ಟಿವಿ ರೈಟ್ಸ್‌, ಡಬ್ಬಿಂಗ್‌ ರೈಟ್ಸ್‌ ಕಾಲ ಹೋಯ್ತು : ಓಟಿಟಿಗಾಗಿಯೇ ಸಿನ್ಮಾ ಮಾಡೋ ಕಾಲ ಬಂತು

ಓಟಿಟಿಗೆ 100 ಸಿನ್ಮಾಗಳ ತಯಾರು!

Team Udayavani, Jul 24, 2020, 12:06 PM IST

ಟಿವಿ ರೈಟ್ಸ್‌, ಡಬ್ಬಿಂಗ್‌ ರೈಟ್ಸ್‌ ಕಾಲ ಹೋಯ್ತು : ಓಟಿಟಿಗಾಗಿಯೇ ಸಿನ್ಮಾ ಮಾಡೋ ಕಾಲ ಬಂತು

ಒಂದು ಕಾಲವಿತ್ತು. ಒಂದಷ್ಟು ಮಂದಿ ತಮ್ಮ ಸಿನಿಮಾಗಳನ್ನು ಟಿವಿ ರೈಟ್ಸ್‌ ಹಾಗೂ ಡಬ್ಬಿಂಗ್‌ ರೈಟ್ಸ್‌ಗಳಿಗಾಗಿಯೇ ತಯಾರಿಸುತ್ತಿದ್ದರು. ಅಂತಹವರ ಸಂಖ್ಯೆ ಕೂಡ ಜಾಸ್ತಿಯಾಗಿತ್ತು. ಕಡಿಮೆ ಬಜೆಟ್‌ನಲ್ಲಿ ಅತೀ ಕಡಿಮೆ ದಿನಗಳಲ್ಲೇ ಸಿನಿಮಾಗಳನ್ನು ತಯಾರಿಸಿ, ಬಿಡುಗಡೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಕೇವಲ ಟಿವಿ ರೈಟ್ಸ್‌ ಮತ್ತು ಡಬ್ಬಿಂಗ್‌ ರೈಟ್ಸ್‌ ಗೆಂದೇ ಸಿನಿಮಾಗಳು ಜೋರಾಗಿಯೇ ತಯಾರಾಗುತ್ತಿದ್ದವು.

ಕಾಲ ಕ್ರಮೇಣ ಗುಣಮಟ್ಟ ಹಾಗೂ ಕಥೆಯಲ್ಲಿ ಗಟ್ಟಿತನವಿರುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಂತಹ ಕಾಲ ಬಂತು. ಅಲ್ಲಿಂದ ಕೇವಲ ಟಿವಿ ರೈಟ್ಸ್‌ ಮತ್ತು ಡಬ್ಬಿಂಗ್‌ ರೈಟ್ಸ್‌
ಗೆಂದೇ ತಯಾರಾಗುತ್ತಿದ್ದ ಸಿನಿಮಾಗಳ ಸಂಖ್ಯೆ ಕೂಡ ಇಳಿಮುಖವಾಯ್ತು. ಈಗ ಇವೆರೆಡನ್ನೂ ಹೊರತುಪಡಿಸಿರುವ ಹೊಸ ಟ್ರೆಂಡ್‌ ಶುರುವಾಗಿದೆ!

ಹೌದು, ಕೋವಿಡ್ ಸಮಸ್ಯೆಯಿಂದಾಗಿ ಇಡೀ ಜಗತ್ತೇ ಸ್ಟ್ರಕ್‌ ಆಗಿರೋದು ನಿಜ. ಇದರಿಂದ ಸಿನಿಮಾ ರಂಗವೂ ಹೊರತಲ್ಲ. ಹೀಗಾಗಿ ಚಿತ್ರಮಂದಿರಗಳು ಕಳೆದ ಐದು ತಿಂಗಳಿನಿಂದಲೂ ತಮ್ಮ ಬಾಗಿಲು ಮುಚ್ಚಿವೆ. ಚಿತ್ರೀಕರಣ ಕೂಡ ಬಂದ್‌ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿನಿಮಾ ಮಂದಿ ಕಂಗಾಲಾಗಿದ್ದು ನಿಜ. ಕೊರೊನಾ ಬರುವ ಮುನ್ನ, ಬಿಡುಗಡೆಗೆ
ಸಜ್ಜಾಗಿದ್ದ, ಚಿತ್ರೀಕರಣ ಪೂರೈಸಿ, ಇನ್ನೇನು ಚಿತ್ರಮಂದಿರಕ್ಕೆ ಅಪ್ಪಳಿಸಲು ರೆಡಿಯಾಗಿದ್ದ ಚಿತ್ರಗಳ ಪಾಡಂತೂ ಹೇಳತೀರದ್ದಾಗಿತ್ತು. ಎಲ್ಲಿಂದಲೋ ಹಣ ತಂದು ಸಿನಿಮಾಗೆ ಹಾಕಿದ್ದ ನಿರ್ಮಾಪಕರ ಪರಿಸ್ಥಿತಿಯಂತೂ ಹೀನಾಯವಾಗಿದ್ದು ಸುಳ್ಳಲ್ಲ. ಈಗಲೂ ಅದರಿಂದ ಆಚೆ ಬರಲಾಗದೆ ಒದ್ದಾಡುವಂತಹ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ನಿರ್ಮಾಪಕರು ಆಯ್ಕೆ ಮಾಡಿಕೊಂಡ ದಾರಿ ಓಟಿಟಿ ಎಂಬ ವೇದಿಕೆ.

ನಿಜ, ಓಟಿಟಿ ಫ್ಲಾಟ್‌ಫಾರಂನಲ್ಲಿ ತಮ್ಮ ಸಿನಿಮಾಗಳನ್ನು ಕೊಡುವ ಧೈರ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರ ತೆರೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ ಎಂಬುದನ್ನು
ಅರಿತಿರುವ ನಿರ್ಮಾಪಕರು, ಅರ್ಧಕ್ಕೆ ನಿಂತಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ ಡಿಜಿಟಲ್‌ ವೇದಿಕೆಯಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ನಿರ್ದೇಶಕ, ನಿರ್ಮಾ  ಪಕರು, ಓಟಿಟಿಗಾಗಿಯೇ ಕಥೆ ರೆಡಿಮಾಡಿಕೊಂಡು, ಸಿನಿಮಾ ನಿರ್ಮಿಸಿ, ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ತಯಾರಿ
ನಡೆಸಿದ್ದಾರೆ. ಕೆಲವರು ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದಾರೆ. ಸಿನಿಮಾ ಮಂದಿ ಡಿಜಿಟಲ್‌ ವೇದಿಕೆಗೆ ಮೊರೆ ಹೋಗೋಕೆ ಕಾರಣ, ಕೊರೊನಾ ಸಮಸ್ಯೆಯಿಂದ ಚಿತ್ರಮಂದಿರ ಗಳು ಸದ್ಯಕ್ಕೆ ಓಪನ್‌ ಆಗುವುದಿಲ್ಲ ಎಂಬುದು ಒಂದಾದರೆ, ಸಾಲ ಮಾಡಿ ಸಿನಿಮಾ ಮಾಡಿದವರ ಸಮಸ್ಯೆಯೂ ಹೆಚ್ಚಾಗಿದ್ದರಿಂದ, ಅರ್ಧಕ್ಕೆ ನಿಂತಿರುವ, ಮುಗಿಯಲು ಬಂದಿರುವ ಚಿತ್ರಗಳನ್ನೂ ಕೂಡ ಡಿಜಿಟಲ್‌ಗೆ ಕೊಡಲು ಮುಂದಾಗುತ್ತಿದ್ದಾರೆ.

ಇನ್ನು, ಹೊಸಬರಷ್ಟೇ ಅಲ್ಲ, ಬಹುತೇಕ ಹಳಬರು ಕೂಡ ಓಟಿಟಿ ಫ್ಲಾಟ್‌ಫಾರಂಗಾಗಿಯೇ ಕಂಟೆಂಟ್‌ ರೆಡಿ ಮಾಡಿಸಿ, ಕಡಿಮೆ ಬಜೆಟ್‌ನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಸಿನಿಮಾ ತಯಾರಿಸುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಓಟಿಟಿಯಲ್ಲೂ ಈಗ ಗುಣಮಟ್ಟ ಮತ್ತು ಕಂಟೆಂಟ್‌ ಸಿನಿಮಾಗಳ ಅಗತ್ಯವಿದೆ. ಅಂತಹ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದಲೇ ನಿರ್ಮಾಪಕರು, ನಿರ್ದೇಶಕರು ಈಗ ತಮ್ಮ ಚಿತ್ತವನ್ನೆಲ್ಲಾ ಓಟಿಟಿ ಫ್ಲಾಟ್‌ಫಾರಂನತ್ತ ಹರಿಸಿದ್ದು, ಆ ನಿಟ್ಟಿನಲ್ಲಿ ಈಗಾಗಲೇ ಕಂಟೆಂಟ್‌ ರೆಡಿಮಾಡಿಕೊಂಡು, ಕಡಿಮೆ ಬಜೆಟನಲ್ಲಿ ಗುಣಮಟ್ಟ ಕಾಪಾಡಿಕೊಂಡು ಸಿನಿಮಾ ತಯಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಅಂದಹಾಗೆ, ಓಟಿಟಿ ಫ್ಲಾಟ್‌ಫಾರಂ ನಂಬಿಕೊಂಡೇ ಇಂದು ಅದೆಷ್ಟೋ ಹೊಸಬರು ಸಸ್ಪೆನ್ಸ್‌,ಥ್ರಿಲ್ಲರ್‌, ಹಾರರ್‌ ಮತ್ತು ಆ್ಯಕ್ಷನ್‌ ಕಂಟೆಂಟ್‌ಗೆ ಹೆಚ್ಚು ಒತ್ತು ಕೊಡುವ ಮೂಲಕ ಸಿನಿಮಾ
ಮಾಡುವಲ್ಲಿ ನಿರತರಾಗಿದ್ದಾರೆ. ಅತೀ ಕಡಿಮೆ ಬಜೆಟ್‌ನಲ್ಲೂ ಒಳ್ಳೆಯ ಸಿನಿಮಾ ಮಾಡಿ ಸೈ ಎನಿಸಿಕೊಂಡವರ ಸಂಖ್ಯೆ ಬಹಳವೇ ಇದೆ. ಹಾಗಾಗಿ, ಅದೇ ದಾರಿಯಲ್ಲಿ ನಾವೂ ಹೋಗಬೇಕು ಎಂಬ ಉದ್ದೇಶದಿಂದಲೇ ಈಗ ಓಟಿಟಿಗಾಗಿಯೇ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓಟಿಟಿ ನಂಬಿಕೊಂಡೇ ಸಿನಿಮಾ ಮಾಡುವವರಿಗೆ ಅಂಥದ್ದೊಂದು ನಂಬಿಕೆ ಬಂದಿದ್ದಾರೂ ಯಾಕೆ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲವಾದರೂ, ಸದ್ಯದ ಪರಿಸ್ಥಿತಿಯಲ್ಲಂತೂ ಚಿತ್ರಮಂದಿರಗಳು ತೆರೆಯಲು ಸಾಧ್ಯವಿಲ್ಲ ಎಂಬ ಅರಿವು ಸಿನಿಮಾ ಮಂದಿಗಿದೆ.

ಚಿತ್ರಮಂದಿರಗಳು ಆರಂಭಗೊಂಡರೂ, ಜನರು ಸಿನಿಮಾ ನೋಡಲು ಬರುತ್ತಾರೆ ಎಂಬ ಯಾವ ವಿಶ್ವಾಸವೂ ಇಲ್ಲ. ಬಂದರೂ ಸ್ಟಾರ್ ಸಿನಿಮಾಗಳಿಗೆ ಫ್ಯಾನ್ಸ್‌ ಮಾತ್ರ ಬರಬಹುದು ಎಂಬ ಲೆಕ್ಕಾಚಾರವೂ ಇದೆ. ಫ್ಯಾಮಿಲಿ ಆಡಿಯನ್ಸ್‌ ಕರೆತರುವುದು ಸದ್ಯಕ್ಕೆ ಸುಲಭವಿಲ್ಲ. ಹಾಗಾಗಿಯೇ, ಸಿನಿಮಾ ನಂಬಿಕೊಂಡೇ ಬದುಕು ಸವೆಸುತ್ತಿರುವ ಜನರೀಗ ಓಟಿಟಿಗಾಗಿಯೇ ಸಿನಿಮಾ ತಯಾರು ಮಾಡಲು ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ. ಹಾಗೊಮ್ಮೆ ಓಟಿಟಿಗಾಗಿಯೇ ಸಿನಿಮಾ ಮಾಡುವವರ ಸಂಖ್ಯೆ ಲೆಕ್ಕ ಹಾಕಿದರೆ, ನೂರರ ಗಡಿಯತ್ತ ಬಂದು ನಿಲ್ಲುತ್ತದೆ. ಸದ್ದಿಲ್ಲದೆಯೇ, ಈ ರೀತಿಯ ಪ್ರಯತ್ನ ವೊಂದು ಸಾಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದೇ ಸದ್ಯಕ್ಕಿರುವ ಯಕ್ಷ ಪ್ರಶ್ನೆ.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.