ಅತೃಪ್ತ ಮನಸ್ಸಿನ ಹಿಂದೆ ತೃಪ್ತ ಭಾವ!


Team Udayavani, Dec 22, 2017, 6:55 AM IST

atrupta-manassu.jpg

ಆ ನಿರ್ದೇಶಕ ಒಂದು ಚಿತ್ರ ಶುರುಮಾಡಿದಾಗ, ಎಷ್ಟೋ ಜನ ಅದು ಶುರುವಾಗಲ್ಲ ಅಂದರಂತೆ. ಸಿನಿಮಾ ಮುಗಿಸಿದಾಗ, ಅದು ರಿಲೀಸ್‌ ಕೂಡ ಆಗಲ್ಲ ಅಂದರಂತೆ. ಆ ನಿರ್ದೇಶಕ ಟೈಮ್‌ ಸರಿಯಿಲ್ಲ ಅಂದುಕೊಂಡು ಸುಮ್ಮನಿದ್ದರಂತೆ. ಮೊದಲ ಸಲ ಪ್ರೀತಿಯಿಂದ ಮಾಡಿದ ಚಿತ್ರ ರಿಲೀಸ್‌ ಆಗಲೇ ಇಲ್ಲವಲ್ಲ ಅನ್ನೋ ಕೊರಗಿನಲ್ಲೇ ಇದ್ದಾಗ, “ಸರಿಯಾದ ನಿರ್ಮಾಪಕರು ಸಿಕ್ಕು ಪ್ರೋತ್ಸಾಹಿಸಿದರೆ ಕೇವಲ ನಾಲ್ಕು ತಿಂಗಳಲ್ಲೇ ಒಂದು ಚಿತ್ರ ಮಾಡಿ ತೋರಿಸ್ತೀನಿ’ ಅಂತ ಚಾಲೆಂಜ್‌ ಮಾಡಿದರಂತೆ. ಹಾಗೆ ಚಾಲೆಂಜ್‌ ಮಾಡಿದ್ದರಿಂದಲೇ ಅವರು ಕೇವಲ 3 ತಿಂಗಳು 17 ದಿನದಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗ ಬಿಡುಗಡೆಗೂ ರೆಡಿಯಾಗಿದ್ದಾರೆ. ಹಾಗೆ ಮಾಡಿದ ಚಿತ್ರ “ಅತೃಪ್ತ’. ಅಂಥದ್ದೊಂದು ಚಾಲೆಂಜ್‌ ಮಾಡಿ ತೋರಿಸಿದ ನಿರ್ದೇಶಕ ನಾಗೇಶ್‌ ಕ್ಯಾಲನೂರು.

“ಪ್ರೇಮಾಸುರ’ ಎಂಬ ಚಿತ್ರ ಮಾಡಿದ್ದರು ನಾಗೇಶ್‌. ಆದರೆ, ಅದು ರಿಲೀಸ್‌ ಆಗಲಿಲ್ಲ. ಅತೃಪ್ತ ಮನಸ್ಸಲ್ಲೇ ಇದ್ದ ನಾಗೇಶ್‌ಗೆ ಬೆನ್ನೆಲುಬಾಗಿ ನಿಂತಿದ್ದು ನಿರ್ಮಾಪಕ ರಘುನಾಥರಾವ್‌. ಅವರ ಪ್ರೋತ್ಸಾಹದಿಂದ ಈಗ “ಅತೃಪ್ತ’ ಚಿತ್ರ ಮಾಡಿ, ತೃಪ್ತರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು. “ಚಿತ್ರತಂಡದವರ ಸಹಕಾರದಿಂದ ಇಷ್ಟು ಬೇಗ ಚಿತ್ರ ಮಾಡಲು ಸಾಧ್ಯವಾಗಿದೆ. ಹೇಳಿದಂತೆ ನಾನು ನಾಲ್ಕು ತಿಂಗಳ ಒಳಗೆ ಚಿತ್ರ ಮಾಡಿ ಸೆನ್ಸಾರ್‌ ಪತ್ರ ಪಡೆದಿದ್ದೇನೆ.

ಇದೊಂದು ಅತೃಪ್ತ ಆತ್ಮದ ಕಥೆ. ಒಂದು ಜೋಡಿ ಹನಿಮೂನ್‌ಗೆ ಹೋದಾಗ ನಡೆಯೋ ಘಟನೆಗಳಿಲ್ಲಿ ಹೈಲೈಟ್‌. ಹಾರರ್‌ ಅಂಶಗಳು ಹೆಚ್ಚಿವೆ.  ಚಿತ್ರಕ್ಕೆ ಮುಖ್ಯವಾಗಿ ಕ್ಯಾಮೆರಾ, ಸಂಗೀತ ಪಾತ್ರ ನಿರ್ವಹಿಸಿವೆ. ರೊಮ್ಯಾನ್ಸ್‌ ಇರುವುದರಿಂದ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ’ ಅಂದರು ನಾಗೇಶ್‌.

ನಿರ್ಮಾಪಕ ರಘನಾಥ ರಾವ್‌ ಅವರಿಗೆ ಇದು ಮೊದಲ ಚಿತ್ರವಂತೆ. “ಚಿತ್ರ ಶುರು ಮಾಡಿದಾಗ ಹಣದ ಸಮಸ್ಯೆ ಇತ್ತು. ಆದರೆ, ಒಳ್ಳೇ ಕಥೆ, ಟೀಮ್‌ ಸಿಕ್ಕಿದ್ದರಿಂದ ಎಲ್ಲವೂ ಚನ್ನಾಗಿ ನಡೆಯಿತು. ನಿರ್ದೇಶಕರು ರಾತ್ರಿ-ಹಗಲು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡುವಾಸೆ ಇದೆ’ ಅಂದರು ನಿರ್ಮಾಪಕರು. ನಾಯಕ ಅರ್ಜುನ್‌ ಯೋಗಿ ಅವರಿಗೆ ಇದು ಎರಡನೇ ಚಿತ್ರ. “ಏನೆಂದು ಹೆಸರಿಡಲಿ’ ಬಳಿಕ ಹಲವು ಕಥೆ ಕೇಳಿ, ಇದನ್ನು ಒಪ್ಪಿದರಂತೆ. ಕಥೆ ಕೇಳಿದಾಗ, ಮಿಸ್‌ ಮಾಡಬಾರದು ಅಂತ ಕೆಲಸ ಮಾಡಿದ್ದಾರೆ. ಇಲ್ಲಿ ಎಲ್ಲರಿಗೂ ಒಂಥರಾ ಅತೃಪ್ತ ಮನಸ್ಸು. ಯಾಕೆಂದರೆ, ಎಲ್ಲರಿಗೂ ಒಂದು ಗೆಲುವು ಬೇಕು. ಬಹುಶಃ ಈಗ ಚಿತ್ರದ ಔಟ್‌ಪುಟ್‌ ನೋಡಿದರೆ, ಎಲ್ಲರಿಗೂ ತೃಪ್ತಿ ಎನಿಸಿದೆ. ಗೆಲುವು ಸಿಕ್ಕರೆ ಮತ್ತಷ್ಟು ತೃಪ್ತಿ ಆಗುತ್ತೆ’ ಅಂದರು ಅರ್ಜುನ್‌. ನಾಯಕಿ ಶ್ರುತಿರಾಜ್‌ಗೆ ಕಥೆ, ಪಾತ್ರ ಕೇಳಿದಾಗ ಆ ಪಾತ್ರ ಮಾಡೋಕೆ ಸಾಧ್ಯನಾ ಎಂಬ ಪ್ರಶ್ನೆ ಎದುರಾಯಿತಂತೆ. ಆದರೂ, ಅವರು ಚಾಲೆಂಜ್‌ನಿಂದ ಪಾತ್ರ ಮಾಡಿದ್ದಾರೆ. ಅಂದು ಸಂಕಲನಕಾರ ಶಿವಪ್ರಸಾದ್‌, ಡಿಐ ತಂತ್ರಜ್ಞ ಕಣ್ಣನ್‌, ಕ್ಯಾಮೆರಾಮ್ಯಾನ್‌ ರವಿಕಿಶೋರ್‌, ನವೀನ್‌ “ಅತೃಪ್ತ’ ಕುರಿತು ಮಾತಾಡಿದರು.

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.