ಫ್ಯಾಂಟಸಿ ಲೋಕದಲ್ಲಿ ಪ್ರಿಯಾಂಕಾ
Team Udayavani, Oct 16, 2020, 1:47 PM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಫ್ಯಾಂಟಸಿ’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ “ಫ್ಯಾಂಟಸಿ’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಅನ್ನೂ ಬಿಡುಗಡೆ ಮಾಡಿದೆ. ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, ಹೆಸರೇ ಹೇಳುವಂತೆ “ಫ್ಯಾಂಟಸಿ’ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾ.
ಭ್ರಮೆ ಮತ್ತು ವಾಸ್ತವದ ನಡುವೆ ಇಡೀಕಥೆ ತೆರೆದುಕೊಳ್ಳಲಿದ್ದು, ರೋಚಕ ಟ್ವಿಸ್ಟ್ಗಳು ಕುತೂಹಲ ಮೂಡಿಸುತ್ತ ಸಾಗಲಿದೆ ಎನ್ನುತ್ತದೆ. “ಪವನ್ ಡ್ರೀಮ್ ಫಿಲಂಸ್’ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ “ಫ್ಯಾಂಟಸಿ’ ಚಿತ್ರಕ್ಕೆ ಅವ ನಿರ್ದೇಶಕ ಪವನ್ ಕುಮಾರ್ ಆರ್. ಕಥೆ, ಚಿತ್ರಕಥೆ, ಸಂಭಾಷಣೆಬರೆದುನಿರ್ದೇಶನದಜತೆಗೆನಿರ್ಮಾಣವನ್ನೂಮಾಡುತ್ತಿದ್ದಾರೆ. “ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದ ನಿರ್ದೇಶಕ ಪವನ್ ಕುಮಾರ್, ಬಳಿಕ “ಅಮ್ಮ ಐ ಲವ್ ಯೂ’, “ಆದ್ಯ’ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. “ಡ್ರಾಮಾ ಜ್ಯೂನಿಯರ್ ಸೀಸನ್-3′ ರ ಸ್ಪರ್ಧಿ ಅನುರಾಗ್, “ಫ್ಯಾಂಟಸಿ’ ಸಿನಿಮಾದ ಕೇಂದ್ರ ಬಿಂದು. ಚಿತ್ರದಲ್ಲಿ ಆತನ ಮಾನಸಿಕ ಸ್ಥಿತಿಗತಿ ಹೇಗೆಲ್ಲ ಬದಲಾಗುತ್ತದೆ. ಅದರಿಂದ ಎದುರಾಗುವ ಅನಾಹುತಗಳೇನು ಎಂಬುದೇ “ಫ್ಯಾಂಟಸಿ’ ಚಿತ್ರದ ಒಂದೆಳೆ. ಕಿರುತೆರೆ ಧಾರಾವಾಹಿ ಮತ್ತು ಬಿಗ್ಬಾಸ್ ಮೂಲಕ ಮನೆಮಾತಾಗಿರುವ ನಟಿ ಪ್ರಿಯಾಂಕಾ ಈ ಚಿತ್ರದಲ್ಲಿ ನೆಗೆಟಿವ್ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಉಳಿದಂತೆ ಮೈಸೂರು ಬಾಲ, ಹರಿಣಿ,ಹೇಮಂತ್ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪಿಕೆಹೆಚ್ ದಾಸ್ ಛಾಯಾಗ್ರಹಣವಿದ್ದು, ಆರ್.ಎಸ್ ಗಣೇಶ್ ನಾರಾಯಣ್ ಮತ್ತು ಶಶಿರಾಮ್ ಸಂಕಲನವಿದೆ. ಬೆಂಗಳೂರು ಮತ್ತು ಮಡಿಕೇರಿ ಸುತ್ತಮುತ್ತ “ಫ್ಯಾಂಟಸಿ’ ಚಿತ್ರೀಕರಣ ಮಾಡಲಾಗಿದೆ. ಎಲ್ಲಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯಕ್ಕೆ “ಫ್ಯಾಂಟಸಿ’ಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.