ನ್ಯೂರಾನ್‌ ತಂಡಕ್ಕೆ ದರ್ಶನ್‌ ಬಲ

ಟೆಕ್ಕಿಯ ಸಿನಿಯಾನ

Team Udayavani, Sep 20, 2019, 5:00 AM IST

“ನ್ಯೂರಾನ್‌’ ಬಗ್ಗೆ ನೀವು ಕೇಳಿರಬಹುದು. ಮನುಷ್ಯನ ದೇಹದ ವಿವಿಧ ಭಾಗಗಳಿಂದ ಮೆದುಳಿಗೆ ಸಂವಹನ ಮತ್ತು ಸಂಪರ್ಕ ಸಾಧಿಸುವಲ್ಲಿ ಈ “ನ್ಯೂರಾನ್‌’ ಮಹತ್ವದ ಪಾತ್ರ ವಹಿಸುತ್ತದೆ. ಒಂದೊಮ್ಮೆ “ನ್ಯೂರಾನ್‌’ ಕೆಲಸದಲ್ಲಿ ಏನಾದರೂ ವ್ಯತ್ಯಾಸವಾದರೆ, ಮನುಷ್ಯನ ದೇಹದ ಭಾಗಗಳು ಮತ್ತು ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದೆಲ್ಲ ಸರಿ ಈಗ ಯಾಕೆ “ನ್ಯೂರಾನ್‌’ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಈಗ ಇದೇ “ನ್ಯೂರಾನ್‌’ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬರುತ್ತಿದೆ. ಸದ್ಯ ಚಿತ್ರೀಕರಣ ಮತ್ತು ತನ್ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ.

ಅಂದಹಾಗೆ, “ನ್ಯೂರಾನ್‌’ ಚಿತ್ರಕ್ಕೆ ನವ ನಿರ್ದೇಶಕ ವಿಕಾಸ್‌ ಪುಷ್ಪಗಿರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಲ ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ಮಾಡಿದ್ದ ವಿಕಾಸ್‌ ಪುಷ್ಪಗಿರಿ ಬಳಿಕ, ಚಿತ್ರರಂಗದ ಮೇಲಿನ ಆಸಕ್ತಿಯಿಂದ ಐ.ಟಿ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿ ಸ್ಯಾಂಡಲ್‌ವುಡ್‌ ಕಡೆಗೆ ಮುಖ ಮಾಡಿದವರು. ಗಾಂಧಿನಗರದಲ್ಲಿ ಒಂದಷ್ಟು ಓಡಾಟದ ಬಳಿಕ ವಿಕಾಸ್‌ ಪುಷ್ಪಗಿರಿ ಅವರ ಸಿನಿಮಾ ಮಾಡುವ ಕನಸಿಗೆ, ಕೈ ಜೋಡಿಸಿದ ವಿನಯ್‌ ಕುಮಾರ್‌ ವಿ.ಆರ್‌ “ಫ್ರೆಂಡ್ಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ “ನ್ಯೂರಾನ್‌’ ಚಿತ್ರವನ್ನು ನಿರ್ಮಿಸಿದ್ದಾರೆ.

“ನ್ಯೂರಾನ್‌’ ಚಿತ್ರದಲ್ಲಿ ನವನಟ ಯುವ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಯುವ ಅವರಿಗೆ ನೇಹಾ ಪಾಟೀಲ್‌, ವೈಷ್ಣವಿ ಮೆನನ್‌ ಮತ್ತು ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಅರವಿಂದ್‌ ರಾವ್‌, ಜೈಜಗದೀಶ್‌, ಕಬೀರ್‌ ಸಿಂಗ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಹೊಸಬರ “ನ್ಯೂರಾನ್‌’ ತಂಡಕ್ಕೆ ಸಾಥ್‌ ನೀಡಿರುವ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, “ನ್ಯೂರಾನ್‌’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ದರ್ಶನ್‌, “ನ್ಯೂರಾನ್‌’ ಯಶಸ್ವಿಯಾಗಲಿ ಎಂದು ಹಾರೈಸಿದರು.

“ನ್ಯೂರಾನ್‌’ ಚಿತ್ರದ ಹಾಡುಗಳಿಗೆ ಗುರುಕಿರಣ್‌ ಸಂಗೀತ ಸಂಯೋಜನೆಯಿದ್ದು, ಡಾ. ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಶೋಯೆಬ್‌ ಅಹಮದ್‌ ಕೆ.ಎಂ ಛಾಯಾಗ್ರಹಣ, ಶ್ರೀಧರ್‌ ವೈ.ಎಸ್‌ ಸಂಕಲನವಿದೆ. ಸದ್ಯ ಬಿಡುಗಡೆಯಾಗಿರುವ “ನ್ಯೂರಾನ್‌’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗಳು ನಿಧಾನವಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ ನೋಡುಗರ ಗಮನ ಸೆಳೆಯುತ್ತಿದ್ದು, ಚಿತ್ರ ಅಕ್ಟೋಬರ್‌ ವೇಳೆಗೆ ತೆರೆಗೆ ಬರುವ ಯೋಚನೆಯಲ್ಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಟ ಕಂ ನಿರ್ದೇಶಕ ದಿ. ಶಂಕರನಾಗ್‌ ಅವರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವ ಯುವ ಟೆಕ್ಕಿಗಳ ಗುಂಪೊಂದು ವಾರಾಂತ್ಯದಲ್ಲಿ ಮತ್ತು ಬಿಡುವು ಸಿಕ್ಕಾಗ ಒಂದಷ್ಟು ಸಿನಿಮಾ...

  • ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲು ಮುಂದಾಗಿದ್ದಾರೆ. ಯೋಗಿ ಜಿ ರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲಿದ್ದಾರೆ....

  • ನಾನು ಸಾಕಷ್ಟು ಕಥೆ ಕೇಳಿದ್ದೇನೆ. ಆದರೆ, ಎಲ್ಲವನ್ನೂ ಒಪ್ಪಿಲ್ಲ. ಆದಷ್ಟು ಚ್ಯೂಸಿಯಾದೆ. ಬಂದ ಕಥೆಗಳಲ್ಲಿ ಅನೇಕ ಕಥೆಗಳು ರೆಗ್ಯುಲರ್‌ ಪ್ಯಾಟ್ರನ್‌ನಲ್ಲಿದ್ದವು....

  • ಮೋಹನ್‌ ಸದ್ದಿಲ್ಲದೆಯೇ ಮತ್ತೂಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು "ಜಿಗ್ರಿ ದೋಸ್ತ್'....

  • ಇದು ಕಾಮನ್‌ ಮ್ಯಾನ್‌ ಮತ್ತು ರಾಯಲ್‌ ಮ್ಯಾನ್‌ ಕುರಿತಾದ ಕಥೆ... - ಹೀಗೆ ಹೇಳಿ ಹಾಗೊಂದು ಸಣ್ಣ ನಗೆ ಬೀರಿದರು ನಿರ್ದೇಶಕ ನಾಗಚಂದ್ರ. ಅವರು ಹೇಳಿದ್ದು, "ಜನ್‌ಧನ್‌'...

ಹೊಸ ಸೇರ್ಪಡೆ