ಮಾಲ್ಗುಡಿಯ ನೆನಪಲ್ಲಿ

ವಿಜಯ ರಾಘವೇಂದ್ರ ಈಗ ಸೀನಿಯರ್‌ ಸಿಟಿಜನ್‌

Team Udayavani, Oct 25, 2019, 5:42 AM IST

“ಮಾಲ್ಗುಡಿ ಡೇಸ್‌’ ಎಂದರೆ ತಟ್ಟನೆ ನೆನಪಾಗೋದು ಶಂಕರ್‌ ನಾಗ್‌. “ಮಾಲ್ಗುಡಿ ಡೇಸ್‌’ ಅನ್ನು ಶಂಕರ್‌ ನಾಗ್‌ ಧಾರಾವಾಹಿ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದರು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದೆ. ಹಾಗಂತ ಶಂಕರ್‌ನಾಗ್‌ ಅವರ “ಮಾಲ್ಗುಡಿ ಡೇಸ್‌’ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ವಿಜಯ ರಾಘವೇಂದ್ರ ನಾಯಕರಾಗಿರುವ ಚಿತ್ರ. ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರದ ಮೊದಲ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಜಗ್ಗೇಶ್‌ ಪೋಸ್ಟರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.

“ಮಾಲ್ಗುಡಿ ಡೇಸ್‌’ ಚಿತ್ರವನ್ನು ಕಿಶೋರ್‌ ಮೂಡುಬಿದ್ರೆ ನಿರ್ದೇಶನ ಮಾಡಿದ್ದಾರೆ. ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಥೆಯನ್ನು ಇಲ್ಲಿ ಹೇಳಿದ್ದಾರಂತೆ. ಮುಖ್ಯವಾಗಿ ಈ ಚಿತ್ರ ನೆನಪುಗಳ ಸುತ್ತ ಸಾಗುತ್ತದೆಯಂತೆ. ಚಿತ್ರ ನೋಡುತ್ತಿದ್ದಂತೆ ಇದು ತಮ್ಮದೇ ಕಥೆಯೇನೋ ಎಂದು ಪ್ರೇಕ್ಷಕರಿಗೆ ಭಾಸವಾಗುತ್ತದೆ ಎನ್ನುವುದು ನಿರ್ದೇಶಕರ ಮಾತು. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು 75 ವರ್ಷ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷ ಮೇಕಪ್‌ ಮಾಡಲಾಗಿದೆ.

ವಿಜಯ ರಾಘವೇಂದ್ರ ಅವರ ಗೆಟಪ್‌ ಹಾಗೂ ಮೇಕಪ್‌ ಬಗ್ಗೆ ಮಾತನಾಡುವ ಕಿಶೋರ್‌, “ಬಹುತೇಕ ಇಡೀ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಈ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಧ್ಯೆ ಒಂದೆರಡು ಕಡೆ ಬೇರೆ ಗೆಟಪ್‌ ಇರುತ್ತದೆ. ಅದು ಕೂಡಾ ವಿಜಯ ರಾಘವೇಂದ್ರ ಅವರ ಒರಿಜಿನಲ್‌ ಗೆಟಪ್‌ ಅಲ್ಲ. ಇನ್ನು, ಈಗ ಬಿಟ್ಟಿರುವ ಪೋಸ್ಟರ್‌ನಲ್ಲಿರುವ ಮೇಕಪ್‌ಗೆ ಪ್ರಾಸ್ಥೆಟಿಕ್‌ ಮೇಕಪ್‌ ಎನ್ನುತ್ತಾರೆ. ಭಾರತದಲ್ಲಿ ಈ ತರಹದ ಮೇಕಪ್‌ ಮಾಡುವವರ ಸಂಖ್ಯೆ ವಿರಳ. ಅದೇ ಕಾರಣದಿಂದ ನಾವು ಸಾಕಷ್ಟು ಮಂದಿ ವಿದೇಶಿ ಮೇಕಪ್‌ಮ್ಯಾನ್‌ಗಳ ಜೊತೆ ಚರ್ಚೆ ಮಾಡಿದೆವು. ಹೀಗಿರುವಾಗ ನಮಗೆ ಕೇರಳ ಮೂಲದ ರೋಶನ್‌ ಬಗ್ಗೆ ಗೊತ್ತಾಯಿತು. ಅವರು ಕೂಡಾ ಲಂಡನ್‌ನಲ್ಲಿ ಈ ಮೇಕಪ್‌ ಕಲಿತು ಬಂದವರು. ಅವರಿಂದ ಈ ಮೇಕಪ್‌ ಮಾಡಿಸ­ಲಾಗಿದೆ. ಪ್ರತಿ ದಿನ ಈ ಮೇಕಪ್‌ ಹಾಕಲು 4 ಗಂಟೆ ಸಮಯ ಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆಯಾ ವ್ಯಕ್ತಿಯ ಮುಖಕ್ಕೆ ಹೊಂದುವ ಮೇಕಪ್‌ ಹಾಗೂ ಮೋಲ್ಡ್‌ಗೆ ಒಂದು ತಿಂಗಳ ತಯಾರಿ ಬೇಕು. ಈ ಮೇಕಪ್‌ ಹಾಕಿದ ನಂತರ ತುಂಬಾ ಎಚ್ಚರದಿಂದಿರಬೇಕು. ಹೆಚ್ಚು ಬೆವರಬಾರದು, ಊಟ-ತಿಂಡಿ ಮಾಡುವಾಗಲೂ ಎಚ್ಚರವಹಿಸಬೇಕು’ ಎಂದು ವಿಜಯ ರಾಘವೇಂದ್ರ ಅವರ ಹೊಸ ಗೆಟಪ್‌ ಬಗ್ಗೆ ಹೇಳುತ್ತಾರೆ ಕಿಶೋರ್‌.

ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆ­ಹೊನ್ನೂರು, ಕಳಸ, ಶೃಂಗೇರಿ, ಆಗುಂಬೆ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ರತ್ನಾಕರ್‌ ಕಾಮತ್‌ ನಿರ್ಮಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • "ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ... ಇಲ್ಲೂ ಅದೆಲ್ಲವನ್ನೂ ನೋಡ­ಬಹುದು. ಈ ಬಾರಿ "ಗಾಳಿಪಟ-2'ನ್ನು...

  • "ಇಷ್ಟು ದಿನ ನನಗೆ ಸನ್ನಿವೇಶ, ಸಂದರ್ಭಗಳೇ ನನಗೆ ವಿಲನ್‌ ಆಗಿದ್ದವು. ಆದರೆ, ಮೊದಲ ಬಾರಿಗೆ ಚಿತ್ರದಲ್ಲಿ ಒಬ್ಬ ಖಡಕ್‌ ವಿಲನ್‌ ಇದ್ದಾನೆ ಮತ್ತು ಆತನ ಜೊತೆ ಹೊಡೆದಾಡುತ್ತೇನೆ...

  • ಚಿತ್ರರಂಗಕ್ಕೂ, ಗೋವಿಂದನಿಗೂ ಮೊದಲಿನಿಂದಲೂ ಒಂಥರಾ ಬಿಡಿಸಲಾಗದ ನಂಟು. ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು, ಸ್ಟಾರ್ಗೆ ಗೋವಿಂದನೇ ಫೇವರೆಟ್‌ ಗಾಡ್‌. ಇನ್ನು...

  • ಕೆಲವರಿಗೆ ಪ್ರತಿಭೆ ಇರುತ್ತೆ. ಅವಕಾಶ ಇರಲ್ಲ. ಇನ್ನೂ ಕೆಲವರಿಗೆ ಅವಕಾಶ ಸಿಕ್ಕರೂ ಪ್ರತಿಭೆ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲೊಂದು ಚಿತ್ರತಂಡ...

  • "ಆ ರಾಜುನೇ ಬೇರೆ ಇಲ್ಲಿ ಕಾಣುವ ರಾಜುನೇ ಬೇರೆ..' - ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಮಂಜುನಾಥ್‌ ವಿಶ್ವಕರ್ಮ. ಅವರು ಹೇಳಿದ್ದು "ರಾಜು ಜೇಮ್ಸ್‌ ಬಾಂಡ್‌' ಬಗ್ಗೆ....

ಹೊಸ ಸೇರ್ಪಡೆ