಿ ಪ್ರೇಮ್‌ ಏಕ್‌ ಲವ್‌ ಯಾ: ಪ್ರೇಮಿಗಳ ದಿನಕ್ಕೆ ಮೊದಲ ಹಾಡು

ಹೆಸರಿಲ್ಲದ ಪಾತ್ರ ಮತ್ತು ಹೆಸರು ಮಾಡುವ ‘ಹೀರೋ’: ಲಾಕ್‌ಡೌನ್‌ನಲ್ಲಿ ತಯಾರಾದ ರಿಷಭ್‌ ಚಿತ್ರ

ಹೆಸರಿಲ್ಲದ ಪಾತ್ರ ಮತ್ತು ಹೆಸರು ಮಾಡುವ ‘ಹೀರೋ’: ಲಾಕ್‌ಡೌನ್‌ನಲ್ಲಿ ತಯಾರಾದ ರಿಷಭ್‌ ಚಿತ್ರ

ಹಾಡಲ್ಲಿ ಎಂಟ್ರಿ ಕೊಟ್ರಾ ಚಡ್ಡಿದೋಸ್ತ್ ಗಳು

ಹಾಡಲ್ಲಿ ಎಂಟ್ರಿ ಕೊಟ್ರಾ ಚಡ್ಡಿದೋಸ್ತ್ ಗಳು

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

Untitled-1

ಮಹಿಳಾ ಸಬಲೀಕರಣಕ್ಕೆ ಅರುಣಾಕುಮಾರಿ ಶ್ರಮ

FDa

ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಮಹಿಳೆಯರ ಸಾಥ್ : ದೆಹಲಿ ಗಡಿಗೆ ಲಗ್ಗೆಯಿಟ್ಟ ರೈತ ನಾರಿಯರು

ಜಿಲ್ಲೆಯಲ್ಲಿ ಮಹಿಳಾಮಣಿಗಳದ್ದೇ ದರ್ಬಾರು, ಹೋರಾಟದಲ್ಲೂ ಮುಂದು

ಜಿಲ್ಲೆಯಲ್ಲಿ ಮಹಿಳಾಮಣಿಗಳದ್ದೇ ದರ್ಬಾರು, ಹೋರಾಟದಲ್ಲೂ ಮುಂದು

ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ

ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್‌

ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.