ಗುಬ್ಬಿ ವೀರಣ್ಣ ಮರಿ ಮೊಮ್ಮಗನ ಸಿನಿ ಎಂಟ್ರಿ

Team Udayavani, Oct 4, 2019, 5:24 AM IST

ಗುಬ್ಬಿ ವೀರಣ್ಣ… ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟ ಮೇರು ವ್ಯಕ್ತಿ ಇವರು. ಇವರ ನಾಟಕ ಕಂಪೆನಿ ಮೂಲಕ ಹಲವು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಅವರ ರಂಗಭೂಮಿಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿ, ಬಣ್ಣದ ಲೋಕಕ್ಕೆ ಬಂದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಈಗಾಗಲೇ ಗುಬ್ಬಿ ವೀರಣ್ಣ ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಗುರುತಿಸಿ­ಕೊಂಡಿದ್ದಾರೆ. ಈಗ ಅವರ ಕುಟುಂಬದ ಮತ್ತೂಂದು ಪ್ರತಿಭೆ ಗಾಂಧಿನಗರಕ್ಕೆ ಕಾಲಿಡುತ್ತಿದೆ.

ಹೌದು, ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಈಗ ಸಿನಿಮಾವೊಂದರ ನಾಯಕ. ಹೆಸರು ಬೆನಕ ಗುಬ್ಬಿ ವೀರಣ್ಣ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಸಿನಿಮಾಗೆ ಕಾಲಿಡುವ ಮುನ್ನ, ಬೆನಕ ಹೀರೋಗೆ ಏನೆಲ್ಲಾ ಅರ್ಹತೆ ಇರಬೇಕೋ ಅವೆಲ್ಲವನ್ನೂ ಕರಗತ ಮಾಡಿಕೊಂಡೇ ಬಂದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸಿನಿಮಾ’ಶಾಲೆಯಲ್ಲಿ ನಟನೆ ತರಬೇತಿ ಪಡೆದು, ಕಳೆದ ಎರಡು ವರ್ಷಗಳಿಂದಲೂ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಈಗ ಗಾಂಧಿನಗರದತ್ತ ಜಿಗಿದಿದ್ದಾರೆ. ಚಿಕ್ಕಂದಿನಿಂದಲೂ ಬೆನಕ ಗುಬ್ಬಿವೀರಣ್ಣ, ಡ್ಯಾನ್ಸ್‌ ಆಸಕ್ತಿ ಬೆಳೆಸಿಕೊಂಡವರು. ಈಗ ಸಿನಿಮಾಗೆ ಕಾಲಿಟ್ಟಿದ್ದಾರೆ. ಅಂದಹಾಗೆ, “ರಮೇಶ್‌ ಸುರೇಶ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ “00.1′ ಚಿತ್ರದಲ್ಲೂ ಬೆನಕ ನಟಿಸುತ್ತಿದ್ದಾರೆ.

ತಮ್ಮ “ರಮೇಶ್‌ ಸುರೇಶ್‌’ ಚಿತ್ರದ ಬಗ್ಗೆ ಹೇಳುವ ಬೆನಕ ಗುಬ್ಬಿವೀರಣ್ಣ,”ಇದೊಂದು ಹಾಸ್ಯಮಯ ಚಿತ್ರ. ಇಲ್ಲಿ ನಾನು ಸೋಮಾರಿ ಹುಡುಗನ ಪಾತ್ರ ಮಾಡುತ್ತಿದ್ದೇನೆ. ಕೆಲಸವಿಲ್ಲದ ಆಲೆಮಾರಿ ಪಡ್ಡೆಯಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ಕಥೆಯೇ ಹೀರೋ. ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಇದೆ. ನಮ್ಮಂತಹ ಹೊಸಬರನ್ನು ನಂಬಿ, ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಶಂಕರ್‌ ಹಾಗು ಕೃಷ್ಣ ಅವರು ಅವಕಾಶ ಕೊಟ್ಟಿದ್ದಾರೆ. ನಮ್ಮಲ್ಲಿ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೆಲಸ ಮಾಡಿಸುತ್ತಿದ್ದಾರೆ ಅವರಿಗೆ ಥ್ಯಾಂಕ್ಸ್‌’ ಎನ್ನುತ್ತಾರೆ ಬೆನಕ.


ಈ ವಿಭಾಗದಿಂದ ಇನ್ನಷ್ಟು

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...

  • ಕನ್ನಡದಲ್ಲಿ ಈ ವಾರ ಮತ್ತೂಂದು "ಕಥಾ ಸಂಗಮ' ತೆರೆಗೆ ಬರುತ್ತಿದೆ. "ಕಥಾ ಸಂಗಮ' ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವ ಹೆಸರು ಚಿತ್ರಬ್ರಹ್ಮ ಪುಟ್ಟಣ್ಣ...

  • ಕನ್ನಡದಲ್ಲಿ "ಬೆಳದಿಂಗಳ ಬಾಲೆ' ಎಂದೇ ಕರೆಸಿಕೊಳ್ಳುವ ಸುಮನ್‌ ನಗರ್‌ಕರ್‌ ಹೊಸ ಇನ್ನಿಂಗ್ಸ್‌ ಶುರುಮಾಡಿ­ರುವುದು ಗೊತ್ತೇ ಇದೆ. ನಟನೆ ಜೊತೆಯಲ್ಲಿ ನಿರ್ಮಾಣಕ್ಕೂ...

  • ಅಭಿನಯ, ಬಣ್ಣದ ಲೋಕ ಅಂದ್ರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಅದು ಒಲಿದು, ಕೈ ಹಿಡಿಯುತ್ತದೆ. ಪರಿಶ್ರಮ, ಅವಕಾಶ,...

ಹೊಸ ಸೇರ್ಪಡೆ