ಹೊಸ ಬೆಳಕು ಮೂಡುತಿದೆ

ಭರವಸೆಯ ಬೆಳಕಾದ ನವ ನಟಿಯರು

Team Udayavani, Mar 6, 2020, 5:52 AM IST

Hosa-Belaku

ಒಂದು ಸಿನಿಮಾ ಬಿಡುಗಡೆಯಾಗಿ, ಆ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದರೆ ಅದರ ಲಾಭ ಇಡೀ ತಂಡಕ್ಕೆ ಸಿಗುತ್ತದೆ. ಸಿನಿಮಾ ಚೆನ್ನಾಗಿಲ್ಲದಿದ್ದರೂ ನಟ-ನಟಿಯರ ನಟನೆ, ಅಟಿಟ್ಯೂಡ್‌ ಇಷ್ಟವಾದರೆ ಅದು ಆಯಾ ಸಿನಿಮಾದ ಕಲಾವಿದರಿಗೆ ಮುಂದಿನ ಭವಿಷ್ಯಕ್ಕೆ ಒಂದು ವೇದಿಕೆ ಒದಗಿಸೋದು ಸುಳ್ಳಲ್ಲ. ಇವತ್ತು ಕನ್ನಡ ಚಿತ್ರರಂಗದಲ್ಲಿರುವ ಬಹುತೇಕ ನಟ-ನಟಿಯರು, ಸ್ಟಾರ್‌ ಎನಿಸಿಕೊಂಡಿರುವವರು ತಮ್ಮ ಪ್ರತಿಭೆ ತೋರಿಸಿ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳ ಮೂಲಕವೇ ಬೆಳೆದು ಬಂದವರು. ಪ್ರತಿ ವರ್ಷ ಈ ತರಹ ಒಂದಷ್ಟು ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಎಂಟ್ರಿಕೊಡುತ್ತಲೇ ಇರುತ್ತಾರೆ. ಅದರಲ್ಲೂ ನಾಯಕಿಯರು ಸ್ವಲ್ಪ ಹೆಚ್ಚೇ ಎಂದು ಹೇಳಬೇಕು. ಅದಕ್ಕೊಂದು ಕಾರಣವಿದೆ.

ಚಿತ್ರರಂಗ ಒಂದು ಸಿನಿಮಾದ ಸೋಲು-ಗೆಲುವನ್ನು ಹೀರೋ ಮೂಲಕವೂ ನೋಡುತ್ತದೆ. ಸಿನಿಮಾ ಸೋತರೆ, ಅದರಲ್ಲೂ ಹೊಸ ನಾಯಕ ನಟನ ಸಿನಿಮಾ ಸೋತರೆ, ಆತ ಮತ್ತೂಂದು ಅವಕಾಶಕ್ಕಾಗಿ ಗಾಂಧಿನಗರ ತುಂಬಾ ಅಲೆದಾಡಬೇಕಾಗುತ್ತದೆ. ಆತನನ್ನು ಕರೆದು ಸಿನಿಮಾ ಮಾಡುವವರ ಸಂಖ್ಯೆಯೂ ಕಡಿಮೆಯೇ. ಆದರೆ, ನಾಯಕಿಯರ ವಿಷಯದಲ್ಲಿ ಆ ದೃಷ್ಟಿಕೋನ ಬದಲಾಗುತ್ತದೆ. ಒಂದು ಸಿನಿಮಾದಲ್ಲಿ ನಾಯಕಿಯರ ಪರ್‌ಫಾರ್ಮೆನ್ಸ್‌ ಚೆನ್ನಾಗಿದೆ ಎಂಬ ಮಾತು ಕೇಳಿಬಂದರೆ ಆ ನಾಯಕಿಗೆ ಬೇಡಿಕೆ ಬರುತ್ತದೆ.

ಹಾಗಂತ ಏಕಾಏಕಿ ಅವರಿಗೆ ಸಿನಿಮಾ ಸಿಗುತ್ತದೆ ಎಂದಲ್ಲ. ಬದಲಿಗೆ ಚಿತ್ರರಂಗದಲ್ಲಿ ಆ ನಾಯಕಿಯರ ಹೆಸರುಗಳು ಓಡಾಡುತ್ತಿರುತ್ತದೆ. ಹೊಸ ಸಿನಿಮಾಗಳು ಸೆಟ್ಟೇರುವಾಗ ಇಂತಹ ನಾಯಕಿಯರಿಗೆ ಆಫ‌ರ್‌ ಸಿಗುತ್ತವೆ. ಸಿನಿಮಾ ಒಪ್ಪೋದು ಬಿಡೋದು ಆ ನಾಯಕಿಗೆ ಬಿಟ್ಟ ವಿಚಾರ. 2020ರಲ್ಲೂ ಒಂದಷ್ಟು ಹೊಸ ನಾಯಕಿಯರು ಭರವಸೆ ಮೂಡಿಸಿದ್ದಾರೆ. ಆರಂಭದ ಎರಡು ತಿಂಗಳಲ್ಲಿ 50 ಪ್ಲಸ್‌ ಸಿನಿಮಾಗಳು ಬಿಡುಗಡೆಯಾಗಿವೆ. ಇದರಲ್ಲಿ ಸಾಕಷ್ಟು ಮಂದಿ ಹೊಸಬರು ಕೂಡಾ ನಟಿಸಿದ್ದಾರೆ. ಹಾಗೆ ಒಂದಷ್ಟು ಮಂದಿ ನಾಯಕಿಯರು ಭರವಸೆ ಮೂಡಿಸಿದ್ದಾರೆ. “ಭರತ ಬಾಹುಬಲಿ’ಯ ಸಾರಾ, “ಮಾಲ್ಗುಡಿ ಡೇಸ್‌’ನ ಗ್ರೀಷ್ಮಾ, “ದಿಯಾ’ದ ಖುಷಿ, “ಜಿಲ್ಕಾ’ದ ಪ್ರಿಯಾ ಹೆಗ್ಡೆ, “ಬಿಲ್‌ಗೇಟ್ಸ್‌’ ರೋಜಾ, “ಮಾಯಬಜಾರ್‌’ ಚೈತ್ರಾ, “ಮದ್ವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದ ಆರಾಧ್ಯ …. ಹೀಗೆ ಈ ವರ್ಷದ ಆರಂಭದಲ್ಲೇ ಒಂದಷ್ಟು ನಟಿಮಣಿಯರು ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಎಲ್ಲಾ ನಟಿಯರಿಗೆ ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಗಟ್ಟಿ ಭರವಸೆ ಮೂಡಿಸಿದ್ದಾರೆ.

ಪ್ರಿಯಾ ಹೆಗ್ಡೆ
“ಜಿಲ್ಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕರಾವಳಿ ಪ್ರತಿಭೆ ಪ್ರಿಯಾ ಹೆಗ್ಡೆ ತಮ್ಮ ಮೊದಲ ಕನ್ನಡ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಒಂದಷ್ಟು ಶಾರ್ಟ್‌ಫಿಲಂಸ್‌, ಮ್ಯೂಸಿಕ್‌ ಆಲ್ಬಂಗಳಲ್ಲಿ ಪ್ರಿಯಾ ಹೆಗ್ಡೆ ಅಭಿನಯಿಸಿದ ನಂತರ, “ದಗಲ್‌ಬಾಜಿಲು’ ತುಳು ಚಿತ್ರದಲ್ಲಿ ಅಭಿನಯಿಸಿದ ಅನುಭವದೊಂದಿಗೆ “ಜಿಲ್ಕ’ದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಪ್ರಿಯಾ ಕೂಡಾ ಬೆಳಕಿಗೆ ಬಂದಿದ್ದಾರೆ.

ಖುಷಿ
ಇತ್ತೀಚೆಗೆ ತೆರೆಕಂಡು ತುಂಬಾನೇ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ “ದಿಯಾ’ ಕೂಡಾ ಒಂದು. ಈ ಚಿತ್ರದ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಂಡ ಖುಷಿಗೆ ಈಗ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಕೆ ಪಾತ್ರವನ್ನು ಜೀವಿಸಿದ ರೀತಿಯನ್ನು ಶ್ಲಾ ಸುತ್ತಿದ್ದಾರೆ. ಈ ಮೂಲಕ ಖುಷಿ ಖುಷಿಯಾಗಿದ್ದಾರೆ. ಹೊಸ ಹೊಸ ಅವಕಾಶಗಳು ಆಕೆಗೆ ಹುಡುಕಿಕೊಂಡು ಬರುತ್ತಿವೆ. ಆದರೆ ಖುಷಿ, “ದಿಯಾ’ ಪಾತ್ರವನ್ನು ಮೀರಿಸುವ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.

ಸಾರಾ
ಮಂಜು ಮಾಂಡವ್ಯ ನಿರ್ದೇಶನ, ನಟನೆಯ “ಭರತ ಬಾಹುಬಲಿ’ ಚಿತ್ರದ ಮೂಲಕ ಚಿತ್ರದ ಎಂಟ್ರಿ ಕೊಟ್ಟ ನಾಯಕಿ ಸಾರಾ. ಮಾಡೆಲಿಂಗ್‌ ಕ್ಷೇತ್ರದಿಂದ ಬಂದ ಸಾರಾ ಕೂಡಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುವ ಮೂಲಕ ಬಾಲ್ಯದಿಂದಲೇ ಫ್ಯಾಷನ್‌, ಮಾಡೆಲಿಂಗ್‌ ಕ್ಷೇತ್ರದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಸಾರಾ ಬಳಿಕ ಅದನ್ನೇ ಕೆರಿಯರ್‌ ಆಗಿ ಆಯ್ಕೆ ಮಾಡಿಕೊಂಡ ಹುಡುಗಿ. ಮಾಡೆಲಿಂಗ್‌ ಜೊತೆಗೆ ಸಿನಿಮಾದ ಕಡೆ ಆಸಕ್ತಿ ಇದ್ದ ಸಾರಾಗೆ “ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ಸಾರಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇಷ್ಟೇ ಅಲ್ಲಾ, ಇನ್ನೂ ಸಾಕಷ್ಟು ನಟಿಯರು ಮೊದಲ ಚಿತ್ರದಲ್ಲೇ ಮಿಂಚಿದ್ದಾರೆ. “ಮಾಯಾಬಜಾರ್‌’ ಚಿತ್ರದಲ್ಲಿ ಚೈತ್ರಾ, ಬಿಲ್‌ಗೇಟ್ಸ್‌ ರೋಜಾ, ಆರಾಧ್ಯ ಇವರೆಲ್ಲರೂ ಭರವಸೆ ಮೂಡಿಸಿದ್ದಾರೆ. ಇದು ಆರಂಭದ ಎರಡು ತಿಂಗಳಲ್ಲಿ ಭರವಸೆ ಮೂಡಿಸಿದ ನಟಿಮಣಿಯರಾದರೆ, ಇನ್ನೊಂದಿಷ್ಟು ಮಂದಿ ಬಿಡುಗಡೆಯ ಹಾದಿಯಲ್ಲಿದ್ದಾರೆ. ಈ ಮೂಲಕ ಈ ವರ್ಷವೂ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಹೊಸ ನಾಯಕಿಯರು ಸಿಗುವುದರಲ್ಲಿ ಎರಡು ಮಾತಿಲ್ಲ. 

ಗ್ರೀಷ್ಮಾ
ವಿಜಯ ರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್‌’ ಚಿತ್ರದ ಮೂಲಕ ಬೆಳಕಿಗೆ ಬಂದ ಹುಡುಗಿ ಗ್ರೀಷ್ಮಾ. ಈ ಚಿತ್ರದಲ್ಲಿ ಗ್ರೀಷ್ಮಾಗೆ ಹೆಚ್ಚೇನು ಅವಕಾಶವಿರಲಿಲ್ಲ. ಆದರೆ, ಸಿಕ್ಕ ಅವಕಾಶವನ್ನು ಗ್ರೀಷ್ಮಾ ಚೆನ್ನಾಗಿ ಬಳಸಿಕೊಂಡರು. ಎಲ್ಲೆಲ್ಲಿ ಸ್ಕೋರ್‌ ಮಾಡಬಹುದೋ ಅಲ್ಲೆಲ್ಲಾ ಚೆನ್ನಾಗಿ ಸ್ಕೋರ್‌ ಮಾಡುವ ಮೂಲಕ ಭರವಸೆ ಮೂಡಿಸಿದ್ದು ಸುಳ್ಳಲ್ಲ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.