ಫ್ಯಾನ್‌ ಮೊಗದಲ್ಲಿ ನಗು

ಹೊಸಬರಿಗೆ ಜೈ ಎಂದ ಪ್ರೇಕ್ಷಕ

Team Udayavani, Aug 30, 2019, 5:17 AM IST

ಕಳೆದ ವಾರ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ‘ಫ್ಯಾನ್‌’ ಚಿತ್ರ ತೆರೆಗೆ ಬಂದಿದೆ. ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಚಿತ್ರ ತೆರೆಕಂಡ ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಎರಡನೇ ವಾರಕ್ಕೆ ಅಡಿಯಿಡುತ್ತಿದೆ. ಇದೇ ವೇಳೆ ತಮ್ಮ ಚೊಚ್ಚಲ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಖುಷಿಯಾಗಿರುವ ಚಿತ್ರತಂಡ, ತಮ್ಮ ಖುಷಿಯನ್ನು ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಬಂದಿತ್ತು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ದರ್ಶಿತ್‌ ಭಟ್, ‘ನಮ್ಮ ಮೊದಲ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ, ಎನ್ನುವ ಆತಂಕ ಬಿಡುಗಡೆಗೂ ಮೊದಲು ಇತ್ತು. ಆದ್ರೆ ಚಿತ್ರ ಬಿಡುಗಡೆಯಾದ ನಂತರ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದಾಗ, ಆ ಆತಂಕ ಮಾಯವಾಗಿದೆ. ನನ್ನ ಪ್ರಕಾರ, ಚಿತ್ರಕ್ಕೆ ಇಬ್ಬರು ನಿರ್ಮಾಪಕರಿರುತ್ತಾರೆ. ಒಬ್ಬರು ನಿರ್ಮಾಣಕ್ಕೆ ಹಣ ಹಾಕುವವರು. ಇನ್ನೊಬ್ಬರು ನಿರ್ಮಾಣವಾದ ಚಿತ್ರವನ್ನು ಹಣ ಕೊಟ್ಟು ನೋಡುವವರು. ಒಬ್ಬರಿಗೆ ಸಿನಿಮಾಕ್ಕೆ ಹಾಕಿದ ಪೈಸಾ ವಸೂಲ್ ಆಗಬೇಕು ಮತ್ತೂಬ್ಬರಿಗೆ ಮನರಂಜನೆ ಕೊಟ್ಟು ಪೈಸಾ ವಸೂಲ್ ಸಿನಿಮಾ ಅನಿಸಬೇಕು. ಸದ್ಯ ‘ಫ್ಯಾನ್‌’ ಈ ಇಬ್ಬರೂ ನಿರ್ಮಾಪಕರಿಗೂ ಪೈಸಾ ವಸೂಲ್ ಸಿನಿಮಾ ಆಗುತ್ತಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್‌ಫ‌ುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಕರಾವಳಿ ಏರಿಯಾಗಳಲ್ಲಿ ಚಿತ್ರಕ್ಕೆ ತುಂಬಾ ಚೆನ್ನಾಗಿ ರೆಸ್ಪಾನ್ಸ್‌ ಸಿಗುತ್ತಿದೆ’ ಎಂದು ವಿವರಣೆ ನೀಡಿದರು.

ಇನ್ನು ನಾಯಕ ಆರ್ಯನ್‌, ಚಿತ್ರದಲ್ಲಿ ಜನಪ್ರಿಯ ಸೀರಿಯಲ್ ಒಂದರಲ್ಲಿ ಅಭಿನಯಿಸುತ್ತಿರುವ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ನಾಯಕಿ ಅದ್ವಿತಿ ಶೆಟ್ಟಿ ಉತ್ತರ ಕನ್ನಡದ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರಕ್ಕೂ ಎಲ್ಲರೂ ಸಾಕಷ್ಟು ಮೆಚ್ಚುಗೆ ಸೂಚಿಸುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಅದ್ವಿತಿ ಶೆಟ್ಟಿ, ‘ಪೂರ್ಣ ಪ್ರಮಾಣದ ನಾಯಕಿಯಾಗಿ ಇದು ನನಗೆ ಮೊದಲನೇ ಚಿತ್ರ. ನಾಯಕಿಯಾಗಬೇಕು ಎನ್ನುವ ಹಲವು ವರ್ಷಗಳ ಕನಸು ಈ ಚಿತ್ರದಲ್ಲಿ ಈಡೇರಿದೆ. ಇನ್ನು ಚಿತ್ರಕ್ಕೂ ಕೂಡ ಎಲ್ಲಾ ಕಡೆಗಳಿಂದ ಬಿಗ್‌ ರೆಸ್ಪಾನ್ಸ್‌ ಸಿಗುತ್ತಿದೆ. ನನ್ನ ಪಾತ್ರದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ನಮ್ಮ ಚಿತ್ರವನ್ನು ಕೆಲವರು ‘ಮುಂಗಾರು ಮಳೆ’ ಚಿತ್ರಕ್ಕೆ ಹೋಲಿಕೆ ಮಾಡಿ ಮಾತನಾಡುತ್ತಾರೆ’ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

‘ಫ್ಯಾನ್‌’ ಚಿತ್ರದಲ್ಲಿ ಆರ್ಯನ್‌ ಮತ್ತು ಅದ್ವಿತಿ ಶೆಟ್ಟಿ ಅವರೊಂದಿಗೆ ಮತ್ತೂಬ್ಬ ನಾಯಕಿಯಾಗಿ ಸಮೀಕ್ಷಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಡ್ಯ ರಮೇಶ್‌, ನವೀನ್‌ ಪಡೀಲ್, ರವಿಭಟ್, ವಿಜಯ್‌ ಕಾಶಿ, ಸ್ವಾತಿ, ವಿಟ್ಲ ಮಂಗೇಶ್‌ ಭಟ್, ಪ್ರಣತಿ ಆರ್‌.ಗಾಣಿಗ, ಪ್ರಸನ್ನ ಶೆಟ್ಟಿ, ಪೃಥ್ವಿ ಸಾಗರ್‌, ಗಣೇಶ್‌ ಕೊಡಾಣಿ, ಉದಯ್‌ ರಾಜು ಮೇಸ್ತಾ ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಒಟ್ಟಾರೆ ಹೊಸಬರ ‘ಫ್ಯಾನ್‌’ ಅನ್ನು ಕನ್ನಡ ಸಿನಿಮಾ ಫ್ಯಾನ್ಸ್‌ ನಿಧಾನವಾಗಿ ಮೆಚ್ಚಿಕೊಳ್ಳುತ್ತಿದ್ದು, ಚಿತ್ರತಂಡಕ್ಕೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ