ಪ್ರೀತಿಯ ಹುಚ್ಚು! ಮೋಸ ಹೋದವರ ಮತ್ತು ಮಾಡುವವರ ಕಥೆ


Team Udayavani, Sep 1, 2017, 6:00 AM IST

vaira-kattikondavara-kushi.jpg

ಹಾರರ್‌, ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ.  “ಹೆಚ್‌’ ಎನ್ನುವುದು ಚಿತ್ರದ ಹೆಸರಾದರೆ, “ಯಾರಿಗೆ’ ಎಂಬುದು ಶೀರ್ಷಿಕೆ ಅಡಿಬರಹ. ಶೀರ್ಷಿಕೆಯೇ ವಿಭಿನ್ನವಾಗಿದೆ. ಹಾಗಾದರೆ, ಸಿನಿಮಾ ಹೇಗಿದೆ? ಇದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು. ಈ ಚಿತ್ರದ ಮೂಲಕ ಲಕ್ಷ್ಮೀರಾಜ್‌ ಶೆಟ್ಟಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಹೀರೋ ಕೂಡ ಆಗಿದ್ದಾರೆ.

ಇಲ್ಲಿ “ಹೆಚ್‌’ ಅಂದರೆ ಏನರ್ಥ? ಅದಕ್ಕೆ ಉತ್ತರಿಸುವ ನಿರ್ದೇಶಕರು, “ಈ ಹೃದಯದ ಪ್ರೀತಿ ಹುಚ್ಚು ಎಲ್ಲರಿಗೂ ಕಿಚ್ಚು ಬರುವಂತೆ ಮಾಡುತ್ತೆ. ಅದೇ ಅರ್ಥ ಶೀರ್ಷಿಕೆಯಲ್ಲೂ ಉಂಟು. ಅದು ಸಿನಿಮಾ ನೋಡಿದಾಗ ಎಲ್ಲವೂ ಅರ್ಥವಾಗುತ್ತೆ’ ಅನ್ನುತ್ತಾರೆ ನಿರ್ದೇಶಕರು. “ಒಂದು ಹೆಣ್ಣು ಹೇಗೆ ಮೋಸ ಹೋಗುತ್ತಾಳ್ಳೋ, ಹಾಗೆ ಗಂಡು ಕೂಡ ಅದೇ ರೀತಿ ಮೋಸ ಹೋಗುತ್ತಾನೆ ಮತ್ತು ಮಾಡುತ್ತಾನೆ ಅನ್ನೋದು ಸಿನಿಮಾದ ಕಥೆ. ಇಲ್ಲಿ ಕುತೂಹಲಕಾರಿ ಅಂಶಗಳಿವೆ. ಹೊಸಬಗೆಯ ಚಿತ್ರದಲ್ಲಿ ಎಲ್ಲವೂ ಹೊಸತನದಿಂದ ಕೂಡಿವೆ. ಬೆಂಗಳೂರು, ಚೆನ್ನಪಟ್ಟಣ, ರಾಮನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ.  ಕಡಿಮೆ ಬಜೆಟ್‌ನಲ್ಲಿ ಒಂದು ಗುಣಮಟ್ಟದ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.

ಇನ್ನು, ಮಂಜು ಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಹಿಂದೆ ಮಂಜು ಕವಿ ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ, ಭಕ್ತಿಗೀತೆಗಳ ಆಲ್ಬಂ ಮಾಡಿದ್ದಾರೆ. ಅವರಿಗೆ ಇದು ಹೊಸ ಅನುಭವವಂತೆ. ಚಿತ್ರದಲ್ಲಿ ರಾಯಚೂರು ಮೂಲದ ಜ್ಯೋತಿಗೆ ಇಲ್ಲಿ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಪಾತ್ರ ಸಿಕ್ಕಿದೆಯಂತೆ. ಅವಳಿಗೊಂದು ನ್ಯೂನ್ಯತೆ ಇದ್ದು, ಅದೇ ಸಿನಿಮಾಗೊಂದು ತಿರುವು ಎನ್ನುತ್ತಾರೆ ಅವರು. ಶಿಕಾರಿಪುರದ ವಿದ್ಯಾ ಶೆಟ್ಟಿಗಾರ್‌ ಎಂಬ ಮತ್ತೂಬ್ಬ ನಾಯಕಿಯೂ ಇಲ್ಲಿದ್ದಾರೆ. ಅವರಿಲ್ಲಿ ಪ್ರೀತಿ ನಂಬಿ ಯಾವ ರೀತಿ ಮೋಸ ಹೋಗುವ ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಇನ್ನೊಬ್ಬ ನಾಯಕಿಯೂ ಇದ್ದಾರೆ. ಅವರ ಪಾತ್ರವೇ ಚಿತ್ರಕ್ಕೊಂದು ಜೀವಾಳ ಎಂಬುದು ಚಿತ್ರತಂಡದ ಮಾತು. 

ಚಿತ್ರಕ್ಕೆ ವಿನಯ್‌ ಗೌಡ ಕ್ಯಾಮೆರಾ ಹಿಡಿದರೆ, ಎ.ಆರ್‌.ಕೃಷ್ಣ ಸಂಕಲನ ಮಾಡಿದ್ದಾರೆ. ಇನ್ನು, ಈ ಚಿತ್ರವನ್ನು ನಿರ್ಮಿಸಿರೋದು, ಚಿತ್ರಮಂದಿರದಲ್ಲಿ  ಗೇಟ್‌ಕೀಪರ್‌ ಆಗಿ, ವಿತರಕರಾಗಿ, ಆ ಬಳಿಕ ನಿರ್ಮಾಣ ನಿರ್ವಹಣೆ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡಿ ಸುಮಾರು 24 ವರ್ಷ ಅನುಭವ ಪಡೆದಿರುವ ಬ್ರಿಜೇಶ್‌ ಕುಮಾರ್‌. ಇವರ ಜತೆಗೆ ಗೆಳಯ ಮಹೇಂದ್ರ ವರಕೂಡು ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಎ’ ಪ್ರಮಾಣ ಪತ್ರ ಕರುಣಿಸಿದೆ.

ಟಾಪ್ ನ್ಯೂಸ್

jghjkgjkhhgf

ಮದಗಜನತ್ತ ಫ್ಯಾಮಿಲಿ ಆಡಿಯನ್ಸ್‌

rwytju11111111111

ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಫಿಯಾ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

‘ಮಾಫಿಯಾ’ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

ashika ranganath

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

ombatthane dikku kannada movie

ಡಿ. 31ಕ್ಕೆ ಒಂಬತ್ತನೇ ದಿಕ್ಕು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

jghjkgjkhhgf

ಮದಗಜನತ್ತ ಫ್ಯಾಮಿಲಿ ಆಡಿಯನ್ಸ್‌

rwytju11111111111

ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಶಬರಿಮಲೆಯಲ್ಲಿ ಭಾರೀ ಮಳೆ: ಭಕ್ತರಿಗೆ ತೊಂದರೆ

ಶಬರಿಮಲೆಯಲ್ಲಿ ಭಾರೀ ಮಳೆ: ಭಕ್ತರಿಗೆ ತೊಂದರೆ

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಡ್ರಗ್ಸ್‌ ಚಟುವಟಿಕೆಗಳ ತಡೆಗೆ ಜಾಗೃತಿ ಅಗತ್ಯ

ಡ್ರಗ್ಸ್‌ ಚಟುವಟಿಕೆಗಳ ತಡೆಗೆ ಜಾಗೃತಿ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.