‘ಶೋ ಪೀಸ್‌ ಆಗಲಾರೆ’: ರಾಜ್‌ ಮೊಮ್ಮಗಳು ಧನ್ಯಾ ಉತ್ತರಿಸಿದ 5 ಪ್ರಶ್ನೆಗಳು


Team Udayavani, Oct 8, 2021, 11:35 AM IST

dhanya ramkumar

ವರನಟ ಡಾ. ರಾಜ ಕುಮಾರ್‌ ಮೂವರು ಪುತ್ರರೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬಿಗ್‌ ಸ್ಟಾರ್ ಆಗಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನಮಾನ, ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ರಾಜ್‌ ಕುಟುಂಬದ ಅನೇಕರು ಈಗಾಗಲೇ ನಾಯಕ ನಟರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕರಾಗಿ, ತಂತ್ರಜ್ಞರಾಗಿಯೂ ಹಲವರು ತೆರೆಮರೆಯಲ್ಲಿ ಸಕ್ರಿಯರಾಗಿದ್ದಾರೆ. ಇವೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಡಾ. ರಾಜ್‌ ಕುಟುಂಬದಿಂದ ಚಿತ್ರರಂಗಕ್ಕೆ ನಾಯಕ ನಟಿಯೊಬ್ಬರ ಪರಿಚಯವಾಗುತ್ತಿದೆ. ಅವರೇ ಧನ್ಯ ರಾಮ್‌ಕುಮಾರ್‌. ಸದ್ಯ ಧನ್ಯಾ ರಾಮ್‌ಕುಮಾರ್‌ ಅವರ ಚೊಚ್ಚಲ ಚಿತ್ರ “ನಿನ್ನ ಸನಿಹಕೆ’ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧನ್ಯಾ ಮಾತನಾಡಿದ್ದಾರೆ…

1 ಇಂದು ನಿಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭ ಹೇಗನಿಸುತ್ತಿದೆ?

ತುಂಬಾ ಎಕ್ಸೈಟ್‌ ಆಗಿದ್ದೀನಿ. ನನ್ನ ಮೊದಲ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿದೆ. ಇದುವರೆಗೂ ನನ್ನನ್ನು ಯಾರೂ ತೆರೆಯ ಮೇಲೆ ನೋಡಿಲ್ಲ. ಈಗ ಮೊದಲ ಬಾರಿಗೆ ತೆರೆಮೇಲೆ ಬರುತ್ತಿದ್ದೇನೆ. ನೋಡಿ ಏನನ್ನುತ್ತಾರೆ ಎಂಬ ಕುತೂಹಲ ಇದೆ.

2 ಸಿನಿಮಾ ರೆಡಿಯಾಗಿದ್ದರೂ ಬಿಡುಗಡೆ ತಡವಾಯಿತು. ಆಗಿನ ನಿಮ್ಮ ಭಾವನೆ?

ಆ ಕ್ಷಣ ತುಂಬಾ ಕಷ್ಟವಾಗಿತ್ತು. ಅದರಲ್ಲೂ ಮೊದಲ ಬಾರಿಗೆ ನಟಿಸಿದ ನನ್ನಂಥವರಿಗೆ ಸಹಜವಾಗಿಯೇ ಎಕ್ಸೆ„ಟ್‌ಮೆಂಟ್‌ ಜಾಸ್ತಿ ಇರುತ್ತದೆ. ಆದರೆ, ಬಿಡುಗಡೆಯಾಗುತ್ತಿಲ್ಲ. ನನ್ನ ಮುಂದೆ ಒಂದು ಕೇಕ್‌ ಇಟ್ಟು, ಅದನ್ನು ತಿನ್ನುವ ಹಾಗಿಲ್ಲ ಎಂದು ಹೇಳಿದಂತಿತ್ತು. ಎಲ್ಲವೂ ರೆಡಿ ಇತ್ತು. ನಾನು ಸಿನಿಮಾ ನೋಡಿದ್ದೀನಿ. ಯಾರಿಗೂ ತೋರಿಸುವ ಹಾಗಿಲ್ಲ. ಒಂಥರಾ ಕಟ್ಟಿಹಾಕಿದ ರೀತಿ ಇತ್ತು. ಯಾವಾಗ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಈಗ ಆ ದಿನ ಬಂದಿದೆ.

3 ನಿಮ್ಮ ಮನೆಯಲ್ಲಿ ಯಾರ್ಯಾರು ಈ ಸಿನಿಮಾ ನೋಡಿದ್ದಾರೆ?

ನಮ್ಮಲ್ಲಿ ನಾನು ಮತ್ತು ನಮ್ಮಮ್ಮ ಮಾತ್ರ ಈ ಸಿನಿಮಾ ನೋಡಿರೋದು. ಅಮ್ಮ ನೋಡಿ ಖುಷಿಯಾದರು. ನಾನು ಏನೂ ತಪ್ಪು ಮಾಡಿಲ. ಬಹಳ ಚೆನ್ನಾಗಿ ನಟಿಸಿದ್ದೀನಿ, ಹೊಸಬಳ ತರಹ ಅನಿಸುತ್ತಿಲ್ಲ ಎಂದು ಅಮ್ಮ ಹೇಳಿದರು. ಆದರೆ, ನನಗೆ ಕೆಲವು ತಪ್ಪುಗಳು ಕಾಣಿಸಿವೆ. ನನ್ನ ಹೇರ್‌ಸ್ಟೈಲ್‌ ಬದಲಿಸಬಹುದಿತ್ತು ಎನಿಸಿತು.

ಇದನ್ನೂ ಓದಿ:ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ: ಸಕ್ಸಸ್‌ ರೇಟ್‌ ಹೆಚ್ಚಾಗೋ ನಿರೀಕ್ಷೆ

4 ನೀವು ರಾಜ್‌ ಮೊಮ್ಮಗಳು ಎನ್ನುವುದು ನಿಮಗೆ ಚಿತ್ರರಂಗದಲ್ಲಿ ಎಷ್ಟು ಪ್ಲಸ್‌?

ಪ್ಲಸ್‌, ಮೈನಸ್‌ ಅನ್ನೋದಕ್ಕಿಂತ, ಇದು ನನಗೆ ದೊಡ್ಡ ಜವಾಬ್ದಾರಿ. ಇಲ್ಲಿ ಹುಟ್ಟಿರುವುದೇ ನನಗೆ ದೊಡ್ಡ ಆಶೀರ್ವಾದ. ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ನಾನು ಸಿದ್ಧ. ಅವರ ಹೆಸರಿಗೆ ಯಾವ ರೀತಿಯಲ್ಲೂ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳೋದು ನನ್ನ ಕೆಲಸ.

5 ಹೊಸ ಕಥೆಗಳು ಬರುತ್ತಿವೆಯಾ?

ಸಾಕಷ್ಟು ಕಥೆಗಳು ಬರುತ್ತಿವೆ. ಇದುವರೆಗೂ ಕೇಳಿದ ಕಥೆಗಳು ಅಷ್ಟಾಗಿ ಇಷ್ಟವಾಗಲಿಲ್ಲ. ಅಭಿನಯಕ್ಕೆ ಇನ್ನಷ್ಟು ಸ್ಕೋಪ್‌ ಇರುವಂತಹ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನಾಸೆ.ನನಗೆ ಸುಮ್ಮನೆ ಶೋಪೀಸ್‌ ಆಗಿರುವುದಕ್ಕೆ ಇಷ್ಟವಿಲ್ಲ.  ನನಗೆ ನನ್ನ ಪ್ರತಿಭೆಯನ್ನು ಹೊರತರಬೇಕು ಎನ್ನುವಂತಹ ಆಸೆ ಇದೆ. ಆ ತರಹದ ಸಿನಿಮಾಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ.

 ರವಿ ರೈ

ಟಾಪ್ ನ್ಯೂಸ್

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20film

ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಭಟ್ಟರ ಪ್ರಶಂಸೆ

sruthi hariharan

ಮೀಟೂ ಪ್ರಕರಣ: ನಟಿ ಶ್ರುತಿ ಹರಿಹರನ್ ಗೆ ನೋಟಿಸ್ ಜಾರಿ

1-sfdsf-a

‘ರೈಡ್ ಫಾರ್ ಅಪ್ಪು’ ಪುನೀತ್ ನೆನಪಿಗಾಗಿ ಬೈಕ್ ಮೆರವಣಿಗೆ; ಹೆಲ್ಮೆಟ್ ಜಾಗೃತಿ

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

shivaji surathkal 2

ಡಿಸೆಂಬರ್‌ನಿಂದ ಶಿವಾಜಿ ಸುರತ್ಕಲ್‌ 2 ಶುರು

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಕಾಶ್ಮೀರದ 4 ಲಕ್ಷ ನಿರಾಶ್ರಿತ ಸಾರಸ್ವತ ಹಿಂದೂಗಳ ಸಂಕಷ್ಟ ನಿವಾರಣೆಯಾಗಲಿ

ಕಾಶ್ಮೀರದ 4 ಲಕ್ಷ ನಿರಾಶ್ರಿತ ಸಾರಸ್ವತ ಹಿಂದೂಗಳ ಸಂಕಷ್ಟ ನಿವಾರಣೆಯಾಗಲಿ

ಕಾಂಗ್ರೆಸ್‌ ಮಹಾನಾಯಕನಿಂದ ಸಂದರ್ಭಕ್ಕೆ ತಕ್ಕಂತೆ ಆಟ

ಕಾಂಗ್ರೆಸ್‌ ಮಹಾನಾಯಕನಿಂದ ಸಂದರ್ಭಕ್ಕೆ ತಕ್ಕಂತೆ ಆಟ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.