ಮಹಾನುಭಾವರು ಬರ್ತಿದ್ದಾರೆ!
Team Udayavani, Nov 17, 2017, 6:00 AM IST
“ಮಹಾನುಭಾವರು’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಆ ಚಿತ್ರ ಇಂದು (ನ.17) ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ಚಿತ್ರತಂಡಕ್ಕೆ ಚಿತ್ರದ ಮೇಲೆ ನಂಬಿಕೆ ಇದೆ. ಆ ನಂಬಿಕೆ ಮತ್ತಷ್ಟು ಬಲವಾಗಲು ಕಾರಣ ಹಾಡುಗಳು ಹಿಟ್ ಆಗಿರೋದು. ಹೌದು, “ಮಹಾನುಭಾವರು’ ಚಿತ್ರಕ್ಕೆ ಪುನೀತ್ ರಾಜಕುಮಾರ್ ಹಾಗೂ ಮುರುಳಿ ಹಾಡಿದ್ದಾರೆ. ಆ ಹಾಡು ಹಿಟ್ ಆಗಿದ್ದು, ಚಿತ್ರಕ್ಕೆ ಒಳ್ಳೆಯ ಮೈಲೇಜ್ ಸಿಕ್ಕಿದೆಯಂತೆ. “ಮಹಾನುಭಾವರು’ ಚಿತ್ರದಲ್ಲಿ ಬಾಲಚಂದರ್ ಹಾಗೂ ಗೋಕುಲ್ ರಾಜ್ ನಾಯಕರಾಗಿ ನಟಿಸಿದ್ದಾರೆ. ಅನುಷಾ ರೈ ಹಾಗೂ ಪ್ರಿಯಾಂಕಾ ನಾಯಕಿಯರು.
ಚಿತ್ರದಲ್ಲಿ ನಟಿಸಿರುವ ಬಾಲಚಂದರ್ ಅವರಿಗೆ ಈಗ ಪರೀಕ್ಷೆ ಎದುರಿಸುತ್ತಿರುವ ಭಯ ಕಾಡುತ್ತಿದೆಯಂತೆ. “ನಮ್ಮ ಸಿನಿಮಾ ಬಗ್ಗೆ ನನಗೆ ನಂಬಿಕೆ ಇದೆ. ಎಲ್ಲಾ ಕಡೆ ಸಿನಿಮಾ ಬಗ್ಗೆ ಗೊತ್ತಾಗಿದೆ. ಆದರೂ ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲವಿದೆ. ಒಳ್ಳೆಯ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಅದು ಈ ಸಿನಿಮಾ ಮೂಲಕ ಈಡೇರಿದೆ’ ಎಂದರು. ಬಾಲಚಂದರ್ ಅವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಮೈಸೂರು ಟಾಕೀಸ್ನಡಿ ಜಾಕ್ ಮಂಜು ಅವರು ವಿತರಿಸುತ್ತಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಟಿಸಿದ ಮತ್ತೂಬ್ಬ ಹೀರೋ ಗೋಕುಲ್ ರಾಜ್ ಕೂಡಾ ಮಾತನಾಡಿದರು. ಅವರಿಲ್ಲಿ ಸ್ನೇಹಿತನ ದುಡ್ಡಲ್ಲಿ ಮಜಾ ಮಾಡೋ ಪಾತ್ರ ಮಾಡಿದ್ದಾರಂತೆ. ಚಿತ್ರವನ್ನು ಸಂದೀಪ್ ನಾಗಲೀಕರ್ ನಿರ್ದೇಶಿಸಿದ್ದಾರೆ. ಇಲ್ಲಿ ಪ್ಲ್ರಾನಿಂಗ್ ಮಾಡಿದರೆ ಹಾಗೂ ಮಾಡದೇ ಇದ್ದರೆ ಏನಾಗುತ್ತದೆ ಎಂಬ ವಿಷಯವನ್ನು ಹೇಳಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ