ಇಂದು ಮನುರಂಜನ್ ಅಭಿನಯದ ‘ಮುಗಿಲ್‌ಪೇಟೆ’ ರಿಲೀಸ್
Team Udayavani, Nov 19, 2021, 11:25 AM IST
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ “ಮುಗಿಲ್‌ಪೇಟೆ’ ಚಿತ್ರ ಇಂದು ತೆರೆಗೆ ಬರುತ್ತಿದೆ. ಲವ್ ಕಂ ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ “ಮುಗಿಲ್‌ಪೇಟೆ’ ಚಿತ್ರದಲ್ಲಿ ಮನುರಂಜನ್‌ಗೆ ನಾಯಕಿಯಾಗಿ ಖಯಾದು ರೋಹರ್ ಜೋಡಿಯಾಗಿದ್ದಾರೆ.
ಉಳಿದಂತೆ ತಾರಾ ಅನುರಾಧಾ, ಅವಿನಾಶ್, ರಂಗಾಯಣ ರಘು, ರಿಷಿ, ಸಾಧುಕೋಕಿಲ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಸಿನಿಮಾದ ಫೀಲ್ ಸದಾ ಕಾಡಬೇಕು: ರಾಜ್ ಶೆಟ್ಟಿ ಡ್ರೀಮ್ ಪ್ರಾಜೆಕ್ಟ್
ಚಿತ್ರದ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಭರತ್ ನಾವುಂದ ನಿರ್ದೇಶನದ ಈ ಚಿತ್ರ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ