ಮಾಡೆಲಿಂಗ್ನಿಂದ ಸಿನಿಮಾಗೆ
Team Udayavani, Oct 20, 2017, 11:15 AM IST
“ಮಾಡೆಲಿಂಗ್ ಮಾಡುತ್ತಿದ್ದೆ. ಸಿನಿಮಾದಿಂದ ಆಫರ್ ಬಂತು ಬಂದೆ …’ ಹೀಗೆನ್ನುವ ನಾಯಕಿ ನಟಿಯರಿಗೆ ಕೊರತೆಯಿಲ್ಲ. ಮಾಡೆಲಿಂಗ್ನಿಂದ ಬಂದ ನಟಿಯರು ಕ್ರಮೇಣ ಸಿನಿಮಾಕ್ಕೆ ಬಂದೇ ಬರುತ್ತಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಸುಶ್ಮಿತಾ ಗೌಡ. ಯಾರು ಈ ಸುಶ್ಮಿತಾ ಎಂದರೆ “ಚಾಣಾಕ್ಷ’ ಸಿನಿಮಾ ಬಗ್ಗೆ ಹೇಳಬೇಕು.
ಈಗಷ್ಟೇ ಚಿತ್ರೀಕರಣ ಮುಗಿಸಿರುವ “ಚಾಣಾಕ್ಷ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಸುಶ್ಮಿತಾ. ಈಗಷ್ಟೇ ಡಿಗ್ರಿ ಮುಗಿಸಿರುವ ಸುಶ್ಮಿತಾ ಸುಮಾರು ಮೂರು ವರ್ಷಗಳಿಂದ ತಮ್ಮನ್ನು ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಡೆಲಿಂಗ್ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅವರಿಗೆ ಅನೇಕ ಸಿನಿಮಾಗಳಿಂದ ಆಫರ್ಗಳು ಬಂದಿವೆ.
ಹೀಗೆ ಬಂದ ಅವಕಾಶದಲ್ಲಿ ಸುಶ್ಮಿತಾಗೆ ಇಷ್ಟವಾಗಿದ್ದು “ಚಾಣಾಕ್ಷ’. ಈಗಾಗಲೇ ಚಿತ್ರೀಕರಣ ಕೂಡಾ ಮುಗಿಸಿದ್ದಾರೆ. “ನನಗೆ ಅನೇಕ ಆಫರ್ಗಳು ಬಂದುವು. ಅದರಲ್ಲಿ ಚಾಣಾಕ್ಷ ಚಿತ್ರ ಇಷ್ಟವಾಯಿತು. ಮುಂದೆಯೂ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆ ಇದೆ’ ಎನ್ನುವುದು ಸುಶ್ಮಿತಾ ಮಾತು. ಅಂದಹಾಗೆ, ಸುಶ್ಮಿತಾ ಈಗ “ಚಾಣಾಕ್ಷ’ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.
ಒಂದು ಚಿತ್ರ ಬಿಡುಗಡೆಯಾದರೆ, ಆ ಚಿತ್ರದ ಮೂಲಕ ಗುರುತಿಸಿಕೊಳ್ಳುವ ಜೊತೆಗೆ ಚಿತ್ರರಂಗಕ್ಕೆ ತಮ್ಮ ಪರಿಚಯ ಕೂಡಾ ಆಗುತ್ತದೆ ಎಂಬ ಕಾರಣದಿಂದ ಮೊದಲ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಸುಶ್ಮಿತಾ ಅವರ ಸಿನಿಕೆರಿಯರ್ಗೆ ಅವರ ಕುಟುಂಬದ ಸಂಪೂರ್ಣ ಬೆಂಬಲವಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ