ಫ್ಯಾನ್ ಸ್ಟೋರಿ

ಕಿರುತೆರೆ ಅಭಿಮಾನಿ ಒಬ್ಬಳ ಅಭಿಮಾನ

Team Udayavani, Jun 7, 2019, 6:00 AM IST

ಫ್ಯಾನ್‌…
-ಇದು ಅಭಿಮಾನಿಯೊಬ್ಬರ ಅಭಿಮಾನದ ಕಥೆ. ಹೌದು, ಈಗಾಗಲೇ ರಂಗಭೂಮಿ, ರಿಯಾಲಿಟಿ ಶೋ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಚಿತ್ರಗಳು ಮೂಡಿಬಂದಿವೆ. ಅಷ್ಟೇ ಯಾಕೆ, ಚಿತ್ರರಂಗದ ವಿಷಯವೇ ಸಿನಿಮಾ ಆಗಿರುವ ಉದಾಹರಣೆಗಳು ಸಾಕಷ್ಟು ಇವೆ. ಆದರೆ, ಇದೇ ಮೊದಲ ಸಲ ಒಂದು ಸೂಪರ್‌ ಹಿಟ್‌ ಧಾರಾವಾಹಿ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದೇ “ಫ್ಯಾನ್‌’. ಹೌದು, ಪ್ರಸ್ತುತ ಕಿರುತೆರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಕಷ್ಟು ಪ್ರಭಾವ ಬೀರಿದ ರಂಗವೂ ಹೌದು. ಅದರಲ್ಲೂ ಧಾರಾವಾಹಿಗಳ ಬಗ್ಗೆ ಇನ್ನಿಲ್ಲದ ಕ್ರೇಜ್‌ ಇದೆ. ಆ ಅಂಶಗಳನ್ನೆಲ್ಲಾ ಒಟ್ಟಿಗೆ ಸೇರಿಸಿ, ಒಂದು ಸೂಪರ್‌ ಹಿಟ್‌ ಧಾರಾವಾಹಿಯ ಒಬ್ಬ ಹೀರೋ ಮತ್ತು ಆ ಹೀರೋನನ್ನು ಸಿಕ್ಕಾಪಟ್ಟೆ ಇಷ್ಟಪಡುವ ಅಪ್ಪಟ ಅಭಿಮಾನಿಯೊಬ್ಬಳ ಕಥೆಯೇ “ಫ್ಯಾನ್‌’ ಚಿತ್ರದ ಹೈಲೈಟ್‌.

ಇತ್ತೀಚೆಗೆ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವ ಮೂಲಕ ಚಿತ್ರದ ಅನುಭವ ಹೇಳಲೆಂದೇ ಪತ್ರಕರ್ತರ ಮುಂದೆ ಆಗಮಿಸಿತ್ತು ಚಿತ್ರತಂಡ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್‌.ಎ.ಚಿನ್ನೇಗೌಡ ಅವರು ಶೀರ್ಷಿಕೆ ಇರುವ ಪೋಸ್ಟರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ನಂತರ ಚಿತ್ರತಂಡ ಮಾತುಕತೆ ಶುರುಮಾಡಿತು. ದರ್ಶಿತ್‌ ಭಟ್‌ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶಕರು, “ಚಿತ್ರ ಮುಗಿದಿದೆ. ಇಲ್ಲಿ ಹೊಸ ಕಥೆ ಹೆಣೆದಿದ್ದೇನೆ. ಧಾರಾವಾಹಿ ನೋಡುವ ಅಭಿಮಾನಿಯೊಬ್ಬಳ ಕಥೆ ಇಲ್ಲಿದೆ. ಆ ಧಾರಾವಾಹಿ ಹೀರೋ ಜೊತೆಗಿನ ಅಭಿಮಾನ ಮತ್ತು ಪ್ರೀತಿಯ ವಿಷಯಗಳು ಹೈಲೈಟ್‌. ಚಿತ್ರದ ಪೋಸ್ಟರ್‌ ನೋಡಿದಾಗ, ಹೀರೋ ಶಂಕರ್‌ನಾಗ್‌ ಅವರ ಭಾವಚಿತ್ರವಿರುವ ಟೀ ಶರ್ಟ್‌ ಧರಿಸಿರುವುದು ಗೊತ್ತಾಗುತ್ತೆ. ಶಂಕರ್‌ನಾಗ್‌ ಅವರಿಗೂ ಚಿತ್ರಕ್ಕೂ ಸಂಬಂಧವಿದೆ. ಅದು ಏನು ಅನ್ನೋದು ಸಸ್ಪೆನ್ಸ್‌. ಅವರ ಹೊನ್ನಾವರ ಊರಲ್ಲೇ ಚಿತ್ರೀಕರಿಸಲಾಗಿದೆ. ಸಿನಿಮಾಗೂ, ಶಂಕರ್‌ನಾಗ್‌ ಅವರಿಗೂ ಕನೆಕ್ಟ್ ಆಗುತ್ತೆ. ಅದನ್ನು ಚಿತ್ರದಲ್ಲೇ ನೋಡಿ. ಇದೊಂದು ಹೊಸ ಕಥೆ. ನೋಡುಗರಿಗೆ ನನ್ನ ಅಭಿಮಾನದ ಕಥೆ’ ಎನ್ನುವಷ್ಟರ ಮಟ್ಟಿಗೆ ಕಾಡುತ್ತದೆ’ ಎಂದರು ದರ್ಶಿತ್‌ ಭಟ್‌.

ಚಿತ್ರದಲ್ಲಿ ಆರ್ಯನ್‌ ನಾಯಕರಾಗಿ ದ್ದಾರೆ. ಅವರಿಗೆ ಇದು ಮೊದಲ ಚಿತ್ರ. “ಚಿತ್ರದಲ್ಲಿ ನಾನು ಧಾರಾವಾಹಿಯ ಹೀರೋ. ನನಗಿಲ್ಲಿ ಅಪ್ಪಟ ಅಭಿಮಾನಿ ಇದ್ದಾರೆ, ನಾನು ಕೂಡ ಶಂಕರ್‌ನಾಗ್‌ ಅವರ ಅಪ್ಪಟ ಅಭಿಮಾನಿ. ಆ ಕಥೆಯೇ ಚಿತ್ರದ ಹೈಲೈಟ್‌. ಆ ಸುತ್ತ ನಡೆಯುವ ಹಲವು ಅಂಶಗಳು ನೋಡುಗರನ್ನು ಗಮನಸೆಳೆಯುತ್ತವೆ. ಮೊದಲ ಹೆಜ್ಜೆ ಇದು. ಎಲ್ಲರ ಸಹಕಾರ, ಪ್ರೋತ್ಸಾಹ ಇರಲಿ’ ಎಂದರು ಆರ್ಯನ್‌.

ಅದ್ವಿತಿ ಶೆಟ್ಟಿ ಚಿತ್ರದಲ್ಲಿ ಅಭಿಮಾನದ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರು ಈ ಹಿಂದೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ, ಅನೇಕರು ಬಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರಂತೆ. ಈಗ ಚಿತ್ರದಲ್ಲಿ ನಾನು ಧಾರಾವಾಹಿ ಹೀರೋನ ಅಭಿಮಾನಿಯಾಗಿ ನಟಿಸುತ್ತಿದ್ದೇನೆ. ಇದೊಂದು ಹೊಸ ಅನುಭವ’ ಅಂದರು ಅದ್ವಿತಿಶೆಟ್ಟಿ.

ಮತ್ತೂಬ್ಬ ನಾಯಕಿ ಸಮೀಕ್ಷಾ ಇಲ್ಲಿ ಸೆಲಿಬ್ರಿಟಿ ನಾಯಕಿಯಾಗಿ ನಟಿಸುತ್ತಿದ್ದಾರಂತೆ. ಸಿನಿಮಾದಲ್ಲಿ ಧಾರಾವಾಹಿಯ ಯಶಸ್ವಿ ನಾಯಕಿ ಪಾತ್ರವಾದ್ದರಿಂದ ಎಕ್ಸೆ„ಟ್‌ ಆಗಿದ್ದೇನೆ’ ಎಂದರು ಸಮೀಕ್ಷಾ. ಉಳಿದಂತೆ ಪ್ರಸನ್ನಶೆಟ್ಟಿ, ರಘು ಪಾಂಡೇಶ್ವರ್‌, ಸಂಗೀತಾಭಟ್‌, ಗಣೇಶ್‌ ಗೌಡ, ವಿಜಯ ಕಾಶಿ, ರವಿಭಟ್‌ ತಮ್ಮ ಪಾತ್ರ ಕುರಿತು ಹೇಳಿಕೊಂಡರು. ವಿಕ್ರಮ್‌ ಚಂದನ್‌ ನಾಲ್ಕು ಹಾಡಿಗೆ ಸಂಗೀತ ನೀಡುತ್ತಿದ್ದಾರೆ. ಪವನ್‌ಕುಮಾರ್‌ ಛಾಯಾಗ್ರಹಣವಿದೆ. ಸವಿತಾ ಈಶ್ವರ್‌, ರಾಜಮುಡಿ ದತ್ತ ಸಿನಿಮಾ ನಿರ್ಮಾಪಕರು. ಅಂದಿನ ಶೀರ್ಷಿಕೆ ಬಿಡುಗಡೆ ವೇಳೆ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮ.ಹರೀಶ್‌, ಭಾ.ಮ.ಗಿರೀಶ್‌, ಪೃಥ್ವಿಸಾಗರ್‌ ಇತರರು ಇದ್ದರು.

ಈ ವಿಭಾಗದಿಂದ ಇನ್ನಷ್ಟು

  • ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...

  • "ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್‌ ಆದ ನಂತರ ಸಿನಿಮಾ ಸಕ್ಸಸ್‌...

  • ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...

  • ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...

  • ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...

ಹೊಸ ಸೇರ್ಪಡೆ