ಖಳರಿಗಾಗಿ ಕುಣಿದರೋ ಕಳಕಳಿಯ ಹುಡುಗರು

Team Udayavani, Jan 6, 2017, 3:45 AM IST

Bad-Boy_(114).jpg

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಆಲ್ಬಂ ಆಡಿಯೋ, ವೀಡಿಯೋಗಳು ಬಂದಿವೆ. ಬಹುತೇಕ ಆಲ್ಬಂಗಳಲ್ಲಿ ರಾಕ್‌ ಮತ್ತು ಲವ್‌ ಸಾಂಗ್‌ಗಳೇ ಹೆಚ್ಚಾಗಿವೆ. ಈಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಖಳನಟರಿಗಾಗಿ ಆಲ್ಬಂ ವೀಡಿಯೋ ಮಾಡಲಾಗಿದೆ. ಹೌದು, ಹೊಸ ಹುಡುಗರೆಲ್ಲಾ ಸೇರಿಕೊಂಡು “ಬ್ಯಾಡ್‌ ಬಾಯ್‌’ ಹೆಸರಿನ ವೀಡಿಯೋ ಆಲ್ಬಂ ಮಾಡಿದ್ದಾರೆ. ಇತ್ತೀಚೆಗೆ ಆ ಆಲ್ಬಂ ವೀಡಿಯೋವನ್ನು ನಿರ್ಮಾಪಕ ಕೆ.ಮಂಜು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಕನ್ನಡದ ಖಳನಟರಾದ ತೂಗುದೀಪ ಶ್ರೀನಿವಾಸ್‌, ಸುಧೀರ್‌, ಲೋಕೇಶ್‌, ಸುಂದರ್‌ಕೃಷ್ಣ ಅರಸ್‌ ಸೇರಿದಂತೆ ಬಹುತೇಕ ಖಳನಟರಿಗೆ “ಬ್ಯಾಡ್‌ ಬಾಯ್‌’ ಆಲ್ಬಂ ಅರ್ಪಣೆ ಮಾಡಿರುವ ಉತ್ಸಾಹಿ ಹುಡುಗರು, ಯಾವುದೇ ಕಮರ್ಷಿಯಲ್‌ ಸಿನಿಮಾಗೆ ಕಮ್ಮಿ ಇಲ್ಲದಂತೆ ಆಲ್ಬಂ ಸಾಂಗ್‌ ಚಿತ್ರೀಕರಿಸುವ ಮೂಲಕ ತಮ್ಮೊಳಗಿನ ಪ್ರತಿಭೆ ಹೊರಹಾಕಿದ್ದಾರೆ. ಅಂದಹಾಗೆ, ಅಶ್ವಿ‌ನ್‌ರಾವ್‌ “ಬ್ಯಾಡ್‌ ಬಾಯ್‌’ ಆಲ್ಬಂನ ಹೀರೋ. ಅವರಿಗೆ ಈ ಆಲ್ಬಂ ಮಾಡುವ ಯಾವುದೇ ಯೋಚನೆ ಇರಲಿಲ್ಲವಂತೆ. ಸುಮ್ಮನೆ ಗಡ್ಡ, ಕೂದಲು ಬಿಟ್ಟು ಓಡಾಡಿಕೊಂಡಿದ್ದರಂತೆ. ಸ್ನೇಹಿತರೆಲ್ಲಾ ಸೇರಿ, “ಬ್ಯಾಡ್‌ ಬಾಯ್‌’ ಆಲ್ಬಂನ ಯೋಚನೆ ಮಾಡಿದರಂತೆ. ಆಗ ಒಬ್ಬೊಬ್ಬರೇ ತಂತ್ರಜ್ಞರು ಇವರೊಟ್ಟಿಗೆ ಸಾಥ್‌ ಕೊಟ್ಟಿದ್ದಾರೆ.

ನಿರ್ದೇಶಕ ವಸಿಷ್ಠ ಪ್ರಭು, ಮಹಿ, ಕ್ಯಾಮೆರಾಮೆನ್‌ ಪ್ರಸನ್ನ, ಸಂಗೀತ ನಿರ್ದೇಶಕ ಸಿದ್ಧಾರ್ಥ್, ವಿಷ್ಣು, ವೇಲು ಹೀಗೆ ಒಂದಷ್ಟು ಹುಡುಗರೆಲ್ಲಾ ಸೇರಿಕೊಂಡು “ಬ್ಯಾಡ್‌ ಬಾಯ್‌’ ಆಲ್ಬಂ ಮಾಡಿದ್ದಾರೆ.

ಇಂಥದ್ದೊಂದು ಐಡಿಯಾ ಬಂದಿದ್ದೇ ತಡ, ಅಶ್ವಿ‌ನ್‌ರಾವ್‌, ಗೆಳೆಯರ ಬಳಿ ಹೇಳಿಕೊಂಡರಂತೆ. ಆಗ ಎಲ್ಲರೂ ಚರ್ಚೆ ಮಾಡಿ, ಖಳನಟರಿಗಾಗಿಯೇ ಒಂದು ಆಲ್ಬಂ ಮಾಡೋಣ ಅಂತ ನಿರ್ಧರಿಸಿ, “ಬ್ಯಾಡ್‌ ಬಾಯ್‌’ ಆಲ್ಬಂ ಮುಗಿಸಿದ್ದಾರೆ. ಈ ಕುರಿತು ಮಾತನಾಡುವ ನಿರ್ದೇಶಕ ಪ್ರಭು, “ಕನ್ನಡದಲ್ಲಿ ಹಲವು ಆಲ್ಬಂಗಳಿವೆ. ಆದರೆ, ನಾವು ಹೊಸದನ್ನು ಮಾಡಬೇಕು ಅಂತ ಹೊರಟಾಗ ಸಿಕ್ಕಿದ್ದೇ ಈ ಬ್ಯಾಡ್‌ ಬಾಯ್‌ ಕಾನ್ಸೆಪ್ಟ್. ಇದು ಖಳನಟರಿಗೆ ಅರ್ಪಿಸುತ್ತಿದ್ದೇವೆ. ಇನ್ನು, ಕೇವಲ ಮೂರು ದಿನಗಳಲ್ಲಿ ಆಲ್ಬಂ ಚಿತ್ರೀಕರಿಸಲಾಗಿದೆ. ವಿಶೇಷವಾಗಿ, ಸಂಗೀತ ನಿರ್ದೇಶಕ, ಕ್ಯಾಮೆರಾಮೆನ್‌ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ’ ಎನ್ನುತ್ತಾರೆ ಅವರು.

ಅಂದು ನಿರ್ಮಾಪಕ ಕೆ.ಮಂಜು ಹೊಸ ಹುಡುಗರು ಹೊರತಂದ “ಬ್ಯಾಡ್‌ ಬಾಯ್‌’ ಆಲ್ಬಂ ಬಿಡುಗಡೆ ಮಾಡಿದರು. “ಅಶ್ವಿ‌ನ್‌ರಾವ್‌ ವೇರಿ ಗುಡ್‌ ಬಾಯ್‌. ಆದರೆ, “ಬ್ಯಾಡ್‌ ಬಾಯ್‌’ ಎಂಬ ಆಲ್ಬಂನಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರಷ್ಟೇ. ಹಿಂದಿ, ಇಂಗ್ಲೀಷ್‌ನಲ್ಲಿ ಆಲ್ಬಂ ಸಾಂಗ್‌ ಟ್ರೆಂಡ್‌ ಇತ್ತು. ಮೆಲ್ಲನೆ ಕನ್ನಡಕ್ಕೂ ಬಂತು. ಈಗ ವಿಲನ್‌ಗಳಿಗಾಗಿಯೇ “ಬ್ಯಾಡ್‌ಬಾಯ್‌’ ಎಂಬ ಆಲ್ಬಂ ಹೊರತಂದಿರುವುದು ಹುಡುಗರಲ್ಲಿರುವ ಕಲಾಪ್ರೀತಿ ತೋರಿಸುತ್ತದೆ. ಇದನ್ನು ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡಿ, ಅದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕು, ಹಣವೂ ಬರಲಿ’ ಎಂದರು ಮಂಜು.

ಅಂದು ಕ್ಯಾಮೆರಾಮೆನ್‌ ಪ್ರಸನ್ನ, ಸಂಗೀತ ನಿರ್ದೇಶಕ ಸಿದ್ಧಾರ್ಥ್, ಮಹಿ, ಮಂಜೇಶ್‌, ಅಲೋಕ್‌, ಪ್ರಸನ್ನ, ವಿಷ್ಣು ಎಲ್ಲರೂ ಮಾತಾಡಿದರು. ಅಂದಹಾಗೆ, ಈ “ಬ್ಯಾಡ್‌ಬಾಯ್‌’ ಆಲ್ಬಂ ಲಹರಿ ಆಡಿಯೋ ಸಂಸ್ಥೆ ಮೂಲಕ ಹೊರಬಂದಿದೆ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.