ಥ್ರಿಲ್ಲರ್ ಹಾದಿಯಲ್ಲಿ ಹರಿಪ್ರಿಯಾ

ಸೆಂಟಿಮೆಂಟ್‌ಗೂ ಇಲ್ಲಿ ಜಾಗವಿದೆ ...

Team Udayavani, May 17, 2019, 7:00 AM IST

147

ಕನ್ನಡದಲ್ಲಿ ತಾಯಿ-ಮಗಳ ಸಂಬಂಧ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ “ಡಾಟರ್‌ ಆಫ್ ಪಾರ್ವತಮ್ಮ’ ಹೊಸ ಸೇರ್ಪಡೆ. ಹಾಗಂತ, ಇದು ರೆಗ್ಯುಲರ್‌ ಪ್ಯಾಟ್ರನ್‌ ಸಿನಿಮಾವಲ್ಲ. ನಾಯಕಿ ಪ್ರಧಾನವಾಗಿರುವ ಚಿತ್ರದಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಹೈಲೈಟ್‌. ಚಿತ್ರ ಮೇ.24 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್‌ ಹಾಗೂ ಆಡಿಯೋ ಬಿಡುಗಡೆ ಮಾಡಿದೆ. ಟ್ರೇಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ ನಟ “ಡಾಲಿ’ ಧನಂಜಯ್‌,”ಒಳ್ಳೆಯ ತಂಡವಿದ್ದರೆ, ಒಳ್ಳೆಯ ಚಿತ್ರ ಆಗುವುದರಲ್ಲಿ ಸಂಶಯವಿಲ್ಲ. ಟ್ರೇಲರ್‌ ನೋಡಿದಾಗ, ಒಳ್ಳೆಯ ಥ್ರಿಲ್ಲರ್‌ ನಿರೀಕ್ಷಿಸಬಹುದು. ನಾನು ಸಾಹಿತಿ ಅಲ್ಲ. ಕೆಲವೊಮ್ಮೆ ಖುಷಿಯಾದಾಗ, ಗೊಂದಲ ಇದ್ದಾಗ, ತನ್ನೊಳಗಿನ ಭಾವನೆಗಳನ್ನು ಪೇಪರ್‌ ಮೇಲೆ ಅಕ್ಷರ ರೂಪದಲ್ಲಿ ತೋರಿಸಿಕೊಳ್ಳುತ್ತಿದ್ದೆ. ಗೆಳೆಯರು ಹಾಡು ಬರೆದುಕೊಡು ಅಂದಾಗ, ಭಯವಾಯ್ತ. ಆದರೂ, ಟ್ಯೂನ್‌ ಚೆನ್ನಾಗಿದ್ದರಿಂದ ಹಾಡು ಬರೆದುಕೊಟ್ಟೆ. ಹರಿಪ್ರಿಯಾ ಅವರ 25 ನೇ ಚಿತ್ರವಿದು. ಅವರು ರೊಚ್ಚಿಗೆದ್ದು, ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೇ.23 ಕ್ಕೆ ಸುಮಮ್ಮ ಮಿಂಚಲಿ, ಮೇ.24 ರಂದು “ಪಾರ್ವತಮ್ಮ’ ಮಾತಾಡಲಿ’ ಅಂದರು ಧನಂಜಯ್‌.

ಹರಿಪ್ರಿಯಾ ಅವರಿಗೆ ಇದು 25 ನೇ ಚಿತ್ರ. ಸಹಜವಾಗಿಯೇ ಅವರಿಗೆ ಖುಷಿ. “ನಾಯಕಿ ಮೇಲೆ ನಂಬಿಕೆ ಇಟ್ಟು, ಈ ರೀತಿಯ ಸಿನಿಮಾ ಮಾಡುವ ನಿರ್ಮಾಪಕರು ಕಮ್ಮಿ. ಇಲ್ಲಿ ನಂಬಿಕೆ ಇಟ್ಟು ಚಿತ್ರ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯೇ ಅರ್ಧ ಗೆಲುವು ಕೊಟ್ಟಿದೆ. ಇನ್ನರ್ಧ ಜನರು ನೋಡಿ ಗೆಲ್ಲಿಸಬೇಕು. ಇದು ಅಮ್ಮ-ಮಗಳ ಕುರಿತಾದ ಕಥೆ ಹೊಂದಿದ್ದರೂ, ಸಾಕಷ್ಟು ಥ್ರಿಲ್ಲಿಂಗ್‌ ಅಂಶಗಳಿವೆ. ಸುಮಲತಾ ಅಮ್ಮನ ಜೊತೆ ನಟಿಸಿದ್ದು ಮರೆಯದ ಅನುಭವ. ನಾನಿಲ್ಲಿ ವೈದೇಹಿ ಎಂಬ ತನಿಖಾಧಿಕಾರಿ ಪಾತ್ರ ಮಾಡಿದ್ದೇನೆ. ಫೈಟ್ಸ್‌ ಕೂಡ ಇದೆ. ಹಾಗಂತ, ಬಿಲ್ಡಪ್ಸ್‌ ಇಲ್ಲ. ಎಲ್ಲವೂ ನ್ಯಾಚ್ಯುರಲ ಆಗಿದೆ’ ಅಂದರು ಹರಿಪ್ರಿಯಾ.

ನಿರ್ಮಾಪಕ ಶಶಿಧರ್‌ ಕೆ.ಎಂ. ಅವರಿಗೆ ಇದು ಮೊದಲ ಚಿತ್ರ. ಹಲವು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ಅವರಿಗೆ ಸಾಕಷ್ಟು ಅನುಭವ ಇದೆ. ಆ ಕಾರಣದಿಂದ “ಡಾಟರ್‌ ಆಫ್ ಪಾರ್ವತಮ್ಮ’ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರ ಮಾಡಿದ್ದು ಅವರಿಗೆ ಹೆಮ್ಮೆಯ ವಿಷಯವಂತೆ. ಆ ಬಗ್ಗೆ ಹೇಳುವ ಅವರು, “ಸುಮಲತಾ ಅವರು ಕಥೆ ಒಪ್ಪಿದ್ದು ಮೊದಲ ಗೆಲುವು, ಶೀರ್ಷಿಕೆ ಇಟ್ಟಾಗ ಸಿಕ್ಕ ಮೆಚ್ಚುಗೆಯೇ ಚಿತ್ರತಂಡದ ಹುಮ್ಮಸ್ಸನ್ನು ಹೆಚ್ಚಿಸಿತ್ತು. ಅಂಬರೀಶ್‌ ಅಣ್ಣ ಅವರ ಜೊತೆ ಒಮ್ಮೆ ಮಾತನಾಡಿ­ದಾಗ, ಚೆನ್ನಾಗಿ ಸಿನಿಮಾ ಮಾಡಿ, ನನ್ನ ಆಶೀರ್ವಾದ ಸದಾ ಇರುತ್ತೆ ಅಂದಿದ್ದರು. ಅವರ ಆಶೀರ್ವಾದದಿಂದ ಚಿತ್ರಕ್ಕೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ನಾವು ಎಷ್ಟೇ ಪ್ರೀತಿಯಿಂದ ಕಷ್ಟ ಪಟ್ಟು ಸಿನಿಮಾ ಮಾಡಿದರೂ, ಅದು ಎಲ್ಲರನ್ನೂ ತಲುಪಲು ಮಾಧ್ಯಮ, ಪತ್ರಕರ್ತರು ಕಾರಣ. ನಿಮ್ಮ ಸಹಕಾರ ಬೇಕು’ ಅಂದರು ಶಶಿಧರ್‌.

ಸಂಗೀತ ನಿರ್ದೇಶಕ ಮಿದುನ್‌ ಮುಕುಂದನ್‌, “ಒಂದು ಮೊಟ್ಟೆಯ ಕಥೆ’ ಬಳಿಕ ಖುಷಿಯಿಂದ ಮಾಡಿದ ಚಿತ್ರವಿದು. ಸಾಕಷ್ಟು ಪ್ರಯೋಗ ಇಲ್ಲಿ ಮಾಡಲಾಗಿದೆ. ಎರಡು ಹಾಡು ಚೆನ್ನಾಗಿ ಮೂಡಿಬಂದಿವೆ. ನಿರ್ದೇಶಕ, ನಿರ್ಮಾಪಕರು ಕೊಟ್ಟ ಫ್ರೀಡಮ್‌ನಿಂದಾಗಿ, ಕೆಲಸ ಚೆನ್ನಾಗಿ ಮಾಡಲು ಸಾಧ್ಯವಾಗಿದೆ’ ಅಂದರು ಅವರು.

ನಿರ್ದೇಶಕ ಶಂಕರ್‌, “ಥ್ರಿಲ್ಲರ್‌ ಜೊತೆ ಅಮ್ಮ, ಮಗಳ ಸಂಬಂಧ ಚಿತ್ರದ ಹೈಲೈಟ್‌. ನಾಯಕಿ ಪ್ರಧಾನ ಚಿತ್ರ ಇದಾಗಿದ್ದರೂ, ಪಕ್ಕಾ ಕಮರ್ಷಿಯಲ್‌ ಚಿತ್ರವಾಗಿ ಮೂಡಿಬಂದಿದೆ. ಬೆಂಗಳೂರಲ್ಲೇ ಚಿತ್ರೀಕರಣ ನಡೆದಿದೆ. ನನ್ನ ಕಥೆ ಒಪ್ಪಿ ಮಾಡಿದ ಸುಮಮ್ಮ, ಹರಿಪ್ರಿಯಾ ಹಾಗೂ ಅವಕಾಶ ಕೊಟ್ಟ ನಿರ್ಮಾಪಕರು, ಹಾಡು ಬರೆದುಕೊಟ್ಟ ಧನಂಜಯ್‌ ಮತ್ತು ಚಿತ್ರ ಚೆನ್ನಾಗಿ ಮೂಡಿಬರಲು ಹಗಲಿರುಳು ಶ್ರಮಿಸಿದ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ಶಂಕರ್‌. ಅಂದು ಸೂರಜ್‌ಗೌಡ, ಪ್ರಭು, “ತರಂಗ’ ವಿಶ್ವ ಸಿನಿಮಾ ಕುರಿತು ಮಾತನಾಡಿದರು. ನಿರ್ಮಾಪಕರಾದ ಕೃಷ್ಣ, ಮಧು, ಸಂದೀಪ್‌ ಇತರರು ಇದ್ದರು.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

Kannada Actress; ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

Purushothamana Prasanga; ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡಚಿತ್ರ ಇಂದು ತೆರೆಗೆ

Purushothamana Prasanga; ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡಚಿತ್ರ ಇಂದು ತೆರೆಗೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.