ನಾನು ಟೆರರಿಸ್ಟ್‌ ಅಲ್ಲ


Team Udayavani, Oct 5, 2018, 6:00 AM IST

s-24.jpg

ಇಲ್ಲಿ ಜಾತಿ ಸಂಘರ್ಷ ಇಲ್ಲ. ಧರ್ಮಗಳಿಗೆ ಧಕ್ಕೆ ಆಗೋ ಅಂಶಗಳೂ ಇಲ್ಲ. ರೇಷ್ಮಾ ಎಂಬ ಮುಸ್ಲಿಂ ಪಾತ್ರ ಇದ್ದಾಕ್ಷಣ, ನೂರೆಂಟು ಅರ್ಥಗಳು ಬರುತ್ತವೆ. “ಟೆರರಿಸ್ಟ್‌’ಗೂ ರೇಷ್ಮಾ ಎಂಬ ಮುಸ್ಲಿಂ ಹುಡುಗಿಗೂ ಏನು ಸಂಬಂಧ ಎಂಬುದೇ ತಿರುಳು.

ರಾಗಿಣಿ ಅಂದರೆ ಪಕ್ಕಾ ಗ್ಲಾಮರ್‌ ಹುಡುಗಿ. ಅಷ್ಟೇ ಮಾಸ್‌ ಲುಕ್‌ ಇರುವ ನಟಿ ಎಂಬೆಲ್ಲಾ ಮಾತುಗಳಿವೆ. ಆದರೆ, ಅವರು ಇದ್ದಕ್ಕಿದ್ದಂತೆ “ಟೆರರಿಸ್ಟ್‌’ ಆಗಿದ್ದೇಕೆ? ಈ ಪ್ರಶ್ನೆಗೆ ಉತ್ತರಿಸುವ ರಾಗಿಣಿ, “ಮೊದಲು ಈ ಚಿತ್ರ ಒಪ್ಪೋಕೆ ಕಾರಣ, ಕಥೆ ಮತ್ತು ಪಾತ್ರ. ಯಾವುದೇ ಒಬ್ಬ ನಟ ಅಥವಾ ನಟಿಗೆ ಹೊಸಬಗೆಯ ಪಾತ್ರ ಮಾಡಬೇಕೆಂಬ ಆಸೆ ಇದ್ದೇ ಇರುತ್ತೆ. ಅಂತಹ ಹೊಸ ಪಾತ್ರ ಸಿಕ್ಕಿದ್ದರಿಂದ ಒಪ್ಪಿದ್ದೇನೆ. ನನ್ನ ಕೆರಿಯರ್‌ನಲ್ಲಿ ಇದುವರೆಗೆ ಎಲ್ಲಾ ತರಹದ ಪಾತ್ರ ಮಾಡಿದ್ದೇನೆ. ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಅದೀಗ “ಟೆರರಿಸ್ಟ್‌’ ಮೂಲಕ ಈಡೇರಿದೆ. ಇದೇ ಮೊದಲ ಸಲ ನಾನು ರೇಷ್ಮಾ ಎಂಬ ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದೇನೆ. ಈ ಚಿತ್ರದ ವಿಶೇಷವೆಂದರೆ, ಇಲ್ಲಿ ಹೆಚ್ಚು ಮಾತುಗಳೇ ಇಲ್ಲ. ನಿರ್ದೇಶಕ ಪಿ.ಸಿ.ಶೇಖರ್‌ ಹೊಸತನದ ಕಥೆಗೊಂದು ಭಾವನಾತ್ಮಕ ಸ್ಪರ್ಶ ಕೊಟ್ಟಿದ್ದಾರೆ. ನನಗೆ ಸಿಕ್ಕ ಹೊಸ ಜಾನರ್‌ನ ಚಿತ್ರವಿದು. ಇಲ್ಲಿ ಭಯ, ಖುಷಿ, ಎಮೋಷನ್ಸ್‌ ಮತ್ತು ಭಾವನೆಗಳೇ ಮಾತಾಡುತ್ತವೆ. ಇಂತಹ ಚಿತ್ರ­ದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಮೊದಲ­ನೆ­ಯದು, ಪಾತ್ರಕ್ಕೆ ನ್ಯಾಯ ಸಲ್ಲಿಸೋದು, ಎರಡನೆಯದು ಎಲ್ಲವನ್ನೂ ಭಾವನೆಗಳ ಮೂಲಕವೇ ಹೇಳುವುದು.

ಮೂರನೆಯದು ಯಾವುದೇ ಧರ್ಮ, ಜಾತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳೋದು.  “ಟೆರರಿಸ್ಟ್‌’ ಅಂದರೆ ವ್ಯಕ್ತಿ ಚಿತ್ರಣ ಬರುತ್ತೆ. ಇಲ್ಲಿ “ಟೆರರಿಸ್ಟ್‌’ ಯಾರೆಂಬುದೇ ಇಂಟ್ರೆಸ್ಟ್‌. “ಟೆರರಿಸ್ಟ್‌’ ಅಂದಾಕ್ಷಣ, ಯಾವುದಾದರೊಂದು ಧರ್ಮ, ಜಾತಿ ನೆನಪಾಗಬಹುದು. ಅದನ್ನೇನಾದರೂ ಹೈಲೆಟ್‌ ಮಾಡಲಾಗಿದೆಯಾ ಎಂಬ ಸಂದೇಹ ಬರೋದು ಸಹಜ. ಆ ಸಂದೇಹಕ್ಕೂ ರಾಗಿಣಿ ಉತ್ತರಿಸಿದ್ದಾರೆ.  “ಆ ರೀತಿಯ ಕಲ್ಪನೆ ಬೇಡ. ಇಲ್ಲಿ ಜಾತಿ ಸಂಘರ್ಷವಿಲ್ಲ. ಧರ್ಮಗಳಿಗೆ ಧಕ್ಕೆಯಾಗುವ ಅಂಶಗಳಿಲ್ಲ. ರೇಷ್ಮಾ ಎಂಬ ಮುಸ್ಲಿಂ ಪಾತ್ರ ಇದ್ದಾಕ್ಷಣ, ನೂರೆಂಟು ಅರ್ಥ ಬರುತ್ತೆ. “ಟೆರರಿಸ್ಟ್‌’ಗೂ ರೇಷ್ಮಾ ಎಂಬ ಮುಸ್ಲಿಂ ಹುಡುಗಿಗೂ ಏನು ಸಂಬಂಧ ಎಂಬುದೇ ಕಥೆ  ಇಲ್ಲಿ ರೇಷ್ಮಾ ಎಂಬ ಮುಗ್ಧ ಹುಡುಗಿಯ ಕಣ್ಣೀರಿದೆ, ಅವಳ ತುಟಿಯಂಚಿನಲ್ಲೊಂದಷ್ಟು ನಗುವಿದೆ, ಭಾವುಕತೆ ಇದೆ. ಒಂದು ಮನರಂಜನೆ ಜೊತೆಗೆ ಗಂಭೀರ ವಿಷಯ   ಹೈಲೆಟ್‌. ಇನ್ನು, ಇಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆಯೇ ಚಿತ್ರೀಕರಣ ಮಾಡಲಾಗಿದೆ. ಆ ಸಮಸ್ಯೆ ಎಷ್ಟಿತ್ತು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇಲ್ಲಿ ರೇಷ್ಮಾ  ಅಮಾಯಕಿನಾ, ಭ್ರಷ್ಟರ ವಿರುದ್ಧ ಧ್ವನಿ ಎತ್ತುತ್ತಾಳಾ? ಇದಕ್ಕೆ ಉತ್ತರ “ಟೆರರಿಸ್ಟ್‌’ ವೀಕ್ಷಣೆ’ ಎಂಬುದು ರಾಗಿಣಿ ಮಾತು.

“ಟೆರರಿಸ್ಟ್‌’ಗೂ ರೇಷ್ಮಾಗೂ ಏನು ಸಂಬಂಧ ಎಂದು ನೀವು ಕೇಳಬಹುದು. ರಾಗಿಣಿ ಹೇಳುವಂತೆ, “ಸಾಮಾನ್ಯವಾಗಿ “ಟೆರರಿಸ್ಟ್‌’ ಅಂದರೆ, ಹುಡುಗ ನೆನಪಾಗಬಹುದು. ಆದರೆ, ಇಲ್ಲಿ “ಟೆರರಿಸ್ಟ್‌’ ಅಂದರೆ, ಹುಡುಗಿ ಛಾಯೆ ಕಾಣಸಿಗುತ್ತೆ. ಅದೇ ಇಲ್ಲಿರುವ ವಿಶೇಷ.  ಒಂದು ವ್ಯವಸ್ಥೆಯಲ್ಲಿ ಏನೆಲ್ಲಾ ಆಗಿಹೋಗುತ್ತೆ ಅನ್ನುವುದನ್ನು ಸೂಕ್ಷ್ಮ ವಿಷಯಗಳ ಮೂಲಕ ಹೇಳಲಾದ ಚಿತ್ರವಿದು’ ಎನ್ನುತ್ತಾರೆ ರಾಗಿಣಿ. 

 ವಿಭ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.