Udayavni Special

ಮೊಮ್ಮಗನ ಮದುವೆ ಪ್ರಸಂಗ: ಸಾವಿನ ಮನೆಯ ಹಾಸ್ಯದ ಕಥೆ


Team Udayavani, May 4, 2018, 6:00 AM IST

s-32.jpg

“ಈ ಸಿನಿಮಾವನ್ನು ಕುಟುಂಬ ಸಮೇತರಾಗಿ ನೋಡಬೇಕು. ದಯವಿಟ್ಟು ಒಂದು ಒಳ್ಳೆಯ ಸಿನಿಮಾವನ್ನು ಮಿಸ್‌ ಮಾಡಿಕೊಳ್ಳಬೇಡಿ’

– ನಿರ್ದೇಶಕ ನಾಗರಾಜ್‌ ಪೀಣ್ಯ ಈ ಮಾತನ್ನು ಪದೇ ಪದೇ ಹೇಳುತ್ತಿದ್ದರು. ಅವರ ಮಾತಿಗೆ ವೇದಿಕೆಯಾಗಿದ್ದು “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರ. ಇದು ನಾಗರಾಜ್‌ ನಿರ್ದೇಶನದ ಮೂರನೇ ಚಿತ್ರ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿಕ್ಕಣ್ಣ ಈ ಚಿತ್ರದ ನಾಯಕ. ಸಹಜವಾಗಿಯೇ ಇದು ಕೇವಲ ಕಾಮಿಡಿ ಪ್ರಿಯರಿಗೆ ಸಿನಿಮಾ ಎಂಬ ಭಾವನೆ ಜನರಲ್ಲಿ ಮೂಡಬಹುದೆಂಬ ಕಾರಣಕ್ಕೋ ಏನೋ ನಾಗರಾಜ್‌ ಪೀಣ್ಯ, ಇದೊಂದು ಫ್ಯಾಮಿಲಿ ಸಿನಿಮಾ ಎಂದು ಹೇಳುತ್ತಿದ್ದರು. 

ಸಿನಿಮಾದಿಂದ ಸಿನಿಮಾಕ್ಕೆ ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಬೇಕೆಂಬ ಕಾರಣಕ್ಕೆ ಮೂರು ಸಿನಿಮಾಗಳಲ್ಲೂ ಹೊಸ ಕಥೆಯನ್ನು ಹೇಳಿದ್ದಾಗಿ ಹೇಳಿಕೊಂಡರು. “ಭೂತಯ್ಯನ ಮಗ ಅಯ್ಯು’ ಸಿನಿಮಾದ ವಿಶೇಷತೆ ಏನೆಂದರೆ ಸಾವಿನ ಮನೆಯಲ್ಲಿ ನಗು ತರಿಸೋದು! ಸಾವಿನ ಮನೆಯಲ್ಲಿ ನಗುನಾ ಎಂದು ಕೇಳಬಹುದು. ಆದರೆ ನಾಗರಾಜ್‌ ಪೀಣ್ಯ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ. “ಪ್ರತಿ ಸಾವಿನ ಮನೆಯಲ್ಲೂ ಗೊತ್ತಿಲ್ಲದಂತೆ ಒಂದು ಹಾಸ್ಯ ಇರುತ್ತದೆ. ಅಂತಹ ಅಂಶಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಸಾವಿನ ಮನೆಗಳಿಗೂ ಭೇಟಿ ಕೊಟ್ಟು, ಅಲ್ಲಿನ ಸನ್ನಿವೇಶಗಳನ್ನು ನೋಡಿದ್ದೇನೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ. ಚಿತ್ರದ ರೀರೆಕಾರ್ಡಿಂಗ್‌ ಯಾವ ತರಹ ಇರಬೇಕೆಂಬುದಕ್ಕೆ 40 ದಿನ ತಲೆಕೆಡಿಸಿಕೊಂಡಿದ್ದಾಗಿಯೂ ಹೇಳಿಕೊಂಡರು ಪೀಣ್ಯ.  ಇನ್ನು ಈ ಚಿತ್ರ ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ. ಮಕ್ಕಳ ಬಾಲ್ಯದ ತುಂಟಾಟಗಳನ್ನು ಮಜವಾಗಿ ತೋರಿಸಿದ್ದಾರಂತೆ. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ದಂಡೇ ಇದೆ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಬುಲೆಟ್‌ ಪ್ರಕಾಶ್‌, ತಬಲಾನಾಣಿ, ಶ್ರುತಿಹರಿಹರನ್‌, ಪ್ರಶಾಂತ್‌ ಸಿದ್ಧಿ, ಗಿರಿಜಾ ಲೋಕೇಶ್‌, ಕೀರ್ತಿರಾಜ್‌, ಉಮೇಶ್‌ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಏಳು ಮಂದಿ ಹಣ ತೊಡಗಿಸಿ ದ್ದಾರೆ. ವರಪ್ರಸಾದ್‌, ರವಿಶಂಕರ್‌, ಅನಿಲ್‌, ಸುನಿಲ್‌, ಹನುಮಂತ್‌ರಾಜು, ಹರೀಶ್‌, ವೆಂಕಟೇಶ್‌ ನಿರ್ಮಾಪಕರಾಗಿದ್ದಾರೆ ಎಂದು ಮಾಹಿತಿ ನೀಡಿದರು ನಾಗರಾಜ್‌. ಚಿತ್ರದಲ್ಲಿ ನಟಿಸಿದ ತಬಲಾ ನಾಣಿ ಕೂಡಾ ನಾಗರಾಜ್‌ ಪೀಣ್ಯ ಅವರ ಪ್ರತಿಭೆಯನ್ನು ಕೊಂಡಾಡಿದರು. ಚಿತ್ರದಲ್ಲಿ ನಾಣಿ, ನಾಯಕನ ಸೋದರ ಮಾವನಾಗಿ ಕಾಣಿಸಿ ಕೊಂಡಿದ್ದು, ಅಳಿಯನಿಗೆ ಹುಡುಗಿ ಹುಡುಕುವ ದೃಶ್ಯಗಳು ಪ್ರೇಕ್ಷಕರಿಗೆ ಖುಷಿಕೊಡುತ್ತವೆ ಎನ್ನಲು ಅವರು ಮರೆಯಲಿಲ್ಲ. ಅಂದಹಾಗೆ, ಚಿತ್ರವನ್ನು ವೆಂಕಟ್‌ ವಿತರಣೆ ಮಾಡುತ್ತಿದ್ದಾರೆ. ಇನ್ನು, ಚಿತ್ರದಲ್ಲಿನ ಒಂದೇ ಒಂದು ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

ಶಾಸಕರಿಗೆ ಕೋವಿಡ್ 19 ಪರಿಕ್ಷೆ : ತಪಾಸಣೆಗೊಳಗಾದ ಸ್ಪೀಕರ್ ಕಾಗೇರಿ

ಶಾಸಕರಿಗೆ ಕೋವಿಡ್ 19 ಪರಿಕ್ಷೆ : ತಪಾಸಣೆಗೊಳಗಾದ ಸ್ಪೀಕರ್ ಕಾಗೇರಿ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ಭ್ರಮೆಯಲ್ಲಿ ಹೊಸಬರು

ಭ್ರಮೆಯಲ್ಲಿ ಹೊಸಬರು

suchitra-tdy-5

ಎಂಟ್ರಿಗೆ ರೆಡಿಯಾದ ‌ಟಿಪ್ಪುವರ್ಧನ್‌

ಹೀರೋ ಆಗಿಬಿಟ್ರಲ್ಲಾ ರಿಷಭ್‌!

ಹೀರೋ ಆಗಿಬಿಟ್ರಲ್ಲಾ ರಿಷಭ್‌!

MUST WATCH

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojaryಹೊಸ ಸೇರ್ಪಡೆ

100 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯ

100 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯ

PaytmGPlay

IPL ಆರಂಭದ ಮುನ್ನಾದಿನ Paytmಗೆ ಶಾಕ್‌ ಕೊಟ್ಟಿದ್ದು ಯಾಕೆ ಗೊತ್ತಾ?

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

yg-tdy-1

ಎಲ್ಲ ಸಮಸ್ಯೆಗೂ ಆತ್ಮನಿರ್ಭರ ಭಾರತ ಉತ್ತರ

ಅರಳದಿನ್ನಿ ರಸ್ತೆ ದೇವರಿಗೆ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.