ಪಾತ್ರಧಾರಿ ಇಲ್ಲದ ಮೇಲೆ…

ಕಪಟದ ಹಿಂದಿನ ಮಾತು

Team Udayavani, Sep 27, 2019, 5:00 AM IST

ಆ ಚಿತ್ರದಲ್ಲಿ ನಟಿಸಿದ ಯಾರೊಬ್ಬ ಕಲಾವಿದರೂ ಇರಲಿಲ್ಲ. ಬದಲಾಗಿ ಸಿನಿಮಾಕ್ಕೆ ಸಂಬಂಧಪಡದ ಮೂವರು ವೇದಿಕೆ ಮೇಲಿದ್ದರು. ಜೊತೆಗೆ ಆ ಸಿನಿಮಾದ ನಿರ್ದೇಶಕ. ಆ ಮೂವರು ಕನ್ನಡ ಚಿತ್ರರಂಗದ ಬಿಝಿ ಇರುವ ವ್ಯಕ್ತಿಗಳು. ಆದರೂ ಹೊಸಬರಿಗೆ, ಹೊಸ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬಂದಿದ್ದರು. ಆದರೆ, ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ ಮಾತ್ರ ತಮ್ಮ ಸಿನಿಮಾದ ಪ್ರಮೋಶನ್‌ಗೆ ಬರುವಷ್ಟು ಸಮಯವಿರಲಿಲ್ಲ. ಅಂದಹಾಗೆ, ಇದು “ಕಪಟ ನಾಟಕ ಪಾತ್ರಧಾರಿ’ ಸಿನಿಮಾದ ವಿಷಯ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆ ನಡೆಯಿತು. ನಿರ್ದೇಶಕರಾದ ಸಿಂಪಲ್‌ ಸುನಿ, ತರುಣ್‌ ಸುಧೀರ್‌ ಹಾಗೂ ನಟಿ ಸೋನು ಗೌಡ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ಅಂದು ವೇದಿಕೆಯಲ್ಲಿ ಏಕಾಂಗಿಯಾಗಿದ್ದ ಚಿತ್ರದ ನಿರ್ದೇಶಕರಿಗೆ ಸಾಥ್‌ ನೀಡಿ ಧೈರ್ಯ ತುಂಬಿದ್ದು ಕೂಡಾ ಅವರೇ.

ಹೊಸ ಜಾನರ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ಸಿನಿಮಾಗಳ ಸಾಲಿನಲ್ಲಿ “ಕಪಟ ನಾಟಕ ಪಾತ್ರಧಾರಿ’ ಕೂಡಾ ಸೇರುತ್ತದೆ. ಚಿತ್ರದ ಟ್ರೇಲರ್‌ ಭರವಸೆಯಿಂದ ಕೂಡಿದೆ. ಇಂತಹ ಸಿನಿಮಾಗಳ ಪ್ರಮೋಶನ್‌ಗೆ ಕಲಾವಿದರು ಬರಬೇಕು ಎನ್ನುವುದು ತರುಣ್‌ ಮಾತು. ನಿರ್ದೇಶಕ ಸುನಿ ಮಾತನಾಡಿ, “ನಾನು ಈ ಸಿನಿಮಾವನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಸೀಟಿನಂಚಿನಲ್ಲಿ ಕುಳಿತು ನೋಡುವ ಸಿನಿಮಾ. ಸಿನಿಮಾ ನೋಡುತ್ತಾ ನಾವು ಕಥೆಯೊಂದಿಗೆ ಸೇರಿಕೊಳ್ಳುತ್ತೇವೆ’ ಎಂದರು. ನಿರ್ದೇಶಕ ಕ್ರಿಶ್‌ ಕಲಾವಿದರು ಗೈರಾಗಿರುವ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಬದಲಾಗಿ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳನ್ನು ತೋರಿಸಿ, ಚಿತ್ರದ ಬಗ್ಗೆ ಮಾತನಾಡಿದರು. ಇದೊಂದು ಥ್ರಿಲ್ಲರ್‌ ಜಾನರ್‌ ಕಥೆಯಾಗಿದ್ದು, ಒಬ್ಬ ಆಟೋ ಡ್ರೈವರ್‌ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಲವ್‌ಸ್ಟೋರಿಯನ್ನು ಬೆರೆಸಲಾಗಿದೆ ಎಂದು ವಿವರ ನೀಡಿದರು. ನಿರ್ದೇಶಕ ಕ್ರಿಶ್‌ ಕಥೆ ಮಾಡಿಕೊಂಡು ಈ ಕಥೆಗೆ ಯಾರು ಹೊಂದಿಕೆಯಾಗುತ್ತಾರೆಂದು ಯೋಚಿಸುತ್ತಿದ್ದ ಸಮಯದಲ್ಲಿ ಬಾಲು ನಾಗೇಂದ್ರ ಅವರ “ಹುಲಿರಾಯ’ ಟ್ರೇಲರ್‌ ರಿಲೀಸ್‌ ಆಗಿತ್ತಂತೆ. ಆ ಟ್ರೇಲರ್‌ ನೋಡಿ, “ನನ್ನ ಕಥೆಗೆ ಇವರೇ ಫಿಕ್ಸ್‌’ ಎಂದು ಹೀರೋ ಮಾಡಿದರಂತೆ.

ಚಿತ್ರದಲ್ಲಿ ನಾಯಕ ಬಾಲು ನಾಗೇಂದ್ರ ಅವರಿಗೆ ಸಂಗೀತಾ ಭಟ್‌ ನಾಯಕಿ. ವಿದೇಶದಲ್ಲಿದ್ದ ಕಾರಣ ಸಂಗೀತಾ, ಅಲ್ಲಿಂದಲೇ ವಿಡಿಯೋವೊಂದನ್ನು ಕಳುಹಿಸಿ ಚಿತ್ರಕ್ಕೆ ಶುಭಕೋರಿದರು. ಚಿತ್ರಕ್ಕೆ ಅದಿಲ್‌ ನದಾಫ್ ಸಂಗೀತವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ