ಗುರು ಗಾನ ಯಾನ…

ಅಂದುಕೊಳ್ಳದೆಯೇ ಎಲ್ಲವೂ ನಡೆಯುತ್ತಿದೆ ...

Team Udayavani, Jul 26, 2019, 5:00 AM IST

m-20

“ನಾನು ಚಿತ್ರರಂಗಕ್ಕೆ ಪ್ಲಾನ್‌ ಮಾಡಿಕೊಂಡು ಬಂದಿಲ್ಲ. ಸಿಕ್ಕ ಅವಕಾಶದಲ್ಲೇ ನಾನು ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತಿದ್ದೇನೆ. ಮೊದಲು ಯುವ ಸಂಗೀತ ನಿರ್ದೇಶಕ ಅಂತ ಇಂಡಸ್ಟ್ರಿಯವರು, ಮೀಡಿಯಾ, ಆಡಿಯನ್ಸ್‌ ಎಲ್ಲರೂ ಕರೆಯುತ್ತಿದ್ದರು. ಈಗ ಹಿರಿಯ ಸಂಗೀತ ನಿರ್ದೇಶಕ ಅಂಥ ಗುರುತಿಸುತ್ತಿದ್ದಾರೆ..’

– ಹೀಗೆ ಹೇಳುತ್ತಾ ಮಾತಿಗಿಳಿದವರು ಸಂಗೀತ ನಿರ್ದೇಶಕ, ಗಾಯಕ ಕಂ ನಟ ಗುರುಕಿರಣ್‌. ಗುರುಕಿರಣ್‌ ಹೀಗೆ ಹೇಳುವುದಕ್ಕೆ ಕಾರಣ ಚಿತ್ರರಂಗದಲ್ಲಿ ಅವರ ಮೂರು ದಶಕಗಳ ಜರ್ನಿ. ಹೌದು, ಗುರುಕಿರಣ್‌ ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳಾಯಿತು, ಇನ್ನು ಸಂಗೀತ ನಿರ್ದೇಶಕನಾಗಿ 25 ವರ್ಷಗಳ ಯಶಸ್ವಿ ಪ್ರಯಾಣ ಗುರುಕಿರಣ್‌ ಅವರದ್ದು. ಪ್ರತಿಯೊಬ್ಬರ ವೃತ್ತಿ ಬದುಕಿನಲ್ಲೂ 25ನೇ ವರ್ಷ ಅನ್ನೋದು ಮಹತ್ತರ ಮೈಲಿಗಲ್ಲಿದ್ದಂತೆ. ಇಂಥದ್ದೇ ಮಹತ್ತರ ಘಟ್ಟದಲ್ಲಿ ಈಗ ಗುರುಕಿರಣ್‌ ಕೂಡ ಇದ್ದಾರೆ. ಇದೇ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಗುರುಕಿರಣ್‌ ತಮ್ಮ ಚಿತ್ರ ಬದುಕಿನ ಸಂಗೀತಯಾನದ ಬಗ್ಗೆ ಸುದೀರ್ಘ‌ವಾಗಿ ಮಾತನಾಡಿದರು. ಅದು ಅವರ ಮಾತಲ್ಲೇ ..

ಪ್ಲಾನ್‌ ಇಲ್ಲದ ಎಂಟ್ರಿ
ಮೊದಲಿನಿಂದಲೂ ಅಷ್ಟೇ, ನಾನು ಹೀಗೆ ಆಗ್ಬೇಕು ಅಂಥ ಯಾವತ್ತೂ ಪ್ಲಾನ್‌ ಮಾಡಿಕೊಂಡು ಇಲ್ಲಿಗೆ ಬಂದಿಲ್ಲ. ಮೊದಲು ಆ್ಯಕ್ಟಿಂಗ್‌ ಮಾಡಿದೆ, ನಂತರ ಮ್ಯೂಸಿಕ್‌ ಕಂಪೋಸರ್‌, ಸಿಂಗರ್‌ ಹೀಗೆ ಒಂದರ ಹಿಂದೆ ಒಂದು ಕೆಲಸ ಮಾಡುತ್ತಾ ಹೋದೆ. ಯಾವುದನ್ನೂ ಅಂದುಕೊಂಡು ಬಂದಿಲ್ಲ, ಯಾವುದನ್ನೂ ಕಲಿತುಕೊಂಡು ಬಂದಿಲ್ಲ. ಆದ್ರೆ ಆ ಸಮಯಕ್ಕೆ ಏನೇನು ಆಗ್ಬೇಕು ಅಂತ ಇತ್ತೂ, ಹಾಗೆ ಆಯ್ತು. ಆ ಬಗ್ಗೆ ನನಗೆ ಖುಷಿ ಇದೆ. ಈ ಇಪ್ಪತ್ತೈದು ವರ್ಷಗಳಲ್ಲಿ ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಅಷ್ಟೇ. ನಿಜ ಹೇಳ್ಬೇಕು ಅಂದ್ರೆ, ನಾನು ಮ್ಯೂಸಿಕ್‌ ಡೈರೆಕ್ಟರ್‌ ಆಗ್ಬೇಕು ಅಂತ ಮೊದಲು ಅಂದುಕೊಂಡಿರಲಿಲ್ಲ. ಆದ್ರೂ ಮ್ಯೂಸಿಕ್‌ ಡೈರೆಕ್ಟರ್‌ ಆದೆ. ನನ್ನ ಪ್ರಕಾರ ಜೀವನದಲ್ಲಿ ತುಂಬಾ ಪ್ಲಾನ್‌ ಮಾಡೋದಕ್ಕೆ ಹೋಗಬಾರದು. ಬಂದಂತೆ ಸ್ವೀಕರಿಸಿಕೊಂಡು ಹೋಗಬೇಕು.

ತುಂಬಾ ಜನಕ್ಕೆ ಥ್ಯಾಂಕ್ಸ್‌ ಹೇಳಬೇಕು
“ಇವತ್ತು ಇಂಡಸ್ಟ್ರಿ, ಜನ ಎಲ್ಲರೂ ಗುರುತಿಸುತ್ತಾರೆ, ಪ್ರೀತಿಸುತ್ತಾರೆ ಅಂದ್ರೆ ಅದಕ್ಕೆ ಅನೇಕರ ಸಹಕಾರವಿದೆ. ಇಂಡಸ್ಟ್ರಿಗೆ ನನ್ನನು ಪರಿಚಯಿಸಿದ ಉಪೇಂದ್ರ, ಕೆಲಸ ಕಲಿಸಿಕೊಟ್ಟ ವಿ. ಮನೋಹರ್‌, ಹೀಗೆ ಹೇಳುತ್ತಾ ಹೋದ್ರೆ ಸಣ್ಣವರು, ದೊಡ್ಡವರು, ಫ್ರೆಂಡ್ಸ್‌, ಫ್ಯಾಮಿಲಿ ಅಂಥ ಅನೇಕರು ಇದ್ದಾರೆ. ಎಲ್ಲರ ಹೆಸರನ್ನೂ ಹೇಳ್ಳೋದು ಕಷ್ಟ. ಹೇಳುತ್ತಾ ಹೋದ್ರೆ, ತುಂಬಾ ಜನಕ್ಕೆ ಥ್ಯಾಂಕ್ಸ್‌ ಹೇಳಬೇಕಾಗುತ್ತದೆ. ಒಟ್ಟಿನಲ್ಲಿ ಇದು ನನ್ನೊಬ್ಬನದ್ದೇ ಜರ್ನಿ ಅಲ್ಲ. ಇಲ್ಲಿ ಅನೇಕ ಜನರು ನನಗೆ ಜೊತೆಯಾಗಿದ್ದಾರೆ, ಸಹಕಾರ ನೀಡಿದ್ದಾರೆ.

ಶೀಘ್ರದಲ್ಲಿಯೇ ನೂರನೇ ಸಿನಿಮಾ
“ಸಂಗೀತ ನನಗೆ ಖುಷಿ ಕೊಡುತ್ತದೆ. ಇಷ್ಟು ವರ್ಷಗಳಲ್ಲಿ ನನ್ನ ಕೆಲಸ ನನಗೆ ಯಾವತ್ತೂ ಬೇಜಾರು ಅಂಥ ಅನಿಸಿಲ್ಲ. ಪ್ರತಿಕ್ಷಣ ಕೂಡ ನನ್ನ ಕೆಲಸವನ್ನ ನಾನು ಎಂಜಾಯ್‌ ಮಾಡ್ತೀನಿ. ಇವತ್ತು ನನಗೆ ಮ್ಯೂಸಿಕ್‌ ಬಿಟ್ಟು ಇರೋದಕ್ಕೆ ಆಗಲ್ಲ. ಅದನ್ನ ಬಿಟ್ಟು ನನಗೇನೂ ಗೊತ್ತಿಲ್ಲ. ಬಹುಶಃ ಹಾಗಾಗಿಯೇ ಏನೂ…, ನಾನು ಇಲ್ಲೇ ಖುಷಿಯಾಗಿದ್ದೇನೆ. ಇಲ್ಲಿಯವರೆಗೆ ನಾನು ಸಂಗೀತ ನಿರ್ದೇಶನ ಮಾಡಿದ, ಹಿನ್ನೆಲೆ ಸಂಗೀತ ನೀಡಿದ ಎಲ್ಲಾ ಸಿನಿಮಾಗಳನ್ನು ತೆಗೆದುಕೊಂಡರೆ, ಸುಮಾರು ನೂರರ ಗಡಿ ದಾಟುತ್ತದೆ. ಇಲ್ಲಿಯವರೆಗೆ ಸಂಗೀತ ನಿರ್ದೇಶನ ಮಾಡಿರುವ ಚಿತ್ರಗಳನ್ನು ಮಾತ್ರ ತೆಗೆದುಕೊಂಡರೆ, ಅವು ಕೂಡ ನೂರರ ಸಮೀಪದಲ್ಲಿವೆ. ಈ ವರ್ಷದ ಕೊನೆಗೆ ನಾನು ಮ್ಯೂಸಿಕ್‌ ಕಂಪೋಸ್‌ ಮಾಡಲಿರುವ ನೂರನೇ ಸಿನಿಮಾವನ್ನ ಅನೌನ್ಸ್‌ ಮಾಡುತ್ತೇನೆ.

-ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.