ಹೊಸ ವರ್ಷ ಹೊಸ ಕನಸು

stars new plan

Team Udayavani, Dec 27, 2019, 5:47 AM IST

22

ಹೊಸ ವರ್ಷದಲ್ಲಿ ಹೊಸ ಆಸೆ, ಕನಸು ಸಹಜ. ಅದು ಚಿತ್ರರಂಗಕ್ಕೂ ಹೊರತಲ್ಲ. ಸಿನಿಮಾ ಮಂದಿಗಂತೂ ಹೊಸ ವರ್ಷದ ಸಂಭ್ರಮ ಕೊಂಚ ಹೆಚ್ಚೇ ಎನ್ನಬಹುದು. ಹೊಸ ವರ್ಷದಲ್ಲಿ ತಮ್ಮ ಹೊಸ ಆಸೆ, ಕನಸು ಮತ್ತು ನಿರೀಕ್ಷೆ ಬಗ್ಗೆ ಕೆಲ ತಾರೆಯರು ಮಾತನಾಡಿದ್ದಾರೆ.

ಈ ವರ್ಷ “ಪಂಚತಂತ್ರ’ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅದಾದ ಬಳಿಕ ಮೂರ್‍ನಾಲ್ಕು ಸಿನಿಮಾಗಳ ಆಫ‌ರ್ ಬಂದಿದೆ. ಆ ಪೈಕಿ ಕೆಲವು ಶೂಟಿಂಗ್‌ ಶುರುವಾಗಿದ್ದು, ಉಳಿದವು ಹೊಸ ವರ್ಷದ ಆರಂಭದಲ್ಲಿ ಶುರುವಾಗುವ ಸಾಧ್ಯತೆ ಇದೆ. ಹೊಸವರ್ಷ ನನಗೆ ಸಾಕಷ್ಟು ಭರವಸೆ ಮೂಡಿಸಿದೆ.
– ಅಕ್ಷರಾ ಗೌಡ, ನಾಯಕಿ

ನಾನು ಅಭಿನಯಿಸಿದ ಮೂರ್‍ನಾಲ್ಕು ಚಿತ್ರಗಳು ಈ ವರ್ಷ ಬಂದಿವೆ. ಇನ್ನು ಈ ವರ್ಷದ ಮಾಮೂಲಿ ಸಿನಿಮಾಗಳಿಗಿಂತ ವಿಭಿನ್ನವಾಗಿರುವ, ಒಂದಷ್ಟು ಹೊಸಥರದ ಚಿತ್ರಗಳನ್ನು, ಹೊಸ ಥರದ ಪಾತ್ರಗಳನ್ನು
ಮಾಡಬೇಕೆಂಬ ಯೋಚನೆ ಇದೆ. ಅಂಥ ಸಿನಿಮಾ ಬಗ್ಗೆ ಮಾತುಕಥೆ ನಡೆಯುತ್ತಿದ್ದು, ಹೊಸ ವರ್ಷ ಆ ಸಿನಿಮಾಗಳು ಅನೌನ್ಸ್‌ ಆಗುವ ಸಾಧ್ಯತೆ ಇದೆ.
– ಸೋನು ಗೌಡ, ನಟಿ

ಹಿಂದೆಂದಿಗಿಂತಲೂ ಈ ವರ್ಷ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಈ ವರ್ಷ ನಾನು ಅಭಿನಯಿಸಿದ್ದ ನಾಲ್ಕು ಸಿನಿಮಾಗಳು ರಿಲೀಸ್‌ ಆಗಿದ್ದವು. ಈಗಾಗಲೇ ಕೆಲ ಹೊಸ ಸಿನಿಮಾಗಳ ಮಾತುಕಥೆ ನಡೆಯುತ್ತಿರುವುದರಿಂದ, ಹೊಸ ವರ್ಷದಲ್ಲಿ ಅದಕ್ಕೂ ಹೆಚ್ಚು ಬ್ಯುಸಿಯಾಗುವ ನಿರೀಕ್ಷೆ ಇದೆ.
– ಅದಿತಿ ಪ್ರಭುದೇವ, ನಟಿ

ಈ ವರ್ಷ ಖುಷಿ ತಂದಿದೆ. ಚಿತ್ರಗಳು ನಿರೀಕ್ಷೆಯ ಗೆಲುವು ಕೊಡದಿದ್ದರೂ, ಎಲ್ಲರ ಮನ ಗೆದ್ದ ತೃಪ್ತಿ ಇದೆ. ಹೊಸ ಪ್ರಯತ್ನಕ್ಕೆ ಬೆಂಬಲ ಸಿಕ್ಕ ಸಂತೋಷವಿದೆ. ಹೊಸ ವರ್ಷದಲ್ಲಿ ಹೊಸ ಬಗೆಯ ಸಿನಿಮಾಗಳು ಬರಲಿವೆ. “ಗಾಳಿಪಟ 2′ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಖಂಡಿತ ಜನರಿಗೆ ಖುಷಿಯ ಜೊತೆ ದೊಡ್ಡ
ಮನರಂಜನೆ ಕೊಡಲಿದೆ. ಹೊಸತರಹದ ಕಥೆ ಇರುವ ಚಿತ್ರ ಕೊಡುವ ಯೋಚನೆ ಇದೆ. ಆ ನಿಟ್ಟಿನಲ್ಲಿ ಸಿನಿಮಾ ಮಾಡುತ್ತಿದ್ದೇನೆ.
 ಗಣೇಶ್‌

ನಾನು ಯಾವುದನ್ನೂ ನಿರೀಕ್ಷಿಸಲ್ಲ. ಯೋಚನೆಯನ್ನೂ ಮಾಡಲ್ಲ. ಸದಾ ಮುಂದೆ ಸಾಗುತ್ತಿರುತ್ತೇನೆ. ಈ ವರ್ಷ “ಸಲಗ’ ದೊಡ್ಡ ಹೆಜ್ಜೆ. ಅದೊಂದು ಬಿಗ್‌ ಟಾರ್ಗೆಟ್‌. ಮುಂದಿನ ವರ್ಷ ಕೂಡ ದಾರಿ ಹೇಗಿರುತ್ತೋ, ಹೇಗೆ ಕರೆದುಕೊಂಡು ಹೋಗುತ್ತೋ, ಹಾಗೆ ಸಾಗುತ್ತೇನೆ. ಹೊಸ ಹೆಜ್ಜೆಗಳೂ ಮೂಡಲಿವೆ. ಹೇಗೆ ಅನ್ನೋದನ್ನು ಹೇಳಲು ಆಗಲ್ಲ. ಹೊಸ ವರ್ಷ “ಸಲಗ’ ಮೂಲಕ ದೊಡ್ಡ ಸರ್‌ಪ್ರೈಸ್‌ ಅಂತೂ ಇದ್ದೇ ಇರುತ್ತೆ.
 ದುನಿಯಾ ವಿಜಯ್‌

2020 ನನಗಂತೂ ಪ್ರಾಮಿಸಿಂಗ್‌ ಇಯರ್‌, “ಅವತಾರ್‌ ಪುರುಷ’ ಸಿನಿಮಾ ರಿಲೀಸ್‌ ಆಗೋದರ ಜೊತೆ ಹೊಸವರ್ಷದ ಖಾತೆ ಶುರುವಾಗ್ತಿದೆ. ಹಿಂದಿನ ವರ್ಷಕ್ಕಿಂತ ಹೊಸವರ್ಷ, ಹೊಸಥರದಲ್ಲಿ ಬರೋದಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇನೆ. ಒಂದೆರಡು ಹೊಸ ಸ್ಕ್ರಿಪ್ಟ್ ಫೈನಲ್‌ ಆಗುವ ಹಂತದಲ್ಲಿದೆ. ಅದೇನು ಅನ್ನೋದನ್ನ ಆದಷ್ಟು ಬೇಗ ಹೇಳ್ತೀನಿ…
ಶರಣ್‌, ನಟ

ಹೊಸವರ್ಷ ನಾನು ಹೀರೋ ಆಗಿ ನಟಿಸುತ್ತಿರುವ “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಸಿನಿಮಾ ರಿಲೀಸ್‌ ಆಗ್ತಿದೆ. ಅದಾಗುತ್ತಿದ್ದಂತೆ “ಮಾಯಾಬಜಾರ್‌’, “ಕಾಲಚಕ್ರ’, “ಗ್ಯಾಂಗ್‌ಸ್ಟರ್‌’, “ದಂತಕಥೆ’, “ತಲ್ವಾರ್‌ಪೇಟ್‌’, ಹೀಗೆ ಒಂದೊಂದೆ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಜೊತೆಗೊಂದಷ್ಟು ಹಾಡುಗಳಿಗೂ ಧ್ವನಿಯಾಗುತ್ತಿದ್ದೇನೆ. ಹಿಂದಿನ ವರ್ಷಕ್ಕಿಂತ ಮುಂದಿನ ವರ್ಷ ಇನ್ನಷ್ಟು ಬ್ಯುಸಿಯಾಗುವ ಲಕ್ಷಣಗಳು ಕಾಣ್ತಿದೆ.
ವಸಿಷ್ಠ ಸಿಂಹ, ನಟ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bjpge

ಬಿಜೆಪಿಗೆ ಪರ್ವಕಾಲ, ಮೈತ್ರಿಗೆ ಆಘಾತ

kannada

ಕನ್ನಡ ಸಾಹಿತ್ಯ ಲೋಕಕ್ಕೆ ಬೇವು-ಬೆಲ್ಲದ ಸಮ್ಮಿಲನ

varshavidi

ವರ್ಷವಿಡೀ ಕದ್ದಾಲಿಕೆ, ಹನಿಟ್ರ್ಯಾಪ್‌ ಸದ್ದು

bng-01

ಸದ್ದು ಮಾಡಿ ಸುದ್ದಿಯಾದವರು

top

2019ರಲ್ಲಿ ಗ್ರಾಹಕರ ಮನಸೂರೆಗೊಂಡ ಟಾಪ್ ಟೆನ್ ಮೊಬೈಲ್ ಇವು….

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.