ಮೆಟ್ರೋ ರಾಗ; ಸಿಲಿಕಾನ್‌ ತಾಳ; ಹೊಸ ಗಾನ ಬಜಾನ

Team Udayavani, Mar 17, 2017, 3:50 AM IST

17-SUCHI-2.jpg

ಅಂದು ಎಲ್ಲವೂ ರೆಡಿಯಾಗಿತ್ತು. ವೇದಿಕೆ ಕೂಡ ಕಲರ್‌ಫ‌ುಲ್‌ ಆಗಿತ್ತು. ಎಲ್ಲರೂ ಬಂದಿದ್ದರು. ಕಾರ್ಯಕ್ರಮ ಮಾತ್ರ ಶುರುವಾಗಲಿಲ್ಲ. ಬರಬೇಕಾದವರಿಗಾಗಿ ಎದುರು ನೋಡುತ್ತಿದ್ದರು. ಕೊನೆಗೂ ಆ ಕಾರ್ಯಕ್ರಮದ ಅತಿಥಿಯ ಆಗಮನವಾಯ್ತು. ಅಷ್ಟೊತ್ತಿಗೆ ಒಂದು ಗಂಟೆ ತಡವಾಗಿತ್ತು. ಅವರು ಬಂದ ಕೂಡಲೆ ಆ ಕಾರ್ಯಕ್ರಮಕ್ಕೂ ಚಾಲನೆ ಸಿಕ್ಕಿತ್ತು. ಇದೆಲ್ಲಾ ಕಂಡುಬಂದದ್ದು “ಸಿಲಿಕಾನ್‌ ಸಿಟಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ. ಅಂದು ಸುದೀಪ್‌ ಮತ್ತು ಅಂಬರೀಶ್‌ಗಾಗಿ ಚಿತ್ರತಂಡ ಕಾಯುತ್ತಿತ್ತು. ಮೊದಲು ಸುದೀಪ್‌ ಆಗಮಿಸಿದರು. ಅಂಬರೀಶ್‌ ಬರಲ್ಲ ಎಂಬ ಸೂಚನೆ ಸಿಕ್ಕ ಕೂಡಲೇ, ವೇದಿಕೆಗೆ ಸುದೀಪ್‌ ಅವರನ್ನು ಬರಮಾಡಿಕೊಂಡ ಚಿತ್ರತಂಡ ಅವರಿಂದ ಆಡಿಯೋ ಸಿಡಿ ಬಿಡುಗಡೆ ಮಾಡಿಸಿತು.

 ಸಿಡಿ ಬಿಡುಗಡೆ ಮಾಡಿದ ಸುದೀಪ್‌, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. “ಕಿಟ್ಟಿ ಹಳೆಯ ಗೆಳೆಯ. ನೋಡೋಕೆ ಒರಟನಂತೆ ಕಾಣಾ¤ರೆ. ದಾಡಿ ಬಿಟ್ಟು, ನಡೆಯೋ ಸ್ಟೈಲ್‌ ನೋಡಿ ನಂಗೂ ಹಾಗೇ ಅನಿಸಿತ್ತು. ಕಿಟ್ಟಿಯ ಸಿನಿಮಾ ನೋಡಿದ್ದೇನೆ. ಹಾರ್ಡ್‌ವರ್ಕರ್‌. ಈ ಸಿನಿಮಾ ಯಶಸ್ಸು ಕೊಡಲಿ’ ಅಂದರು ಸುದೀಪ್‌.

ನಿರ್ದೇಶಕ ಮುರಳಿ ಗುರಪ್ಪ ಅವರಿಗೆ ನಿರ್ದೇಶನ ಬಹಳ ವರ್ಷಗಳ ಕನಸಾಗಿತ್ತಂತೆ. “ಸಂಕಲನಕಾರನಾಗಿರುವ ನನಗೆ ಏನು ಬೇಕೋ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಚಿತ್ರೀಕರಿಸಿದ್ದೇನೆ. ಒಳ್ಳೇ ನಿರ್ಮಾಪಕ ಗೆಳೆಯ ಸಿಕ್ಕಿದ್ದಾರೆ. ಒಳ್ಳೆಯ ತಂಡ ಸಿಕ್ಕಿದೆ. ಸಿನಿಮಾ ನನ್ನ ಕಲ್ಪನೆಗೂ ಮೀರಿ ಮೂಡಿಬಂದಿದೆ. ನಿಮ್ಮಗಳ ಹಾರೈಕೆ ಇರಲಿ’ ಎಂದರು ಮುರಳಿ ಗುರಪ್ಪ.

ನಿರ್ಮಾಪಕ ರವಿ ಅವರಿಗೆ ಸಿನಿಮಾ ಗೆಲುವು ಕೊಡುತ್ತೆ ಎಂಬ ವಿಶ್ವಾಸ. ಸಿನಿಮಾ ನೋಡಿದವರಿಗೆ ಹೊಸ ಫೀಲ್‌ ಆಗುತ್ತೆ ಎಂಬ ನಂಬಿಕೆಯಂತೆ. ಇನ್ನು, ಅಂದಿನ ಹೀರೋ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌. “ಇದು ತಮಿಳಿನ “ಮೆಟ್ರೋ’ ರಿಮೇಕ್‌ ಆಗಿದ್ದರೂ, ಇಲ್ಲಿ  ಎರಡು ಹೊಸ ಬಗೆಯ ಹಾಡು ಕೊಟ್ಟಿದ್ದೇನೆ. ವಿಷ್ಯುಯಲ್ಸ್‌ ನೋಡಿದಾಗ ಖುಷಿಯಾಯ್ತು. ಒಳ್ಳೇ ತಂಡದಲ್ಲಿ ನಾನಿದ್ದೇನೆ ಎಂಬುದೇ ಹೆಮ್ಮೆ’ ಅಂದರು ಅನೂಪ್‌.

ಸಹೋದರನ ನಿರ್ದೇಶನದ ಬಗ್ಗೆ ಗೀತಾ ಗುರಪ್ಪ ಅವರಿಗೆ ನಂಬಿಕೆ ಇದೆಯಂತೆ. “ಮುರಳಿ ಗುರಪ್ಪ ಅವರನ್ನು ಎಡಿಟರ್‌ ಆಗಿ ನೋಡಿದ್ದೆ. ಈಗ ನಿರ್ದೇಶಕನಾಗಿ ನೋಡಿದ್ದೇನೆ. ಮೊದಲ ಸಿನಿಮಾ ಇದಾಗಿದ್ದರೂ, ಅನುಭವಿಯಂತೆ ಕೆಲಸ ಮಾಡಿದ್ದಾನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು ಗೀತಾ ಗುರಪ್ಪ.

ಕೊನೆಯಲ್ಲಿ ಮಾತಿಗಿಳಿದ ಕಿಟ್ಟಿ, ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ್ದೇನೆ. ಎಲ್ಲರ ಶುಭ ಹಾರೈಕೆ ಇರಲಿ ಎಂದರು. ಅಂದು ಪೊಲೀಸ್‌ ಅಧಿಕಾರಿ ಭಾಸ್ಕರ್‌ ರಾವ್‌, ಛಾಯಾಗ್ರಾಹಕ ಶ್ರೀನಿವಾಸ್‌, ಷಡಕ್ಷರಿ ಇತರರು ಮಾತಾಡುವ ಹೊತ್ತಿಗೆ ಸಮಯ ಮೀರಿತ್ತು. ಟ್ರೇಲರ್‌ ತೋರಿಸುವುದರೊಂದಿಗೆ ಆಡಿಯೋ ಸಿಡಿ ಕಾರ್ಯಕ್ರಮಕ್ಕೂ ಬ್ರೇಕ್‌ ಬಿತ್ತು.

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.