ಈವರೆಗೆ ಒಂದ್‌ ಲೆಕ್ಕ ಇನ್ಮುಂದೆ ಒಂದ್‌ ಲೆಕ್ಕ..

ವರ್ಷದ ಕೊನೆಗೆ ಕಾದು ಕುಳಿತಿವೆ ಬಿಗ್‌ ಬಜೆಟ್‌ ಚಿತ್ರಗಳು

Team Udayavani, Oct 25, 2019, 6:00 AM IST

ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಂದು ಲೆಕ್ಕವಾದರೆ, ಇನ್ನು ಮುಂದಿನ ಎರಡು ತಿಂಗಳಲ್ಲಿ ಮತ್ತೂಂದು ಲೆಕ್ಕ ಎನ್ನಬಹುದು. ಈಗಾಗಲೇ ಬಿಡುಗಡೆಯಾಗಿರುವಷ್ಟೇ ದೊಡ್ಡ ಸಂಖ್ಯೆಯಲ್ಲಿ, ಇನ್ನು ಬಾಕಿಯಿರುವ ಎರಡು ತಿಂಗಳಲ್ಲಿ ದಶಕೋಟಿ ಬಜೆಟ್‌ ದಾಟುವ ಚಿತ್ರಗಳು ತೆರೆಗೆ ಬರುತ್ತಿವೆ ಅನ್ನೋದು ಗಮನಿಸಬೇಕಾದ ಸಂಗತಿ. ಇನ್ನು ವರ್ಷದ ಕೊನೆಗೆ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗಲಿವೆ…

ವರ್ಷದ ಕೊನೆಗೆ ಇನ್ನು ಕೇವಲ ಎರಡು ತಿಂಗಳುಗಷ್ಟೇ ಬಾಕಿ ಇದೆ. ವರ್ಷದ ಆರಂಭದಲ್ಲಿಯೇ ಭರ್ಜರಿಯಾಗಿ ಓಪನಿಂಗ್‌ ಪಡೆದುಕೊಂಡ ಸ್ಯಾಂಡಲ್‌ವುಡ್‌ನ‌ಲ್ಲಿ ನಿರೀಕ್ಷೆಯಂತೆಯೇ, ಈ ವರ್ಷ ಚಿತ್ರಗಳ ಸಂಖ್ಯೆ ಮತ್ತು ಅವುಗಳ ಬಜೆಟ್‌ ಎರಡರಲ್ಲೂ ಏರಿಕೆಯಾಗಿದೆ. ಅಂಕಿ-ಅಂಶಗಳನ್ನು ಎದುರಿಗಿಟ್ಟುಕೊಂಡು ನೋಡುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಮತ್ತು ಅವುಗಳ ಬಜೆಟ್‌ ಎರಡೂ ದುಪ್ಪಟ್ಟಾಗಿದೆ.

ಇನ್ನು ಚಿತ್ರರಂಗದ ಮೂಲಗಳ ಪ್ರಕಾರ, ನಿರ್ಮಾಪಕರು, ವಿತರಕರು, ಪ್ರದರ್ಶಕರು ಮತ್ತು ವಾಣಿಜ್ಯ ಮಂಡಳಿಯ ಅಂಕಿ-ಅಂಶಗಳ ಪ್ರಕಾರ ಅಕ್ಟೋಬರ್‌ ಎರಡನೇ ವಾರದ ಹೊತ್ತಿಗೆ ಕನ್ನಡದಲ್ಲಿ ಸುಮಾರು 165ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ಇದರೊಂದಿಗೆ ತುಳು, ಕೊಂಕಣಿ, ಕೊಡವ, ಲಂಬಾಣಿ ಹೀಗೆ ಸುಮಾರು 22 ಪ್ರಾದೇಶಿಕ ಭಾಷಾವಾರು ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ಕನ್ನಡಕ್ಕೆ ಡಬ್ಬಿಂಗ್‌ ಆಗಿ ತೆರೆಕಂಡಿರುವ 20ಕ್ಕೂ ಹೆಚ್ಚು ಚಿತ್ರಗಳನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಿದರೆ, ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ ಬರೋಬ್ಬರಿ 210ರ ಗಡಿ ದಾಟುತ್ತದೆ!

ಹಾಗಾದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿತ್ರಗಳು ತಯಾರಾಗಿ ಬಿಡುಗಡೆಯಾಗುತ್ತಿರುವಾಗ, ಇಲ್ಲಿಯವರೆಗೆ ತೆರೆಕಂಡಿರುವ ಚಿತ್ರಗಳ ಒಟ್ಟು ಬಜೆಟ್‌ ಎಷ್ಟಿರಬಹುದು ಅನ್ನೋ ಕುತೂಹಲ ಕೂಡ ಪ್ರೇಕ್ಷಕರಲ್ಲಿ ಸಹಜವಾಗಿಯೇ ಮೂಡುತ್ತದೆ. ಚಿತ್ರೋದ್ಯಮದ ಮೂಲಗಳ ಪ್ರಕಾರವೇ ಹೇಳುವುದಾದರೆ, ಡಬ್ಬಿಂಗ್‌ ಚಿತ್ರಗಳನ್ನು ಹೊರತುಪಡಿಸಿ ಕಳೆದ ಹತ್ತು ತಿಂಗಳಲ್ಲಿ ಬಿಡುಗಡೆಯಾಗಿರುವ ಒಟ್ಟು ಚಿತ್ರಗಳ ಸರಾಸರಿ ಬಜೆಟ್‌ ಸುಮಾರು 600 ರಿಂದ 700 ಕೋಟಿಗಳಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಎಂಟತ್ತು ಚಿತ್ರಗಳನ್ನು ಹೊರತುಪಡಿಸಿದರೆ, ಯಾವ ಚಿತ್ರಗಳು ಹತ್ತುಕೋಟಿ ಬಜೆಟ್‌ ದಾಟಿಲ್ಲ. ಹಾಗೆಯೇ ಗಮನಿಸಬೇಕಾದ ಇನ್ನೊಂದು ಪ್ರಮುಖ ಸಂಗತಿಯೆಂದರೆ, ತನ್ನ ಟೈಟಲ್‌, ಬಜೆಟ್‌, ಸಬ್ಜೆಕ್ಟ್ ಮತ್ತು ಕಾಸ್ಟಿಂಗ್‌ ಮೂಲಕ ಸೆಟ್ಟೇರಿದಾಗಿನಿಂದಲೂ ಸುದ್ದಿ ಮಾಡುತ್ತಿರುವ ಸ್ಟಾರ್ಗಳ ಡಜನ್‌ಗೂ ಹೆಚ್ಚು ಚಿತ್ರಗಳು ಈ ವರ್ಷದ ಕೊನೆಗೆ ಬಿಡುಗಡೆಗಾಗಿ ಕಾದು ಕುಳಿತಿವೆ ಅನ್ನೋದು ವಿಶೇಷ.

ಮುಂದಿನ ಎರಡು ತಿಂಗಳ ಲೆಕ್ಕದ ಕಾತುರ
ಹಾಗಾಗಿ ಗಾಂಧಿನಗರದ ಮಟ್ಟಿಗೆ ಹೇಳುವುದಾದರೆ, ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಂದು ಲೆಕ್ಕವಾದರೆ, ಇನ್ನು ಮುಂದಿನ ಎರಡು ತಿಂಗಳಲ್ಲಿ ಮತ್ತೂಂದು ಲೆಕ್ಕ ಎನ್ನಬಹುದು. ಈಗಾಗಲೇ ಬಿಡುಗಡೆಯಾಗಿರುವಷ್ಟೇ ದೊಡ್ಡ ಸಂಖ್ಯೆಯಲ್ಲಿ, ಇನ್ನು ಬಾಕಿಯಿರುವ ಎರಡು ತಿಂಗಳಲ್ಲಿ ದಶಕೋಟಿ ಬಜೆಟ್‌ ದಾಟುವ ಚಿತ್ರಗಳು ತೆರೆಗೆ ಬರುತ್ತಿವೆ ಅನ್ನೋದು ಗಮನಿಸಬೇಕಾದ ಸಂಗತಿ. ಇನ್ನು ವರ್ಷದ ಕೊನೆಗೆ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಾದ ಶಿವರಾಜಕುಮಾರ್‌ ಅಭಿನಯದ “ಆಯುಷ್ಮಾನ್‌ಭವ’, “ದ್ರೋಣ’, ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’, ದರ್ಶನ್‌ ಅಭಿನಯದ “ಒಡೆಯ’, ಧ್ರುವ ಸರ್ಜಾ ಅಭಿನಯದ “ಪೊಗರು’, ಸುದೀಪ್‌ ಅಭಿನಯದ “ಕೋಟಿಗೊಬ್ಬ-3′, ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರಗಳು ಈ ಪಟ್ಟಿಯಲ್ಲಿ ಮೊದಲಿಗೆ ಬರುತ್ತವೆ.

ಇವುಗಳ ನಂತರ ಕೃಷ್ಣ ಅಜೇಯರಾವ್‌ ಅಭಿನಯದ “ಕೃಷ್ಣ ಟಾಕೀಸ್‌’, ಮದರಂಗಿ ಕೃಷ್ಣ ಅಭಿನಯದ “ಲವ್‌ ಮಾಕ್ಟೇಲ್‌’, ನೀನಾಸಂ ಸತೀಶ್‌ ಅಭಿನಯದ “ಬ್ರಹ್ಮಚಾರಿ’, ಚಿರಂಜೀವಿ ಸರ್ಜಾ ಅಭಿನಯದ “ಶಿವಾರ್ಜುನ’, ವಸಿಷ್ಟ ಸಿಂಹ ಅಭಿನಯದ “ಕಾಲಚಕ್ರ’ ಧನಂಜಯ್‌ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್‌’, ಪಾರೂಲ್‌ ಯಾದವ್‌ ಅಭಿನಯದ “ಬಟರ್‌ಫ್ಲೈ’, “ಭೀಮಸೇನ ನಳಮಹರಾಜ’, ಹೀಗೆ ಹೇಳುತ್ತ ಹೋದ್ರೆ ದೊಡ್ಡ ಪಟ್ಟಿಯೇ ಆಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಈಗಾಗಲೇ ಸೆನ್ಸಾರ್‌ ಅನುಮತಿ ಪಡೆದುಕೊಂಡು ಬಿಡುಗಡೆಗೆಗಾಗಿ ಕಾದು ಕುಳಿತಿವೆ. ಇಲ್ಲಿವರೆಗೆ ಬಿಡುಗಡೆಯಾದ ಸಿನಿಮಾಗಳದ್ದು ಒಂದು ಲೆಕ್ಕವಾದರೆ ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಬಜೆಟ್‌ ಲೆಕ್ಕವೇ ಬೇರೆ. ಅದಕ್ಕೆ ಕಾರಣ, ವರ್ಷದ ಕೊನೆಯಲ್ಲಿ ಒಂದಷ್ಟು ಬಿಗ್‌ ಬಜೆಟ್‌ ಚಿತ್ರಗಳು ಬಿಡುಗಡೆಯಾಗುತ್ತಿವೆ. “ಅವನೇ ಶ್ರೀಮನ್ನಾರಾಯಣ’, “ಒಡೆಯ’, “ಪೊಗರು’, “ಕೋಟಿಗೊಬ್ಬ-3′, “ಆಯುಷ್ಮಾನ್‌ ಭವ’ ಸೇರಿದಂತೆ ಇನ್ನೂ ಹಲವು ಬಿಗ್‌ ಬಜೆಟ್‌ ಚಿತ್ರಗಳು ಪಟ್ಟಿಯಲ್ಲಿವೆ. ಇದರ ಜೊತೆಗೆ ಸಾಕಷ್ಟು ಹೊಸಬರು ಕೂಡಾ 2019ರಲ್ಲೇ ಬಿಡುಗಡೆಯಾಗಲು ತುದಿಗಾಲಿನಲ್ಲಿ ನಿಂತಿವೆ. ಇವೆಲ್ಲದರ ಬಜೆಟ್‌ ಅನ್ನು ಅಂದಾಜಿಸಿ ಹೇಳುವುದಾದರೆ 250 ಕೋಟಿ ದಾಟಲಿದೆ.

– ಜಿ.ಎಸ್‌.ಕಾರ್ತಿಕ ಸುಧನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ