Udayavni Special

ಅದೇ ರೋಗ; ಹೊಸ ರಾಗ


Team Udayavani, Jul 27, 2018, 6:00 AM IST

23.jpg

“ಈಗ ಕ್ಯಾನ್ಸರ್‌ ಬಗ್ಗೆ ಹಲವು ಬೇರೆ ಬೇರೆ ಚಿತ್ರಗಳು ಬಂದಿಲ್ಲವೇ. ಇಲ್ಲೂ ಅದೇ ತರಹ. ಕಾಯಿಲೆ ಅದೇ. ಚಿತ್ರ ಬೇರೆ …’
ಈ ವಾರ ಬಿಡುಗಡೆಯಾಗುತ್ತಿರುವ “ಸಂಕಷ್ಟಕರ ಗಣಪತಿ’ ಚಿತ್ರವು ತಮಿಳಿನ “ಪೀಚನ್‌ಕೈ’ ಎಂಬ ಚಿತ್ರದ ರೀಮೇಕಾ ಎಂಬ ಪ್ರಶ್ನೆ ಬರುತ್ತಿದ್ದಂತೆಯೇ ಉತ್ತರಿಸುತ್ತಾ ಹೋದರು ನಿರ್ದೇಶಕ ಅರ್ಜುನ್‌. ಅವರು ಹೇಳುವಂತೆ ಇದು ಯಾವುದೇ ಚಿತ್ರದ ರೀಮೇಕ್‌ ಅಲ್ಲವಂತೆ. “ಯೂಟ್ಯೂಬ್‌ನಲ್ಲಿ ಸುಮಾರು ಜನ ಇದು “ಪೀಚನ್‌ಕೈ’ನ ರೀಮೇಕ್‌ ಎಂದು ಹೇಳಿದ್ದಾರೆ. ಆದರೆ, ಕೊನೆಗೆ ತಮಿಳು ಚಿತ್ರದ ನಿರ್ದೇಶಕರೇ ಬಂದು, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದಾರೆ. ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಕುರಿತು ಹಲವು ಚಿತ್ರಗಳು ಬಂದಿದೆ. ತಮಿಳು, ಇಂಗ್ಲೀಷ್‌ ಅಲ್ಲದೆ ಅರೇಬಿಕ್‌ನಲ್ಲೂ ಒಂದು ಕಿರು ಚಿತ್ರ ಬಂದಿದೆ. ಖಾಯಿಲೆ ಅದೇ ಇರಬಹುದು. ಕಥೆ ಬೇರೆ’ ಎಂದು ಹೇಳಿಕೊಂಡರು ಅರ್ಜುನ್‌.

ಲಿಖೀತ್‌ ಅಭಿನಯದ “ಸಂಕಷ್ಟಕರ ಗಣಪತಿ’ ಚಿತ್ರವನ್ನು ಕೆ.ಆರ್‌.ಜಿ ಸ್ಟುಡಿಯೋಸ್‌ನ ಕಾರ್ತಿಕ್‌ ಗೌಡ ಕರ್ನಾಟಕದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡು ತ್ತಿದ್ದಾರಂತೆ. ಅದಲ್ಲದೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಅಮೇರಿಕಾ ಮುಂತಾದ ಕಡೆ ಚಿತ್ರ ಬಿಡುಗಡೆಯಾಗುತ್ತಿದೆಯಂತೆ. ಹೀಗೆ ಚಿತ್ರ ಅಲ್ಲೆಲ್ಲಾ ಬಿಡುಗಡೆಯಾಗುತ್ತಿರುವುದಕ್ಕೆ, ಜನ ಇಟ್ಟಿರುವ ನಿರೀಕ್ಷೆಯೇ ಕಾರಣ ಮತ್ತು ಜನ ಹಾಗೆ ನಿರೀಕ್ಷೆ ಇಡುವುದಕ್ಕೆ ಟ್ರೇಲರ್‌ ಹಿಟ್‌ ಆಗಿದ್ದೇ ಕಾರಣ ಎಂಬುದು ಅರ್ಜುನ್‌ ನಂಬಿಕೆ. “ಫೇಸ್‌ಬುಕ್‌ನಲ್ಲಿ ಚಿತ್ರದ ಟ್ರೇಲರ್‌ಗೆ 30 ಲಕ್ಷ ಹಿಟ್ಸ್‌ ಬಿದ್ದಿದೆ. ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇನ್ನು ಚಿತ್ರ ಸಹ ಚೆನ್ನಾಗಿ ಬಂದಿದೆ. ನಾನು ಮೂರು ಬಾರಿ ಚಿತ್ರ ನೋಡಿದೆ. ನಿರ್ದೇಶಕ ಅಂತ ಹೇಳುತ್ತಿಲ್ಲ. ಚಿತ್ರ ಚೆನ್ನಾಗಿ ಬಂದಿದೆ. ಯಾವುದೇ ಲ್ಯಾಗ್‌ ಇಲ್ಲದೆ ಎರಡು ಗಂಟೆಯ ಸಿನಿಮಾ ಇದು’ ಎಂದರು ಅರ್ಜುನ್‌.

ಚಿತ್ರದ ನಾಯಕ ಲಿಖೀತ್‌ ಮಾತನಾಡಿ, “ಈಗಾಗಲೇ ಬೇರೆ ಭಾಷೆಗಳಿಂದ ರೀಮೇಕ್‌ ರೈಟ್ಸ್‌ ಕೇಳಿಕೊಂಡು ಫೋನ್‌ ಬರುತ್ತಿವೆ. ತೆಲುಗಿನ ಜನಪ್ರಿಯ ನಿರ್ಮಾಪಕರೊಬ್ಬರು ಫೋನ್‌ ಮಾಡಿದ್ದರು. ಇದು ಖುಷಿಯ ವಿಷಯ. ಇನ್ನು ನಾವು ಹೊಸಬರೆಂದು ನೋಡದೆ ಶಿವಣ್ಣ, ಗಣೇಶ್‌, ವಿಜಯ್‌ ಮುಂತಾದವರು ಚಿತ್ರಕ್ಕೆ ಹಾರೈಸುತ್ತಿದ್ದಾರೆ. ಹೊಸಬರಿಗೆ ಅವರು ಕೊಡುತ್ತಿರುವ ಪ್ರೋತ್ಸಾಹ ಖುಷಿ ಕೊಡುತ್ತಿದೆ’ ಎಂದರು.

ನಾಯಕಿ ಶ್ರುತಿ ಗೊರಾಡಿಯಾ ಸಹ ಖುಷಿಯಾಗಿದ್ದರು. ಅವರಿಗೆ ಈ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಇನ್ನೊಂದು ಚಿತ್ರದಲ್ಲಿ ಅವಕಾಶ ಸಿಕ್ಕಿದೆಯಂತೆ. ಮೊದಲ ಚಿತ್ರದಲ್ಲೇ ಒಳ್ಳೆಯ ಅನುಭವವಾಯಿತು, ಪ್ರತಿಭಾವಂತ ಕಲಾವಿದರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿತು ಎಂದು ಅವರು ಮಾತು ಮುಗಿಸಿದರು. 

ಟಾಪ್ ನ್ಯೂಸ್

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

2024ರ ರಣರಂಗಕ್ಕೂ ಮೊದಲಿದೆ 16 ಕದನ

2024ರ ರಣರಂಗಕ್ಕೂ ಮೊದಲಿದೆ 16 ಕದನ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

EXAM

ಫೇಲಾದವರು ಒಂದು ವರ್ಷ ಕಾಯಲೇಬೇಕು; ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಲ್ಲ

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಘನಾ ಗಾಂವ್ಕರ್‌ ಕಲರ್‌ ಫುಲ್‌ ಫೋಟೋಶೂಟ್‌

ಮೇಘನಾ ಗಾಂವ್ಕರ್‌ ಕಲರ್‌ ಫುಲ್‌ ಫೋಟೋಶೂಟ್‌

ರಾಘವೇಂದ್ರ ಸ್ಟೋರ್ಸ್ ನಲ್ಲಿ ನವರಸ ನಾಯಕ

ರಾಘವೇಂದ್ರ ಸ್ಟೋರ್ಸ್ ನಲ್ಲಿ ನವರಸ ನಾಯಕ

ಕೋವಿಡ್‌ ನೆಗೆಟಿವ್‌: ಪಾಸಿಟಿವ್‌ ಮೂಡ್‌ ನಲ್ಲಿ ಸಿನಿಮಾ ರಂಗ

ಕೋವಿಡ್‌ ನೆಗೆಟಿವ್‌: ಪಾಸಿಟಿವ್‌ ಮೂಡ್‌ ನಲ್ಲಿ ಸಿನಿಮಾ ರಂಗ

ಸುಕನ್ಯಾ ದ್ವೀಪ

‘ಸುಕನ್ಯ ದ್ವೀಪ’ದಲ್ಲಿ ಫ್ಯಾಮಿಲಿ ಡ್ರಾಮಾ

roopika

ತೆಲುಗಿನತ್ತ ರೂಪಿಕಾ: ‘ಚಿಲ್‌ ಬ್ರೋ’ ಮೂಲಕ ಟಾಲಿವುಡ್‌ ಎಂಟ್ರಿ

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಶತಮಾನೋತ್ಸವಕ್ಕೆ ಕೆಲವೇ ವರ್ಷ; ಮೂಲಸೌಕರ್ಯ ಕಲ್ಪಿಸಿ

ಶತಮಾನೋತ್ಸವಕ್ಕೆ ಕೆಲವೇ ವರ್ಷ; ಮೂಲಸೌಕರ್ಯ ಕಲ್ಪಿಸಿ

ಕಲ್ಲು ಗುಡ್ಡ ಪ್ರದೇಶ, ಪರಾವಲಂಬನೆ ಅನಿವಾರ್ಯ

ಕಲ್ಲು ಗುಡ್ಡ ಪ್ರದೇಶ, ಪರಾವಲಂಬನೆ ಅನಿವಾರ್ಯ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.