ಕುಂಭಕರ್ಣನ ಮಡಿಲಲ್ಲಿ ಜಂಟಲ್ಮ್ಯಾನ್‌

18 ಗಂಟೆ ನಿದ್ದೆ 6 ಗಂಟೆ ಎಚ್ಚರ!

Team Udayavani, Jul 12, 2019, 5:00 AM IST

ನಟ ಪ್ರಜ್ವಲ್ ದೇವರಾಜ್‌ ಅವರ ಈ ಬಾರಿಯ ಹುಟ್ಟುಹಬ್ಬ ಎಂದಿಗಿಂತ ಸ್ಪೆಷಲ್ ಆಗಿತ್ತೆಂದರೆ ತಪ್ಪಲ್ಲ. ಅವರ ನಟನೆಯ ಸಿನಿಮಾಗಳ ಟೀಸರ್‌, ಟ್ರೇಲರ್‌, ಫ‌ಸ್ಟ್‌ಲುಕ್‌ಗಳು ಬಿಡುಗಡೆಯಾಗುವ ಮೂಲಕ ಪ್ರಜ್ವಲ್ ಮುಖದಲ್ಲಿ ನಗುಮೂಡಿದೆ. ಹಾಗೆ ಟೀಸರ್‌ ಬಿಡುಗಡೆ ಮಾಡಿದ ಪ್ರಜ್ವಲ್ ಸಿನಿಮಾದಲ್ಲಿ ‘ಜಂಟಲ್ಮ್ಯಾನ್‌’ ಕೂಡಾ ಒಂದು. ಈ ಸಿನಿಮಾದ ಹೆಸರನ್ನು ನೀವು ಕೇಳಿರಬಹುದು. ಈಗ ಆ ಚಿತ್ರ ಬಹುತೇಕ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ನಿರ್ದೇಶಕ ಗುರುದೇಶಪಾಂಡೆ ತಮ್ಮ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಗಂತ ನಿರ್ದೇಶನದ ಜವಾಬ್ದಾರಿಯನ್ನು ಜಡೇಶ್‌ ಅವರಿಗೆ ನೀಡಿದ್ದಾರೆ. ಈ ಹಿಂದೆ ‘ರಾಜಹಂಸ’ ಸಿನಿಮಾ ನಿರ್ದೇಶಿಸಿದ್ದ ಜಡೇಶ್‌ ಅವರಿಗೆ ಇದು ಎರಡನೇ ಸಿನಿಮಾ.

ಎಲ್ಲಾ ಓಕೆ, ಈ ಚಿತ್ರದ ಕಾನ್ಸೆಪ್ಟ್ ಏನು ಎಂದು ನೀವು ಕೇಳಬಹುದು. ಈ ಬಗ್ಗೆ ಮಾತನಾಡುವ ನಿರ್ದೇಶಕ ಜಡೇಶ್‌, ‘ಇದು ಸ್ಲಿಪಿಂಗ್‌ ಬ್ಯೂಟಿ ಸಿಂಡ್ರೋ ಎಂಬ ಅಂಶದೊಂದಿಗೆ ಸಾಗುವ ಸಿನಿಮಾ. ನಾಯಕನಿಗೆ ನಿದ್ರೆ ಮಾಡೋದೇ ಒಂದು ಕಾಯಿಲೆ. ಬೇರೆಯವರು ದಿನದ 18 ಗಂಟೆ ಎದ್ದಿದ್ದರೆ, ಈತ 18 ಗಂಟೆ ಮಲಗಿರುತ್ತಾನೆ. ಮಿಕ್ಕ ಆರು ಗಂಟೆಗಳಲ್ಲಿ ತನ್ನ ಕೆಲಸ ಮಾಡುತ್ತಾನೆ .. ಈ ತರಹ ಸಾಗುವ ಕಥೆಯಲ್ಲಿ ಲವ್‌, ಸೆಂಟಿಮೆಂಟ್, ಆ್ಯಕ್ಷನ್‌ ಎಲ್ಲವೂ ಇದೆ. ಈ ಚಿತ್ರಕ್ಕೆ ಪ್ರಜ್ವಲ್ ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಮೈಸೂರಿನ ಕಸದ ರಾಶಿಯಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಪ್ರಜ್ವಲ್ ಅದಕ್ಕೂ ಒಪ್ಪಿ ಚಿತ್ರೀಕರಣದಲ್ಲಿ ಭಾಗಿಯಾದರು’ ಎನ್ನುತ್ತಲೇ ನಿರ್ಮಾಪಕ ಗುರುದೇಶಪಾಂಡೆ ನೀಡಿದ ಅವಕಾಶಕ್ಕೆ ಥ್ಯಾಂಕ್ಸ್‌ ಹೇಳಿದರು.

ನಿರ್ಮಾಪಕ ಗುರುದೇಶಪಾಂಡೆ ಹಾಗೂ ಪ್ರಜ್ವಲ್ ಈ ಹಿಂದೆಯೇ ಸಿನಿಮಾವೊಂದನ್ನ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ. ಅದೊಂದು ದಿನ ಗುರುದೇಶಪಾಂಡೆ, ಪ್ರಜ್ವಲ್ ಮನೆಗೆ ಹೋಗಿದ್ದಾಗ ಅವರ ಅಮ್ಮ, ‘ಪೇಪರ್‌ನಲ್ಲಿ ಜಾಹೀರಾತನ್ನಷ್ಟೇ ನೋಡುತ್ತಿದ್ದೇನೆ, ಸಿನಿಮಾ ಯಾವಾಗ ಮಾಡುತ್ತೀರಿ’ ಎಂದು ನಗುತ್ತಾ ಕೇಳಿದರಂತೆ. ಅದರ ಬೆನ್ನಲ್ಲೇ ಗುರುದೇಶಪಾಂಡೆ ಆರಂಭಿಸಿದ್ದು ‘ಜಂಟಲ್ಮ್ಯಾನ್‌’. ಜಡೇಶ್‌ ಅವರು ಹೇಳಿದ ಕಥೆ ಇಷ್ಟವಾಗಿ ಆ ಕಥೆಯನ್ನೇ ಆಯ್ಕೆ ಮಾಡಿದ್ದಾಗಿ ಹೇಳಿದರು ಗುರುದೇಶ­ಪಾಂಡೆ.

ನಾಯಕ ಪ್ರಜ್ವಲ್ ದೇವರಾಜ್‌ಗೆ ಒಂದು ಒಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆಯಂತೆ. ‘ಅನೇಕ ಕಥೆಗಳನ್ನು ಕೇಳುತ್ತಿರು­ತ್ತೇನೆ. ಹಾಗೆ ಈ ಕಥೆಯನ್ನು ಕೇಳಿದೆ. ಕೇಳಿದ ಕೂಡಲೇ ಇದರಲ್ಲಿ ಹೊಸತನ­ವಿದೆ ಎನಿಸಿ ಮಾಡಲು ಒಪ್ಪಿಕೊಂಡೆ’ ಎನ್ನುವುದು ಪ್ರಜ್ವಲ್ ಮಾತು. ನಾಯಕಿ ನಿಶ್ವಿ‌ಕಾ ನಾಯ್ಡು ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದ ಸಾಹಸ ನಿರ್ದೇಶಕರಾದ ವಿನೋದ್‌ ಹಾಗೂ ಡಿಫ‌ರೆಂಟ್ ಡ್ಯಾನಿ ಫೈಟ್ ಚೆನ್ನಾಗಿ ಮೂಡಿಬಂದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

•ರವಿ ರೈ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ