ಸಂಗೀತ ಧರ್ಮ : ಯಶಸ್ವಿ ಹಾಡಿನತ್ತ ವಿಶ್‌


Team Udayavani, Apr 26, 2019, 3:59 PM IST

Suchi-Dharma

“ಶಾನೆ ಟಾಪ್‌ ಆಗವಳೆ..’ – ಈ ಹಾಡೊಂದು ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಇಂಥದ್ದೊಂದು ಹಾಡು ಕಟ್ಟಿಕೊಡುವ ಮೂಲಕ ಸುದ್ದಿಯಾಗಿರೋದು ಸಂಗೀತ ನಿರ್ದೇಶಕ ಧರ್ಮವಿಶ್‌. ಬಹಳಷ್ಟು ಮಂದಿಗೆ ಧರ್ಮವಿಶ್‌ ಅವರ ಪರಿಚಯ ಇರಲಿಕ್ಕಿಲ್ಲ. ಆದರೆ, ಸಿನಿಮಾ ಮಂದಿಗಂತೂ ಧರ್ಮವಿಶ್‌ ಅವರು ಗೊತ್ತು. ಧರ್ಮವಿಶ್‌ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಸಂಗೀತ ನಿರ್ದೇಶನಕ್ಕೂ ಮುನ್ನ ಹಲವು ಸಂಗೀತ ನಿರ್ದೇಶಕರ ಬಳಿ ಪ್ರೋಗ್ರಾಮಿಂಗ್‌ ಮಾಡಿದ ಅನುಭವ ಇವರಿಗಿದೆ. ಕನ್ನಡ ಮಾತ್ರವಲ್ಲ ಬಾಲಿವುಡ್‌ನ‌ಲ್ಲೂ ಧರ್ಮವಿಶ್‌ ಅವರು ಕೆಲಸ ಮಾಡಿದ್ದಾರೆ.

“ರಾಗ್‌ದೇಶ್‌’,”ಗ್ಯಾಂಗ್‌ಸ್ಟರ್‌ 3′,”ಮಿಡ್‌ನೈಟ್‌ ಡೆಲ್ಲಿ’ ಮತ್ತು “22 ಯಾರ್ಡ್ಸ್‌’ ಸಿನಿಮಾ ಸೇರಿದಂತೆ ಇನ್ನಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತದ ಸ್ಪರ್ಶವೂ ಇದೆ. ಕನ್ನಡದಲ್ಲಿ ಶ್ರೀಮುರಳಿ ಅಭಿನಯದ “ರಥಾವರ’ ಚಿತ್ರಕ್ಕೆ ಸಂಗೀತ ಕೊಡುವ ಮೂಲಕ ಗಮನಸೆಳೆದ ಧರ್ಮವಿಶ್‌, ಈಗ “ಸಿಂಗ’ ಚಿತ್ರಕ್ಕೂ ಸಂಗೀತದ ಸ್ಪರ್ಶ ನೀಡಿದ್ದಾರೆ. ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಚಿತ್ರದ “ಶಾನೆ ಟಾಪ್‌ ಆಗವಳೆ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುವ ಮೂಲಕ ಮೆಚ್ಚುಗೆ ಪಡೆಯುತ್ತಿದೆ.

ಚೇತನ್‌ಕುಮಾರ್‌ ಬರೆದ ಹಾಡಿಗೆ ವಿಜಯಪ್ರಕಾಶ್‌ ಧ್ವನಿಯಾಗಿದ್ದಾರೆ. ಅಂದಹಾಗೆ, ಈ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಸದ್ಯಕ್ಕಂತೂ ಈ ಸಾಂಗ್‌ ಟಿಕ್‌ ಟಾಕ್‌ ಮ್ಯೂಸಿಕ್‌ ಆ್ಯಪ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಹಾಡನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮದೇ ಸ್ಟೈಲ್‌ನಲ್ಲಿ ಫೋಸು ಕೊಡುತ್ತಿದ್ದಾರೆ. ಈ ಹಾಡು ದಾಖಲೆ ಬರೆದಿರುವುದಲ್ಲದೆ, ಯುಟ್ಯೂಬ್‌ನಲ್ಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.

“ಸಿಂಗ’ ಚಿತ್ರದ ಮೊದಲ ಹಾಡು ಯಶಸ್ಸು ಪಡೆಯುತ್ತಿದ್ದಂತೆಯೇ, ಧರ್ಮವಿಶ್‌, ಅದೇ ಖುಷಿಯಲ್ಲಿ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಗೀತರಚನೆಕಾರ ಕವಿರಾಜ್‌ ಅವರು ಬರೆದಿರುವ “ವಾಟ್‌ ಎ ಬ್ಯೂಟಿಫ‌ುಲ್‌ ಹುಡುಗಿ…’ ಎಂಬ ಹಾಡಿಗೆ ನವೀನ್‌ ಸಜ್ಜು ಹಾಗೂ ನಟಿ ಮೇಘನಾ ರಾಜ್‌ ಧ್ವನಿಯಾಗಿದ್ದಾರೆ. ಸದ್ಯಕ್ಕೆ ಈ ಹಾಡಿಗೂ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಸಿನಿಮಾ ಬಿಡುಗಡೆ ಎದುರು ನೋಡುತ್ತಿದ್ದಾರೆ ಧರ್ಮವಿಶ್‌.

ಧರ್ಮವಿಶ್‌ ಅವರು “ರಥಾವರ’ ಚಿತ್ರದ ಬಳಿಕ ಪುನಃ ಬಾಲಿವುಡ್‌ನ‌ತ್ತ ಮುಖ ಮಾಡಿದ್ದರು. ಅಲ್ಲಿ “ಮಿಲನ್‌ ಟಾಕೀಸ್‌’, “ಮೆ ಫಿರ್‌ ಆವೂಂಗಾ’ ಚಿತ್ರ ಸೇರಿದಂತೆ ಕೆಲ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. “ತಾರಕಾಸುರ ಚಿತ್ರಕ್ಕೂ ಇವರದೇ ಸಂಗೀತವಿತ್ತು. ಈಗ “ಸಿಂಗ’ ಮೂಲಕ ಸದ್ದು ಮಾಡಿ, ನೀನಾಸಂ ಸತೀಶ್‌ ಅಭಿನಯದ “ಬ್ರಹ್ಮಚಾರಿ ಚಿತ್ರಕ್ಕೂ ಇವರದೇ ಸಂಗೀತವಿದೆ ಎಂಬುದು ವಿಶೇಷ.

ಟಾಪ್ ನ್ಯೂಸ್

ball tampering

ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

vಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

Woke Up To Personal Message From PM Narendra Modi”: Chris Gayle

ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು : ಇಬ್ಬರ ಬಂಧನ

ಮಗನಿಂದ ಸೊಸೆಯ ಮೇಲಿನ ಹಲ್ಲೆ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನ

ಮಾರ್ಚ್ ತಿಂಗಳಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು:ಅಶ್ವತ್ಥನಾರಾಯಣ

ಮಾರ್ಚ್ ನಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಅಶ್ವತ್ಥನಾರಾಯಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

MUST WATCH

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸ ಸೇರ್ಪಡೆ

ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್

ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್

ball tampering

ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಕಾಪು ತಾಲೂಕು ಮಟ್ಟದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ಕಾಪು ತಾಲೂಕು ಮಟ್ಟದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.