Udayavni Special

ರಾಬರ್ಟ್‌ ಮೇಲೆ ಆಶಾ ಭಾವನೆ

ನವನಟಿಯ ಕಣ್ತುಂಬ ಕನಸು...

Team Udayavani, Jan 31, 2020, 5:50 AM IST

youth-26

ಸ್ಟಾರ್‌ಗಳ ಸಿನಿಮಾ ಮೂಲಕ ಎಂಟ್ರಿಕೊಡುವ ನಾಯಕಿ ನಟಿಯರ ಭವಿಷ್ಯದ ಕನಸು ಕೂಡಾ ದೊಡ್ಡದಾಗಿರುತ್ತದೆ. ಅದಕ್ಕೆ ಕಾರಣ ತಾವು ಲಾಂಚ್‌ ಆಗುತ್ತಿರುವ ಸಿನಿಮಾ. ಚಿತ್ರರಂಗದಲ್ಲೊಂದು ನಂಬಿಕೆ ಇದೆ. ಅದೇನೆಂದರೆ ಸ್ಟಾರ್‌ ಸಿನಿಮಾ ಮೂಲಕ ಲಾಂಚ್‌ ಆದ ನಾಯಕಿ ನಟಿಯರು ಮುಂದೆ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರುತ್ತಾರೆ ಎಂಬ ವಿಶ್ವಾಸ. ಅದಕ್ಕೆ ಪೂರಕವಾಗಿ ಸ್ಟಾರ್‌ ಸಿನಿಮಾ ಮೂಲಕ ಪರಿಚಯವಾದ ನಾಯಕಿಯರು ಚಿತ್ರರಂಗದಲ್ಲಿ ಬಿಝಿಯಾಗಿದ್ದಾರೆ ಕೂಡಾ. ಈಗ ಈ ಮಾತು ಯಾಕೆ ಎಂದರೆ ಅದಕ್ಕೆ ಕಾರಣ “ರಾಬರ್ಟ್‌’. ದರ್ಶನ್‌ ನಾಯಕರಾಗಿರುವ “ರಾಬರ್ಟ್‌’ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣಲಿದೆ. ಈ ಸಿನಿಮಾ ಮೂಲಕ ನಾಯಕಿಯೊಬ್ಬರು ಕನ್ನಡಕ್ಕೆ ಲಾಂಚ್‌ ಆಗುತ್ತಿದ್ದಾರೆ. ಆ ನಟಿ ಆಶಾ ಭಟ್‌.

ರಾಬರ್ಟ್‌’ ಚಿತ್ರಕ್ಕೆ ಆಶಾ ಭಟ್‌ ಎಂಬ ಹೊಸ ಹುಡುಗಿ ನಾಯಕಿಯಾಗಿ ಆಯ್ಕೆಯಾ ಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಮೂಲತಃ ಭದ್ರಾವತಿ ಹುಡುಗಿ ಈಕೆ. 2014ರ ಮಿಸ್‌ ಸುಪ್ರಾ ನ್ಯಾಶನಲ್‌ ಪ್ರಶಸ್ತಿ ವಿಜೇತೆ ಯಾದ ಆಶಾ ಭಟ್‌, ಈಗಾಗಲೇ ಹಿಂದಿಯಲ್ಲಿ “ಜಂಗ್ಲಿ’ ಎಂಬ ಚಿತ್ರ ಮಾಡಿ ಕೊಂಚ ಅನುಭವ ಪಡೆದಿದ್ದಾರೆ. ಕನ್ನಡದ ಸ್ಟಾರ್‌ ನಟ ದರ್ಶನ್‌ ಜೊತೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬಿಗ್‌ ಎಂಟ್ರಿ ಕೊಡುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕನ್ನಡದ ಮೊದಲ ಚಿತ್ರ ಇದಾಗಿದ್ದು, ಕನ್ನಡದಲ್ಲೇ ನೆಲೆ ಕಾಣುವ ಆಸೆ ಈ ಕನಸು ಕಂಗಳ ಚೆಲುವೆಯದ್ದು. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತದಲ್ಲಿರುವ ಈ ಚಿತ್ರದ ಮೇಲೆ ಆಶಾ ಭಟ್‌ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಈಗಾಗಲೇ ಬಿಡುಗಡೆ ಯಾಗಿರುವ ಫ‌ಸ್ಟ್‌ಲುಕ್‌, ಟೀಸರ್‌ ಮೂಲಕ ಸಿನಿಮಾದ ನಿರೀಕ್ಷೆ ಕೂಡಾ ಹೆಚ್ಚಿದೆ. ಈ ತರಹದ ಬಹುನಿರೀಕ್ಷಿತ ಚಿತ್ರಗಳ ಮೂಲಕ ಲಾಂಚ್‌ ಆದರೆ, ಮುಂದೆ ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿ ಸುತ್ತದೆ ಎಂಬ ನಂಬಿಕೆ ಕೂಡಾ ಅವರಿಗಿದೆ.

ಆರಂಭದಲ್ಲಿ “ರಾಬರ್ಟ್‌’ ಚಿತ್ರಕ್ಕೆ ತೆಲುಗು ಮೂಲದ ಸ್ಟಾರ್‌ ನಟಿಯೊಬ್ಬಳು ನಾಯಕಿಯಾಗಲಿದ್ದಾರೆ. ತಮಿಳು ನಾಯಕಿಯೊಬ್ಬರು ಬರಲಿದ್ದಾರಂತೆ, ಹಾಗಂತೆ, ಹೀಗಂತೆ ಎಂಬ ಸುದ್ದಿಗಳೇ ಹರಡಿದವು. ಆದರೆ, ಅದ್ಯಾವುದೂ ಪಕ್ಕಾ ಆಗಲಿಲ್ಲ. ಕೊನೆಗೆ ಅಪ್ಪಟ ಕನ್ನಡತಿಯಾಗಿ “ರಾಬರ್ಟ್‌’ ತಂಡಕ್ಕೆ ಎಂಟ್ರಿಕೊಟ್ಟವರು ಆಶಾ. ಇನ್ನು, ಆಶಾ ಈಗಾಗಲೇ ಅಭಿಮಾನಿಗಳ ಜೊತೆ ತಮ್ಮ ತಮ್ಮ ಸಿನಿಮಾ ಅನಿಸಿಕೆಗಳನ್ನು ಕೂಡಾ ಹಂಚಿಕೊಳ್ಳಲಾರಂಭಿಸಿದ್ದಾರೆ. ಸಿನಿಮಾ ತಂಡದ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಹಾಕಿ, “ನಾವು ಏನು ಮಾತನಾಡುತ್ತಿರಬಹುದೆಂದು ಊಹಿಸಿ’ ಎಂದು ಟ್ಯಾಗ್‌ಲೈನ್‌ ಬೇರೆ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾ ಬಿಡುಗಡೆಗೆ ಮುಂಚೆಯೇ ಅಭಿಮಾನಿಗಳ ಜೊತೆ ಆ್ಯಕ್ಟೀವ್‌ ಆಗಿದ್ದಾರೆ ಆಶಾ ಭಟ್‌.

ಇನ್ನು ದರ್ಶನ್‌ “ರಾಬರ್ಟ್‌’ ಚಿತ್ರದಲ್ಲಿ ಹನುಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಮೋಶನ್‌ ಪೋಸ್ಟರ್‌ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಎರಡನೇ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ದರ್ಶನ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಂಜನೇಯ ಗೆಟಪ್‌ನಲ್ಲಿ ದರ್ಶನ್‌ ಕಾಣಿಸಿಕೊಂಡರೆ, ಹೆಗಲ ಮೇಲೆ “ಬಾಲ’ರಾಮನಾಗಿ ಮುಂಬೈ ಹುಡುಗ ಕಾಣಿಸಿಕೊಂಡಿದ್ದಾನೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

suchitra-tdy-9

ಮನರೂಪ ಚಿತ್ರಕ್ಕೆಪ್ರಶಸ್ತಿ ಖುಷಿ

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

suchitra-tdy-07

ಡೈರೆಕ್ಟರ್ ಸ್ಪೆಷಲ್‌! : ನಿರ್ದೇಶಕರ ಹೊಸ ಯೋಚನೆಗಳೇನು ಗೊತ್ತಾ?

suchitra-tdy-6

ಮೀನಾ ಬಜಾರ್‌ ನಿರ್ದೇಶಕರ ಕಾಫಿ ಬ್ರೇಕ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ