ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು


Team Udayavani, Jan 21, 2022, 11:41 AM IST

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ರಂಗಕ್ಕೂ ಕಿರುತೆರೆಗೂ ಮೊದಲಿನಿಂದಲೂ ಒಂದು ಅವಿನಾಭಾವ ನಂಟಿದೆ. ಕಿರುತೆರೆಯಲ್ಲಿ ಮಿಂಚಿದ ಅದೆಷ್ಟೋ ನಟ-ನಟಿಯರು, ಕಲಾವಿದರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರು ತಮ್ಮ ಭವಿಷ್ಯದಲ್ಲಿ ಹಿರಿತೆರೆಯತ್ತ ಮುಖ ಮಾಡಿ ಮಿಂಚಿದ್ದು, ಹಾಗೆಯೇ ಹಿರಿತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅದೆಷ್ಟೋ ಮಂದಿ ತಮ್ಮ ಭವಿಷ್ಯದಲ್ಲಿ ಕಿರುತೆರೆಯತ್ತ ಮುಖ ಮಾಡಿದಂಥ ಉದಾಹರಣೆಗಳು ಹಿರಿತೆರೆ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಸಿಗುತ್ತವೆ.

ಒಂದು ಕಾಲದಲ್ಲಿ ಹಿರಿತೆರೆ ಮತ್ತು ಕಿರುತೆರೆ ಅಂಥ ಗೊತ್ತಿಲ್ಲದೇ ಒಂದು ವರ್ಗೀಕರಣವಿದ್ದರೂ, ಈಗ ಅದೆಲ್ಲವೂ ಮಾಯವಾಗಿದೆ. ಅವಕಾಶಗಳು, ಮಾರುಕಟ್ಟೆ, ವ್ಯಾಪಾರ-ವಹಿವಾಟು, ಪ್ರೇಕ್ಷಕರ ಸಂಖ್ಯೆ, ಸಾಮಾಜಿಕ ಪ್ರಭಾವ ಎಲ್ಲವನ್ನೂ ಪರಿಗಣಿಸಿದರೆ, ಹಿರಿತೆರೆ ಮತ್ತು ಕಿರುತೆರೆ ನಡುವೆ ಅಂಥದ್ದೇನೂ ದೊಡ್ಡ ವ್ಯತ್ಯಾಸ ಕಾಣಲಾರದು. ಅದರಲ್ಲೂ ಕಳೆದ ಒಂದು ದಶಕದಿಂದ ಬದಲಾದ ಕಾಲಘಟ್ಟದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ನಡುವಿನ ಅಂತ ಇನ್ನಷ್ಟು ಕಡಿಮೆಯಾಗುತ್ತಿದ್ದು, ಸಿನಿಮಾದ ನಡುವೆಯೇ ಅನೇಕ ನಟ-ನಟಿಯರು, ಕಲಾವಿದರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರು ಆಗಾಗ್ಗೆ ಸೀರಿಯಲ್‌, ರಿಯಾಲಿಟಿ ಶೋ, ಸ್ಪೆಷಲ್‌ ಇವೆಂಟ್ಸ್‌ ಅಂಥ ಕಿರುತೆರೆಯಲ್ಲೂ ಕಾಣಿಸಿಕೊಂಡರೆ, ಸೀರಿಯಲ್‌-ರಿಯಾಲಿಟಿ ಶೋಗಳ ಮೂಲಕ ಕಿರುತೆರೆಯಲ್ಲಿ ಮಿಂಚಿದವರು ಸಿನಿಮಾಗಳ ಮೂಲಕ ಹಿರಿತೆರೆಯಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ:ಪುಷ್ಪ ಚಿತ್ರದ ಪ್ರೇರಣೆ : ಕೊಲೆ ಮಾಡಿ ವೈರಲ್ ಆಗಲು ಬಯಸಿದ್ದ ಬಾಲಕರು!

ಎಲ್ಲವನ್ನೂ ಬದಲಾಯಿ ಸಿಬಿಟ್ಟಿತು ಕಳೆದೊಂದು ದಶಕ:  ಸುಮಾರು ಒಂದು ದಶಕದ ಹಿಂದಿನ ವಾತಾವರಣ ಬೇರೆಯದ್ದೇ ಆಗಿತ್ತು. ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಯರಾಗಿ ಕಾಣಿಸಿಕೊಂಡು, ತಮ್ಮದೇ ಆದ ಛಾಪು ಮೂಡಿಸಿದ್ದ ಬಹುತೇಕ ನಟ-ನಟಿಯರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಅದರಲ್ಲೂ ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡ ನಟ-ನಟಿಯರನ್ನಂತೂ ಕಿರುತೆರೆಯಲ್ಲಿ ಸೀರಿಯಲ್‌, ರಿಯಾಲಿಟಿ ಶೋ, ಇವೆಂಟ್ಸ್ ಗಳಲ್ಲಿ ನೋಡುವುದು ದೊಡ್ಡ ವಿಷಯವೇ ಆಗಿತ್ತು. ಹಾಗೇ ಕಿರುತೆರೆ ಅಂದ್ರೆ, ಮೂಗು ಮುರಿಯುತ್ತಿದ್ದವರ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಆದರೆ ಈಗ ಹಾಗಲ್ಲ, ಕಾಲ ಎಲ್ಲವನ್ನೂ ಬದಲು ಮಾಡಿದೆ. ಹಾಗೆಯೇ ಕಿರುತೆರೆಯೂ ಬದಲಾಗುತ್ತಿದೆ. ಹೆಸರಿಗೆ ಕಿರುತೆರೆ ಅಂತಿದ್ದರೂ, ಅದರ ಅರ್ಥ, ವ್ಯಾಪ್ತಿ, ವಿಸ್ತಾರ ಎಲ್ಲವೂ ಹಿರಿದಾಗುತ್ತಿದೆ. ಹೀಗಾಗಿ ಕಿರುತೆರೆ ಅಂದ್ರೆ, ಇಂದು ಹಿರಿತೆರೆಯವರಿಗೂ ಫೇವರೆಟ್‌ ಅನ್ನುವಂತಾಗಿದೆ.

ಸೀರಿಯಲ್‌ ಆದ್ರೂ ಸರಿ, ರಿಯಾಲಿಟಿ ಶೋ ಆದ್ರೂ ಸೈ: ಇನ್ನು ಕನ್ನಡದ ಮಟ್ಟಿಗೆ ಹೇಳುವುದಾದರೆ, ಈಗಿನ ಬಹುತೇಕ ಎಲ್ಲ ಸ್ಟಾರ್ ನಟ-ನಟಿಯರು ಕೂಡ ಒಂದಲ್ಲ ಒಂದು ರೀತಿ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ನಂಟು ಇಟ್ಟುಕೊಂಡು ಬಂದಿದ್ದಾರೆ. ಈಗಾಗಲೇ ಸುದೀಪ್‌, ಶಿವರಾಜಕುಮಾರ್‌, ರವಿಚಂದ್ರನ್‌, ಗಣೇಶ್‌, ರಮೇಶ್‌ ಅರವಿಂದ್‌, ವಿಜಯ ರಾಘವೇಂದ್ರ, ರಚಿತಾ ರಾಮ್‌, ಹರಿಪ್ರಿಯಾ, ಪ್ರಿಯಾಮಣಿ, ಮೇಘನಾ ರಾಜ್‌, ರಕ್ಷಿತಾ ಹೀಗೆ ಅನೇಕ ಸ್ಟಾರ್ ನಟ-ನಟಿಯರು ಕಿರುತೆರೆಯ ರಿಯಾಲಿಟಿ ಶೋಗಳು ಮತ್ತು ಸ್ಪೆಷಲ್‌ ಇವೆಂಟ್ಸ್‌ಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ರೂಪಿಕಾ, ಮೇಘಶ್ರೀ, ಅಖೀಲಾ ಪ್ರಕಾಶ್‌, ಐಶ್ವರ್ಯಾ ಸಿಂಧೋಗಿ, ಸ್ಮಿತಾ ಪಾಟೀಲ್‌ ಸೇರಿದಂತೆ ಇನ್ನು ಅನೇಕ ನಟಿಯರು ಸಿನಿಮಾದ ಜೊತೆ ಜೊತೆಯಲ್ಲೇ ಸೀರಿಯಲ್‌ಗ‌ಳ ಮೂಲಕವೂ ಕಿರುತೆರೆಯಲ್ಲಿ ತಮ್ಮದೇ ಆದ ವೀಕ್ಷಕ ಬಳಗವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿತೆರೆಯಿರಲಿ, ಕಿರುತೆರೆಯಿರಲಿ ತಮಗೆ ಖುಷಿಕೊಡುವಂಥ ಕೆಲಸ, ಜನಮನ್ನಣೆ ಸಿಗುವಂಥ ವೇದಿಕೆ, ಸೂಕ್ತ ಸಂಭಾವನೆ ಸಿಗಬೇಕು ಎಂಬುದು ಬಹುತೇಕ ಕಲಾವಿದರ ಕನಿಷ್ಟ ನಿರೀಕ್ಷೆ. ಈ ನಿರೀಕ್ಷೆಯನ್ನು ಇಂದು ಹಿರಿತೆರೆ, ಕಿರುತೆರೆ ಬಹುತೇಕ ಸಮಾನವಾಗಿ ಪರಿಪೂರ್ಣಗೊಳಿಸುವುದರಿಂದ, ಯಾವುದರಲ್ಲೂ ವ್ಯತ್ಯಾಸ ಕಾಣಲಾಗುವುದಿಲ್ಲ.

ಜಿ.ಎಸ್.ಕಾರ್ತಿಕ ಸುಧನ್

ಟಾಪ್ ನ್ಯೂಸ್

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ಮಾರ್ಕೋನಹಳ್ಳಿ ಜಲಾಶಯ ಭರ್ತಿ : ರೈತರಲ್ಲಿ ಮುಖದಲ್ಲಿ ಮಂದಹಾಸ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್

ಟಿವಿಎಸ್‍ ನಿಂದ ಹೊಸ ಮಾದರಿಯ ಐಕ್ಯೂಬ್‍ ಎಲೆಕ್ಟ್ರಿಕ್‍ ಸ್ಕೂಟರ್ ಗಳ ಬಿಡುಗಡೆ

ಟಿವಿಎಸ್‍ ನಿಂದ ಹೊಸ ಮಾದರಿಯ ಐಕ್ಯೂಬ್‍ ಎಲೆಕ್ಟ್ರಿಕ್‍ ಸ್ಕೂಟರ್ ಗಳ ಬಿಡುಗಡೆ

1-wweweq

ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫಾರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರದಲ್ಲಿ ರಚನಾ ಇಂದರ್‌

ಫಾರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರದಲ್ಲಿ ರಚನಾ ಇಂದರ್‌

“ಮೆಟಡೋರ್‌” ಏರಿದ ಕವಿತಾ ಗೌಡ

“ಮೆಟಡೋರ್‌” ಏರಿದ ಕವಿತಾ ಗೌಡ

ಹೊರಬಂತು “ಶುಭಮಂಗಳ” ಟೀಸರ್‌

ಹೊರಬಂತು “ಶುಭಮಂಗಳ” ಟೀಸರ್‌

ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

ಮನಸ್ಮಿತ ಹಾಡು ಹಬ್ಬ : ಜೂನ್‌ನಲ್ಲಿ ತೆರೆಗೆ

ಮನಸ್ಮಿತ ಹಾಡು ಹಬ್ಬ: ಜೂನ್‌ನಲ್ಲಿ ತೆರೆಗೆ

MUST WATCH

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ಹೊಸ ಸೇರ್ಪಡೆ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ಮಾರ್ಕೋನಹಳ್ಳಿ ಜಲಾಶಯ ಭರ್ತಿ : ರೈತರಲ್ಲಿ ಮುಖದಲ್ಲಿ ಮಂದಹಾಸ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.