ಸಿನಿಮಾ ಕ್ಯೂ: ಆಗಸ್ಟ್‌ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!

ಸ್ಪರ್ಧೆಗೆ ಬಿದ್ದು ಬಿಡುಗಡೆ ಮಾಡಿದರೆ ಕೈ ಸುಟ್ಟುಕೊಳ್ಳಬೇಕಾದಿತು..

Team Udayavani, Jul 30, 2021, 10:12 AM IST

ಸಿನಿಮಾ ಕ್ಯೂ: ಆಗಸ್ಟ್‌ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!

ಆಗಸ್ಟ್‌ನಲ್ಲಿ ನಾವ್‌ ಬರ್ತಿದ್ದೀವಿ ಸಾರ್‌ …. ಸದ್ಯ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾ ಮಂದಿಯಲ್ಲಿಕೇಳಿದರೆ ಸಿಗುವ ಉತ್ತರವಿದು. ಸರ್ಕಾರ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅವಕಾಶ ನೀಡಿದ ಕೂಡಲೇ ಸಾಲು ಸಾಲು ಸಿನಿಮಾಗಳು ಆಗಸ್ಟ್‌ನಲ್ಲಿ ತೆರೆಗೆ ಬರಲು ಸಿದ್ಧವಿದೆ. ಇದು ಒಂದಾದರೆ, ಬಹುತೇಕ ಮಂದಿ ಕಣ್ಣಿಟ್ಟಿರೋದು ಆಗಸ್ಟ್‌ 20ರ ಮೇಲೆ.

ಹೌದು, ಆಗಸ್ಟ್‌ 20ರಂದು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂದು ಒಂದಷ್ಟು ಸಿನಿಮಾಗಳು ತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈಗಾಗಲೇ ವಿಜಯ್‌ ನಟನೆ, ನಿರ್ದೇಶನದ “ಸಲಗ’, ಸೂರಜ್‌ ನಟನೆಯ “ನಿನ್ನ ಸನಿಹಕೆ’ ಚಿತ್ರಗಳು ಆಗಸ್ಟ್‌ 20ರಂದು ತಮ್ಮ ಬಿಡುಗಡೆಯನ್ನು ಘೋಷಿಸಿ ಕೊಂಡಿವೆ. ಇದರ ನಡುವೆಯೇ ಯೋಗಿ ನಟನೆಯ “ಲಂಕೆ’ ಚಿತ್ರಕೂಡಾ ಆಗಸ್ಟ್‌ 20ಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದೆ. ಜೊತೆಗೆ ಆ ದಿನ ನಮಗೆ ಹೆಚ್ಚು ಸೂಕ್ತವಾಗುತ್ತದೆ ಎಂದಿದೆ.

ಇದು ಅಧಿಕೃತವಾಗಿ ಮೂರು ಸಿನಿಮಾಗಳ ಘೋಷಣೆಯಾದರೆ, ಇನ್ನೊಂದಿಷ್ಟು ಹೊಸಬರು ಕೂಡಾ 20ರಂದೇ ಬಿಡುಗಡೆ ಮಾಡಲು ಅಣಿಯಾಗಿದ್ದಾರೆ. ಚಿತ್ರಮಂದಿರಕ್ಕೆ ಹೌಸ್‌ಫ‌ುಲ್‌ ಅನುಮತಿ ಕೊಟ್ಟ ಖುಷಿಯಲ್ಲಿ ಪೂರ್ವತಯಾರಿ ಇಲ್ಲದೇ ಒಂದೇ ದಿನ ಬಿಡುಗಡೆ ಮಾಡಿದರೆ ಇದರಿಂದ ತೊಂದರೆ ತಪ್ಪಿದ್ದಲ್ಲ. ಆಗಸ್ಟ್‌ 20 ಎಚ್ಚರ ತಪ್ಪಿದರೆ ಆಪತ್ತು!

ಎಚ್ಚರಿಕೆಯ ನಡೆ ಅಗತ್ಯ: ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ನಿಂದಾಗಿ ಸಿನಿಮಾ ಮಂದಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಈಗ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆಯಲು ಅಣಿಯಾಗಿವೆ. ಹೀಗಿರುವಾಗ ತರಾತುರಿಯ ನಿರ್ಧಾರದಿಂದಕೈ ಸುಟ್ಟುಕೊಳ್ಳ ಬೇಕಾಗಬಹುದು. ಮನರಂಜನೆಯಿಂದ ದೂರ ಉಳಿದಿದ್ದ ಪ್ರೇಕ್ಷಕನನ್ನು ಮತ್ತೆ ಮನರಂಜನೆಯ ಮೂಡ್‌ಗೆ ಕರೆತರುವುದು ಸುಲಭ ‌ಕೆಲಸವಲ್ಲ. ಈಗ ಪ್ರೇಕ್ಷಕ ಕೇವಲ ಸಿನಿಮಾವನ್ನೇ ನಂಬಿಕೊಂಡಿಲ್ಲ. ಆತನ ಕೈಯಲ್ಲೇ ಜಗತ್ತು ಇದೆ. ಮೊಬೈಲ್‌ನಲ್ಲೇ ಆತ ತನ್ನ ಮನರಂಜನೆಯನ್ನು ಪಡೆಯುತ್ತಿದ್ದಾನೆ. ಹೀಗಿರುವಾಗ ಏಕಾಏಕಿ ಒಂದೇ ದಿನ ನಾಲ್ಕೈದು ಸಿನಿಮಾಗಳು ಚಿತ್ರಮಂದಿರಕ್ಕೆ ದಾಂಗುಡಿ ಇಟ್ಟರೆ ಪ್ರೇಕ್ಷಕ ಗೊಂದಲಕ್ಕೀಡಾಗಬಹುದು. ಎಲ್ಲವೂ ಸರಿಯಾಗಿದ್ದ ಸಮಯದಲ್ಲಿ ವಾರಕ್ಕೆ ಏಳೆಂಟು ಸಿನಿಮಾಗಳು ಬಿಡುಗಡೆಯಾಗಿ ಯಾವುದಕ್ಕೂ ನ್ಯಾಯ ಸಿಗದೇ, ನಿರ್ಮಾಪಕ ನಷ್ಟ ಅನುಭವಿಸಿದ ಉದಾಹರಣೆಗಳು ನಮ್ಮಕಣ್ಣ ಮುಂದೆಯೇ ಇದೆ. ಆದರೆ, ಈಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಸ್ಪರ್ಧೆಗಿಂತ ಸಹಕಾರ ಮುಖ್ಯ. ಒಂದು ಅಥವಾ ಎರಡು ಸಿನಿಮಾಗಳ ಬಿಡುಗಡೆ ಮೂಲಕ ಪ್ರೇಕ್ಷಕನನ್ನು ಸಿನಿಮಾ ಮೂಡ್‌ಗೆ ಕರೆತರಬೇಕಾಗಿದೆ.

ಇದನ್ನೂ ಓದಿ:ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ 

ಆಗಸ್ಟ್‌ 20ಕ್ಕೆ ಡಿಮ್ಯಾಂಡ್‌ ಯಾಕೆ?: ಎಲ್ಲಾ ಓಕೆ, ಬಹುತೇಕ ಸಿನಿಮಾ ಮಂದಿ ಆಗಸ್ಟ್‌  20ರ ಮೇಲೆಕಣ್ಣು ಇಡಲು ಕಾರಣವೇನು, ಆ ದಿನದ ವಿಶೇಷವೇನು ಎಂದು ನೀವು ಕೇಳಬಹುದು. ಅದಕ್ಕೆ ಮುಖ್ಯವಾಗಿ ಮೂರು ಕಾರಣ, ಮೊದಲನೇಯದಾಗಿ ಅಂದು ವರಮಹಾಲಕ್ಷ್ಮೀ ಹಬ್ಬ. ಆ ದಿನ ಸಿನಿಮಾ ರಿಲೀಸ್‌ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಒಂದು ಕಡೆಯಾದರೆ, ಆಗಸ್ಟ್‌ 20ರ ಹೊತ್ತಿಗೆ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆದು ರೆಡಿಯಾಗಿರುತ್ತದೆ ಎಂಬುದು ಇನ್ನೊಂದು. ಇನ್ನು, ಮೂರನೇಯ ಕಾರಣವೆಂದರೆ ಮೂರನೇ ಅಲೆಯ ಭಯ. ಆಗಸ್ಟ್‌ನಲ್ಲಿ ಕೊರೊನಾ ಮೂರನೇ ಅಲೆ ಬರುತ್ತದೆ ಎಂಬ ಭಯ ಜನರಲ್ಲಿದೆ.

ಒಂದು ವೇಳೆ ಮತ್ತೆ ಕೊರೊನಾ ತೀವ್ರವಾದರೆ ಚಿತ್ರಮಂದಿರ ಗಳು ಬಾಗಿಲು ಹಾಕಬೇಕಾಗುತ್ತದೆ. ಆಗ ಮತ್ತೆ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುತ್ತದೆ ಎಂಬ ಭಯ. ಈ ಎಲ್ಲಾಕಾರಣಗಳಿಂದಾಗಿ ಆಗಸ್ಟ್‌20ರ ಮೇಲೆ ಚಿತ್ರ ತಂಡಗಳು ಕಣ್ಣಿಟ್ಟಿವೆ. ಈ ಎಲ್ಲಾ ಕಾರಣಗಳು ಮೇಲ್ನೋಟಕ್ಕೆ ಸಕಾರಣಗಳಂತೆ ಕಂಡರೂ ಎಲ್ಲಾ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಿದರೆ, ಅದರಿಂದ ಎಲ್ಲರಿಗೂ ನಷ್ಟವೇ.

ಸೆಪ್ಟೆಂಬರ್‌ನಲ್ಲಿ ಸಿನಿಮಾ ಕ್ಯೂ: ತೋತಾಪುರಿ ಅಖಾಡಕ್ಕೆ ಇದು ಆಗಸ್ಟ್‌ ಕಥೆಯಾದರೆ ಸೆಪ್ಟೆಂಬರ್‌ನಲ್ಲೂ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಶಿವರಾಜ್‌ಕುಮಾರ್‌ ಅಭಿನಯದ “ಭಜರಂಗಿ-2′ ಈಗಾಗಲೇ ಸೆಪ್ಟೆಂಬರ್‌10ರಂದು ಬರುವುದಾಗಿ ಘೋಷಿಸಿಕೊಂಡಿದೆ.  ಈಗ “ತೋತಾಪುರಿ’ ಸರದಿ. ಜಗ್ಗೇಶ್‌ ನಾಯಕರಾಗಿರುವ “ತೋತಾಪುರಿ’ ಚಿತ್ರದ ಡಬ್ಬಿಂಗ್‌ಕಾರ್ಯ ಪೂರ್ಣಗೊಂಡಿದೆ. ಈಗ ಇತ್ತ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಬಿಗ್‌ ಬಜೆಟ್‌ನ ಹಾಗೂ ಹಿಟ್‌ಕಾಂಬಿನೇಶನ್‌ನ ಸಿನಿಮಾವಾಗಿ “ತೋ ತಾಪುರಿ’ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.