ತೆರೆಮೇಲೆ ಬರಲಿದ ಭೂಗತ ದೊರೆ ಮುತ್ತಪ್ಪ ರೈ ರಿಯಲ್ ಲೈಫ್ ಕಹಾನಿ.
Team Udayavani, Nov 27, 2020, 1:36 PM IST
ನಿರ್ದೇಶಕ ರವಿ ಶ್ರೀವತ್ಸ ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ್ದಾರೆ. ಅಂಡರ್‌ವರ್ಲ್ಡ್ ಕಥೆಗಳನ್ನು ಸಿನಿಮಾ ಮಾಡುವುದರಲ್ಲಿ ಎತ್ತಿದಕೈ ಎನಿಸಿಕೊಂಡಿರುವ ರವಿ, ಈ ಬಾರಿಯೂ ಅಂಡರ್‌ವರ್ಲ್ಡ್ ಕಥೆಯೊಂದು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ನೀವು ಬಯೋಪಿಕ್ ಎನ್ನಬಹುದು. ಈ ಬಾರಿ ರವಿ ಶ್ರೀವತ್ಸ ಸಿನಿಮಾ ಮಾಡುತ್ತಿರೋದು ಮುತ್ತಪ್ಪ ರೈ ಕುರಿತಾಗಿ.
ಹೌದು, ಭೂಗತ ಲೋಕದಲ್ಲಿ ಸದ್ದು ಮಾಡಿದ್ದ ಮುತ್ತಪ್ಪ ರೈಯವರ ಬಯೋಪಿಕ್ ಮಾಡಲು ರವಿ ಶ್ರೀವತ್ಸ ಮುಂದಾಗಿದ್ದು, ಚಿತ್ರಕ್ಕೆ “ಎಂಆರ್’ ಎಂಬ ಶೀರ್ಷಿಕೆ ಇಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಚಿತ್ರದ ಫೋಟೋಶೂಟ್ ಕೂಡಾ ನಡೆದಿದೆ.
ಈ ಚಿತ್ರವನ್ನು ಶೋಭ ರಾಜಣ್ಣ ನಿರ್ಮಿಸುತ್ತಿದ್ದು, ಅವರ ಪುತ್ರ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಮೂರು ಭಾಗದಲ್ಲಿ ಹೊರತರುವ ಪ್ಲ್ರಾನ್ ಚಿತ್ರತಂಡಕ್ಕಿದ್ದು, ಮುತ್ತಪ್ಪ ರೈ ಬಾಲ್ಯದಿಂದ ಹಿಡಿದು ಅವರ ಕೊನೆಯ ದಿನಗಳವರೆಗೂ ಚಿತ್ರದಲ್ಲಿ ತೋರಿಸುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಆ ನಿಟ್ಟಿನಲ್ಲೇ ಸ್ಕ್ರಿಪ್ಟ್ ಮಾಡಿಕೊಂಡಿದೆ ಎನ್ನಲಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444