Udayavni Special

ಅಖಾಡಕ್ಕಿಳಿದ “ಪೈಲ್ವಾನ್‌” ಕಿಚ್ಚ

ಚಿತ್ರದ ಹೈಲೈಟ್ಸ್‌ ಒಂದಾ, ಎರಡಾ...

Team Udayavani, Sep 13, 2019, 5:16 AM IST

q-37

ಟ್ರೇಲರ್‌, ಹಾಡು, ಸ್ಟಿಲ್‌ಗ‌ಳಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ “ಪೈಲ್ವಾನ್‌’ ಚಿತ್ರ ಸೆ.12ರಂದು ತೆರೆಕಂಡಿದೆ. “ಹೆಬ್ಬುಲಿ’ ಚಿತ್ರದ ನಂತರ ಕೃಷ್ಣ ಹಾಗೂ ಸುದೀಪ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದ್ದು, ಏಕಕಾಲದಲ್ಲಿ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗೆಗಿನ ಒಂದಷ್ಟು ಹೈಲೈಟ್ಸ್‌ ಇಲ್ಲಿದೆ.

-ಸುದೀಪ್‌ ಅವರ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ. ಏಕಕಾಲದಲ್ಲಿ ಐದು ಭಾಷೆಯಲ್ಲಿ ತೆರೆಗೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆ.

– ಮೊದಲ ಬಾರಿಗೆ ಸುದೀಪ್‌ ಶರ್ಟ್‌ಲೆಸ್‌ ಆಗಿ ಕಾಣಿಸಿಕೊಂಡಿರುವ ಚಿತ್ರ.
– ಚಿತ್ರದಲ್ಲಿ ಕುಸ್ತಿ ಹಾಗೂ ಬಾಕ್ಸಿಂಗ್‌ ಪಟುವಾಗಿ ನಟನೆ. ಪಾತ್ರಕ್ಕಾಗಿ ಪ್ರೊಫೆಶನಲ್ಸ್‌ಗಳಿಂದ ತರಬೇತಿ
– ಜಿಮ್‌ನಿಂದ ದೂರವಿದ್ದ
ಸುದೀಪ್‌ ಚಿತ್ರಕ್ಕಾಗಿ ಜಿಮ್‌ ಮಾಡಿ, ಫಿಟ್‌ ಆದ ಚಿತ್ರ
– ಮೊದಲ ಬಾರಿಗೆ ಸುನೀಲ್‌
ಶೆಟ್ಟಿ ಕನ್ನಡದಲ್ಲಿ ನಟಿಸಿದ ಸಿನಿಮಾ.
– “ಹೆಬ್ಬುಲಿ’ ಯಶಸ್ಸಿನ ನಂತರ ಕೃಷ್ಣ-ಸುದೀಪ್‌ ಜೋಡಿಯ ಎರಡನೇ ಚಿತ್ರ.
– ಆ್ಯಕ್ಷನ್‌ ಜೊತೆಗೆ ಫ್ಯಾಮಿಲಿ ಡ್ರಾಮಾ

-ಇದು “ಪೈಲ್ವಾನ್‌’ ಚಿತ್ರದ ಹೈಲೈಟ್ಸ್‌. ನಿನ್ನೆ ತೆರೆಕಂಡಿರುವ “ಪೈಲ್ವಾನ್‌’ ಸುದೀಪ್‌ ಅವರಿಗೆ ಸಾಕಷ್ಟು ವಿಶೇಷ ಅನುಭವ ನೀಡಿದ ಸಿನಿಮಾ ಎಂದರೆ ತಪ್ಪಲ್ಲ. ಸುದೀಪ್‌ ಇಲ್ಲಿವರೆಗೆ ಸಾಕಷ್ಟು ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, “ಪೈಲ್ವಾನ್‌’ ಅವೆಲ್ಲ ಸಿನಿಮಾಗಳಿಗಿಂತ ತುಂಬಾನೇ ಭಿನ್ನ. ಅದು ಕಥೆ, ತಯಾರಿಯಿಂದ ಹಿಡಿದು ಬಿಡುಗಡೆವರೆಗೆ. ಹೌದು, “ಪೈಲ್ವಾನ್‌’ ಚಿತ್ರ ಏಕಕಾಲಕ್ಕೆ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದಿನ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಿಡುಗಡೆಯಾಗಿದ್ದರೂ ಏಕಕಾಲದಲ್ಲಿ ಬಿಡುಗಡೆಯಾಗಿದ್ದು ಕಡಿಮೆಯೇ.

ಆದರೆ, “ಪೈಲ್ವಾನ್‌’ ಚಿತ್ರ ಪ್ಯಾನ್‌ ಇಂಡಿಯಾ ರಿಲೀಸ್‌ ಆಗುತ್ತಿದೆ. ಈ ಚಿತ್ರದ ಕಥೆ ಕೇಳಿದ ದಿನದಿಂದಲೇ ಸುದೀಪ್‌ ಎಕ್ಸೆ„ಟ್‌ ಆಗಿ ಅದಕ್ಕೆ ಬೇಕಾದ ತಯಾರಿ ಕೂಡಾ ಮಾಡಿಕೊಳ್ಳಲಾರಂಭಿಸಿದ್ದಾರೆ. ಈ ಬಗ್ಗೆ ಮಾತನಾಡುವ ಸುದೀಪ್‌, “”ಪೈಲ್ವಾನ’ ಲೈನ್‌ ಕೇಳಿದಾಗ ಎಕ್ಸೆ„ಟ್‌ ಆಗಿದ್ದು ನಿಜ. ಆದರೆ, ನಾನು ಯಾವತ್ತೂ ಜಿಮ್‌ಗೆ ಹೋದವನೇ ಅಲ್ಲ. ಗಂಭೀರವಾಗಿ ಅದನ್ನು ಪರಿಗಣಿಸಿಯೂ ಇಲ್ಲ. ನನ್ನ ತಲೆಯಲ್ಲಿ ಶೂಟಿಂಗ್‌ ಮುಗಿಸಿ, ಮನೆಗೆ ಹೋಗೋದಷ್ಟೇ ಗೊತ್ತು. ಯಾರಾದರೂ ಜಿಮ್‌ಗೆ ಹೋಗಿ ಬರ್ತಿನಿ ಅಂದರೆ, ಲೈಫ‌ನ್ನೇ ವೇಸ್ಟ್‌ ಮಾಡಿಕೊಳ್ತಾನಲ್ಲ ಎಂಬ ಫೀಲಿಂಗ್ಸ್‌. ಜಿಮ್‌ ಮಾಡುವಾಗ ಅಲ್ಲಿ ಯಾರೂ ಇರಲ್ಲ. ನಾನು ಮತ್ತು ಕಬ್ಬಿಣದ ವಸ್ತುಗಳಷ್ಟೇ.

ಆದರೂ, ನಾನು ಮಾಡಬೇಕು ಅಂತ ಅಂದಾಗ, ಭಯ ಶುರುವಾಯ್ತು. ಯಾವುದೋ ಶೇಪ್‌ನಿಂದ ಇನ್ಯಾವುದೋ ಶೇಪ್‌ ತಗೋಬೇಕು. ಕೆಲ ಸ್ನೇಹಿತರು ವರ್ಷಗಟ್ಟಲೆ ಅದನ್ನು ಮಾಡಿದ್ದಾರೆ. ನಾನು ಮಾಡಬೇಕು ಎಂಬುದನ್ನು ನೆನಪಿಸಿಕೊಂಡರೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ. ಅದಕ್ಕೆಲ್ಲ ಸಮಯ ಬೇಕು, ತಾಳ್ಮೆ ಬೇಕು. ನನ್ನಿಂದ ಸಾಧ್ಯವಿಲ್ಲ ಅನ್ನುತ್ತಲೇ, ನೀವು ಬೇರೆಯವರನ್ನು ಇಟ್ಟುಕೊಂಡು ಚಿತ್ರ ಮಾಡಿಬಿಡಿ ಅನ್ನೋ ಮಾತುಕತೆ ಬಂತು. ಕೊನೆಗೆ ನೀವು ಮಾಡಿದರೆ ಮಾಡ್ತೀನಿ ಸರ್‌ ಅಂದಾಗಲೂ, ಈ ಸಿನಿಮಾನೇ ಬೇಡ ಅಂತ ಹೋಗಿದ್ದೂ ಇದೆ. ಒಂದು ವಾರದ ಬಳಿಕ ಯಾಕೋ ತಲೆಗೆ ಒಂದು ಯೋಚನೆ ಬಂತು. ನಾನು ಯಾವುದರ ಹಿಂದೆ ಓಡುತ್ತಾ ಇದ್ದೀನಿ. ಇವತ್ತಲ್ಲ ನಾಳೆ ಮಾಡಲೇಬೇಕು.

ಪ್ರಯತ್ನ ಮಾಡೋಣ, ಅಬ್ಬಬ್ಟಾ ಅಂದ್ರೆ ಒಂದು ಮಟ್ಟಕ್ಕೆ ಬರ್ತಿನಿ ಅಲ್ವಾ ಎಂಬ ಯೋಚನೆ ಬಂತು. ಅದಕ್ಕಿಂತ ಹೆಚ್ಚಾಗಿ ಒಂದು ಹಠ ಶುರುವಾಯ್ತು. ಆ ಹಠಕ್ಕೆ ಕಾರಣ, “ಕುಸ್ತಿ’ ಮೇಲೆ ಒಂದು ಸಿನಿಮಾ ಮಾಡ್ತೀನಿ ಅನ್ನೋದು. ಕ್ರೀಡೆಗೆ ಸಂಬಂಧಿಸಿದ ಚಿತ್ರ ಮಾಡಿರಲಿಲ್ಲ. “ಪೈಲ್ವಾನ’ ಮಾಡೋಕೆ ರೆಡಿಯಾದೆ. ಜಿಮ್‌ಗೆ ತುಂಬಾ ಡೆಡಿಕೇಷನ್‌ ಬೇಕಿತ್ತು. ಅಲ್ಲಿ ಕಟ್ಟುನಿಟ್ಟಿನ ಕೆಲಸ ಶುರುವಾಯ್ತು. ಡಯೆಟ್‌ ಕೂಡ ಸರಿಯಾಗಿತ್ತು ಒಳೆಯ ಟ್ರೈನರ್‌ ಸಿಕ್ಕರು. ನಾನು ಊಟ ಮಾಡೋದು ಕಮ್ಮಿ. ಕುರುಕಲು ತಿಂಡಿ ತಿನ್ನೋದು ಜಾಸ್ತಿ ಇತ್ತು. ಆದರೂ, ಅದನ್ನು ಜಿಮ್‌ಗಾಗಿ ನಿಲ್ಲಿಸಿದೆ. ರಾಮೋಜಿ ಫಿಲ್ಮ್ಸಿಟಿಯಲ್ಲೇ ಎಲ್ಲವೂ ವ್ಯವಸ್ಥೆ ಆಗಿತ್ತು. ಏಳಕ್ಕೆ ಊಟ ಮುಗಿಸಬೇಕು. ಏಳೂವರೆ ಆದರೂ ಊಟ ಮಾಡುವಂತಿಲ್ಲ. ಶೇಪ್‌ ಆಗೋಕೆ ಸಾಕಷ್ಟು ಕಸರತ್ತು ಮತ್ತು ಶಿಸ್ತು ಬೇಕಿತ್ತು.

4.30 ಕ್ಕೆ ಎದ್ದರೆ, 5ಕ್ಕೆ ಜಿಮ್‌ಗೆ ಹೋಗಿ, 6.15 ರ ತನಕ ವಕೌìಟ್‌ ಮಾಡಿ, ಅಲ್ಲಿಂದ ಐದು ನಿಮಿಷ ಲೊಕೇಶನ್‌ಗೆ ತಲುಪಿ, ಸಿಗುವ 15 ನಿಮಿಷ ಮಲಗಿ, ನಂತರ 7.15 ಕ್ಕೆ ಫ‌ಸ್ಟ್‌ ಶಾಟ್‌ ಕೊಡುತ್ತಿದ್ದೆ. 1.15 ಕ್ಕೆ ಊಟ ಕೊಡಲೇಬೇಕಿತ್ತು. ನಂತರ 5.15 ಕ್ಕೆ ಬಂದು ನೇರ ಸ್ವಿಮ್ಮಿಂಗ್‌ ಮುಗಿಸಿ ಮನೆಗೆ ಹೋಗಿ, ಒಂದು ಬ್ಲಾಕ್‌ ಕಾಫಿ ಕುಡಿದು, ನಾನೇ ಬೇಕಾದ ಅಡುಗೆ ಮಾಡಿ ಊಟ ಮುಗಿಸಿ 8.30 ಕ್ಕೆ ಮಲಗುತ್ತಿದ್ದೆ. ನನಗೆ ವರ್ಕ್‌ ಡಿಸಿಪ್ಲೀನ್‌ ಜಾಸ್ತಿ. ಆದರೆ, ಪರ್ಸನಲ್‌ ಡಿಸಿಪ್ಲೀನ್‌ ಕಮ್ಮಿ. ಆದರೆ, “ಪೈಲ್ವಾನ’ ನನ್ನ ಜೀವನದಲ್ಲಿ ಶಿಸ್ತು ಕಲಿಸಿತು. ಶಿಸ್ತು ನಿಮ್ಮ ಜೀವನವನ್ನು ಬದಲಿಸುತ್ತದೆ’ ಎಂದು “ಪೈಲ್ವಾನ್‌’ ಚಿತ್ರದ ಬಗ್ಗೆ ಹೇಳುತ್ತಾರೆ.

ಈ ಚಿತ್ರವನ್ನು ಕೃಷ್ಣ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಆಕಾಂಕ್ಷಾ ಸಿಂಗ್‌, ಕಬೀರ್‌ ಸಿಂಗ್‌ ದುಹಾನ್‌, ಸುಶಾಂತ್‌ ಸಿಂಗ್‌, ಶರತ್‌ ಲೋತಾಶ್ವ, ಅವಿನಾಶ್‌, ಅಪ್ಪಣ್ಣ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿ­ದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಕೃಷ್ಣ, ಡಿ.ಎಸ್‌.ಕಣ್ಣನ್‌ ಹಾಗೂ ಜೆ.ಮಧುಕಿರಣ್‌ ಚಿತ್ರಕಥೆ ಬರೆದಿದ್ದಾರೆ. ಕೃಷ್ಣ ಹಾಗೂ ಡಿ.ಎಸ್‌.ಕಣ್ಣನ್‌ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕರುಣಾಕರ್‌ ಅವರ ಛಾಯಾಗ್ರಹಣದೆ. ರುಬೆನ್‌ ಸಂಕಲನ, ಗಣೇಶ್‌ ಆಚಾರ್ಯ, ರಾಜು ಸುಂದರಂ, ಹರ್ಷ ನೃತ್ಯ ಹಾಗೂ ರಾಮ್‌ – ಲಕ್ಷ್ಮಣ್‌, ಅವರ ಸಾಹಸವಿದೆ.

ರವಿಪ್ರಕಾಶ್‌ ರೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

ಯೋಗ ಮಾರ್ಗ ಗಮನ,ಆಯುರ್ವೇದ ಮಹತ್ವ ಸಾರಿದ ಪ್ರಧಾನಿ

ಯೋಗ ಮಾರ್ಗ ಗಮನ,ಆಯುರ್ವೇದ ಮಹತ್ವ ಸಾರಿದ ಪ್ರಧಾನಿ

ಮಹಾರಾಷ್ಟ್ರ, ಗುಜರಾತ್‌ ಕಡೆಗೆ ಚಂಡಮಾರುತ

ಮಹಾರಾಷ್ಟ್ರ, ಗುಜರಾತ್‌ ಕಡೆಗೆ ಚಂಡಮಾರುತ

ಅನಧಿಕೃತ ಹತ್ತಿಬೀಜ ದಾಸ್ತಾನು ಮೇಲೆ ದಾಳಿ: 2 ಕೋಟಿಗೂ ಅಧಿಕ ಮೌಲ್ಯದ ಹತ್ತಿ ಬೀಜ ಜಪ್ತಿ

ಅನಧಿಕೃತ ಹತ್ತಿಬೀಜ ದಾಸ್ತಾನು ಮೇಲೆ ದಾಳಿ: 2 ಕೋಟಿಗೂ ಅಧಿಕ ಮೌಲ್ಯದ ಹತ್ತಿ ಬೀಜ ಜಪ್ತಿ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೆಬೆಲ್‌ಸ್ಟಾರ್‌ ನೆನಪಲ್ಲಿ ಅಭಿಮಾನಿಗಳು…

ಇಂದು ಅಂಬರೀಶ್‌ ಹುಟ್ಟುಹಬ್ಬ : ರೆಬೆಲ್‌ಸ್ಟಾರ್‌ ನೆನಪಲ್ಲಿ ಅಭಿಮಾನಿಗಳು…

dubbing-yuva

ಡಬ್ಬಿಂಗ್‌ನಲ್ಲಿ ಯುವರತ್ನ

yella-pilege

ಎಲ್ಲಾ ಪೀಳಿಗೆಯ ದೊಡ್ಡ ಸ್ಫೂರ್ತಿ: ಹಿರಿಯ ನಟ ಅಶ್ವತ್ಥ್‌

digant-banagaa

ದಿಗಂತ್‌ ಕಂಡ ಬಂಗಾರದ ಕನಸು!

rag ravi

ಹೊಸ ಧ್ವನಿಯ ಸ್ಪರ್ಶ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

10 denige

ಕೋವಿಡ್‌ 19 ನಿಧಿಗೆ ವಿದೇಶಿ ಕನ್ನಡಿಗರಿಂದ 10ಲಕ್ಷ ದೇಣಿಗೆ

ಇಂದಿನಿಂದ ಸಹಜ ಸ್ಥಿತಿಗೆ ಕಲಬುರಗಿ

ಇಂದಿನಿಂದ ಸಹಜ ಸ್ಥಿತಿಗೆ ಕಲಬುರಗಿ

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

krushee lake

ಕೆರೆಗಳಿಗೆ ಮರುಜೀವ ನೀಡಿದ ಕೋವಿಡ್‌ 19

ವೇಗಿ ಶಾರ್ದೂಲ್ ಠಾಕೂರ್‌ ವಿರುದ್ಧ ತನಿಖೆ ತೂಗುಗತ್ತಿ?

ವೇಗಿ ಶಾರ್ದೂಲ್ ಠಾಕೂರ್‌ ವಿರುದ್ಧ ತನಿಖೆ ತೂಗುಗತ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.