ಕುರುಕ್ಷೇತ್ರ ಮಹಾತ್ಮೆ

ಇಂದು ತೆರೆಗೆ

Team Udayavani, Aug 9, 2019, 5:35 AM IST

ಬೇಕಾದ ಪೂರ್ವ ಸಿದ್ಧತೆ ಇದ್ದರೆ ನೀವು ಕಂಡ ಕನಸನ್ನು ನನಸು ಮಾಡೋದು ಸುಲಭ. ‘ಕುರುಕ್ಷೇತ್ರ’ ಚಿತ್ರ ಕೂಡಾ ನಿರ್ಮಾಪಕ ಮುನಿರತ್ನ ಅವರ ಕನಸು. ‘ಕುರುಕ್ಷೇತ್ರ’ ಸಿನಿಮಾ ಮಾಡಬೇಕೆಂಬುದು ಮುನಿರತ್ನ ಅವರ ಇವತ್ತಿನ ಕನಸಲ್ಲ. 2007ರ ಕನಸು. ಅಂದು ದರ್ಶನ್‌ ಜೊತೆ ‘ಅನಾಥರು’ ಸಿನಿಮಾ ಮಾಡುವಾಗಲೇ, ‘ಮುಂದೆ ನಾವು ಕುರುಕ್ಷೇತ್ರ ಮಾಡುವ’ ಎಂದು ಹೇಳಿಕೊಂಡ ಮುನಿರತ್ನ ಅದನ್ನು ಈಗ ನನಸು ಮಾಡಿಕೊಂಡಿದ್ದಾರೆ. ಚಿತ್ರ ಇಂದು ತೆರೆಕಾಣುತ್ತಿದೆ.

ಇಡೀ ಕನ್ನಡ ಚಿತ್ರರಂಗವೇ ಎದುರು ನೋಡುತ್ತಿದ್ದ ದಿನ ಬಂದೇ ಬಿಟ್ಟಿದೆ. ಈಗಾಗಲೇ ಅಭಿಮಾನಿಗಳ ಸಂಭ್ರಮ ಆರಂಭವಾಗಿದೆ, ಅನೇಕ ದಾಖಲೆಗಳಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇಷ್ಟು ಹೇಳಿದ ಮೇಲೆ ನಾವು ಯಾವ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆಂದು ಗೊತ್ತಾಗಿರುತ್ತದೆ. ಹೌದು, ನಾವು ಹೇಳುತ್ತಿರುವುದು ‘ಕುರುಕ್ಷೇತ್ರ’ದ ಬಗ್ಗೆಯೇ. ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿರುವ ‘ಕುರುಕ್ಷೇತ್ರ’ ಇಂದು ತೆರೆಕಾಣುತ್ತಿದೆ.

ಬಹುತಾರಾಗಣದ ಈ ಚಿತ್ರದಲ್ಲಿ ದರ್ಶನ್‌ ದುರ್ಯೋಧನನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಇವತ್ತಿನ ಕಾಲಘಟ್ಟಕ್ಕೆ ‘ಕುರುಕ್ಷೇತ್ರ’ದಂತಹ ಚಿತ್ರಗಳ ಮಹತ್ವ ಹೆಚ್ಚಿನದು. ಕನ್ನಡ ಚಿತ್ರರಂಗದ ಇತಿಹಾಸವನ್ನು ನೋಡಿದರೆ ನಮ್ಮಲ್ಲಿ ಸಾಕಷ್ಟು ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಬಂದಿವೆ. ಅನೇಕರು ದೊಡ್ಡ ಕನಸುಗಳನ್ನು ಕಂಡು ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ಮಾಡಿದ್ದಾರೆ. ತಂತ್ರಜ್ಞಾನ ಮುಂದುವರೆದಿರದ ಆ ಕಾಲದಲ್ಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ, ಈಗ ತಂತ್ರಜ್ಞಾನ ಮುಂದುವರೆದಿದೆ. ಕೈಯಲ್ಲಿ ಕಾಸಿದ್ದರೆ, ಬೇಕಾದ ಪೂರ್ವ ಸಿದ್ಧತೆ ಇದ್ದರೆ ನೀವು ಕಂಡ ಕನಸನ್ನು ನನಸು ಮಾಡೋದು ಸುಲಭ. ‘ಕುರುಕ್ಷೇತ್ರ’ ಚಿತ್ರ ಕೂಡಾ ನಿರ್ಮಾಪಕ ಮುನಿರತ್ನ ಅವರ ಕನಸು.

‘ಕುರುಕ್ಷೇತ್ರ’ ಸಿನಿಮಾ ಮಾಡಬೇಕೆಂಬುದು ಮುನಿರತ್ನ ಅವರ ಇವತ್ತಿನ ಕನಸಲ್ಲ. 2007ರ ಕನಸು. ಅಂದು ದರ್ಶನ್‌ ಜೊತೆ ‘ಅನಾಥರು’ ಸಿನಿಮಾ ಮಾಡುವಾಗಲೇ, ‘ಮುಂದೆ ನಾವು ಕುರುಕ್ಷೇತ್ರ ಮಾಡುವ’ ಎಂದು ಹೇಳಿಕೊಂಡ ಮುನಿರತ್ನ ಅದನ್ನು ಈಗ ನನಸು ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ನಿರ್ಮಾಪಕ ಎಂದರೆ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನು ಒದಗಿಸುವವ ಎಂಬ ಮಾತಿದೆ. ಆದರೆ, ‘ಕುರುಕ್ಷೇತ್ರ’ ವಿಚಾರದಲ್ಲಿ ಮುನಿರತ್ನ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಯಾವ ಅಂಶವನ್ನು ಹೈಲೈಟ್ ಮಾಡಿ ಸಿನಿಮಾ ಮಾಡಬೇಕು ಎಂಬ ವಿಚಾರದಿಂದ ಹಿಡಿದು ಕಲಾವಿದರ ಆಯ್ಕೆ, ಕಾಸ್ಟ್ಯೂಮ್‌, ಬಳಸಬೇಕಾದ ಗದೆ, ಗ್ರಾಫಿಕ್‌ವರೆಗೆ ಖುದ್ದು ಮುನಿರತ್ನ ಅವರೇ ಆಸಕ್ತಿ ವಹಿಸಿ ಮಾಡಿಸಿದ್ದಾರೆ. ಇವರ ಕನಸಿಗೆ, ಉತ್ಸಾಹಕ್ಕೆ ಸಾಥ್‌ ಕೊಟ್ಟವರು ನಿರ್ದೇಶಕ ನಾಗಣ್ಣ. ಈ ಇಬ್ಬರ ಕನಸನ್ನು ಸಾಕಾರಗೊಳಿಸುವಲ್ಲಿ ಸಂಪೂರ್ಣ ಬೆಂಬಲ ನೀಡಿದ್ದು ಕಲಾವಿದರು ಹಾಗೂ ತಂತ್ರಜ್ಞರು. ನಿರ್ಮಾಪಕ ಮುನಿರತ್ನ ಅವರು ದುರ್ಯೋಧನನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಕುರುಕ್ಷೇತ್ರ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಹೇಳಿಕೇಳಿ ‘ಕುರುಕ್ಷೇತ್ರ’ ಬಹುತಾರಾಗಣದ ಚಿತ್ರ. ದರ್ಶನ್‌, ಅಂಬರೀಶ್‌, ಶಶಿಕುಮಾರ್‌, ನಿಖೀಲ್, ಅರ್ಜುನ್‌ ಸರ್ಜಾ, ಸೋನು ಸೂದ್‌, ದಾನಿಶ್‌, ಯಶಸ್‌ ಸೂರ್ಯ, ಹರಿಪ್ರಿಯಾ, ಸ್ನೇಹಾ, ರಾಕ್‌ಲೈನ್‌ ವೆಂಕಟೇಶ್‌, ಮೇಘನಾ ರಾಜ್‌ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಕಲಾವಿದರ ಪಟ್ಟಿ ಬೆಳೆಯುತ್ತದೆ. ಅಷ್ಟೂ ಮಂದಿ ಕಲಾವಿದರನ್ನು ಒಟ್ಟಿಗೆ ಸೇರಿಸಿ ಮುನಿರತ್ನ ಹಾಗೂ ತಂಡ ‘ಕುರುಕ್ಷೇತ್ರ’ ಕಟ್ಟಿದೆ. ಕೇವಲ 2 ಡಿಯಲ್ಲಿ ಅಷ್ಟೇ ಅಲ್ಲದೇ, 3ಡಿಯಲ್ಲೂ ಈ ಚಿತ್ರ ತಯಾರಾಗಿದೆ. ಜೊತೆಗೆ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಚಿತ್ರ ತಯಾರಾಗಿದ್ದು, ಮೊದಲ ಹಂತವಾಗಿ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.

ರಾಕ್‌ಲೈನ್‌ ವೆಂಕಟೇಶ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವ ಜೊತೆಗೆ ಚಿತ್ರದ ವಿತರಣೆಯ ಹಕ್ಕನ್ನೂ ಪಡೆದಿದ್ದಾರೆ. ಈಗಾಗಲೇ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಇಂದಿನಿಂದ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರೇಕ್ಷಕರು ‘ಕುರುಕ್ಷೇತ್ರ’ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಪೌರಾಣಿಕ ಸಿನಿಮಾಗಳ ದಾರಿಯೂ ದೊಡ್ಡದಾಗಲಿದೆ.

ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಟ ಕಂ ನಿರ್ದೇಶಕ ದಿ. ಶಂಕರನಾಗ್‌ ಅವರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವ ಯುವ ಟೆಕ್ಕಿಗಳ ಗುಂಪೊಂದು ವಾರಾಂತ್ಯದಲ್ಲಿ ಮತ್ತು ಬಿಡುವು ಸಿಕ್ಕಾಗ ಒಂದಷ್ಟು ಸಿನಿಮಾ...

  • ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲು ಮುಂದಾಗಿದ್ದಾರೆ. ಯೋಗಿ ಜಿ ರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲಿದ್ದಾರೆ....

  • ನಾನು ಸಾಕಷ್ಟು ಕಥೆ ಕೇಳಿದ್ದೇನೆ. ಆದರೆ, ಎಲ್ಲವನ್ನೂ ಒಪ್ಪಿಲ್ಲ. ಆದಷ್ಟು ಚ್ಯೂಸಿಯಾದೆ. ಬಂದ ಕಥೆಗಳಲ್ಲಿ ಅನೇಕ ಕಥೆಗಳು ರೆಗ್ಯುಲರ್‌ ಪ್ಯಾಟ್ರನ್‌ನಲ್ಲಿದ್ದವು....

  • ಮೋಹನ್‌ ಸದ್ದಿಲ್ಲದೆಯೇ ಮತ್ತೂಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು "ಜಿಗ್ರಿ ದೋಸ್ತ್'....

  • ಇದು ಕಾಮನ್‌ ಮ್ಯಾನ್‌ ಮತ್ತು ರಾಯಲ್‌ ಮ್ಯಾನ್‌ ಕುರಿತಾದ ಕಥೆ... - ಹೀಗೆ ಹೇಳಿ ಹಾಗೊಂದು ಸಣ್ಣ ನಗೆ ಬೀರಿದರು ನಿರ್ದೇಶಕ ನಾಗಚಂದ್ರ. ಅವರು ಹೇಳಿದ್ದು, "ಜನ್‌ಧನ್‌'...

ಹೊಸ ಸೇರ್ಪಡೆ

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...

  • ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ "ಸ್ಟ್ರೀಟ್‌ ಸಿಂಗರ್‌' ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ...