
ಹೊಸಬರ ಗದಾಯುದ್ಧ ಬಿಡುಗಡೆ
Team Udayavani, Jun 9, 2023, 10:35 AM IST

ಸಂಪೂರ್ಣ ಹೊಸಬರ ತಂಡ ಸೇರಿ ಮಾಡಿರುವ “ಗದಾಯುದ್ಧ’ ಸಿನಿಮಾ ಇಂದು ತೆರೆಕಾಣುತ್ತಿದೆ. “ನಿತಿನ್ ಶಿರಗುರ್ಕರ್ ಫಿಲಂಸ್’ ಬ್ಯಾನರ್‌ನಲ್ಲಿ ನಿತಿನ್ ಶಿರಗುರ್ಕರ್ ನಿರ್ಮಿಸಿರುವ “ಗದಾಯುದ್ದ’ ಚಿತ್ರವನ್ನು ಶ್ರೀವತ್ಸ ರಾವ್ ನಿರ್ದೇಶಿಸಿದ್ದಾರೆ.
ಇನ್ನು “ಗದಾಯುದ್ಧ’ ಸಿನಿಮಾದ ಮೂಲಕ ಕರ್ನಾಟಕದ ಯುವ ಕ್ರಿಕೆಟಿಗ ಸುಮಿತ್ ನಾಯಕನಾಗಿ ಭೀಮನ ಪಾತ್ರದಲ್ಲಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಾಯಕ ಸುಮಿತ್ ಮಾತನಾಡಿ, ನಾನು ಅಭಿನಯಿಸಿರುವ ಮೊದಲ ಚಿತ್ರ ರಿಲೀಸಾಗುತ್ತಿರುವ ಖುಷಿಯಿದೆ. ಚಿತ್ರದಲ್ಲಿ ನಾನು ಭೀಮ ಎನ್ನುವ ಮೆಡಿಕಲ್ ಸ್ಟೂಡೆಂಟ್ ಪಾತ್ರ ಮಾಡಿದ್ದೇನೆ. ಇಡೀ ತಂಡ ತುಂಬಾ ಎಫರ್ಟ್ ಹಾಕಿದ್ದಾರೆ. ಆಕ್ಷನ್, ಕಾಮಿಡಿ, ಥ್ರಿಲ್ಲರ್, ಸೈಂಟಿಫಿಕ್ ವಿವರಣೆ ಇದೆ. ನಮ್ಮ ಸುತ್ತಲೂ ಏನೆಲ್ಲ ನಡೆಯುತ್ತಿದೆ ಅಂತ ಹೇಳುವ ಚಿತ್ರ ಎಂದು ವಿವರ ನೀಡಿದರು.
ನಾಯಕಿ ಧನ್ಯ ಪಾಟೀಲ್ ಮಾತನಾಡಿ, “ಮಾಟಗಾರ ಡ್ಯಾನಿಯಲ್ ಕುಟ್ಟಪ್ಪ ಅವರ ಮಗಳು ಪ್ರತ್ಯಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೆಲ ಹುಡುಗಿಯರ ಮೈಂಡ್ ಸೆಟ್ ಬೇರೆ ಥರ ಇರುತ್ತದೆ. ನಾನು ಬ್ಲಾಕ್ ಮ್ಯಾಜಿಕ್ ನಂಬಲ್ಲ, ಆದರೆ ಆ ಬಗ್ಗೆ ತಿಳಿದುಕೊಳ್ಳಬೇಕಾದಂಥ ಸಾಕಷ್ಟು ವಿಷಯಗಳು ಚಿತ್ರದಲ್ಲಿ ವೆ’ಎಂದರು.
ಚಿತ್ರದಲ್ಲಿ ನಾಯಕ ಸುಮಿತ್ ಅವರೊಂದಿಗೆ ಸಾಧು ಕೋಕಿಲ, ಶರತ್ ಲೋಹಿತಾಶ್ವ, ಡ್ಯಾನಿ ಕುಟ್ಟಪ್ಪ, ಅಯ್ಯಪ್ಪ ಶರ್ಮ, ಮಹೇಶ್ ಕೃಷ್ಣ, ಅರವಿಂದ ರಾವ್, ರಮೇಶ್ ಭಟ್, ಸ್ಪರ್ಶ ರೇಖಾ, ಐಶ್ವರ್ಯ ಸಿಂಧೋಗಿ ನಟಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vinod Prabhakar; ಅ.1ರಂದು ‘ಫೈಟರ್’ ಟ್ರೇಲರ್ ಬಿಡುಗಡೆ

Ronnie; ಸದ್ದು ಮಾಡುತ್ತಿದೆ ಧರ್ಮ ಕೀರ್ತಿರಾಜ್ ರ ‘ರೋನಿ’ ಟ್ರೇಲರ್

Sandalwood; ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್ ಭಂಡಾರಿ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ

Baana dariyalli ನೂತನ ಭಾವ ಲಹರಿ; ಗಣೇಶ್-ರುಕ್ಮಿಣಿ- ರೀಷ್ಮಾ ನಟನೆಯ ಸಿನಿಮಾ ರಿಲೀಸ್
MUST WATCH
ಹೊಸ ಸೇರ್ಪಡೆ

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ

Daily Horoscope: ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ, ಮಂಗಲ ಕಾರ್ಯದ ಸಿದ್ಧತೆ

LABತಪ್ಪಲಿದೆ ಜಿಲ್ಲಾಸ್ಪತ್ರೆ ಅಲೆದಾಟ: ರೋಗ ಪರೀಕ್ಷೆಗೆ ತಾಲೂಕು ಆಸ್ಪತ್ರೆಗಳಲ್ಲೂ ಪ್ರಯೋಗಾಲಯ