ಕೈ ಹಿಡಿಯೋ ನಿರೀಕ್ಷೆಯಲ್ಲಿ ಕಾಲಚಕ್ರ

ವಸಿಷ್ಠಗೆ ಸಿಕ್ಕ ವಿಶಿಷ್ಟ ಪಾತ್ರ

Team Udayavani, Oct 25, 2019, 5:31 AM IST

ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳನಟನಾಗಿ ಗುರುತಿಸಿಕೊಂಡಿದ್ದ ವಸಿಷ್ಠ ಸಿಂಹ ಈಗ ಪೂರ್ಣ ಪ್ರಮಾಣದ ನಾಯಕ ನಟನಾಗಿ ಒಂದರ ಹಿಂದೊಂದು ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ವಸಿಷ್ಟ ಅಭಿನಯಿಸುತ್ತಿರುವ “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ಟೈಟಲ್‌ ಮತ್ತು ಫ‌ಸ್ಟ್‌

ಲುಕ್‌ ಅದ್ಧೂರಿಯಾಗಿ ಹೊರಬಿದ್ದಿತ್ತು. ಈಗ ವಸಿಷ್ಠ ಅಭಿನಯಿಸುತ್ತಿರುವ ಮತ್ತೂಂದು ಚಿತ್ರ “ಕಾಲಚಕ್ರ’ದ ಟೀಸರ್‌ ಹೊರಬಂದಿದೆ. ಈಗಾಗಲೇ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ಕಾಲಚಕ್ರ’ ಚಿತ್ರತಂಡ ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದರ ಮೊದಲ ಹಂತವಾಗಿ ನಟ ವಸಿಷ್ಠ ಸಿಂಹ ಬರ್ತ್‌ಡೇ ಸಂದರ್ಭದಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ನಟ ಸುದೀಪ್‌ ಮುಖ್ಯ ಅತಿಥಿಯಾಗಿ ಆಗಮಿಸಿ “ಕಾಲಚಕ್ರ’ ಚಿತ್ರದ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಸುದೀಪ್‌, “ಒಬ್ಬ ಕಲಾವಿದನನ್ನು ನೋಡಿದಾಗ ಸಿಗುವ ಹೆಮ್ಮೆ ಏನನ್ನು ನೋಡಿದರೂ ಸಿಗೋದಿಲ್ಲ. ವಸಿಷ್ಠ ಸಿಂಹ ಬುದ್ಧಿವಂತ ನಟ. ಕಮರ್ಷಿಯಲ್‌ ಅಂಶಗಳನ್ನು ಇಟ್ಟುಕೊಂಡು ಗೆಲ್ಲುವ ಚಿತ್ರ ಕೊಡಬೇಕು. ಇದರ ಮಧ್ಯೆ ಕಲಾವಿದ ಅಂತ ಉಳಿಸಿಕೊಳ್ಳುವ ಪ್ರಯತ್ನ ಕೂಡ ಮಾಡಬೇಕು. “ಕಾಲಚಕ್ರ’ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತದೆ. ಈ ಚಿತ್ರ ನೋಡಲು ನಾನು ಕಾತುರನಾಗಿದ್ದೇನೆ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಸುಮಂತ್‌ ಕ್ರಾಂತಿ, “ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಪ್ರತಿಯೊಬ್ಬ ನೋಡುಗನಿಗೂ ಪ್ರತಿಯೊಂದು ಪಾತ್ರವು ತನಗೆ ಸಂಬಂಧಿಸಿದ್ದು ಅನಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಘಟನೆಗಳು ನಡೆಯುತ್ತವೆ. ಅದೆಲ್ಲವನ್ನು ಎದುರಿಸಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರಿ ಹೋಗಿರುತ್ತೆ. ಅಂತಹ ಘಟನೆ ನಡೆದಾಗ ಮನುಷ್ಯನಾದವನು ಹೇಗೆ ಸ್ಪಂದಿಸುತ್ತಾನೆ. ಆ ಸಂದರ್ಭದಲ್ಲಿ ಯಾವ ರೀತಿ ಎದುರಿಸುತ್ತಾನೆ. ಇದೆಲ್ಲವನ್ನು ಪ್ರಸಕ್ತ ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಇನ್ನು “ಕಾಲಚಕ್ರ’ ಚಿತ್ರದಲ್ಲಿ ಮೂವತ್ತೈದು ಮತ್ತು ಅರವತ್ತು ದಾಟಿದ ವಯಸ್ಸಿನ ಎರಡು ಬೇರೆ ಬೇರೆ ಆಯಾಮದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂಬ ಮಾಹಿತಿ ನೀಡಿದರು ನಟ ವಸಿಷ್ಟ ಸಿಂಹ. ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ನಾಯಕಿ ರಕ್ಷಾ, ಸಂಗೀತ ನಿರ್ದೇಶಕ ಗುರುಕಿರಣ್‌, ಚಿತ್ರ ಸಾಹಿತಿ ಡಾ. ನಾಗೇಂದ್ರ ಪ್ರಸಾದ್‌, ಸಂತೋಷ್‌ ನಾಯಕ್‌ ಮುಂತಾದವರು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಗಾಳಿಪಟ ಅಂದ ಕೂಡಲೇ ಮೊದಲು ನೆನಪಿಗೆ ಬರೋದು ಆ ಹಸಿರು, ಮಂಜು, ಪ್ರೀತಿ, ಒಂದಷ್ಟು ಹುಡುಕಾಟ, ಒಂದಷ್ಟು ತಮಾಷೆ, ಹೀಗೆ... ಇಲ್ಲೂ ಅದೆಲ್ಲವನ್ನೂ ನೋಡ­ಬಹುದು. ಈ ಬಾರಿ "ಗಾಳಿಪಟ-2'ನ್ನು...

  • "ಇಷ್ಟು ದಿನ ನನಗೆ ಸನ್ನಿವೇಶ, ಸಂದರ್ಭಗಳೇ ನನಗೆ ವಿಲನ್‌ ಆಗಿದ್ದವು. ಆದರೆ, ಮೊದಲ ಬಾರಿಗೆ ಚಿತ್ರದಲ್ಲಿ ಒಬ್ಬ ಖಡಕ್‌ ವಿಲನ್‌ ಇದ್ದಾನೆ ಮತ್ತು ಆತನ ಜೊತೆ ಹೊಡೆದಾಡುತ್ತೇನೆ...

  • ಚಿತ್ರರಂಗಕ್ಕೂ, ಗೋವಿಂದನಿಗೂ ಮೊದಲಿನಿಂದಲೂ ಒಂಥರಾ ಬಿಡಿಸಲಾಗದ ನಂಟು. ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು, ಸ್ಟಾರ್ಗೆ ಗೋವಿಂದನೇ ಫೇವರೆಟ್‌ ಗಾಡ್‌. ಇನ್ನು...

  • ಕೆಲವರಿಗೆ ಪ್ರತಿಭೆ ಇರುತ್ತೆ. ಅವಕಾಶ ಇರಲ್ಲ. ಇನ್ನೂ ಕೆಲವರಿಗೆ ಅವಕಾಶ ಸಿಕ್ಕರೂ ಪ್ರತಿಭೆ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲೊಂದು ಚಿತ್ರತಂಡ...

  • "ಆ ರಾಜುನೇ ಬೇರೆ ಇಲ್ಲಿ ಕಾಣುವ ರಾಜುನೇ ಬೇರೆ..' - ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಮಂಜುನಾಥ್‌ ವಿಶ್ವಕರ್ಮ. ಅವರು ಹೇಳಿದ್ದು "ರಾಜು ಜೇಮ್ಸ್‌ ಬಾಂಡ್‌' ಬಗ್ಗೆ....

ಹೊಸ ಸೇರ್ಪಡೆ