ಹುಲಿ ಹೈದ ಪ್ಯಾಟೇಗ್‌ ಬಂದ

Team Udayavani, Mar 1, 2019, 12:30 AM IST

ಕನ್ನಡದಲ್ಲಿ ಹೀರೋಗಳ ಅಭಿಮಾನಿಗಳಾಗಿ ಈಗಾಗಲೇ ಹಲವು ನಟರ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಹುಲಿ ಹೈದ’ ಎಂಬ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಬಹುತೇಕ ಯುವಕರೇ ಸೇರಿ ಮಾಡಿರುವ ಚಿತ್ರವಿದು. ಈ “ಹುಲಿ ಹೈದ’ ಚಿತ್ರಕ್ಕೆ ಫ್ಯಾನ್‌ ಆಫ್ ಟೈಗರ್‌’ ಎಂಬ ಅಡಿಬರಹವಿದೆ. ಅಲ್ಲಿಗೆ ಇದೊಂದು ಮಾಸ್‌ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರದಲ್ಲಿ ವಿಕ್ರಮ್‌ ರಾಜ್‌ ಹೀರೋ. ಬಳ್ಳಾರಿ ಮೂಲದ ಇವರಿಗೆ ಇದು ಮೊದಲ ಸಿನಿಮಾ. ಅವರಿಲ್ಲಿ ಟೈಗರ್‌ ಪ್ರಭಾಕರ್‌ ಅವರ ಅಭಿಮಾನಿಯಾಗಿ ನಟಿಸಿದ್ದಾರೆ. ಅವರ ಚಿತ್ರಗಳನ್ನು ನೋಡಿ ಸ್ಫೂರ್ತಿಗೊಂಡು, ಹೇಗೆ ತನ್ನ ಬದುಕಿನಲ್ಲಿ ಅಂದುಕೊಂಡಂತಹ ಗುರಿ ತಲುಪುತ್ತಾನೆ ಎಂಬುದು ಕಥೆ. ಅಂದಹಾಗೆ, ಇದೊಂದು ತ್ರಿಕೋನ ಪ್ರೇಮಕತೆ ಹೊಂದಿರುವ ಚಿತ್ರ. ನಾಯಕ ವಿಕ್ರಮ್‌ರಾಜ್‌ ಅವರಿಗೆ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇದೆಯಂತೆ.

ಚಿತ್ರವನ್ನು ಸುಪ್ರೀತ್‌ ಕೂರ್ಗ್‌ ನಿರ್ದೇಶನ ಮಾಡಿದ್ದಾರೆ. “ತುಮಕೂರು, ಶಿವಮೊಗ್ಗ, ಬಳ್ಳಾರಿ, ಹರಪ್ಪನಹಳ್ಳಿ, ಬೆಂಗಳೂರು ಮತ್ತು ಹೊಸಪೇಟೆ ಸುತ್ತಮುತ್ತ ಸುಮಾರು ಇಪ್ಪತ್ತೆರೆಡು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯಕ್ಕೆ ಬಿಡುಗಡೆ ಕೆಲಸ ಜೋರಾಗಿ ನಡೆಯುತ್ತಿದೆ’ ಎಂಬುದು ನಿರ್ದೇಶಕರ ಮಾತು. 

ಕೆ.ವಿ.ನಾಯ್ಕ ಚಿತ್ರದ ನಿರ್ಮಾಪಕರು. ಅಪೂರ್ವ ಮತ್ತು ಸೋನಚೌಹಾಣ್‌ ನಾಯಕಿಯರಾಗಿ ನಟಿಸಿದ್ದಾರೆ. ಅಪೂರ್ವ ಅವರಿಲ್ಲಿ ಅನಾಥೆ ಪಾತ್ರ ನಿರ್ವಹಿಸಿದ್ದಾರಂತೆ. ಇವರೊಂದಿಗೆ ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಮಂಜುನಾಯ್ಕ ಅವರಿಲ್ಲಿ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. 

ಕಾರ್ತಿಕ್‌ ವೆಂಕಟೇಶ್‌ ಅವರಿಲ್ಲಿ ನಾಲ್ಕು ಗೀತೆಗಳಿಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ರಾಕೇಶ್‌, ಸಾಗರ್‌,ನಾಗು ಅಣಸಿ ಛಾಯಾಗ್ರಹಣವಿದೆ. ಚೇತನ್‌ಕೆ.ಸಿ. ಅವರು ಮಾತುಗಳನ್ನು ಪೋಣಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಅನಿರುದ್‌ª ಅವರು,  ಗಸಗಸೆ, ಮಾವು, ಸಂಪಿಗೆ ಸಸಿಗಳಿಗೆ ನೀರು ಹಾಕುವ ಮೂಲಕ ಆಡಿಯೋ ಸಿಡಿಯನ್ನು ಬಿಡುಗಡೆ  ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 

ಈ ವೇಳೆ ನಿರ್ಮಾಪಕ ರಾಜಶೇಖರ್‌, ಕೆ.ಸಿ.ಸಿಂಗ್‌, ಹಿರಿಯ ವಕೀಲರಾದ ಮಹೇಶ್‌ ಮುಂತಾದವರು ಇದ್ದರು. ಈ ಚಿತ್ರದ ಹಾಡುಗಳನ್ನು ಜಗದೀಶ್‌ ಅವರ ಸಿನಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರತರಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ