ಮತ್ತೆ  ಬಂತು ನಾಗರಹಾವು


Team Udayavani, Jul 13, 2018, 6:00 AM IST

b-36.jpg

“ಆ ಚಿತ್ರವನ್ನು ಹೊಸ ತಂತ್ರಜ್ಞಾನದಿಂದ ಮರುಸೃಷ್ಟಿ ಮಾಡಬಹುದು. ಆದರೆ, ಅಂಥದ್ದೊಂದು ಚಿತ್ರವನ್ನ ಈಗ ಸೃಷ್ಟಿ ಮಾಡೋಕೆ ಸಾಧ್ಯವಾ? …’

ರವಿಚಂದ್ರನ್‌ ಅವರು ಇಂಥದ್ದೊಂದು ಮಾತು ಹೇಳಿದ್ದು “ನಾಗರಹಾವು’ ಚಿತ್ರದ ಬಗ್ಗೆ. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ನಾಗರಹಾವು’ ಚಿತ್ರವು 1972ರಲ್ಲಿ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್‌, ಅಂಬರೀಶ್‌ ಮುಂತಾದ ಹಲವು ಕಲಾವಿದರಿಗೆ ದೊಡ್ಡ ಬ್ರೇಕ್‌ ನೀಡಿದ್ದ ಈ ಚಿತ್ರವನ್ನು ರವಿಚಂದ್ರನ್‌ ಅವರ ತಂದೆ ವೀರಾಸ್ವಾಮಿ ಅವರು ನಿರ್ಮಿಸಿದ್ದರು. ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಈ ಚಿತ್ರವನ್ನು ಈಗ 7.1 ಡಿಟಿಎಸ್‌ ಸೌಂಡ್‌ ಮತ್ತು ಡಿಐ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ ರವಿಚಂದ್ರನ್‌ ಅವರ ಸಹೋದರ ಬಾಲಾಜಿ.

ಇದಕ್ಕೆ ಪೂರ್ವಭಾವಿಯಾಗಿ ಹೊಸ ತಂತ್ರಜ್ಞಾನದಲ್ಲಿ ಮೂಡಿಬಂದಿರುವ ಈ ಚಿತ್ರದ ಕೆಲವು ಹಾಡುಗಳು, ತುಣುಕುಗಳು ಮತ್ತು ಮೇಕಿಂಗ್‌ ವೀಡಿಯೋವನ್ನು ಕಲಾವಿದರ ಸಂಘದಲ್ಲಿ ತೋರಿಸಲಾಯಿತು. ಈ ಸಮಾರಂಭಕ್ಕೆ ಹಿರಿಯ ನಟರಾದ ಲೀಲಾವತಿ, ಜಯಂತಿ, ಭಾರತೀ ವಿಷ್ಣುವರ್ಧನ್‌, ಅಂಕಲ್‌ ಲೋಕನಾಥ್‌, ಶಿವರಾಮಣ್ಣ, ಅಂಬರೀಶ್‌ ಮುಂತಾದವರು ಬಂದಿದ್ದರು. ಜೊತೆಗೆ ಪುಟ್ಟಣ್ಣ ಕಣಗಾಲ್‌ ಅವರ ಪತ್ನಿ ನಾಗಲಕ್ಷ್ಮೀ ಕಣಗಾಲ್‌ ಸಹ ಸಮಾರಂಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಎಲ್ಲರೂ ಚಿತ್ರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಹೊಸ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವ “ನಾಗರಹಾವು’ ಸೂಪರ್‌ ಹಿಟ್‌ ಆಗಲಿ ಎಂದು ಹಾರೈಸಿದರು.

ಮೊದಲು ಮಾತನಾಡಿದ್ದರು ರವಿಚಂದ್ರನ್‌. “ಈ ಚಿತ್ರದ ಮೇಕಿಂಗ್‌ ವೀಡಿಯೋ ನೋಡುವಾಗ, ಎಲ್ಲರೂ ಪುನಃಸೃಷ್ಟಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದಿದ್ದನ್ನು ನೋಡಿದೆ. ಈಗಲೇ ಕಷ್ಟವಾದರೆ, ಆಗ ಇನ್ನೆಷ್ಟು ಕಷ್ಟವಾಗಿರಬಹುದು? ಆದರೆ, ಆಗ ಕಷ್ಟ ಅನ್ನೋದೇ ಗೊತ್ತಿರಲಿಲ್ಲ. ಏಕೆಂದರೆ, ಎಲ್ಲರೂ ಪ್ರೀತಿಯಿಂದ, ಪ್ಯಾಶನ್‌ನಿಂದ ಕೆಲಸ ಮಾಡುತ್ತಿದ್ದರು. 46 ವರ್ಷಗಳ ಹಿಂದಿನ ಚಿತ್ರ ಈಗಲೂ ಫ್ರೆಶ್‌ ಆಗಿದೆ ಎಂದರೆ, ಅದಕ್ಕೆ ಅವರೆಲ್ಲರ ಶ್ರದ್ಧೆ ಮತ್ತು ಪ್ರೀತಿ ಕಾರಣ. ಈ ಚಿತ್ರವನ್ನ ಮರೆಯೋದು ಕಷ್ಟ. ಚಿತ್ರದಲ್ಲಿನ ಪ್ರತಿ ಪಾತ್ರ, ಅಭಿನಯ, ಲೊಕೇಶನ್‌ ಚೆನ್ನಾಗಿದೆ. ಕನ್ನಡದ ಮಟ್ಟಿಗೆ ಇದೊಂದು ಮಾಸ್ಟರ್‌ಪೀಸ್‌ ಚಿತ್ರ. ಇದು ಬರೀ ನೋಡೋರಿಗಷ್ಟೇ ಅಲ್ಲ, ಚಿತ್ರ ಮಾಡುವವರು ಸಹ ಇದರಿಂದ ಕಲಿಯುವುದು ತುಂಬಾ ಇದೆ. ನಮ್ಮ ಈಶ್ವರಿ ಸಂಸ್ಥೆಗೆ 50 ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ರೀಸೈಕಲ್‌ ಆಗಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಇನ್ನಷ್ಟು ಚಿತ್ರಗಳನ್ನು ಕೊಡುತ್ತೇವೆ’ ಎಂದು ಹೇಳುತ್ತಾ ಮಾತು ಮುಗಿಸಿದರು.

ತಾನು ವಿಲನ್‌ ಆಗಿ ಬಂದು, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ನಾಯಕನಾಗಿ, ಜನನಾಯಕನಾಗಿ ಬೆಳೆಯುವುದಕ್ಕೆ ಈ ಚಿತ್ರ ಮೊದಲ ಇಟ್ಟಿಗೆ ಎಂದರು ಅಭಿಪ್ರಾಯ. “ಇವತ್ತು ಇಲ್ಲಿದ್ದೀನಿ ಅಂದರೆ ಪುಟ್ಟಣ್ಣ ಕಣಗಾಲ್‌ ಮತ್ತು ಎನ್‌. ವೀರಾಸ್ವಾಮಿಗಳ ಆಶೀರ್ವಾದವೇ ಕಾರಣ. ಈ ಚಿತ್ರಕ್ಕೆ ಬಾಲಾಜಿ ಹೊಸ ರೂಪ ಕೊಟ್ಟಿದ್ದಾರೆ. ಎಲ್ಲರೂ ಸುಂದರವಾಗಿ ಕಾಣಾ¤ರೆ. ಚಿತ್ರ ನೂರಾರು ದಿನ ಓಡಲಿ’ ಎಂದು ಹಾರೈಸಿದರು.

ಶಿವರಾಮಣ್ಣ ಮತ್ತು ಅಂಕಲ್‌ ಲೋಕನಾಥ್‌ ಅವರು ಚಿತ್ರದಲ್ಲಿನ ಕೆಲವು ನೆನಪುಗಳನ್ನು ಮೆಲಕು ಹಾಕಿದರೆ, ಲೀಲಾವತಿ, ಜಯಂತಿ ಮತ್ತು ಭಾರತಿ ವಿಷ್ಣುವರ್ಧನ್‌ ಅವರು ಇಂತಹ ಚಿತ್ರ ನೂರು ದಿನ ಓಡಬೇಕು ಎಂದು ಹಾರೈಸಿದರು. 

 ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ

ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ

accident

ಶೂಟಿಂಗ್ ಸೆಟ್‌ಗೆ ಬೈಕ್ ನುಗ್ಗಿಸಿದ ಪಾನಮತ್ತ: ನಟ,ನಟಿಗೆ ಗಾಯ

ಬೊಮ್ಮಾಯಿ ಅವರೂ ರಾಜಕೀಯವಾಗಿ ವೀಕ್ ಆಗಿದ್ದಾರೆ:  ಡಿ.ಕೆ.ಶಿವಕುಮಾರ್

ಬೊಮ್ಮಾಯಿ ರಾಜಕೀಯವಾಗಿ ವೀಕ್ ಆಗಿದ್ದಾರೆ:  ಡಿ.ಕೆ.ಶಿವಕುಮಾರ್

UP: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ಹಿಂದೂ ಧರ್ಮಕ್ಕೆ ಮತಾಂತರ;ಅಂತಿಮ ಇಚ್ಛೆ ಏನು?

UP: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ಹಿಂದೂ ಧರ್ಮಕ್ಕೆ ಮತಾಂತರ;ಅಂತಿಮ ಇಚ್ಛೆ ಏನು?

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯಶ್ರೀ

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯ ಶ್ರೀ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

ಮತ್ತೆ ಹುಟ್ಟುಹಾಕಿದೆ…ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಫಿಯಾ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

‘ಮಾಫಿಯಾ’ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

ashika ranganath

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

ombatthane dikku kannada movie

ಡಿ. 31ಕ್ಕೆ ಒಂಬತ್ತನೇ ದಿಕ್ಕು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

MUST WATCH

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

ಹೊಸ ಸೇರ್ಪಡೆ

ಅರಣ್ಯ ಇಲಾಖೆ ಬೋನಿಗೆ ಬಿದ್ದ  ಚಿರತೆ ಮರಿಗಳು

ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ ಮರಿಗಳು

ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ

ಸರಣಿ ಜಯ: ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ

ಬೆಳೆ ಪರಿಹಾರ ಸಿಕ್ಕಿಲ್ಲ, ವಿಮೆಯಲ್ಲೂ ದೋಖಾ: ಎಚ್ಡಿಕೆ

ಬೆಳೆ ಪರಿಹಾರ ಸಿಕ್ಕಿಲ್ಲ, ವಿಮೆಯಲ್ಲೂ ದೋಖಾ: ಎಚ್ಡಿಕೆ

accident

ಶೂಟಿಂಗ್ ಸೆಟ್‌ಗೆ ಬೈಕ್ ನುಗ್ಗಿಸಿದ ಪಾನಮತ್ತ: ನಟ,ನಟಿಗೆ ಗಾಯ

18party

ಪಕ್ಷದ ಅಭ್ಯರ್ಥಿಗಳಿಗೆ ಇರಲಿ ಒಮ್ಮತದ ಬಲ: ಬಸನಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.