ಹಾರರ್ ‘ಟೆಡ್ಡಿ ಬೇರ್’
Team Udayavani, Jul 9, 2021, 4:59 PM IST
ಹೊಸಬರ “ಟೆಡ್ಡಿ ಬೇರ್’ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ಭರತ್ ಕುಮಾರ್- ನವೀನ್ ರೆಗಟ್ಟಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಲೋಕೇಶ್.ಬಿ ಈ ಚಿತ್ರದ ನಿರ್ದೇಶಕರು.
ಚಿತ್ರದ ಕಥೆ ಬಗ್ಗೆ ಮಾತನಾಡುವ ನಿರ್ದೇಶಕರು, “ನವ ದಂಪತಿಗಳು ಮದುವೆಯಾದ ಸಂದರ್ಭದಲ್ಲಿ ಹೊಸ ಮನೆಗೆ ಹೋದಾಗ, ವಿಶಿಷ್ಟ, ವಿಚಿತ್ರ ಹಾಗೂ ಭಯಾನಕವಾದ ಸನ್ನಿವೇಶಗಳು ಎದುರಾಗುತ್ತದೆ. ಅಲ್ಲಿ ನಡೆಯುವಂತ ಘಟನೆಗಳು ಯಾವ ರೀತಿ ಇರುತ್ತದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ’ ಎನ್ನುವುದು ನಿರ್ದೇಶಕರ ಮಾತು.
ಬೆಂಗಳೂರು, ಮಂಗಳೂರು, ಕುಶಾಲನಗರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ ದಲ್ಲಿ ಭಾರ್ಗವ್ ನಾಯಕ. ಭಗವದ್ಗೀತೆ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದು, ಸೈಕಾಲಜಿ ಕೌನ್ಸಿಲರ್ ಪಾತ್ರದಲ್ಲಿ ನಟಿಸಿದ್ದಾರಂತೆ. ಲಿಖೀತಾ ಹಾಗೂ ಶೈಲಜಾ ಸಿಂಹ ನಾಯಕಿಯರು. ಉಳಿದಂತೆ ನಿಖೀಲ್, ವಿಘ್ನೇಶ್, ನವೀನ್ ಪಾಟೀಲ್, ಅಂಜಲಿ, ಅರವಿಂದ್ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಕೃಷ್ಣಸಾರಥಿ-ನಿಖೀಲ್ ಛಾಯಾಗ್ರಹಣ, ಕುಮಾರ್-ನಾಗರಾಜ್ ಸಂಕಲನ, ಲೋಕೇಶ್-ಅಜಿತ್ -ಭಾರ್ಗವ ಸಂಭಾಷಣೆ ಇದೆ. ಸಿರಿ ಮ್ಯೂಸಿಕ್ ಸಂಸ್ಥೆಯು ಆಡಿಯೋ ಸಿಡಿಯನ್ನು ಹೊರ ತಂದಿದೆ.