‘ಸೂಜಿ ಮಲ್ಲಿಗೆ’: ಹಳ್ಳಿ ಗೆಟಪ್ ನಲ್ಲಿ ನಿಶ್ವಿಕಾ ನಾಯ್ಡು
Team Udayavani, May 21, 2021, 3:36 PM IST
ನಟಿ ನಿಶ್ವಿಕಾ ನಾಯ್ಡು “ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಚಿತ್ರತಂಡ ನಿಶ್ವಿಕಾ ಅವರ ಫಸ್ಟ್ಲುಕ್ ರಿಲೀಸ್ ಮಾಡಿದೆ. ಪಕ್ಕಾ ಹಳ್ಳಿ ಹುಡುಗಿ ಗೆಟಪ್ನಲ್ಲಿ ಸೂಜಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟ ಶರಣ್ ಈ ಚಿತ್ರದಲ್ಲಿ ನಾಯಕ ನಟನಾಗಿ, ಒಬ್ಬ ದೈಹಿಕ ಶಿಕ್ಷಕನಾಗಿ ಪಾತ್ರವಹಿಸುತ್ತಿದ್ದಾ. ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಪಾತ್ರ ಮಾಡಿದ್ದಾರೆ.1995ರಲ್ಲಿ ನಡೆಯುವ ಕಥೆಯನ್ನು “ಗುರುಶಿಷ್ಯರು’ ಹೊಂದಿದೆ.
ವರ್ಷದ ಆರಂಭದಲ್ಲಿಯೇ “ರಾಮಾರ್ಜುನ’ ಚಿತ್ರದ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದ ನಟಿ ನಿಶ್ವಿಕಾ ನಾಯ್ಡು, ಈ ವರ್ಷದ ಕೊನೆಯೊಳಗೆ ಇನ್ನಷ್ಟು ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ವರಲು ರೆಡಿಯಾಗುತ್ತಿದ್ದಾರೆ. ಸದ್ಯ ಶರಣ್ ಅಭಿನಯದ “ಗುರುಶಿಷ್ಯರು’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ನಿಶ್ವಿಕಾ ನಾಯ್ಡು, ಅದಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ “ಸಖತ್’ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಚಿತ್ರಗಳಲ್ಲೂ ನಿಶ್ವಿಕಾಗೆ ಎರಡು ವಿಭಿನ್ನ ಪಾತ್ರಗಳಿದ್ದು, ಈ ಪಾತ್ರಗಳಿಗಾಗಿ ನಿಶ್ವಿಕಾ ಈಗಾಗಲೇ ಒಂದಷ್ಟು ಪೂರ್ವತಯಾರಿ ಕೂಡ ಶುರು ಮಾಡಿದ್ದಾರೆ.
ಇದನ್ನೂ ಓದಿ:ದಿನಾಲೂ ಅಪ್ಡೇಟ್ ಆಗುತ್ತಿದ್ದೇನೆ..: ರಾಬರ್ಟ್ ಬೆಡಗಿ ಆಶಾ ಭಟ್
ತಮ್ಮ ಮುಂದಿನ ಎರಡು ಚಿತ್ರಗಳ ಪಾತ್ರಗಳಿಗಾಗಿ ಸ್ಲಿಮ್ ಆಗುತ್ತಿರುವ ನಿಶ್ವಿಕಾ ನಾಯ್ಡು,ಕೆಲವು ದಿನಗಳಿಂದ ಡಯೆಟ್, ವರ್ಕೌಟ್ ಮಾಡಿ ದೈಹದ ತೂಕ ಇಳಿಸಿಕೊಂಡಿದ್ದಾರೆ. ಮೊದಲಿಗಿಂತ ಈಗ ಮತ್ತಷ್ಟು ಸಪೂರವಾಗಿ ಮಿಂಚುತ್ತಿರುವ ನಿಶ್ವಿಕಾ ತಮ್ಮ ಪಾತ್ರಕ್ಕೆ ತಕ್ಕಂತೆ ತಯಾರಾಗಿದ್ದಾರೆ.
ಇನ್ನು, “ಗುರು ಶಿಷ್ಯರು’ ಈಗಾಗಲೇ ಚಿತ್ರದ ಶೇ60 ಚಿತ್ರೀಕರಣ ಪೂರ್ಣಗೊಳಿಸಿದ್ದು, ಉಳಿದ ಭಾಗದ ಚಿತ್ರೀಕರಣ ಸದ್ಯದ ಕೊರೊನಾ ಲಾಕ್ಡೌನ್ ಮುಗಿದ ನಂತರ ಮಾಡಲು ಚಿತ್ರತಂಡ ಯೋಚಿಸಿದೆ.