ಸಾಹಸಸಿಂಹನ ನೆನಪಲ್ಲಿ “ಪಡ್ಡೆಹುಲಿ’ ಹಾಡು


Team Udayavani, Feb 7, 2019, 4:28 PM IST

25.jpg

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಈಗ “ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡಲು ತೆರೆಮರೆಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದ ಕೆಲಸಗಳಲ್ಲಿ ನಿರತವಾಗಿರುವ “ಪಡ್ಡೆಹುಲಿ’ ಹಾಡೊಂದು ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 

ಇನ್ನು ಚಿತ್ರದಲ್ಲಿ ನಾಯಕ ಶ್ರೇಯಸ್‌ ಸಾಹಸಸಿಂಹ ವಿಷ್ಣುವರ್ಧನ್‌ ಅವರನ್ನು ಫಾಲೋ ಮಾಡುವ ಅವರ ಅಪ್ಪಟ ಅಭಿಮಾನಿ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ “ಪಡ್ಡೆಹುಲಿ’ ಚಿತ್ರದ ಹಾಡನ್ನು ಮೊದಲಿಗೆ ವಿಷ್ಣುವರ್ಧನ್‌ ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ತೋರಿಸಲಾಯಿತು. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ನಟ ದ್ವಾರಕೀಶ್‌, ಶಿವರಾಮ್‌, ನಿರ್ದೇಶಕ ನಾಗಣ್ಣ, ರವಿ ಶ್ರೀವತ್ಸ, ಗೀತ ಸಾಹಿತಿ ಕೆ. ಕಲ್ಯಾಣ್‌, ಡಾ. ವಿ. ನಾಗೇಂದ್ರ ಪ್ರಸಾದ್‌ ಸೇರಿದಂತೆ ಹಲವು ಗಣ್ಯರು ಹಾಜರಿದ್ದು, ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ “ಪಡ್ಡೆಹುಲಿ’ಯ ಹಾಡನ್ನು ವೀಕ್ಷಿಸಿದರು. 

ಇದೇ ವೇಳೆ ಮಾತನಾಡಿದ ದ್ವಾರಕೀಶ್‌, “ನಾನು ವಿಷ್ಣುವನ್ನು ನೆನೆಯದ ದಿನವೇ ಇಲ್ಲ. ಆಗಾಗ್ಗೆ ಕನಸಿನಲ್ಲಿ ಬರುತ್ತಾನೆ. ಕನಸಿನಲ್ಲೂ ಸಿನಿಮಾ ಬಗ್ಗೆಯೇ ಚರ್ಚಿಸುತ್ತಾನೆ. ವಿಷ್ಣು ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರ ನಟ. ಈ ದ್ವಾರಕೀಶ್‌ ಸಾಧನೆಗೆ ಅವನೇ ಕಾರಣ. ವಿಷ್ಣು ಜೊತೆ 19 ಸಿನಿಮಾ ಮಾಡಿದ್ದೇನೆ. ಮದ್ರಾಸಿನಲ್ಲಿ “ನಾಗರಹಾವು’ ಸಿನಿಮಾದ ಮೊದಲ ಶೋ ನೋಡಿದಾಗ ಪುಟ್ಟಣ್ಣ, ಎನ್‌. ವೀರಸ್ವಾಮಿ, ವಿಷ್ಣು ಕೂಡಾ ಜೊತೆಗಿದ್ದರು’ ಎಂದು ವಿಷ್ಣುವನ್ನು ನೆನೆದು ದ್ವಾರಕೀಶ್‌ ಭಾವುಕರಾದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಶಿವರಾಮ್‌, “ನಾನು ವಿಷ್ಣು ಆಗಮನ ಹಾಗೂ ನಿರ್ಗಮನ ನೋಡಿರುವವನು. “ನಾಗರಹಾವು’ ಸಿನಿಮಾ ಸಮಯದಲ್ಲಿ ಅವರಿಗೆ ಸಂಭಾಷಣೆ ಹೇಳಿಕೊಟ್ಟಿ¨ªೆ. ನಂತರ ಅವರು ಯಾರೂ ಊಹಿಸದ ಮಟ್ಟಿಗೆ ದೊಡ್ಡ ನಟನಾಗಿ ಬೆಳೆದರು’ ಎಂದು ವಿಷ್ಣುವರ್ಧನ್‌ ಜೊತೆಗಿನ ಒಡನಾಟವನ್ನು ತೆರೆದಿಟ್ಟರು. 

“ಪಡ್ಡೆಹುಲಿ’ ಚಿತ್ರದಲ್ಲಿ ಒಟ್ಟು ಚಿತ್ರದಲ್ಲಿ 9 ಹಾಡುಗಳಿದ್ದು, ಕಿರಿಕ್‌ ಪಾರ್ಟಿ ಖ್ಯಾತಿಯ ಅಜನೀಶ್‌ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಒಂದು ಹಾಡು ವಿಷ್ಣುವರ್ಧನ್‌ ಕುರಿತಾಗಿದ್ದು, ವಿಷ್ಣು ಚಿತ್ರದ ಟೈಟಲ…ಗಳೇ ಈ ಹಾಡಿನಲ್ಲಿ ಸಾಹಿತ್ಯವಾಗಿದೆ. ಮತ್ತೂಂದು ಹೀರೋ ಇಂಟ್ರೊಡಕ್ಷನ್‌ ಸಾಂಗ್‌ ಆಗಿದೆ. ಎರಡೂ ಹಾಡುಗಳಲ್ಲಿ ವಿಷ್ಣುದಾದ ತೆರೆ ಮೇಲೆ ಬಂದಿರುವುದು ವಿಶೇಷ. ಹೀರೋ ಇಂಟ್ರೊಡಕ್ಷನ್‌ ಹಾಡನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಲಾಗಿದ್ದು, ವಿಷ್ಣುವರ್ಧನ್‌ ಅಭಿನಯದ “ನಾಗರಹಾವು’ ಚಿತ್ರವನ್ನು ನೆನಪಿಸುವಂತಿದೆ. ಈ ಹಾಡನ್ನು ಡಾ. ವಿ ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ.

ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು “ಪಡ್ಡೆಹುಲಿ’ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರತಂಡ, ಹೊಸ ನಾಯಕನನ್ನು ಪರಿಚಯಿಸಲು ಏನೆಲ್ಲಾ ಕಮರ್ಷಿಯಲ್‌ ಕಂಟೆಟ್‌ ಬೇಕೊ ಅವೆಲ್ಲವೂ ಇದೆ. ಜಿಲ್ಲೆಯೊಂದಕ್ಕೆ ಸಂಬಂಧಿಸಿದಂತೆ ನಡೆಯುವ ಕಥೆ ಇದಾಗಿದ್ದು ಬಹುತೇಕ ಚಿತ್ರದುರ್ಗದಲ್ಲಿ ಚಿತ್ರೀಕರಿಸಲಾಗಿದೆ ಎಂದಿದೆ. ಈ ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ನಿಶ್ವಿ‌ಕಾ ನಾಯ್ಡು ಜೋಡಿಯಾಗಿದ್ದು, ಕ್ರೇಜಿಸ್ಟಾರ್‌ ರವಿಚಂದ್ರನ್‌ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡದ ಪ್ಲ್ರಾನ್‌ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮಾರ್ಚ್‌ ವೇಳೆಗೆ “ಪಡ್ಡೆಹುಲಿ’ ಥಿಯೇಟರ್‌ನಲ್ಲಿ ಘರ್ಜಿಸಲಿದೆ. 

ಟಾಪ್ ನ್ಯೂಸ್

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

6dharmasthala

ಧರ್ಮಸ್ಥಳದ ಧರ್ಮಾಧಿಕಾರಿ ಕಾರ್ಯ ಮಾದರಿ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

cracker

ಹೊರಬೀಳದ ಆದೇಶ, ಮುಗಿಯದ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.